ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಅತ್ತ ತಂಗಿಗಾಗಿ (Sisters) ಏನನ್ನಾದರೂ ಮಾಡಲು ರೆಡಿ ಇರುವ ಅಕ್ಕ, ಇತ್ತ ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನೊಂದಿಗೆ ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ತಾಂಡವ್ ಮಾಡಿದ ಎಡವಟ್ಟಿನಿಂದ ವೈಷ್ಣವ್ ಪ್ರಾಣ ಅಪಾಯದಲ್ಲಿತ್ತು. ಸದ್ಯ ಲಕ್ಷ್ಮಿ ಕಾಪಾಡಿದ್ದಾಳೆ.
ಶ್ರೇಷ್ಠಾಗೆ ಬೈದಿದ್ದಕ್ಕೆ ತಾಂಡವ್ ಟೆನ್ಶನ್
ಶ್ರೇಷ್ಠಾ ಮನೆಯ ಗೃಹಪ್ರವೇಶದ ಊಟಕ್ಕೆ ಇಟಲಿ ಸ್ಟೈಲ್ ನಲ್ಲಿ ಆರ್ಡರ್ ಮಾಡಿರುತ್ತಾಳೆ. ಅದಕ್ಕೆ ತಾಂಡವ್ ಅಮ್ಮ ಆಕೆಯನ್ನು ಕರೆದು ಬೈಯ್ತಾಳೆ. ನೀನು ನಮ್ಮ ಮನೆ ಊಟ ಸೆಲೆಕ್ಟ್ ಮಾಡೋಕೆ ಯಾರು? ಗೃಹಪ್ರವೇಶದ ಊಟ ಹೇಗಿರುತ್ತೆ ಅಂತ ಗೊತ್ತಿಲ್ವಾ? ನಿನಗೆ ಗೊತ್ತಾಗಲ್ಲ. ಮದುವೆ ಆಗಿಲ್ಲ. ಸಂಸಾರ ಇಲ್ಲ. ಇದು ಹೇಗೆ ಗೊತ್ತಾಗಬೇಕು ಎಂದು ಅವಮಾನ ಮಾಡಿದ್ದಾಳೆ. ಅದಕ್ಕೆ ತಾಂಡವ್ ಟೆನ್ಶನ್ ನಲ್ಲಿ ಇದ್ದಾನೆ.
ಸಿಗರೇಟ್ ಕಿಡಿಯಿಂದ ಬೆಂಕಿ
ಅವಮಾನಗೊಂಡ ಶ್ರೇಷ್ಠಾ, ತಾಂಡವ್ ಬಳಿ ಹೋಗಿ, ನಿನ್ನ 1947 ಹೆಂಡ್ತಿ, ಈ ಟಿಪಿಕಲ್ ಅಮ್ಮ ಇರೋವರೆಗೂ ನೀನ್ ಇದೇ ರೀತಿ ಬದುಕಬೇಕು. ನೀನು ಲಕ್ಷ ಅಲ್ಲ, ಕೋಟಿ ದುಡಿದ್ರೂ, ಮಿಡಲ್ ಕ್ಲಾಸ್ ಮೈಂಡ್ ಸೆಟ್ ನಿಂದ ಆಚೆ ಬರಲ್ಲ ಎಂದು ಹೋಗ್ತಾಳೆ. ಅದಕ್ಕೆ ತಾಂಡವ್ ಟೆನ್ಶನ್ನಿಂದ ಸಿಗರೇಟ್ ಸೇದಿ ಬೀಸಾಕ್ತಾನೆ. ಅದು ಹೋಗಿ ಮನೆ ಮುಂದೆ ಅಲಂಕಾರ ಮಾಡಿದ ಬಟ್ಟೆಗೆ ಹತ್ತಿಕೊಳ್ಳುತ್ತೆ.
ಇದನ್ನೂ ಓದಿ: Kendasampige: ಅಮ್ಮನ ವಿರುದ್ಧವೇ ತಿರುಗಿ ಬಿದ್ದ ಕುಡುಕ ಮಗ, ಸುಮನಾಗೆ ಹೆಚ್ಚಿದ ಚಿಂತೆ!
ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡ ವೈಷ್ಣವ್
ಬೆಂಕಿ ಬಿದ್ದ ತಕ್ಷಣ ವೈಷ್ಣವ್ ಗಾಬರಿ ಆಗ್ತಾನೆ. ಅಲ್ಲದೇ ಆ ಬೆಂಕಿ ಬಿದ್ದ ಸ್ಥಳದಲ್ಲಿ ಅವನ ವೈಯೋಲಿನ್ ಇರುತ್ತೆ. ಅದನ್ನು ತೆಗೆದುಕೊಳ್ಳಲು ಹೋಗುತ್ತಾನೆ. ಆಗ ಅಲ್ಲೇ ಬಿದ್ದು ಬಿಡುತ್ತಾನೆ. ಎಚ್ಚರ ತಪ್ಪಿದ್ದ ವೈಷ್ಣವ್ ನನ್ನು ಲಕ್ಷ್ಮಿ ಕಾಪಾಡ್ತಾಳೆ.
ವೈಷ್ಣವ್ ಗೆ ಲಕ್ಷ್ಮಿ ಬುದ್ಧಿ ಮಾತು
ತಲೆಯಲ್ಲಿ ಬುದ್ಧಿ ಇಟ್ಟುಕೊಂಡು ಮಾತನಾಡಿ. ಒಂದ ವೈಯೋಲಿನ್ ಗಾಗಿ ನಿಮ್ಮ ಜೀವ ಹೋದ್ರೂ ಪರವಾಗಿಲ್ವಾ? ನಿಮಗೇನಾದ್ರೂ ಹೆಚ್ಚು ಕಮ್ಮಿ ಆದ್ರೆ ಏನ್ ಗತಿ? ಸ್ಪಲ್ಪನೂ ಜವಾಬ್ದಾರಿ ಇಲ್ವಾ ನಿಮಗೆ, ಒಳ್ಳೆ ಚಿಕ್ಕ ಹುಡುಗನ ರೀತಿ ಆಡ್ತೀರಿಲ್ಲ, ಅಮ್ಮನಿಗೆ ಮಗ ಮುಖ್ಯ. ಮಗ ಅವಳ ಜೊತೆ ಇರಬೇಕು ಅಷ್ಟೆ. ಮೊದಲು ನೀವು ಅದನ್ನು ಅರ್ಥ ಮಾಡಿಕೊಳ್ಳಿ. ಬೆಳಗ್ಗೆ ನೀವು 10 ನಿಮಿಷ ಲೇಟ್ ಆಗಿ ಎದ್ದಿದ್ದಕ್ಕೆ ಅವರು ಅಷ್ಟು ಒದ್ದಾಡಿದ್ರು ಗೊತ್ತು ತಾನೇ ಎಂದು ಲಕ್ಷ್ಮಿ ಹೇಳ್ತಾಳೆ.
ಬೆಂಕಿಯಲ್ಲಿ ಸಿಲುಕಿಕೊಂಡು ಏನಾದ್ರೂ ಆದ್ರೆ, ನಿಮ್ಮನ್ನು ಕಳೆದುಕೊಂಡು ಬದುವ ಶಕ್ತಿ ಇದೇನಾ ನಿಮ್ಮ ಅಮ್ಮನಿಗೆ? ನೀವಂದ್ರೆ ಇಷ್ಟ. ನೀವು ನೋಡಿದ್ರೆ ಬೆಂಕಿಗೆ ಹಾರೋ ಸ್ಟಂಟ್ ಮಾಡ್ತೀರಿ. ಬುದ್ಧಿ ಬೇಡ್ವಾ ಎಂದು ವೈಷ್ಣವ್ ನನ್ನು ಲಕ್ಷ್ಮಿ ಪ್ರಶ್ನೆ ಮಾಡಿದ್ದಾಳೆ.
ನನಗೂ ಅಮ್ಮನ ಮೇಲೆ ಪ್ರೀತಿ ಇದೆ
ನಾನು ಅಮ್ಮನ್ನು ಪ್ರೀತಿ ಮಾಡ್ತೇನೆ. ನನಗೂ ಅವರನ್ನು ಕಂಡ್ರೆ ಅಷ್ಟೇ ಪ್ರೀತಿ ಇದೆ. ಅವಳು ಮಾತ್ರ ಅಲ್ಲ. ಅವಳು ಕೊಡಿಸಿದ ವಸ್ತುಗಳ ಮೇಲೂ ಅಷ್ಟೇ ಪ್ರೀತಿ ಇದೆ. ಅದನ್ನು ಯಾವತ್ತೂ ಹಾಳಗಲು ಬಿಡಲ್ಲ ನಾನು ಎಂದು ವೈಷ್ಣವ್ ಹೇಳಿದ್ದಾನೆ.
ಇದನ್ನೂ ಓದಿ: Kannadathi: ನೀರಿಗೆ ಬಿದ್ದಿದ್ಯಾಕೆ ಭುವಿ? ಹೀರೋ ಪತ್ನಿಗೆ ಏನಾಯ್ತು?
ಕಾವೇರಿಗೆ ಲಕ್ಷ್ಮಿ ಮೇಲೆ ಗೌರವ ಹೆಚ್ಚಾಗಿದೆ. ತಾಂಡವ್ಗೆ ಹೆಂಡ್ತಿ ಮೇಲೆ ಕೋಪ ಹೆಚ್ಚಾಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ