ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಆಧಾರಿತ ಕಥೆಯೇ ಭಾಗ್ಯಲಕ್ಷ್ಮಿ ಸೀರಿಯಲ್. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ತನ್ನ ಸಂಬಂಧದ (Relationship) ಬಗ್ಗೆ ಮನೆಯವರ ಮುಂದೆ ಒಪ್ಪಿಕೊಂಡಿದ್ದಾನೆ.
ಅಹಂಕಾರಿ ಈ ತಾಂಡವ್
ತಾಂಡವ್ ಭಾಗ್ಯಾಳ ಗಂಡ. ಆದ್ರೆ ಇವನಿಗೆ ಭಾಗ್ಯ ಮೇಲೆ ಒಂದಿಷ್ಟು ಪ್ರೀತಿ ಇಲ್ಲ. ಕರುಣೆ ಸಹ ಇಲ್ಲ. ಕೆಲಸದವರಿಗಿಂತ ಕಡೆಯಾಗಿ ಕಾಣುತ್ತಾನೆ. ಯಾವುದಕ್ಕೂ ಬೆಲೆ ಕೊಡಲ್ಲ. ಮದುವೆ ಆಗಿ 15 ವರ್ಷ ಆದ ಮೇಲೆ ಇವನಿಗೆ ಹೆಂಡ್ತಿ ಬೇಡವಾಗಿದ್ದಾಳೆ. ಸದಾ ಬೈಯ್ತಾನೆ ಇರ್ತಾನೆ.
ಇದನ್ನೂ ಓದಿ: BBK Deepika Das: ಬ್ಯಾಕ್ ಟು ಬ್ಯಾಕ್ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ದೀಪಿಕಾ ದಾಸ್!
ಶ್ರೇಷ್ಠಾಗೆ ಕೈ ಚೇನ್ ಉಡುಗೊರೆ
ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸದಾ ಆಕೆಯ ಜೊತೆ ತಿರುಗುತ್ತಾ ಇರುತ್ತಾನೆ. ಮನೆ ಗೃಹಪ್ರವೇಶದಲ್ಲಿ ಶ್ರೇಷ್ಠಾಗೆ ಅವಮಾನ ಆಗಿತ್ತು ಎಂದು, ಆಕೆಯನ್ನು ಸಮಾಧಾನ ಮಾಡಲು ಕೈ ಚೇನ್ ತಂದು ಉಡುಗೊರೆಯಾಗಿ ನೀಡಿದ್ದಾನೆ. ಅದರ ಬಿಲ್ ಮಾತ್ರ ಮನೆಯಲ್ಲಿತ್ತು.
ಭಾಗ್ಯ ಅತ್ತೆ ಕೈಯಲ್ಲಿ ಬಂಗಾರದ ಬಿಲ್
ತಾಂಡವ್ ಮನೆಯಲ್ಲಿ ಇಟ್ಟಿದ್ದ ಗೋಲ್ಡ್ ಬಿಲ್ ನ್ನು ಭಾಗ್ಯ ಅತ್ತೆ ನೋಡಿದ್ದಾಳೆ. ಭಾಗ್ಯಳನ್ನು ಕರೆದು ಬೈಯುತ್ತಿದ್ದಾಳೆ. ಈ ಕೆಲಸ ಯಾವಾಗ ಶುರು ಮಾಡಿಕೊಂಡೆ ನಮಗೆ ಗೊತ್ತಿಲ್ಲದ ರೀತಿ ಗಂಡನ ಕೈಯಲ್ಲಿ ಒಡವೆ ತರಿಸಿಕೊಂಡಿದ್ದಿಯಾ? ಅತ್ತೆ ಅಂದ್ರೆ ನಿನಗೆ ಅಷ್ಟೊಂದು ನಿರ್ಲಕ್ಷ್ಯನಾ ಎಂದು ಕೇಳುತ್ತಿದ್ದಾಳೆ.
ಅಕ್ಕನ ಬೆಂಬಲಕ್ಕೆ ನಿಂತ ಲಕ್ಷ್ಮಿ
ಆ ಒಡವೆಯನ್ನು ಅಕ್ಕಮ್ಮ ತರಿಸಿಕೊಂಡಿಲ್ಲ. ಅದನ್ನು ತೆಗೆದುಕೊಂಡಿದ್ದು ಭಾವ, ಅದು ಆಫೀಸ್ ಹುಡುಗಿ ಶ್ರೇಷ್ಠಾ ಕೈನಲ್ಲಿ ಇದೆ. ಆದ್ರೆ ಬೈಗುಳ ಮಾತ್ರ ನಮ್ಮ ಅಕ್ಕನಿಗೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಆಗ ತಾಂಡವ್ ಅಮ್ಮ, ನನ್ನ ಮಗನ ಮೇಲೆ ಅನುಮಾನ ಪಡ್ತೀಯಾ, ಅವನನ್ನು ಕರೆಸಿ ಕೇಳುತ್ತಾನೆ ಎಂದು ಹೇಳ್ತಾಳೆ. ಆಫೀಸ್ ನಲ್ಲಿದ್ದ ತಾಂಡವ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ.
ಹೌದು ಶ್ರೇಷ್ಠಾ ಜೊತೆ ಸಂಬಂಧ ಇದೆ
ಅಮ್ಮ ಕೇಳಿದ ಪ್ರಶ್ನೆಗೆ ತಾಂಡವ್, ಹೌದು ನನಗೆ ಶ್ರೇಷ್ಠಾ ಜೊತೆ ಸಂಬಂಧ ಇದೆ ಎಂದು ಹೇಳಿದ್ದಾನೆ. ಆದ್ರೆ ಯಾವ ರೀತಿ ಸಂಬಂಧ ಎನ್ನುವುದನ್ನು ಹೇಳಿಲ್ಲ. ಆದ್ರೆ ಇದನ್ನು ಕೇಳಿಸಿಕೊಂಡು ಮನೆಯವರು ಶಾಕ್ ಆಗಿದ್ದಾರೆ. ಭಾಗ್ಯ ಕಣ್ಣೀರಿಡುತ್ತಿದ್ದಾಳೆ. ತನ್ನ ಗಂಡ ಶ್ರೀರಾಮ ಎಂದುಕೊಂಡವಳಿಗೆ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: Bigg Boss Kannada: ಹೀರೋ, ವಿಲನ್ ಎರಡೂ ಸುದೀಪ್! 300 ಕೋಟಿ ಬಜೆಟ್ನಲ್ಲಿ ಗುರೂಜಿ ಸಿನಿಮಾ!
ತಾಂಡವ್ ಯಾವ ರೀತಿ ಸಂಬಂಧ ಎಂದು ಹೇಳ್ತಾನೆ, ಲಕ್ಷ್ಮಿ ಬಳಿ ಹೇಳಿದ ಉತ್ತರವನ್ನೇ ಹೇಳ್ತಾನಾ? ಭಾಗ್ಯ ಕಥೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ