• Home
 • »
 • News
 • »
 • entertainment
 • »
 • Bhagya Lakshmi: ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ! ಮಾಡದ ತಪ್ಪಿಗೆ ಶಿಕ್ಷೆ ಸರಿನಾ?

Bhagya Lakshmi: ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ! ಮಾಡದ ತಪ್ಪಿಗೆ ಶಿಕ್ಷೆ ಸರಿನಾ?

ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ!

ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ!

ತಾಂಡವ್‍ ಭಾಗ್ಯಗೆ ಬೈಯುತ್ತಿದ್ದಾನೆ. ಜೀವನದಲ್ಲಿ ಈ ರೀತಿ ಮನೆಯ ಯಾವತ್ತಾದ್ರೂ ನೋಡಿದ್ಯಾ? ನಿನ್ನ ಯೋಗ್ಯತೆಗೆ. ಶ್ರೇಷ್ಠಾ ಬಳಿ ಕ್ಷಮೆ ಕೇಳು ಎನ್ನುತ್ತಿದ್ದಾನೆ. ಕಾವೇರಿ ಸಹ ಲಕ್ಷ್ಮಿ ಬಗ್ಗೆ ತಪ್ಪು ತಿಳಿದುಕೊಂಡು, ಓದಿಲ್ಲ, ಬರೆದಿಲ್ಲ ನನ್ನ ಮಗೆ ಬೇಕಾ ನಿನಗೆ ಎಂದು ಬೈದಿದ್ದಾಳೆ.

ಮುಂದೆ ಓದಿ ...
 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ(Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ಭಾಗ್ಯ ಮತ್ತು ಲಕ್ಷ್ಮಿ ಮಾಡಿದ ತಪ್ಪಿಗೆ ಬೈಸಿಕೊಂಡಿದ್ದಾರೆ.


  ಭಾಗ್ಯ ಮನೆ ಗೃಹಪ್ರವೇಶ
  ಭಾಗ್ಯ ಗಂಡ ತಾಂಡವ್ ಸೂರ್ಯವಂಶಿ ಹೊಸ ಮನೆ ಕಟ್ಟಿಸಿದ್ದಾನೆ. ಅದರ ಗೃಹ ಪ್ರವೇಶವನ್ನು ಗ್ರ್ಯಾಂಡ್ ಆಗಿ ಮಾಡ್ತಾ ಇದ್ದಾರೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಕಟ್ಟಿಸಿದ ಮನೆ. ಎಲ್ಲೂ ತಪ್ಪಾಗಬಾರದು ಎಂದು ಹೆಚ್ಚು ಗಮನ ವಹಿಸಿದ್ದಾನೆ. ಎಲ್ಲಾ ಜವಾಬ್ದಾರಿಯನ್ನು ಶ್ರೇಷ್ಠಾಳಿಗೆ ವಹಿಸಿದ್ದಾನೆ.


  ನೀವು ಮೂರನೇಯವರು ಎಂದು ಶ್ರೇಷ್ಠಾಗೆ ಟಾಂಗ್
  ಹೊಸ ಮನೆಯಲ್ಲಿ ಪೂಜೆ ಆಗದೇ ಎಲ್ಲಾ ವಸ್ತುಗಳನ್ನು ಶ್ರೇಷ್ಠಾ ಇಡಿಸಿರುತ್ತಾಳೆ. ಭಾಗ್ಯ ಬಂದು ಅವನ್ನೆಲ್ಲಾ ಹೊರಗೆ ಹಾಕಿಸುತ್ತಾಳೆ. ಶ್ರೇಷ್ಠಾ ಕೇಳಿದ್ದಕ್ಕೆ. ಪೂಜೆ ಆಗದೇ ಯಾವ ವಸ್ತುವನ್ನೂ ಇಡಬಾರದು. ನೀವು ಮೂರನೇ ಅವರು ಆಗಿ ಇಷ್ಟ ಮಾಡಿದ್ದೇ ಹೆಚ್ಚು ಬಿಡಿ ಎನ್ನುತ್ತಾಳೆ. ಅದಕ್ಕೆ ಶ್ರೇಷ್ಠಾಗೆ ಕೋಪ ಬರುತ್ತೆ. ನಾನು ಎಷ್ಟೇ ಆದ್ರೂ ಈ ಮನೆಗೆ ಮೂರನೇಯವಳು. ಯಜಮಾನಿ ಆಗಲು ಸಾಧ್ಯವಿಲ್ಲ ಎಂದು ತಾಂಡವ್ ಬಳಿ ಹೇಳ್ತಾಳೆ.


  ಇದನ್ನೂ ಓದಿ: Ramachari: ಅಮ್ಮನ ಮಮತೆ ತೋರುತ್ತಿದ್ದ ಅತ್ತಿಗೆಗೆ ರಾಮಾಚಾರಿಯಿಂದ ಭಾವಪೂರ್ಣ ವಿದಾಯ 


  ಕ್ಷಮೆ ಕೇಳುವಂತೆ ಭಾಗ್ಯಳಿಗೆ ಹೇಳಿದ ತಾಂಡವ್
  ಮೊದಲೇ ತಾಂಡವ್‍ಗೆ ಭಾಗ್ಯ ಕಂಡ್ರೆ ಇಷ್ಟ ಇಲ್ಲ. ಅದಕ್ಕೆ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಈಗ ಭಾಗ್ಯ ಶ್ರೇಷ್ಠಾಗೆ ಅವಮಾನ ಮಾಡಿದ್ದನ್ನು ಸಹಿಸಿಕೊಳ್ಳಲು ಆಗದೆ,  ಭಾಗ್ಯಗೆ ಬೈಯುತ್ತಿದ್ದಾನೆ. ಜೀವನದಲ್ಲಿ ಈ ರೀತಿ ಮನೆಯ ಯಾವತ್ತಾದ್ರೂ ನೋಡಿದ್ಯಾ? ನಿನ್ನ ಯೋಗ್ಯತೆಗೆ. ಶ್ರೇಷ್ಠಾ ಬಳಿ ಕ್ಷಮೆ ಕೇಳು ಎನ್ನುತ್ತಿದ್ದಾನೆ.


   ಲಕ್ಷ್ಮಿ ಬಗ್ಗೆ ತಪ್ಪು ತಿಳಿದುಕೊಂಡ ಕಾವೇರಿ
  ವೈಷ್ಣವ್ ಕೀರ್ತಿಗಾಗಿ ಮ್ಯಾರೇಜ್ ಪ್ರಪೋಸ್ ಮಾಡಲು ಎಲ್ಲಾ ರೆಡಿ ಮಾಡಿರುತ್ತಾನೆ. ಅದನ್ನು ಲಕ್ಷ್ಮಿ ಮುಂದೆ ಡೆಮೋ ತೋರಿಸುತ್ತಾನೆ. ಅದನ್ನು ಲಕ್ಷ್ಮಿ ನಿಜ ಎಂದುಕೊಂಡು ತಪ್ಪು ತಿಳಿದು ತಲೆ ಸುತ್ತಿ ಬೀಳುತ್ತಾಳೆ. ಆಕೆಯನ್ನಯ ವೈಷ್ಣವ್ ಎತ್ತಿಕೊಂಡು ಬರುತ್ತಾನೆ. ಅದನ್ನು ನೋಡಿದ ಕೀರ್ತಿ ಬೇಸರ ಮಾಡಿಕೊಂಡು ಹೋಗುತ್ತಾಳೆ. ಅದೇ ಸಮಯಕ್ಕೆ ಕಾವೇರಿ ಬರುತ್ತಾಳೆ.


  colors kannada serial, kannada serial, sisters crying without any miss take, bhagya lakshmi news serial, serial cast, bhagya home ceremony, ಭಾಗ್ಯಲಕ್ಷ್ಮಿ ಧಾರಾವಾಹಿ, ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ! ಮಾಡದ ತಪ್ಪಿಗೆ ಶಿಕ್ಷೆ ಸರಿನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವೈಷ್ಣವ್ - ಲಕ್ಷ್ಮಿ


  ಲಕ್ಷ್ಮಿ ಅವಮಾನ ಮಾಡಿದ ಕಾವೇರಿ
  ಕಾವೇರಿ ಸಹ ಲಕ್ಷ್ಮಿ ಬಗ್ಗೆ ತಪ್ಪು ತಿಳಿದುಕೊಂಡು, ಓದಿಲ್ಲ, ಬರೆದಿಲ್ಲ ನನ್ನ ಮಗೆ ಬೇಕಾ ನಿನಗೆ. ಎಷ್ಟು ಧೈರ್ಯ ನನ್ನ ಮಗನ ಮೇಲೆ ಕಣ್ಣು ಹಾಕಲು. ದುಡ್ಡು ನೋಡಿ ಬಂದು ಬಿಡ್ತೀರಾ ಎಂದು ಬೈದಿದ್ದಾಳೆ. ಲಕ್ಷ್ಮಿಗೆ ಏನೂ ಉತ್ತರ ಕೊಡಲು ಆಗದೇ ಒಂದೇ ಸಮನೆ ಅತ್ತಿದ್ದಾಳೆ.


  colors kannada serial, kannada serial, sisters crying without any miss take, bhagya lakshmi news serial, serial cast, bhagya home ceremony, ಭಾಗ್ಯಲಕ್ಷ್ಮಿ ಧಾರಾವಾಹಿ, ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ! ಮಾಡದ ತಪ್ಪಿಗೆ ಶಿಕ್ಷೆ ಸರಿನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಕಾವೇರಿ


  ಇದನ್ನೂ ಓದಿ: Megastar Chiranjeevi: 'ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ' ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ 


  ಮಾಡದ ತಪ್ಪಿಗೆ ಭಾಗ್ಯ ಮತ್ತು ಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಭಾಗ್ಯ ಶ್ರೇಷ್ಠಾ ಬಳಿ ಕ್ಷಮೆ ಕೇಳ್ತಾಳಾ? ಲಕ್ಷ್ಮಿ ತನ್ನ ತಪ್ಪಿಲ್ಲ ಎಂದು ಕಾವೇರಿಗೆ ಹೇಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯ ಲಕ್ಷ್ಮಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: