ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಮಾವನ ಪ್ರಾಣ ಉಳಿಸಲು ಭಾಗ್ಯ 50 ಸಾವಿರ ಹಣ (Money) ತೆಗೆದುಕೊಂಡಿರುತ್ತಾಳೆ. ಆ ದುಡ್ಡಿನಿಂದ ತಾಂಡವ್ ಪೊಲೀಸ್ (Police) ಸ್ಟೇಶನ್‍ನಲ್ಲಿ ಇದ್ದಾನೆ.
ಕಂಪನಿ ಹಣ ಇಟ್ಟಿದ್ದ ತಾಂಡವ್
ಭಾಗ್ಯ ಗಂಡ ತಾಂಡವ್ ಮನೆಯಲ್ಲಿ ಕಂಪನಿ ಹಣ ಇಟ್ಟಿದ್ದ. ಅದನ್ನು ಯಾವುದೋ ಡೀಲರ್‍ಗೆ ಕೊಡಬೇಕಿತ್ತು. 2 ದಿನ ಬಿಟ್ಟು ಕೊಟ್ಟರಾಯ್ತು ಎಂದು ಸುಮ್ಮನಿದ್ದ. ಮನೆಯಲ್ಲಿ ಯಾರೂ ದುಡ್ಡು ಮುಟ್ಟಲ್ಲ ಅನ್ನುವ ನಂಬಿಕೆ ಮೇಲೆ ಲಕ್ಷ ಲಕ್ಷ ಇಟ್ಟಿದ್ದ.
ಆದ್ರೆ ತಾಂಡವ್ ಊಹೆ ಸುಳ್ಳಾಗಿದೆ. ಅವನಿಟ್ಟಿದ್ದ ಪೂರ್ತಿ ಹಣ ಅದರಲ್ಲಿ ಇಲ್ಲ. ಮಾವನನ್ನು ಉಳಿಸಲು ಭಾಗ್ಯ ಅದರಿಂದ 50 ಸಾವಿರ ಹಣ ತೆಗೆದುಕೊಂಡಿರುತ್ತಾಳೆ. ಚೀಟೆಯನ್ನು ಬರೆದಿಟ್ಟಿರುತ್ತಾಳೆ.
ತಾಂಡವ್ ಮೇಲೆ ಕೇಶ್ ಹಾಕಿದ ರೌಡಿ
ತಾಂಡವ್ ಕಂಪನಿಯಿಂದ ದುಡ್ಡು ಕೊಟ್ಟಿದ್ದು ಒಬ್ಬ ರೌಡಿ ರೌಡಿ ಡೀಲರ್‍ಗೆ. ಆ ರೌಡಿ 50 ಸಾವಿರ ಹಣ ಕಡಿಮೆ ಇದೆ ಎಂದು ಕೋಪಗೊಂಡಿದ್ದಾನೆ. ಅಲ್ಲದೇ ತಾಂಡವ್‍ನ ಕೇಳಿದ್ರೆ, ಅವನು ನಾನು ತೆಗೆದುಕೊಂಡಿಲ್ಲ. ನೀನು ಏನ್ ಬೇಕಾದ್ರೂ ಮಾಡಿಕೋ ಎಂದು ಹೇಳಿದ್ದಾನೆ. ಅದಕ್ಕೆ ಕೋಪಗೊಂಡ ರೌಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸ್ರು ತಾಂಡವನನ್ನು ಕರೆದುಕೊಂಡು ಹೋಗಿದ್ದಾರೆ. ರೌಡಿ ಶಿವಶಂಕರ್ ಕೇಸ್ ವಾಪಸ್ ತೆಗೆದುಕೊಂಡ್ರೆ ಬಿಡ್ತೀವಿ ಎಂದು ಪೊಲೀಸರು ಹೇಳಿದ್ದಾರೆ.
ಶಿವಶಂಕರ್ ಮನೆಗೆ ಬಂದ ಭಾಗ್ಯ
ಭಾಗ್ಯ ರೌಡಿ ಶಿವಶಂಕರ್ ಮನೆಗೆ ಬಂದಿದ್ದಾಳೆ. ನನ್ನ ಬಳಿ 50 ಸಾವಿರ ಇದೆ ಅದನು ಕೊಡಬೇಕು ಎಂದು ಹೇಳಿದ್ದಾಳೆ. ಆದ್ರೆ ಭಾಗ್ಯ ಬಳಿ ಹಣ ಇರಲ್ಲ. ಅದಕ್ಕೆ ತನ್ನ ಕಿವಿಯೊಲೆ, ಬಳೆ ಬಿಚ್ಚಿಕೊಟ್ಟಿದ್ದಾಳೆ. ಇದನ್ನು ತಗೊಳಿ. ನನ್ನ ಬಳಿ ಹಣ ಇಲ್ಲ. ದಯವಿಟ್ಟು ನನ್ನ ಗಂಡನ್ನನು ಬಿಡಿಸಿ ಎಂದು ಕೇಳಿದ್ದಾಳೆ. ಅದಕ್ಕೆ ಶಿವಶಂಕರ್ ಇದೆಲ್ಲಾ ಬೇಡ ವಾಪಸ್ ಹಾಕಿಕೊಳ್ಳಿ ಎಂದಿದ್ದಾನೆ.
ನಿನ್ನ ಗಂಡ ಕ್ಷಮೆ ಕೇಳಬೇಕು
ಭಾಗ್ಯ ತನ್ನ ಒಡವೆಯನ್ನು ಹಾಕಿಕೊಂಡು, ಮತ್ತೆ ನಿಮಗೆ ಏನು ಬೇಕು ಎಂದು ಹೇಳಿದ್ದಾಳೆ. ನನಗೆ ದುಡ್ಡು ಬೇಡ. ಈ ರೀತಿಯ ದುಡ್ಡು ನನ್ನ ಬಳಿ ಸಾಕಷ್ಟು ಇದೆ. ನಿನ್ನ ಗಂಡನಿಗೆ ಮಾತಾನಡೋಕೆ ಬರಲ್ಲ. ನನಗೆ ಅವಾಜ್ ಹಾಕ್ತಾನೆ. ಅವನು ಅಲ್ಲೇ ಇರಲ್ಲಿ ಬುದ್ದಿ ಬರುತ್ತೆ. ಅವನನ್ನು ಬಿಡಿಸಬೇಕು ಎಂದ್ರೆ, ಅವನು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಹೇಳ್ತಾನೆ.
ನನ್ನ ಗಂಡ ಕ್ಷಮೆ ಕೇಳಲ್ಲ
ಆಗ ಭಾಗ್ಯ, ನನ್ನ ಗಂಡ ಕ್ಷಮೆ ಕೇಳಲ್ಲ ಎಂದು ಹೇಳಿದ್ದಾಳೆ. ಅವರು ತಪ್ಪೇ ಮಾಡಿಲ್ಲ. ಕ್ಷಮೆ ಏಕೆ ಕೇಳಬೇಕು ಎಂದು ಹೇಳಿದ್ದಾಳೆ. ಅಲ್ಲದೇ ಭಾಗ್ಯಳನ್ನು ನೋಡಿ, ರೌಡಿಯೇ ತಾಂಡವ್‍ನನ್ನು ಬಿಡಿಸಲು ಹೇಳಿದ್ದಾನೆ. ಭಾಗ್ಯ ಖುಷಿಯಿಂದ ಹೋಗಿದ್ದಾನೆ. ಅಲ್ಲದೇ ಈ ಕ್ರೆಡಿಟ್ ನ್ನು ಶ್ರೇಷ್ಠಾ ತೆಗೆದುಕೊಂಡಿದ್ದಾಳೆ. ತಾಂಡವ್ ಅದನ್ನು ನಂಬಿದ್ದಾನೆ.
ಇದನ್ನೂ ಓದಿ: Ramachari: ಮನೆಯವರ ಬಳಿ ಸಿಕ್ಕಿಬಿದ್ದ ರಾಮಾಚಾರಿ-ಚಾರು, ಬರ್ತ್ಡೇ ಮಾಡೋಕೆ ಹೋಗಿ ಆಯ್ತು ಎಡವಟ್ಟು!
ಭಾಗ್ಯ ಗಂಡನ್ನು ಬಿಡಿಸಿದ್ರೂ ಆಕೆಗೆ ಅವನ ಪ್ರೀತಿ ಸಿಗಲ್ವಾ? ಭಾಗ್ಯ ಏನೇ ಮಾಡಿದ್ರು ತಪ್ಪು ಹುಡುಕುತ್ತೇನೆ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯ ಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ