ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ (Anchor) ಸುಷ್ಮಾ ಅವರು ಅಭಿನಯಿಸಿದ್ದಾರೆ. ತಾಂಡವ್‍ಗೆ ಮೊದಲಿನಿಂದಲೂ ಭಾಗ್ಯ ಇಷ್ಟ ಇಲ್ಲ. ಅದಕ್ಕೆ ಆಕೆಯನ್ನು ಮನೆ ಬಿಟ್ಟು ಹೋಗು ಎಂದಿದ್ದ. ಅಲ್ಲದೇ ಶ್ರೇಷ್ಠಾ ಮನೆಗೆ ಬಂದಿದ್ದ.
ಕುಸುಮಾಗೆ ವಿಷ್ಯ ತಿಳಿಸಿದ್ದ ಶ್ರೇಷ್ಠಾ
ತಾಂಡವ್, ನಾನು ಮನೆಗೆ ಹೋಗಲ್ಲ. ನಿನ್ನ ಮನೆಯಲ್ಲೇ ಇರ್ತಿನಿ ಎಂದು ಹೇಳಿ ಶ್ರೇಷ್ಠಾ ಮನೆಗೆ ಬಂದಿರುತ್ತಾನೆ. ಆದ್ರೆ ಶ್ರೇಷ್ಠಾ ಬೇರೆ ಏನೂ ಪ್ಲ್ಯಾನ್ ಮಾಡಿ, ತಾಂಡವ್ ಅಮ್ಮು ಕುಸುಮಾನಿಗೆ ಕಾಲ್ ಮಾಡಿರುತ್ತಾಳೆ. ಅದಕ್ಕೆ ತಾಂಡವ್‍ಗೆ ಶ್ರೇಷ್ಠಾ ಮೇಲೆ ಕೋಪ ಬಂದಿದೆ. ನಂಬಿದವರು ಮೋಸ ಮಾಡಿದ್ರು ಎಂದು ಹೇಳ್ತಾ ಇದ್ದಾನೆ. ಶ್ರೇಷ್ಠಾ ಅವನನ್ನು ಸಮಾಧಾನ ಮಾಡಿದ್ದಾಳೆ.
ಶ್ರೇಷ್ಠಾ ಮೇಲೆ ಕೋಪ
ಮಾತನಾಡಬೇಡ ಶ್ರೇಷ್ಠಾ. ನನಗೆ ಯಾರ ಮೇಲೂ ನಂಬಿಕೆ ಉಳಿದುಕೊಂಡಿಲ್ಲ. ಎಲ್ಲಾ ನನ್ನ ಬಳಸಿಕೊಳ್ತಾ ಇದ್ದಾರೆ. ನಾನು ನಿನ್ನನ್ನು ನಂಬಿ, ನಿನ್ನ ಪ್ರೀತಿಗೋಸ್ಕರ ನಿನ್ನ ಮನೆಗೆ ಬಂದಿದ್ದು, ಆದ್ರೆ ನೀನು ಏನು ಮಾಡಿದೆ? ನಮ್ಮ ಅಮ್ಮನಿಗೆ ಕಾಲ್ ಮಾಡಿದೆ. ಅದರ ಅಗತ್ಯ ಇತ್ತಾ? ನೀನು ಬೇಡ ಅಂದಿದ್ರೆ ಹೋಗ ಏನ್ನಬೇಕಿತ್ತು? ಜ್ವರ ಇದ್ರೂ ಹೋಗ್ತಿದ್ದೆ. ಹೋಟೆಲ್ ರೂಮ್‍ಗೆ ಹೋಗಿ ಅಲ್ಲೇ ಟೈಮ್ ಸ್ಪೆಂಡ್ ಮಾಡ್ತಿದ್ದೆ ಎಂದು ತಾಂಡವ್ ಶ್ರೇಷ್ಠಾಗೆ ಹೇಳಿದ್ದಾನೆ.
ಭಾಗ್ಯನ ಮುಂದೆ ಅವಮಾನ
ನಾನು ಬೇಕು ಅಂತಾನೇ ಮಾಡಿದೆ. ನಿನ್ನ ಹೆಸರು ಉಳಿಸೋದಕ್ಕೆ ಎಂದು ಶ್ರೇಷ್ಠಾ ಹೇಳಿದ್ದಾಳೆ. ನೀನು ನಿನಗೆ ಅನ್ನಿಸಿದ್ದು ಮಾಡಿದೆ. ಆದ್ರೆ ಭಾಗ್ಯನ ಮುಂದೆ ಅವಮಾನ ಆಯ್ತು. ಅಮ್ಮ ಹೇಗೆ ಬೈದ್ರು ನೋಡಿದೆ ತಾನೇ. ಅಮ್ಮನ ಕೈನಲ್ಲಿ ಸಿಕ್ಕಿಹಾಕಿಕೊಳ್ಳುವುದೂ ಒಂದೇ. ಹಾಳು ಬಾವಿಗೆ ಬೀಳುವುದೂ ಒಂದೇ. ಲೈಫ್ ಲಾಂಗ್ ನಮ್ಮ ಅಮ್ಮ ನನ್ನನ್ನು ಅಣಕಿಸುತ್ತಾರೆ. ಆ ಮಿಟುಕಲಾಡಿ ಮನೆಗೆ ಹೋಗಿ ಮಲಗಿದ್ದೆ ಅಂತಾ ಎಂದು ತಾಂಡವ್ ಹೇಳಿದ್ದಾನೆ.
ಅದು ನಿನ್ನ ಮನೆ
ಅದು ನಿನ್ನ ಮನೆ. ನೀನು ಯಾಕೆ ತಲೆ ತಗ್ಗಿದಬೇಕು. ಅಷ್ಟು ದೊಡ್ಡ ಮನೆ ನೀನು ದುಡಿದು ಕಟ್ಟಿಸಿದ್ದೀಯಾ. ನೀನು ಮೊದಲಿನ ತರನೇ ಇರಬೇಕು. ಅದು ನಿನ್ನ ಮನೆ. ಅಲ್ಲಿ ಬೇರೆಯವರನ್ನು ಮೆರೆಯೋಕೆ ಬಿಡಬೇಡ. ನೀನು ಇದಕ್ಕಿದ್ದ ಹಾಗೇ ದೂರ ಆದ್ರೆ ದೊಡ್ಡ ಪ್ರಾಬ್ಲಂ ಆಗುತ್ತೆ ತಾಂಡವ್. ಸಡನ್ ಆಗಿ ನಿರ್ಧಾರ ತೆಗೆದುಕೊಳ್ಳಬಾರದು.
ಭಾಗ್ಯನಿಂದ ಫ್ಯಾಮಿಲಿಯಿಂದ ದೂರ ಆಗೋದು ನನಗೆ ಇಷ್ಟ ಇಲ್ಲ. ಅವರು ನಿನ್ನ ಅಪ್ಪ-ಅಮ್ಮ. ದೂರ ಮಾಡೋದಾದ್ರೆ ಹೆಂಡ್ತಿಯನ್ನು ದೂರ ಮಾಡು ಎಂದು ಶ್ರೇಷ್ಠಾ ಹೇಳಿದ್ದಾಳೆ. ಅದಕ್ಕೆ ತಾಂಡವ್ ನೀನು ಹೇಳಿದ್ದು ಸರಿ ಎಂದು ಹೇಳಿದ್ದಾನೆ.
ಇದನ್ನೂ ಓದಿ: Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ
ಮತ್ತೆ ಶ್ರೇಷ್ಠಾಳನ್ನು ನಂಬಿದ ತಾಂಡವ್. ಕುಸುಮಾ ಮನೆ ಒಡೆಯಲು ನಿರ್ಧಾರ ಮಾಡಿದ್ದಾಳೆ ಶ್ರೇಷ್ಠಾ. ಮುಂದೇನಾಗುತ್ತೆ ಎಂದು ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ