ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ಅತ್ತ ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇರುವ ಅಕ್ಕ, ಇತ್ತ ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನೊಂದಿಗೆ ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ಮನೆ ಗೃಹಪ್ರವೇಶದ ಮರ್ಯಾದೆ ಉಳಿಸಲು ಹೋದ ಭಾಗ್ಯಾಗೆ ಕಣ್ಣೀರಿನ ಶಿಕ್ಷೆ (Punishment) ಸಿಕ್ಕಿದೆ.
ಅತ್ತೆ ಹೇಳಿದಂತೆ ಅಡುಗೆ ಮಾಡಿದ ಭಾಗ್ಯ
ತಾಂಡವ್, ಮನೆ ಗೃಹ ಪ್ರವೇಶಕ್ಕೆ ಇಟಲಿ ಆಹಾರ ತರಿಸಿರುತ್ತಾನೆ. ಆದ್ರೆ ಅದು ಸಾಕಾಗಲ್ಲ ಎಂದು ಅತ್ತೆ ಹೇಳಿದ್ದಕ್ಕೆ, ಭಾಗ್ಯ ಮತ್ತು ಲಕ್ಷ್ಮಿ ಸೇರಿಕೊಂಡು, ಬರುವ ನೆಂಟರಿಗೆ ಅಡುಗೆ ತಯಾರು ಮಾಡುತ್ತಿದ್ದಾರೆ. ಭಾಗ್ಯಳಿಗೆ ಖುಷಿಯಾಗುತ್ತೆ. ನನ್ನ ತಂಗಿ ನನಗೆ ಎಷ್ಟು ಬೆಂಬಲವಾಗಿ ನಿಲ್ಲುತ್ತಾಳೆ ಎಂದು. ಅಕ್ಕ-ತಂಗಿ ಖುಷಿ ಖುಷಿಯಿಂದ ಅಡುಗೆ ಮಾಡ್ತಾ ಇದ್ದಾರೆ. ಅಡುಗೆ ಮಾಡಲು ಭಾಗ್ಯ ತನ್ನ ಎಲ್ಲಾ ಒಡವೆಗಳನ್ನು ಬಿಚ್ಚಿಟ್ಟಿರುತ್ತಾಳೆ.
ನೆತ್ತಿಗೇರಿದ ತಾಂಡವ್ ಕೋಪ
ಮನೆ ಗೃಹಪ್ರವೇಶಕ್ಕೆ ತಾಂಡವ್ ಸ್ನೇಹಿತರು ಬರುತ್ತಿದ್ದಾರೆ. ಎಲ್ಲರೂ ನಿನ್ನ ಹೆಂಡ್ತಿಯನ್ನು ಪರಿಚಯ ಮಾಡಿಸು ಅಂತಿದ್ದಾರೆ. ಆದ್ರೆ ಭಾಗ್ಯ ಅಡುಗೆ ಮಾಡುತ್ತಿದ್ದು, ಮನೆ ಕೆಲಸದವಳ ರೀತಿ ಕಾಣ್ತಾ ಇದ್ದಾಳೆ. ಅದಕ್ಕೆ ತಾಂಡವ್ಗೆ ಕೋಪ ಬಂದಿದೆ. ಹೆಂಡ್ತಿಯನ್ನು ಪರಿಚಯ ಮಾಡಿಸಲು ಇಷ್ಟ ಪಡಲ್ಲ. ಆಗ ವೈಷ್ಣವ್ ಅವಳನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸುತ್ತಾನೆ.
ಇದನ್ನೂ ಓದಿ: Kannadathi: ವರೂಧಿನಿಗೆ ಪ್ರಶ್ನೆ ಮೇಲೆ ಪ್ರಶ್ನೆ, ಹರ್ಷನ ಬಳಿ ಸಿಕ್ಕಿ ಹಾಕಿಕೊಳ್ತಾಳಾ ಸೈಕೋ?
ಭಾಗ್ಯಾಳ ಮೇಲೆ ಕೆಂಡಾಮಂಡಲ
ಅಡುಗೆ ಮಾಡಲು ಒಡವೆ ಎಲ್ಲಾ ತೆಗೆದಿಟ್ಟ ಭಾಗ್ಯ ಮೇಲೆ ತಾಂಡವ್ ಕೆಂಡಾಮಂಡಲವಾಗಿದ್ದಾನೆ. ನಾನು ಯಾರು ಭಾಗ್ಯ. ನನ್ನ ಅಧಿಕಾರ ಏನು? ಒಬ್ಬ ಸೀನಿಯರ್ ಮ್ಯಾನೇಜರ್ ಹೆಂಡ್ತಿ ಈ ರೀತಿ ಇರ್ತಾರಾ? ಎಂದು ಕನ್ನಡಿ ಮುಂದೆ ಅವಳನ್ನು ನಿಲ್ಲಿಸಿ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಭಾಗ್ಯ ಅಳುತ್ತಾ ಇದ್ದಾಳೆ.
ತನ್ನ ಹೆಂಡ್ತಿ ಈ ರೀತಿ ಇರಬೇಕು!
ತಾಂಡವ್ ಸೂರ್ಯವಂಶಿ ಹೆಂಡ್ತಿ ಈ ರೀತಿ ಇರಲ್ಲ. ಅವಳು, ಅವನ ಲೆವೆಲ್ ಗೆ, ಕ್ಲಾಸ್ಗೆ ತಕ್ಕನಾಗಿ ರೆಡಿ ಆಗ್ತಾಳೆ. ಅದಕ್ಕೆ ಸರಿಯಾಗಿ ಸೀರೆ ಹಾಕ್ತಾಳೆ. ಒಡವೆ ಹಾಕ್ತಾಳೆ. ಹೇರ್ ಸ್ಟೈಲ್ ಮಾಡಿಕೊಳ್ತಾಳೆ. ಅವರು ನನ್ನ ಕೈ ಕೆಳಗೆ ಕೆಲಸ ಮಾಡೋ ಉದ್ಯೋಗಿಗಳು. ಅವರ ಮುಂದೆ ಒಬ್ಬ ಬಾಸ್ ಹೆಂಡ್ತಿಗೆ ಇರೋ ನಾಜೂಕು ಇಲ್ಲ. ಏನಿದು ನಿನ್ನ ವೇಷ. ಅಸಹ್ಯವಾಗಿ ನನ್ನ ಸ್ನೇಹಿತರ ಮುಂದೆ ಬರ್ತಿಯಾ ಅಂತ ಭಾಗ್ಯಾಗೆ ತಾಂಡವ್ ಬೈದಿದ್ದಾನೆ.
ಕಣ್ಣೀರಿಡುತ್ತಾ ರೆಡಿಯಾದ ಭಾಗ್ಯ
ತನ್ನ ಗಂಡನಿಗೆ ತಕ್ಕನಾದ ಹೆಂಡ್ತಿ ರೀತಿ ಕಾಣಬೇಕು ಎಂದು ಭಾಗ್ಯ ರೆಡಿಯಾಗುತ್ತಿದ್ದಾಳೆ. ಅಳುತ್ತಲೇ ಲಕ್ಷ್ಮಿ ಬಳಿ ನಾನು ಈಗ ಅವರಿಗೆ ತಕ್ಕ ಹೆಂಡ್ತಿ ರೀತಿ ಕಾಣ್ತೀನಾ? ಹೇಳು, ಹೇಳು ಎಂದು ಕಣ್ಣೀರಿಡುತ್ತಿದ್ದಾಳೆ.
ಇದನ್ನೂ ಓದಿ: Bigg Boss Kannada: ಈ ವಾರದ ನಾಮಿನೇಷನ್ನಲ್ಲಿ ಟ್ವಿಸ್ಟ್! ಮನೆ ಮಂದಿಗೆ ಢವ-ಢವ!
ಭಾಗ್ಯ ಅತ್ತೆ ಮಾತು ಕೇಳಬೇಕಾ? ಗಂಡನ ಮಾತು ಕೇಳಬೇಕಾ? ಅಳುವ ಅಕ್ಕನಿಗೆ ಲಕ್ಷ್ಮಿ ಸಮಾಧಾನ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ