ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಲಕ್ಷ್ಮಿ ಮೇಲೆ ಕೋಪ (Angry) ಮಾಡಿಕೊಂಡಿದ್ದಾನೆ. ಭಾಗ್ಯ ಬಳಿ ನಿಜ ಹೇಳಲು ರೆಡಿಯಾಗಿದ್ದಾನೆ.
ಕೀರ್ತಿಗೆ ತಾಳಿ ಕಟ್ಟೋಕೆ ರೆಡಿ
ವೈಷ್ಣವ್‍ಗೆ ಲಕ್ಷ್ಮಿ ಜೊತೆ ಮದುವೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡ್ತಾ ಇದ್ದಾನೆ. ಆಕೆಗೆ ತಾಳಿ ಕಟ್ಟಬೇಕು ಎಂದುಕೊಂಡಿದ್ದಾನೆ. ಅದಕ್ಕೆ ತಾಳಿ ತಂದು ಒಬ್ಬನೇ ದೇವರ ಬಳಿ ಪೂಜೆ ಮಾಡಿಸಿದ್ದಾನೆ. ಆದ್ರೆ ಕೀರ್ತಿ ಮಾತ್ರ ನಾನು ವೈಷ್ಣವ್ ನನ್ನು ಮದುವೆ ಆಗಲ್ಲ ಎನ್ನುತ್ತಿದ್ದಾಳೆ. ವೈಷ್ಣವ್ ಹೇಗಾದ್ರೂ ಮದುವೆ ಆಗಬೇಕು ಎಂದುಕೊಳ್ತಾ ಇದ್ದಾನೆ.
ಭಾಗ್ಯಗೆ ಶುರುವಾಗಿದೆ ಅನುಮಾನ
ವೈಷ್ಣವ್ ಗೆ ಈ ಮದುವೆ ಇಷ್ಟ ಇಲ್ಲ ಎಂಬ ಅನುಮಾನ ಭಾಗ್ಯಗೆ ಶುರುವಾಗಿದೆ. ಅದಕ್ಕೆ ಕುಸುಮಾ ಮತ್ತು ಕಾವೇರಿಯನ್ನು ಪ್ರಶ್ನೆ ಮಾಡ್ತಾ ಇದ್ದಾಳೆ. ನನ್ನ ತಂಗಿ ವೈಷ್ಣವ್ ಮೆಚ್ಚಿದ ಹುಡುಗಿನಾ? ಅಥವಾ ಅತ್ತೆ ಮೆಚ್ಚಿದ ಸೊಸೆನಾ ಎಂದು ಪ್ರಶ್ನೆ ಮಾಡ್ತಾ ಇದ್ದಾಳೆ. ಅದಕ್ಕೆ ಉತ್ತರ ನೀಡಲಾಗದೇ ಕುಸುಮಾ ಮತ್ತು ಕಾವೇರಿ ಪರದಾಡ್ತಾ ಇದ್ದಾರೆ.
ವೈಷ್ಣವ್‍ಗೆ ನಾನು ಇಷ್ಟ ಎಂದ ಲಕ್ಷ್ಮಿ
ಭಾಗ್ಯ ಕಾವೇರಿ ಮತ್ತು ಕುಸುಮಾಳನ್ನು ಪ್ರಶ್ನೆ ಮಾಡ್ತಾ ಇದ್ದಾಗ, ಅಲ್ಲಿಗೆ ಲಕ್ಷ್ಮಿ ಬರುತ್ತಾಳೆ. ವೈಷ್ಣವ್‍ಗೆ ನಾನು ಇಷ್ಟ ಅಕ್ಕಮ್ಮ. ಅವರು ನನಗೆ ಪತ್ರ ಬರೆದಿದ್ದರು. ನನ್ನನ್ನೇ ಮದುವೆ ಆಗ್ತೀನಿ. ಇಬ್ಬರು ತುಂಬಾ ಚೆನ್ನಾಗಿರೋಣ ಎಂದೆಲ್ಲಾ ಹೇಳಿದ್ದರು ಅಂತಾಳೆ. ಅದಕ್ಕೆ ಭಾಗ್ಯಾಗೆ ಸಮಾಧಾನ ಆಗಿ. ಮದುವೆ ಮುಂದಿನ ಕಾರ್ಯಕ್ರಮಕ್ಕೆ ರೆಡಿಯಾಗಿದ್ದಾಳೆ. ಕಾವೇರಿ ಬೇಗ ಈ ಮದುವೆ ಮಾಡಿಸಬೇಕು ಎಂದುಕೊಳ್ತಾ ಇದ್ದಾಳೆ.
ಲಕ್ಷ್ಮಿ ಮೇಲೆ ವೈಷ್ಣವ್ ಕೋಪ
ಲಕ್ಷ್ಮಿಗೆ ವೈಷ್ಣವ್ ಪತ್ರ ಬರೆದಿರುತ್ತಾನೆ. ಅದರಲ್ಲಿ ಕೀರ್ತಿಯನ್ನು ಲವ್ ಮಾಡೋ ವಿಚಾರ ಹೇಳಿರುತ್ತಾನೆ. ಆದ್ರೆ ಆ ಪತ್ರವನ್ನು ವೈಷ್ಣವ್ ಅಮ್ಮ ಕಾವೇರಿ ಬದಲಾಯಿಸಿದ್ದಾಳೆ. ಇದು ವೈಷ್ಣವ್‍ಗೆ ಗೊತ್ತಿಲ್ಲ. ನಾನು ಕೀರ್ತಿಯನ್ನು ಲವ್ ಮಾಡ್ತಿದಿನಿ ಅಂತ ಹೇಳಿದ್ರೂ, ಲಕ್ಷ್ಮಿ ಈ ಮದುವೆಗೆ ತಯಾರಾಗಿದ್ದಾಳೆ ಎಂದು ಆಕೆ ಮೇಲೆ ಕೋಪ ಮಾಡಿಕೊಂಡಿದ್ದಾನೆ.
ಭಾಗ್ಯ ಬಳಿ ಸತ್ಯ ಹೇಳ್ತಾನಾ?
ವೈಷ್ಣವ್‍ಗೆ ಈ ಮದುವೆ ನಿಲ್ಲಿಸಲು ದಿಕ್ಕೇ ತೋಚದಂತಾಗಿದೆ. ಆಗ ಅತ್ತೆ ಸುಪ್ರಿತಾ ಬಂದು, ಈ ವಿಷ್ಯವನ್ನು ನೇರವಾಗಿ ಭಾಗ್ಯ ಬಳಿ ಹೇಳು. ಅವಳು ಈ ಮದುವೆಯನ್ನು ನಿಲ್ಲಿಸುತ್ತಾಳೆ. ಆಕೆ ತನ್ನ ತಂಗಿಗೆ ಬಲವಂತದ ಮದುವೆ ಮಾಡಿಸಲ್ಲ ಎಂದು ಐಡಿಯಾ ಹೇಳಿ ಕೊಡ್ತಾಳೆ. ಅದಕ್ಕೆ ವೈಷ್ಣವ್ ಸಹ ಸರಿ ಎನ್ನುತ್ತಾನೆ. ಕೀರ್ತಿ ಮದುವೆ ಆಗಲು ವೈಷ್ಣವ್ ಏನು ಬೇಕಾದ್ರೂ ಮಾಡ್ತಾನೆ.
ಇದನ್ನೂ ಓದಿ: Ramachari: ಚಾರುಗೆ ತಾಳಿ ಕಟ್ಟಿದ್ದು ಮನೆಯಲ್ಲಿ ಗೊತ್ತಾಗಿದೆ, ರಾಮಾಚಾರಿ ತಾಯಿಗೆ ಹೃದಯಾಘಾತ!
ವೈಷ್ಣವ್ ಭಾಗ್ಯ ಬಳಿ ಸತ್ಯ ಹೇಳ್ತಾನಾ? ಲಕ್ಷ್ಮಿ ಮದುವೆ ನಿಲ್ಲುತ್ತಾ? ಕೀರ್ತಿ-ವೈಷ್ಣವ್ ಮದುವೆ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ