• Home
 • »
 • News
 • »
 • entertainment
 • »
 • Bhagya Lakshmi: ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ!

Bhagya Lakshmi: ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ!

ಭಾಗ್ಯ ಬೇಡಿಕೊಂಡ್ರು ನಂಬುತ್ತಿಲ್ಲ ಅತ್ತೆ

ಭಾಗ್ಯ ಬೇಡಿಕೊಂಡ್ರು ನಂಬುತ್ತಿಲ್ಲ ಅತ್ತೆ

ಅತ್ತೆ-ಮಾವನನ್ನು ಮನೆಯಿಂದ ಆಚೆ ಹಾಕುವ ಪ್ಲ್ಯಾನ್ ಮಾಡಿದ್ದಿಯಾ? ನನ್ನ ಮಗನ ತಲೆ ಕೆಡಿಸಿದ್ದೀಯಾ ಎಂದು ಭಾಗ್ಯ ಅತ್ತೆ ಎನ್ನುತ್ತಾಳೆ. ಭಾಗ್ಯ ಕೈ ಮುಗಿದು ನನ್ನ ತಪ್ಪಿಲ್ಲ ಎಂದ್ರೂ ನಂಬುತ್ತಿಲ್ಲ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ  ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಆಧಾರಿತ ಕಥೆಯೇ ಭಾಗ್ಯಲಕ್ಷ್ಮಿ ಸೀರಿಯಲ್. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ಆ ಸತ್ಯ ಲಕ್ಷ್ಮಿಗೆ ಗೊತ್ತಾಗಿದೆ. ತಾಂಡವ್ ತಪ್ಪು ಲಕ್ಷ್ಮಿ ಮೇಲೆ ಬಂದಿದೆ.

  ಭಾಗ್ಯಾ ಮೇಲೆ ಪ್ರೀತಿ ಇಲ್ಲ
  ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳೊಂದು ಕುಗ್ಗು. ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ.

  ಶ್ರೇಷ್ಠಾಗೆ ಕೈ ಚೇನ್ ಉಡುಗೊರೆ
  ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸದಾ ಆಕೆಯ ಜೊತೆ ತಿರುಗುತ್ತಾ ಇರುತ್ತಾನೆ. ಮನೆ ಗೃಹಪ್ರವೇಶದಲ್ಲಿ ಶ್ರೇಷ್ಠಾಗೆ ಅವಮಾನ ಆಗಿತ್ತು ಎಂದು, ಆಕೆಯನ್ನು ಸಮಾಧಾನ ಮಾಡಲು ಕೈ ಚೇನ್ ರಂದು ಉಡುಗೊರೆಯಾಗಿ ನೀಡಿದ್ದಾನೆ. ಅದರ ಬಿಲ್ ಮಾತ್ರ ಮನೆಯಲ್ಲಿದೆ.

  colors kannada serial, kannada serial, mother in law scolding to bhagya for gold bill, sisters crying without any miss take, bhagya lakshmi serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ, ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಶ್ರೇಷ್ಠಾ ಕೈನಲ್ಲಿ ಗೋಲ್ಡ್ ಬ್ರೇಸ್ಲೈಟ್

  ಬಂಗಾರ ಕೊಂಡುಕೊಂಡ ಬಿಲ್ ಭಾಗ್ಯ ಅತ್ತೆ ಕೈಯಲ್ಲಿ
  ತಾಂಡವ್ ಮನೆಯಲ್ಲಿ ಇಟ್ಟಿದ್ದ ಗೋಲ್ಡ್ ಬಿಲ್ ನ್ನು ಭಾಗ್ಯ ಅತ್ತೆ ನೋಡಿದ್ದಾಳೆ. ಭಾಗ್ಯಳನ್ನು ಕರೆದು ಬೈಯುತ್ತಿದ್ದಾಳೆ. ಈ ಕೆಲಸ ಯಾವಾಗ ಶುರು ಮಾಡಿಕೊಂಡೆ? ನಮಗೆ ಗೊತ್ತಿಲ್ಲದ ರೀತಿ ಗಂಡನ ಕೈಯಲ್ಲಿ ಒಡವೆ ತರಿಸಿಕೊಂಡಿದ್ದಿಯಾ? ಅತ್ತೆ ಅಂದ್ರೆ ನಿನಗೆ ಅಷ್ಟೊಂದು ನಿರ್ಲಕ್ಷ್ಯನಾ ಎಂದು ಕೇಳುತ್ತಿದ್ದಾಳೆ.

  ಇದನ್ನೂ ಓದಿ: Kannadathi: ಇತ್ತ ಸಾನಿಯಾ ಅಧಿಕಾರ ಹಸ್ತಾಂತರ, ಅತ್ತ ವರು ಡಿವೋರ್ಸ್ ಪ್ಲ್ಯಾನ್ ಬಯಲು! 

  ಭಾಗ್ಯ ಬೇಡಿಕೊಂಡ್ರು ನಂಬುತ್ತಿಲ್ಲ
  ಭಾಗ್ಯ ನಾನು ಏನೂ ತರಿಸಿಲ್ಲ. ನನ್ನ ತಪ್ಪು ಏನೂ ಇಲ್ಲ. ಇದು ಯಾವುದರ ಬಿಲ್ ಎಂದು ನನಗೆ ಗೊತ್ತಿಲ್ಲ ಎಂದು ಹೇಳ್ತಾಳೆ. ಅದಕ್ಕೆ ಹೊಸ ಮನೆ ಕಟ್ಟಿದ್ದೇ ಕಟ್ಟಿದ್ದು, ಅತ್ತೆ-ಮಾವನನ್ನು ಮನೆಯಿಂದ ಆಚೆ ಹಾಕುವ ಪ್ಲ್ಯಾನ್ ಮಾಡಿದ್ದಿಯಾ? ನನ್ನ ಮಗನ ತಲೆ ಕೆಡಿಸಿದ್ದೀಯಾ ಎಂದು ಭಾಗ್ಯ ಅತ್ತೆ ಎನ್ನುತ್ತಾಳೆ. ಭಾಗ್ಯ ಕೈ ಮುಗಿದು ನನ್ನ ತಪ್ಪಿಲ್ಲ ಎಂದ್ರೂ ನಂಬುತ್ತಿಲ್ಲ.

  colors kannada serial, kannada serial, mother in law scolding to bhagya for gold bill, sisters crying without any miss take, bhagya lakshmi serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ, ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭಾಗ್ಯ

  ತಾಂಡವ್-ಶ್ರೇಷ್ಠಾ ಸಂಬಂಧ ಮನೆಯಲ್ಲಿ ಹೇಳ್ತಾಳಾ?
  ಲಕ್ಷ್ಮಿಗೆ ತನ್ನ ಭಾವ ಶ್ರೇಷ್ಠಾ ಜೊತೆ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಆ ವಿಷ್ಯ ಕೇಳಿ ಶಾಕ್ ಆಗಿ ಹೋಗಿದ್ದಾಳೆ. ಅದನ್ನು ಮನೆಯವರ ಮುಂದೆ ಹೇಳ್ತಾಳಾ? ಅಥವಾ ತಾನೇ ತನ್ನ ಅಕ್ಕಮ್ಮನ ಸಂಸಾರ ಸರಿ ಮಾಡೋಣ ಎಂದು ಏನಾದ್ರೂ ಪ್ರಯತ್ನ ಮಾಡ್ತಾಳಾ ನೋಡಬೇಕು.

  colors kannada serial, kannada serial, mother in law scolding to bhagya for gold bill, sisters crying without any miss take, bhagya lakshmi serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್ ಮಾಡಿದ ತಪ್ಪು ಭಾಗ್ಯ ಮೇಲೆ, ಬೇಡಿಕೊಂಡ್ರು ನಂಬದ ಅತ್ತೆ, ಅಕ್ಕ ಭಾಗ್ಯನಿಗೂ ಕಷ್ಟ, ತಂಗಿ ಲಕ್ಷ್ಮಿಗೂ ಸಂಕಷ್ಟ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ತಾಂಡವ್

  ಇದನ್ನೂ ಓದಿ: Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ? 

  ಅಕ್ಕನಿಗೆ ಒಂದು ರೀತಿ ಸಂಕಷ್ಟ, ತಂಗಿಗೆ ಹೆಚ್ಚಾದ ಆತಂಕ, ಮಾಡದ ತಪ್ಪಿಗೆ ಅಕ್ಕ-ತಂಗಿಯರ ತೊಳಲಾಟ, ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

  Published by:Savitha Savitha
  First published: