ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ಭಾಗ್ಯ ಮನೆ ಗೃಹ ಪ್ರವೇಶ ಇದ್ದು, ಅಕ್ಕ-ತಂಗಿಯ ನಳಪಾಕ (Food) ತಯಾರಿಸುತ್ತಿದ್ದಾರೆ.
ಇಟಾಲಿಯನ್ ಅಡುಗೆ ಆರ್ಡರ್
ತಾಂಡವ್ ತಾನು ಕಟ್ಟಿಸಿದ ಮನೆಯ ಗೃಹಪ್ರವೇಶ ಗ್ರ್ಯಾಂಡ್ ಆಗಿರಬೇಕು. ತುಂಬಾ ಚೆನ್ನಾಗಿ ನಡೆಯಬೇಕು ಎಂದು, ಮಧ್ಯಾಹ್ನದ ಊಟಕ್ಕೆ ಇಟಾಲಿಯನ್ ಅಡುಗೆ ಆರ್ಡರ್ ಮಾಡಿದ್ದಾನೆ. ಆದ್ರೆ ಅವನು ಮಾಡಿರುವುದು 150 ಜನಕ್ಕೆ ಮಾತ್ರ. ಆದ್ರೆ ಭಾಗ್ಯ ಸಂಬಂಧಿಕರು ಹೆಚ್ಚು ಜನ ಇದ್ದಾರೆ. ಅವರೆಲ್ಲಾ ಬರುತ್ತಾರೆ. ಅಲ್ಲದೇ ಈ ರೀತಿಯ ಊಟ ತಿನ್ನಲ್ಲ.
ಭಾಗ್ಯಾಳಿಗೆ ಅತ್ತೆ ಹೇಳಿದ್ದೇನು?
ಭಾಗ್ಯಳ ಅತ್ತೆ ಆಕೆಯನ್ನು ಕರೆದು, ಇದು ಯಾವ ರೀತಿಯ ಊಟ? ಇದನ್ನು ನಮ್ಮ ಕಡೆಯವರು ತಿನ್ನಲ್ಲ. ಊಟಕ್ಕೆ ಅನ್ನ, ಸಾರು, ಹಪ್ಪಳ, ಪಾಯಸ ಬೇಕು. ಅದೇನ್ ಮಾಡ್ತೀಯೋ ಗೊತ್ತಿಲ್ಲ. ಮಧ್ಯಾಹ್ನದ ಊಟಕ್ಕೆ ಅವೆಲ್ಲಾ ಬೇಕು ಅಷ್ಟೆ ಅಂತಾಳೆ. ಅದಕ್ಕೆ ಭಾಗ್ಯಾಗೆ ಏನು ಮಾಡಬೇಕೆಂದು ತಿಳಿಯದೇ ಗಾಬರಿಯಾಗಿ ನಿಂತಿರುತ್ತಾಳೆ.
ಇದನ್ನೂ ಓದಿ: Super Queen: ಎಲ್ಲರನ್ನೂ ನಗಿಸೋ ರೆಮೋ ಬಾಳಲ್ಲಿ ಬಿರುಗಾಳಿ, ಮಗಳಿಗಾಗಿ ಎದ್ದು ನಿಂತ ಸ್ಟ್ರಾಂಗ್ ವುಮೆನ್!
ಅಕ್ಕನಿಗೆ ಅಡುಗೆ ಮಾಡಲು ಧೈರ್ಯ ತುಂಬಿದ ತಂಗಿ
ಭಾಗ್ಯ ಭಯ ಪಟ್ಟುಕೊಂಡು ನಿಂತಿರುವಾಗ ಲಕ್ಷ್ಮಿ ಅಲ್ಲಿಗೆ ಬರುತ್ತಾಳೆ. ನಡೆದ ವಿಷಯ ಗೊತ್ತಾಗುತ್ತೆ. ಅದಕ್ಕೆ ಲಕ್ಷ್ಮಿ ಯೋಚನೆ ಮಾಡ್ತಾ ನಿಂತ್ರೆ ಆಗಲ್ಲ. ನಾವೇ ಅಡುಗೆ ಮಾಡೋಣ. ನನ್ನ ಅಕ್ಕಮ್ಮ ಕೈ ಇಟ್ರೆ, ಅಲ್ಲಿ ಅಕ್ಷಯ ಪಾತ್ರೆ ಸಿದ್ಧವಾಗುತ್ತೆ. ಬಾ ಇಬ್ಬರು ಸೇರಿ ಅಡುಗೆ ಮಾಡೋಣ ಎಂದು ಹೇಳ್ತಾಳೆ.
ತಯಾರಾಗ್ತಿದೆ ಭಾಗ್ಯಲಕ್ಷ್ಮಿ ನಳಪಾಕ
ಭಾಗ್ಯ ಮತ್ತು ಲಕ್ಷ್ಮಿ ಸೇರಿಕೊಂಡು, ಬರುವ ನೆಂಟರಿಗೆ ಅಡುಗೆ ತಯಾರು ಮಾಡುತ್ತಿದ್ದಾರೆ. ಭಾಗ್ಯಳಿಗೆ ಖುಷಿಯಾಗುತ್ತೆ. ನನ್ನ ತಂಗಿ ನನಗೆ ಎಷ್ಟು ಬೆಂಬಲವಾಗಿ ನಿಲ್ಲುತ್ತಾಳೆ ಎಂದು. ಅಕ್ಕ-ತಂಗಿ ಖುಷಿ ಖುಷಿಯಿಂದ ಅಡುಗೆ ಮಾಡ್ತಾ ಇದ್ದಾರೆ. ಅಡುಗೆ ಮಾಡಲು ಭಾಗ್ಯ ತನ್ನ ಎಲ್ಲಾ ಒಡವೆಗಳನ್ನು ಬಿಚ್ಚಿಟ್ಟಿರುತ್ತಾಳೆ.
ನೆತ್ತಿಗೇರಿದ ತಾಂಡವ್ ಕೋಪ
ಮನೆ ಗೃಹಪ್ರವೇಶಕ್ಕೆ ತಾಂಡವ್ ಸ್ನೇಹಿತರು ಬರುತ್ತಿದ್ದಾರೆ. ಎಲ್ಲರೂ ನಿನ್ನ ಹೆಂಡ್ತಿಯನ್ನು ಪರಿಚಯ ಮಾಡಿಸು ಅಂತಿದ್ದಾರೆ. ಆದ್ರೆ ಭಾಗ್ಯ ಅಡುಗೆ ಮಾಡುತ್ತಿದ್ದು, ಮನೆ ಕೆಲಸದವಳ ರೀತಿ ಕಾಣ್ತಾ ಇದ್ದಾಳೆ. ಅದಕ್ಕೆ ತಾಂಡವ್ಗೆ ಕೋಪ ಬಂದಿದೆ. ಅತ್ತೆ-ಸೊಸೆ ಒಡವೆಗೆ ಎಂದು ಲಕ್ಷ ಲಕ್ಷ ಇಸ್ಕೊಂಡ್ರಿ. ಆ ದುಡ್ಡು ಏನಾಯ್ತು? ಒಡವೆ ಏಕೆ ಹಾಕಿಕೊಂಡಿಲ್ಲ ಎಂದು ಬೈಯ್ತಾ ಇದ್ದಾನೆ.
ಇದನ್ನೂ ಓದಿ: Bigg Boss Kannada: ಬಿಗ್ಬಾಸ್ ಮನೆಯಲ್ಲಿ ಗೇಮ್ ಯಾರದ್ದು, ಡಬಲ್ ಗೇಮ್ ಯಾರದ್ದು?
ಅತ್ತೆಗೆ ಒಳ್ಳೆ ಸೊಸೆ ಭಾಗ್ಯ, ಗಂಡನಿಗೆ ಬೇಡವಾದ ಹೆಂಡ್ತಿ, ತಂಗಿಯ ಪಾಲಿನ ಮುದ್ದಿನ ಅಕ್ಕ. ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ