ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಅವರು ಆಸ್ಪತ್ರೆಗೆ ಹೋಗಿ ಮನೆಗೆ ಬಂದ್ರೂ ತಾಂಡವ್‍ಗೆ ಈ ಸುದ್ದಿ ಗೊತ್ತಾಗಿಲ್ಲ. ಆಫೀಸ್ ಎಂದು ಸುಳ್ಳು ಹೇಳಿ ಶ್ರೇಷ್ಠಾ ಮನೆಗೆ ಹೋಗಿದ್ದ. ಈಗ ತಾಂಡವ್ ಮೇಲೆ ಫ್ರಾಡ್ ಕೇಸ್ (Case) ದಾಖಲಾಗಿದೆ. ಮನೆಗೆ ಪೊಲೀಸರು (Police) ಬಂದಿದ್ದಾರೆ.
ಕಂಪನಿ ಹಣ ಇಟ್ಟಿದ್ದ ತಾಂಡವ್
ಭಾಗ್ಯ ಗಂಡ ತಾಂಡವ್ ಮನೆಯಲ್ಲಿ ಕಂಪನಿ ಹಣ ಇಟ್ಟಿದ್ದ. ಅದನ್ನು ಯಾವುದೋ ಡೀಲರ್‌ಗೆ ಕೊಡಬೇಕಿತ್ತು. 2 ದಿನ ಬಿಟ್ಟು ಕೊಟ್ಟರಾಯ್ತು ಎಂದು ಸುಮ್ಮನಿದ್ದ. ಮನೆಯಲ್ಲಿ ಯಾರೂ ದುಡ್ಡು ಮುಟ್ಟಲ್ಲ ಅನ್ನುವ ನಂಬಿಕೆ ಮೇಲೆ ಲಕ್ಷ ಲಕ್ಷ ಇಟ್ಟಿದ್ದ. ಆದ್ರೆ ತಾಂಡವ್ ಊಹೆ ಸುಳ್ಳಾಗಿದೆ. ಅವನಿಟ್ಟಿದ್ದ ಪೂರ್ತಿ ಹಣ ಅದರಲ್ಲಿ ಇಲ್ಲ.
50 ಸಾವಿರ ತೆಗೆದುಕೊಂಡ ಭಾಗ್ಯ
ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಅವರನ್ನು ಭಾಗ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾಳೆ. ಆದ್ರೆ ಆಕೆ ಬಳಿ ದುಡ್ಡು ಇರಲ್ಲ. ಆಗ ಮನೆಯಲ್ಲಾ ಹುಡುಕಿದಾಗ ದುಡ್ಡು ಕಾಣುತ್ತೆ. ಅದರಲ್ಲಿ 50 ಸಾವಿರ ತೆಗೆದುಕೊಳ್ತಾಳೆ. ಅಲ್ಲದೇ ಅದರಲ್ಲಿ ಚೀಟೆ ಬರೆದಿಟ್ಟಿರುತ್ತಾಳೆ. 50 ಸಾವಿರ ತೆಗೆದುಕೊಂಡಿದ್ದೇನೆ ಎಂದು. ಅದೇ ದುಡ್ಡನ್ನು ಮಾವ ಸೇರಿದ್ದ ಆಸ್ಪತ್ರೆಗೆ ಕಟ್ಟುತ್ತಾಳೆ.
ದುಡ್ಡು ನೋಡದೇ ಕೊಟ್ಟ ತಾಂಡವ್
ತಾಂಡವ್ ಮನೆಯಲ್ಲಿದ್ದ ದುಡ್ಡನ್ನು ನೋಡಿಲ್ಲ. ಎಣಿಸೋಕೂ ಸಹ ಹೋಗಲಿಲ್ಲ. ಆ ಹಣವನ್ನು ತೆಗೆದುಕೊಂಡು ಹೋಗಿ ಸೀದಾ ರೌಡಿ ಡೀಲರ್‌ಗೆ ಕೊಟ್ಟಿದ್ದಾನೆ. ಆಗ ಆ ಹಣವನ್ನು ಅವರು ಸಹ ಎಣಿಸಿಕೊಂಡಿರಲಿಲ್ಲ. ತಾಂಡವ್ ಬಂದ ಮೇಲೆ ಆ ದುಡ್ಡು ನೋಡಿ, ಕಡಿಮೆ ಇದೆ ಎಂದು ತಾಂಡವ್‍ಗೆ ಫೋನ್ ಮಾಡಿದ್ದಾರೆ. ಆದ್ರೆ ತಾಂಡವ್ ನೀವು ಸುಳ್ಳು ಹೇಳ್ತಿರಿ ಎಂದಿದ್ದಾನೆ.
ರೌಡಿ ಡೀಲರ್ ಗೆ ಕೋಪ
ತಾಂಡವ್ ಕಂಪನಿಯಿಂದ ದುಡ್ಡು ಕೊಟ್ಟಿದ್ದು ಒಬ್ಬ ರೌಡಿ ರೌಡಿ ಡೀಲರ್‌ಗೆ. ಆ ರೌಡಿ 50 ಸಾವಿರ ಹಣ ಕಡಿಮೆ ಇದೆ ಎಂದು ಕೋಪಗೊಂಡಿದ್ದಾನೆ. ಅಲ್ಲದೇ ತಾಂಡವ್‌ನ ಕೇಳಿದ್ರೆ, ಅವನು ನಾನು ತೆಗೆದುಕೊಂಡಿಲ್ಲ. ನೀನು ಏನ್ ಬೇಕಾದ್ರೂ ಮಾಡಿಕೋ ಎಂದು ಹೇಳಿದ್ದಾನೆ. ಅದಕ್ಕೆ ಕೋಪಗೊಂಡ ರೌಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಮನೆಗೆ ಬಂದ ಪೊಲೀಸ್ರು
ತಾಂಡವ್ ಮನೆಗೆ ಬಂದು ಅಪ್ಪನ ಆರೋಗ್ಯ ವಿಚಾರಿಸುತ್ತಿದ್ದಾನೆ. ಆಗ ಪೊಲೀಸರು ಮನೆಗೆ ಬರ್ತಾರೆ. ಇದು ತಾಂಡವ್ ಸೂರ್ಯವಂಶಿ ಅವರ ಮನೆನಾ ಎಂದು ಕೇಳ್ತಾರೆ. ಅದಕ್ಕೆ ಹೌದು ಎಂದು ಹೇಳ್ತಾರೆ. ಆಗ ಪೊಲೀಸರು ತಾಂಡವ್ ಮೇಲೆ ಫ್ರಾಡ್ ಕೇಸ್ ದಾಖಲಾಗಿದೆ. ಅರೆಸ್ಟ್ ಮಾಡಬೇಕು ಎಂದು ಹೇಳ್ತಾರೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗ್ತಾರೆ.
ಇದನ್ನೂ ಓದಿ: Antarapata Serial: ಆರಾಧನಾ ಸ್ವಾಭಿಮಾನಕ್ಕೆ ಪೆಟ್ಟು, ಬಾಯಿಗೆ ಬಂದಂತೆ ಮಾತನಾಡಿದ ಹೀರೋ ಅಕ್ಕ!
ಭಾಗ್ಯ ಹಣ ತೆಗೆದುಕೊಂಡಿದ್ದು ಮಾವನ ಪ್ರಾಣ ಉಳಿಸಲು. ಈಗ ಗಂಡ ಜೈಲು ಸೇರುವ ಪರಿಸ್ಥಿತಿ ಬಂದಿದೆ. ತಾಂಡವ್ ಮತ್ತೆ ಭಾಗ್ಯ ಮೇಲೆ ಕೋಪ ಮಾಡಿಕೊಳ್ತಾನಾ ನೋಡಬೇಕು. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ