ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇನ್ನು ವೈಷ್ಣವ್ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎಂದು ಅಮ್ಮ ಕಾವೇರಿ, ದೊಡ್ಡಮ್ಮ ಕುಸುಮಾ ಪ್ಲ್ಯಾನ್ ಮಾಡ್ತಾ ಇದ್ದಾರೆ. ಇನ್ನೊಂದೆಡೆ ಲಕ್ಷ್ಮಿಗೆ ನಿತಿನ್ ಎಂಬುವವನು ಕಾಡುತ್ತಿದ್ದಾನೆ. ನಿತಿನ್ ಗೆ ತಾಂಡವ್ (Thandav) ಕ್ಲಾಸ್ ತೆಗೆದುಕೊಂಡಿದ್ದಾನೆ.
ವಿಡಿಯೋ ಇಟ್ಟುಕೊಂಡು ನಿತಿನ್ ಬ್ಲ್ಯಾಕ್ ಮೇಲ್!
ಲಕ್ಷ್ಮಿಯನ್ನು ನೋಡಲು ನಿತಿನ್ ಎಂಬ ಹುಡುಗ ಬಂದಿರುತ್ತಾನೆ. ಅವನು 2 ಮದುವೆ ಆಗಿ ಇಬ್ಬರು ಹೆಂಡ್ತಿಯರನ್ನು ಬಿಟ್ಟಿದ್ದಾನೆ. ಆತನಿಗೆ ಲಕ್ಷ್ಮಿ ಬೇಕಂತೆ. ಅದಕ್ಕೆ ಭಾಗ್ಯ ಆಗಲ್ಲ ಎಂದು ಹೇಳಿ ಕಳಿಸಿದ್ದಳು. ಆದ್ರೆ ನಿತಿನ್ ಲಕ್ಷ್ಮಿ ಆತನ ಜೊತೆ ಜಗಳ ಮಾಡಿದ ವಿಡಿಯೋ ಇಟ್ಟುಕೊಂಡು ಆಟವಾಡಿಸುತ್ತಿದ್ದಾನೆ.
ಲಕ್ಷ್ಮಿಗೆ ಪದೇ ಪದೇ ತೊಂದ್ರೆ
ನಿತಿನ್ ಲಕ್ಷ್ಮಿಗೆ ಪದೇ ಪದೇ ತೊಂದ್ರೆ ಕೊಡುತ್ತಿದ್ದಾನೆ. ತನ್ನ ಹುಡುಗರ ಜೊತೆ ಬಂದು ಅಡ್ಡ ಹಾಕಿ ಕಾಟ ಕೊಡುತ್ತಾನೆ. ತನ್ನನ್ನು ಮದುವೆ ಆಗಲೇ ಬೇಕು ಎಂದು ಕಾಡಿಸುತ್ತಾನೆ. ಲಕ್ಷ್ಮಿ ಹಲವು ಬಾರಿ, ಬೈದು, ಕಪಾಳಕ್ಕೆ ಹೊಡೆದು ಕಳಿಸಿದ್ದಾಳೆ. ಆದ್ರೂ ಆತನಿಗೆ ಬುದ್ಧಿ ಬಂದಿಲ್ಲ. ಅಲ್ಲದೇ ವೈಷ್ಣವ್ ಸಹ ಒಮ್ಮೆ ನಿತಿನ್ ಗೆ ಹೊಡೆದು ಬುದ್ಧಿ ಹೇಳಿದ್ದ.
ಇದನ್ನೂ ಓದಿ: Ramachari Actor: 'ಚಾರಿ' ಅಲ್ಲ 'ಚೋರ' ಇವನು! 'ರಾಮಾಚಾರಿ' ಖ್ಯಾತಿಯ ರಿತ್ವಿಕ್ ಸ್ಟೈಲಿಶ್ ಲುಕ್ ನೋಡಿ
ನಿತಿನ್ ಮನೆಗೆ ಬಂದ ಭಾಗ್ಯ
ಈ ಎಲ್ಲಾ ವಿಷಯ ಗೊತ್ತಾಗಿ ಭಾಗ್ಯ ನಿತಿನ್ ಮನೆಗೆ ಬಂದಿದ್ದಾಳೆ. ನಮ್ಮ ಲಡ್ಡುನ ವಿಡಿಯೋ ಡಿಲಿಟ್ ಮಾಡಿ. ಅದರಿಂದ ಆಕೆಗೆ ಗಂಡುಗಳು ಸೆಟ್ ಆಗ್ತಾ ಇಲ್ಲ. ದಯಮಾಡಿ ಡಿಲಿಟ್ ಮಾಡಿ ಎಂದು ನಿತಿನ್ ಬಳಿ ಕೇಳಿಕೊಳ್ಳುತ್ತಿದ್ದಾಳೆ. ಅದಕ್ಕೆ ನಿತಿನ್ ಆಗಲ್ಲ ಎಂದು ಹೇಳುತ್ತಿದ್ದಾನೆ. ಭಾಗ್ಯ ಮಾತಿಗೆ ಬೆಲೆ ಕೊಡಲಿಲ್ಲ.
ನಿತಿನ್ ಮನೆಗೆ ಬಂದ ತಾಂಡವ್
ಭಾಗ್ಯ ನೀನು ದಡ್ಡಿ ಅಂತ ಗೊತ್ತಿತ್ತು. ಆದ್ರೆ ಈ ನಿತಿನ್ ಮನೆಗೆ ಬಂದು ಕ್ಷಮೆ ಕೇಳುವಷ್ಟು ದಡ್ಡಿ ಎಂದು ಗೊತ್ತಿರಲಿಲ್ಲ. ನೀನು ನಿನ್ನ ತಂಗಿಯನ್ನು ಎಷ್ಟು ಪ್ರೀತಿ ಮಾಡ್ತೀಯಾ ಅಂತ ಪ್ರಪಂಚಕ್ಕೆ ಗೊತ್ತು. ಅದನ್ನು ಈ ದರಿದ್ರವನ ಕಾಲು ಹಿಡಿದು ಪ್ರೂವ್ ಮಾಡಬೇಕಿಲ್ಲ. ಇವರಿಗೆಲ್ಲಾ ನೀತಿ ಪಾಠ ಅಲ್ಲ. ದೊಣ್ಣೆ ಏಟು ಬೇಕು. ಅದು ಬಿದ್ರೆನೇ ಬುದ್ಧಿ ಬರೋದು ಎಂದು ತಾಂಡವ್ ಹೇಳ್ತಾನೆ.
ನಿಮ್ಮ ಹೆಸರು ತಾಂಡವ್ ಎಂದ ಮಾತ್ರಕ್ಕೆ ಎಲ್ಲಾ ಕಡೆ ಕುಣಿಬಹುದು ಎಂದುಕೊಳ್ಳಬೇಡಿ. ಅವೆಲ್ಲಾ ಇಲ್ಲಿ ನಡೆಯಲ್ಲ ಎಂದು ನಿತಿನ್ ಹೇಳ್ತಾನೆ. ನಿನ್ನ ತಂಗಿ ಮಾನ ನನ್ನ ಕೈಯಲ್ಲಿದೆ ಎಂದು ನಿತಿನ್ ಹೇಳಿದ್ದಕ್ಕೆ, ನಿನ್ನ ಮಾನನೇ ನಿನ್ನ ಕೈಯಲಲಿ ಇಲ್ಲ. ಸೈಬರ್ ಕ್ರೈಮ್ ಗೆ ದೂರು ನೀಡುತ್ತೇನೆ. ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಾನೆ ಎಂದು ದೂರು ನೀಡ್ತೀನಿ. ಅಮ್ಮ-ಮಗನನ್ನು ಜೈಲಿಗೆ ಕಳಿಸುತ್ತೇನೆ ಎಂದು ತಾಂಡವ್ ಹೇಳ್ತಾನೆ.
ಇದನ್ನೂ ಓದಿ: Actress Ramya: ಲಂಡನ್ನಲ್ಲಿ ರಮ್ಯಾ ನ್ಯೂ ಇಯರ್ ಸೆಲಬ್ರೇಷನ್! ಮೋಹಕ ತಾರೆಯ ಮನಮೋಹಕ ಫೋಟೋಗಳು ಇಲ್ಲಿವೆ
ಮೊದಲ ಬಾರಿ ಗಂಡ ತನ್ನ ತಂಗಿ ಪರ ಮಾತನಾಡಿದ್ದು ಕೇಳಿ ಭಾಗ್ಯ ಖುಷಿ ಆಗ್ತಾಳೆ. ಈ ನಿತಿನ್ ಕಾಟ ಇಲ್ಲಿಗೆ ನಿಲ್ಲುತ್ತಾ? ತಂಗಿ ಲಕ್ಷ್ಮಿ ಮದುವೆಗೆ ಯಾವುದೇ ತೊಂದ್ರೆ ಆಗಲ್ವಾ? ಮುಂದೇನಾಗುತ್ತೆ ಎಂದು ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ