ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ ಧಾರಾವಾಹಿ (Bhagya Lakshmi Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ಲಕ್ಷ್ಮಿ ಮುಂದೆಯೇ ಭಾಗ್ಯನಿಗೆ ತಾಂಡವ್ ಅವಮಾನ ಮಾಡಿದ್ದಾನೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ಲಕ್ಷ್ಮಿ, ವೈಷ್ಣವ್ ಅಮ್ಮ ಕಾವೇರಿ (Kaveri) ಮನಸ್ಸು ಗೆದ್ದಿದ್ದಾಳೆ. ಲಕ್ಷ್ಮಿ ಜೊತೆ ನಿಶ್ಚಿತಾರ್ಥ (Engagement) ಮಾಡಬೇಕು ಎಂದುಕೊಂಡಿದ್ದಾಳೆ.
ಭಾಗ್ಯನಿಗೆ ತಾಂಡವ್ ಅವಮಾನ
ಭಾಗ್ಯ ಮತ್ತು ಲಕ್ಷ್ಮಿ ಮನೆ ಕ್ಲೀನ್ ಮಾಡುವಾಗ, ತಾಂಡವ್ ಬ್ಯಾಗ್ ನಲ್ಲಿ ಗೋಲ್ಡ್ ಕೈ ಚೇನ್ ಸಿಗುತ್ತೆ. ಅದನ್ನು ನೋಡಿ ಇಬ್ಬರು ಖುಷಿ ಆಗ್ತಾರೆ. ತಾಂಡವ್ ಭಾಗ್ಯನಿಗೆ ಅದನ್ನು ತಂದಿದ್ದಾರೆ ಎಂದುಕೊಳ್ತಾರೆ. ಲಕ್ಷ್ಮಿಯು ಖುಷಿ ಆಗ್ತಾಳೆ. ನಿನ್ನ ಗಂಡನಿಗೆ ಇಷ್ಟಾದ್ರೂ ಪ್ರೀತಿ ಇದೆಯೆಲ್ಲ ಎಂದು ಹೇಳ್ತಾಳೆ.
ಭಾಗ್ಯ ಕೈಯಿಂದ ಚೇನ್ ಕಿತ್ತುಕೊಂಡ ತಾಂಡವ್
ನನ್ನ ಬ್ಯಾಗ್ ಯಾಕೆ ಮುಟ್ಟಿದೆ ಎಂದು ತಾಂಡವ್ ಜಗಳ ಆಡ್ತಾ ಇದ್ದಾನೆ. ಅದಕ್ಕೆ ಲಕ್ಷ್ಮಿ ಗಂಡನ ಬ್ಯಾಗ್ ಮುಟ್ಟುವುದರಲ್ಲಿ ತಪ್ಪಿಲ್ಲ ಎಂದು ವಾದ ಮಾಡ್ತಾಳೆ. ಅದಕ್ಕೆ ತಾಂಡವ್ ಲಕ್ಷ್ಮಿಗೆ ಬೈದು, ಭಾಗ್ಯ ನಿನಗೆ ಮ್ಯಾನರ್ಸ್ ಇಲ್ಲ.
ನಿನ್ನ ತಂಗಿಗೂ ಇಲ್ಲ. ಬೇರೆಯವರ ಮನೆಗೆ ಹೋಗೋ ಹುಡುಗಿ ಸ್ವಲ್ಪ ಬುದ್ಧಿ ಹೇಳು ಎಂದು ಹೋಗುತ್ತಾನೆ. ಭಾಗ್ಯನಿಗೆ ಅವಮಾನ ಮಾಡಿದ್ದಕ್ಕೆ ಲಕ್ಷ್ಮಿಗೆ ಕೋಪ ಬರುತ್ತೆ.
ಕೀರ್ತಿಯನ್ನು ಪ್ರೀತಿಸುತ್ತಿರುವ ವೈಷ್ಣವ್!
ಕಾವೇರಿಗೆ ಮಗ ವೈಷ್ಣವ್ ಎಂದ್ರೆ ಪ್ರಾಣ. ಮಗನಿಗೂ ಅಮ್ಮ ಎಂದ್ರೆ ಪ್ರಾಣ. ಆದ್ರೆ ಮದುವೆ ವಿಷ್ಯ ಬಂತು ಎಂದ್ರೆ, ಕಾವೇರಿಗೆ ತಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ. ಮಗ ಕೀರ್ತಿಯನ್ನು ಪ್ರೀತಿ ಮಾಡ್ತಿರೋದು ಗೊತ್ತು. ಇಬ್ಬರು ಮದುವೆಗೆ ಒಪ್ಪಿರುವುದಾಗಿ ನಾಟಕ ಮಾಡ್ತಾ ಇದ್ದಾಳೆ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ.
ಇದನ್ನೂ ಓದಿ: Kannadathi: ನಾನು ಹುಚ್ಚಿ, ಪ್ಲೀಸ್ ಹರ್ಷನನ್ನ ಬಿಟ್ಟುಬಿಡಿ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಹಠಮಾರಿ ಸಾನಿಯಾ
ಕೀರ್ತಿಗೆ ಸತ್ಯ ತಿಳಿಸಿದ ವೈಷ್ಣವ್ ಅತ್ತೆ
ವೈಷ್ಣವ್ ಅತ್ತೆ ಕೀರ್ತಿ ಅಮ್ಮನಿಗೆ ಕಾಲ್ ಮಾಡಿ. ವೈಷ್ಣವ್ ಜೊತೆ ಕೀರ್ತಿ ಮದುವೆ ನಡೆಯಲ್ಲ. ನಮ್ಮ ಅತ್ತಿಗೆ ವೈಶ್ ಗೆ ಬೇರೆ ಹುಡುಗಿ ಹುಡುಕುತ್ತಿದ್ದಾರೆ ಎಂದು ಹೇಳ್ತಾರೆ. ಅದಕ್ಕೆ ಕೀರ್ತಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಸೀದಾ ವೈಷ್ಣವ್ ಮನೆಗೆ ಬಂದಿದ್ದಾಳೆ.
ವೈಷ್ಣವ್ ಗೂ ಸತ್ಯ ಗೊತ್ತಾಯ್ತಾ?
ವೈಷ್ಣವ್ ತನ್ನ ಅಮ್ಮ ತನಗೋಸ್ಕರ ಏನು ಬೇಕಾದ್ರೂ ಮಾಡ್ತಾಳೆ ಅನ್ನುವ ನಂಬಿಕೆಯಲ್ಲಿ ಇದ್ದಾನೆ. ಕೀರ್ತಿ ಮದುವೆಗೆ ಒಪ್ಪಿ, ಈಗ ಬೇರೆ ಹುಡುಗಿ ನೋಡ್ತಾರೆ ಎನ್ನುವ ಸತ್ಯ ವೈಷ್ಣವ್ ಗೊತ್ತಾಗಿದೆ. ಅಮ್ಮ ಏಕೆ ಈ ರೀತಿ ಮಾಡ್ತಾ ಇದ್ದಾಳೆ. ಬೇರೆ ಹುಡುಗಿ ಯಾಕೆ ಹುಡುಕುತ್ತಿದ್ದಾರೆ ಎಂದು ಬೇಸರ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: Actress Ramola: ಕನ್ನಡತಿ ಧಾರಾವಾಹಿಯ ರಮೋಲಾ ಈಗ 'ರಿಚ್ಚಿ'ಗೆ ನಾಯಕಿ!
ಲಕ್ಷ್ಮಿ ತನ್ನ ಅಕ್ಕನ ಸಂಸಾರ ಸರಿ ಮಾಡ್ತಾಳಾ? ವೈಷ್ಣವ್ ಅಮ್ಮ ಹೇಳಿದ ಹುಡುಗಿ ಮದುವೆ ಆಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ