ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ಲಕ್ಷ್ಮಿ, ವೈಷ್ಣವ್ ಅಮ್ಮ ಕಾವೇರಿ ಮನಸ್ಸು ಗೆದ್ದಿದ್ದಾಳೆ. ಲಕ್ಷ್ಮಿ ಜೊತೆ ನಿಶ್ಚಿತಾರ್ಥ (Engagement) ಮಾಡಬೇಕು ಎಂದುಕೊಂಡಿದ್ದಾಳೆ.
ಕೀರ್ತಿಯನ್ನು ಪ್ರೀತಿಸುತ್ತಿರುವ ವೈಷ್ಣವ್!
ಕಾವೇರಿಗೆ ಮಗ ವೈಷ್ಣವ್ ಎಂದ್ರೆ ಪ್ರಾಣ. ಮಗನಿಗೂ ಅಮ್ಮ ಎಂದ್ರೆ ಪ್ರಾಣ. ಆದ್ರೆ ಮದುವೆ ವಿಷ್ಯ ಬಂತು ಎಂದ್ರೆ, ಕಾವೇರಿಗೆ ತಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ. ಮಗ ಕೀರ್ತಿಯನ್ನು ಪ್ರೀತಿ ಮಾಡ್ತಿರೋದು ಗೊತ್ತು. ಇಬ್ಬರು ಮದುವೆಗೆ ಒಪ್ಪಿರುವುದಾಗಿ ನಾಟಕ ಮಾಡ್ತಾ ಇದ್ದಾಳೆ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ.
ಮಗನ ಪ್ರಾಣ ಕಾಪಾಡಿದ ಲಕ್ಷ್ಮಿ ಮೇಲೆ ಒಲವು
ತಾಂಡವ್ ಮನೆ ಗೃಹಪ್ರವೇಶದ ವೇಳೆ ಲಕ್ಷ್ಮಿ ಗುಣಗಳನ್ನು ನೋಡಿ ಕಾವೇರಿ ಮೆಚ್ಚಿಕೊಂಡಿದ್ದಾಳೆ. ಆಕೆಯನ್ನು ಸೊಸೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾಳೆ. ಅಲ್ಲದೇ ವೈಷ್ಣವ್ ಬೆಂಕಿಯಲ್ಲಿ ಸಿಲುಕಿದಾಗ ಲಕ್ಷ್ಮಿ ಕಾಪಾಡಿ ಅವನಿಗೆ ಬುದ್ಧಿ ಹೇಳಿದ್ದಾಳೆ. ನಿಮ್ಮ ಅಮ್ಮನಿಗೆ ನೀವು ಮುಖ್ಯ. ನಿಮ್ಮ ಪ್ರಾಣಕ್ಕೆ ತೊಂದ್ರೆ ಆದ್ರೆ ಅವರು ಬದುಕಿರುತ್ತಾರಾ ಎಂದು ಪ್ರಶ್ನೆ ಮಾಡಿದ್ದಾಳೆ. ಇದನ್ನೇಲ್ಲಾ ನೋಡಿದ ಕಾವೇರಿಗೆ ಲಕ್ಷ್ಮಿ ಮೇಲೆ ಒಲವು ಹೆಚ್ಚಾಗಿದೆ.
ಇದನ್ನೂ ಓದಿ: Jothe Jotheyali: ಮೀರಾ ರಾಜೀನಾಮೆ ಹಿಂದೆ ಝೇಂಡೆ ಕೈವಾಡ, ಅನುಗೆ ಗೊತ್ತಾಗುತ್ತಾ ಸತ್ಯ?
ನಿಶ್ಚಿತಾರ್ಥ ಮಾಡೋಣ ಎಂದ ಕೀರ್ತಿ ಅಮ್ಮ
ಕಾವೇರಿ, ಕೀರ್ತಿ ಮತ್ತು ವೈಷ್ಣವ್ ಮದುವೆ ಓಕೆ ಎಂದಿರುವುದನ್ನು ನಿಜ ಎಂದುಕೊಂಡು, ಕೀರ್ತಿ ಅಮ್ಮ ಕಾಲ್ ಮಾಡಿ ನಿಶ್ಚಿತಾರ್ಥ ಮಾಡೋಣ ಎಂದು ಕಾವೇರಿ ಅವರನ್ನು ಕೇಳುತ್ತಿದ್ದಾರೆ. ಅದಕ್ಕೆ ಕಾವೇರಿ ನಗುತ್ತಾ ಓಕೆ ಎಂದಿದ್ದಾಳೆ. ಅವಳು ಓಕೆ ಅಂದಿರುವುದ ಅವರ ನಿಶ್ಚಿತಾರ್ಥಕ್ಕೆ ಅಲ್ಲ ಲಕ್ಷ್ಮಿ ನಿಶ್ಚಿತಾರ್ಥಕ್ಕೆ.
ಹೆಣ್ಣು ಕೇಳೋಕೆ ಹೋಗ್ತಾರಾ?
ಕಾವೇರಿಗೆ ಲಕ್ಷ್ಮಿ ಗುಣ ಇಷ್ಟ ಆದ ಕಾರಣ, ಆಕೆಯನ್ನೇ ತನ್ನ ಮನೆಯ ಸೊಸೆಯಾಗಿ ಮಾಡಿಕೊಳ್ಳಬೇಕು ಎಂದು ಕೊಂಡಿದ್ದಾಳೆ. ಅದಕ್ಕೆ ತನ್ನ ಅಕ್ಕನ ಬಳಿ ಒಳ್ಳೆ ದಿನಗಳು ಇವೆ ಅಂತೆ. ಲಕ್ಷ್ಮಿ ಮನೆಗೆ ಹೋಗಿ ಮಾತುಕಥೆ ಮುಗಿಸಿಕೊಂಡು ಬರೋಣ ಎಂತಿದ್ದಾಳೆ. ಹಾಗಾದ್ರೆ ಲಕ್ಷ್ಮಿಗೆ ಕೂಡಿ ಬಂತ ಕಂಕಣ ಭಾಗ್ಯ?
ವೈಷ್ಣವ್ ನನ್ನು ಒಪ್ತಾಳಾ ಲಕ್ಷ್ಮಿ?
ವೈಷ್ಣವ್ ದೊಡ್ಡ ಸಿಂಗರ್. ಶ್ರೀಮಂತ ಹುಡುಗ. ಆದ್ರೆ ಲಕ್ಷ್ಮಿ ಬಡವಳು. ಆಕೆ ಲೆವೆಲ್ ಗೆ ಅವರು ಸೆಟ್ ಆಗಲ್ಲ. ನಮ್ಮ ಯೋಗ್ಯತೆ ಮೀರಿ ಆಸೆ ಪಡಬಾರದು ಎನ್ನುವುದ ಲಕ್ಷ್ಮಿ ವಾದ. ಅದಕ್ಕೆ ಆಕೆ ವೈಷ್ಣವ್ ನ ಒಪ್ತಾಳಾ ನೋಡಬೇಕು. ಅಲ್ಲದೇ ಲಕ್ಷ್ಮಿ ಮದುವೆ ಆಗಲು ಭಾಗ್ಯ ಒಪ್ಪಿಗೆ ಬೇಕು. ಅಕ್ಕ ಒಪ್ಪಿದ್ರೆ, ಲಕ್ಷ್ಮಿ ಒಪ್ಪೇ ಒಪ್ತಾಳೆ.
ಇದನ್ನೂ ಓದಿ: Actor Aravind K P: ನೆವರ್ ಗಿವ್ ಅಪ್ ದಿವ್ಯಾ, ಬಿಗ್ ಬಾಸ್ ಆಟ ಬಿಟ್ಟು ಕೊಡಬೇಡ ಎಂದು ಅರವಿಂದ್ ಕೆ.ಪಿ!
ಲಕ್ಷ್ಮಿ-ವೈಷ್ಣವ್ ನಿಶ್ಚಿತಾರ್ಥ ನಡೆಯುತ್ತಾ? ಕೀರ್ತಿ ಪ್ರೀತಿ ಮರೆಯುತ್ತಾನಾ ಹಾಡುಗಾರ? ಕಾವೇರಿ ಅಂದುಕೊಂಡಂತೆ ಎಲ್ಲಾ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ