ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಇದರಲ್ಲಿ ದೊಡ್ಡ ಸಿಂಗರ್ (Singer). ವೈಷ್ಣವ್ ಜೊತೆ ಲಕ್ಷ್ಮಿ ಮದುವೆ (Marriage) ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ಎಲ್ಲಾ ತಲೆ ಕೆಳಗಾಗುತ್ತಾ?
ಪತ್ರ ಬರೆದಿದ್ದ ವೈಷ್ಣವ್
'ಲಕ್ಷ್ಮಿ ಅವರೇ ಈ ಮಾತನ್ನು ಹೇಳೋಕೆ ಕಷ್ಟ ಆಗುತ್ತಿದೆ. ಆದ್ರೂ ಹೇಳಲೇ ಬೇಕಾದ ಪರಿಸ್ಥಿತಿ ಬಂದಿದೆ. ನೀವು ನನ್ನ ಬಗ್ಗೆ ಏನೇನೋ ಕನಸು ಕಾಣುವ ಮೊದಲು ಸತ್ಯ ಹೇಳುತ್ತೇನೆ. ನನಗೆ ಈ ಮದುವೆ ಇಷ್ಟ ಇಲ್ಲ. ನನ್ನ ಕನಸು, ಪ್ರೀತಿ ಎಲ್ಲಾ ನನ್ನ ಕೀರ್ತಿ ಆಕೆಯನ್ನು ಬಿಟ್ಟು, ನಾನು ಬೇರೆಯವರನ್ನು ಮದುವೆ ಆಗಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ, ಕೀರ್ತಿ ಮದುವೆ ಆಗಲು ಸಹಾಯ ಮಾಡು' ಎಂದು ವೈಷ್ಣವ್ ಪತ್ರ ಬರೆದಿರುತ್ತಾನೆ.
ಪತ್ರ ಬದಲಾಯಿಸಿದ್ದ ಕಾವೇರಿ
ವೈಷ್ಣವ್ ಬರೆದ ಪತ್ರವನ್ನು ಅವರ ತಾಯಿ ಕಾವೇರಿ ಬದಲಾಯಿಸಿರುತ್ತಾಳೆ. ಲಕ್ಷ್ಮಿ ನನಗೆ ನೀನು ಇಷ್ಟ. ಇಬ್ಬರು ಮದುವೆ ಆಗೋಣ. ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ತೇನೆ ಎಂದು ಬರೆದಿರುತ್ತಾಳೆ. ಅದನ್ನೇ ಲಕ್ಷ್ಮಿ ನಂಬಿರುತ್ತಾಳೆ. ಆದ್ರೆ ವೈಷ್ಣವ್‍ಗೆ ಈ ವಿಚಾರ ತಿಳಿದಿರುವುದಿಲ್ಲ. ಲಕ್ಷ್ಮಿ ನನಗೆ ಸಹಾಯ ಮಾಡ್ತಾಳೆ ಎಂದುಕೊಂಡಿದ್ದ. ಆದ್ರೆ ಲಕ್ಷ್ಮಿ ಖುಷಿಯಾಗಿ ಮದುವೆ ಕಾರ್ಯದಲ್ಲಿ ಭಾಗಿಯಾಗಿರುತ್ತಾಳೆ.
ವೈಷ್ಣವ್ ಮೊದಲು ಲಕ್ಷ್ಮಿ ಮೇಲೆ ಸಿಟ್ಟು
ವೈಷ್ಣವ್ ಲಕ್ಷ್ಮಿಗೆ ಎಲ್ಲಾ ನಿಜ ಗೊತ್ತಿದ್ದು, ಯಾಕೆ ಈ ರೀತಿ ಸುಳ್ಳು ಹೇಳ್ತಾ ಇದ್ದಾರೆ. ನನ್ನ-ಕೀರ್ತಿ ಮದುವೆಗೆ ಸಹಾಯ ಮಾಡ್ತೀನಿ ಎಂದು, ಈಗ ಎಲ್ಲಾ ಮದುವೆ ತಯಾರಿಯಲ್ಲಿ ಖುಷಿಯಿಂದ ಭಾಗಬಹಿಸಿದ್ದಾರೆ ಎಂದು ಕೋಪ ಮಾಡಿಕೊಂಡಿರುತ್ತಾನೆ. ಆಕೆ ಮೇಲೆ ರೇಗಾಡಿರುತ್ತಾನೆ. ಇದೆಲ್ಲಾ, ಆಕೆಗೆ ಅರ್ಥವೇ ಆಗಿರುವುದಿಲ್ಲ.
ವೈಷ್ಣವ್ ಸಿಕ್ಕ ಪತ್ರ
ವೈಷ್ಣವ್‍ಗೆ ಲಕ್ಷ್ಮಿಗೆ ತಲುಪಿದ್ದ ಪತ್ರ ಸಿಕ್ಕಿದೆ. ಅದನ್ನು ಹಿಡಿದು ಅತ್ತೆ ಸುಪ್ರಿತಾ ಮುಂದೆ ಹೋಗಿದ್ದಾನೆ. ಈ ಪತ್ರ ಬರೆದಿದ್ದ ಯಾರು ಎಂದು ಕೇಳ್ತಾನೆ. ಅದು ಲಕ್ಷ್ಮಿ ಮನೆಯಲ್ಲಿ ಸಿಕ್ತು ಎಂದು ಹೇಳ್ತಾಳೆ. ಹಾಗಾದ್ರೆ ಲಕ್ಷ್ಮಿಗೆ ನಾನು ಬರೆದ ಪತ್ರ ತಲುಪಿಲ್ಲ. ಅತ್ತೆ ನೀವು ನನಗೆ ಮೋಸ ಮಾಡಿದ್ರಿ, ಅಮ್ಮ ಹೇಳೋ ಹಾಗೆ ನೀವು ನರಿ ಬುದ್ದಿಯವರು ಎಂದು ಕ್ಲಾಸ್ ತೆಗೆದುಕೊಂಡಿದ್ದಾನೆ.
ಲಕ್ಷ್ಮಿಗೆ ನಿಜ ಹೇಳ್ತಾನಾ?
ವೈಷ್ಣವ್ ಈಗ ಲಕ್ಷ್ಮಿ ಮುಂದೆ ನಿಜ ಹೇಳೋ ಪರಿಸ್ಥಿತಿ ಬಂದಿದೆ. ಮಹಾಲಕ್ಷ್ಮಿಯವರೇ ಇಲ್ಲಿ ನಡೆಯುತ್ತಿರುವುದು ಯಾವುದು ನಿಜ ಅಲ್ಲ. ಎಲ್ಲ ನಾಟಕ. ನನಗೆ ಈ ಮದುವೆ ಇಷ್ಟ ಇಲ್ಲ. ನನಗೆ ಕೀರ್ತಿಯನ್ನು ಕಂಡ್ರೆ ತುಂಬಾ ಇಷ್ಟ ಎಂದು ಹೇಳಿದ್ದಾನೆ. ಅದನ್ನು ಕೇಳಿಸಿಕೊಂಡು ಲಕ್ಷ್ಮಿ ಶಾಕ್ ಆಗಿದ್ದಾಳೆ. ಇಲ್ಲಿ ಏನಾಗುತ್ತಿದೆ ಎಂದುಕೊಂಡಿದ್ದಾಳೆ.
ಇದನ್ನೂ ಓದಿ: Anupama Serial: ಗೃಹಿಣಿಯರಿಗೆ ಗುಡ್ ನ್ಯೂಸ್, ದೇಶದ ಮನೆ ಮನೆ ತಲುಪಿದ 'ಅನುಪಮಾ' ಇಂದು ಕರುನಾಡಿಗೆ ಎಂಟ್ರಿ
ಲಕ್ಷ್ಮಿನೇ ಈ ಮದುವೆ ಬೇಡ ಅಂತಾಳಾ? ಕೀರ್ತಿ-ವೈಷ್ಣವ್ ಮದುವೆ ನಡೆಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ