ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಆಧಾರಿತ ಕಥೆಯೇ ಭಾಗ್ಯಲಕ್ಷ್ಮಿ ಸೀರಿಯಲ್. ಅಕ್ಕ ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ (Relationship) ಇದೆ. ಆ ಸತ್ಯ ಲಕ್ಷ್ಮಿಗೆ ಗೊತ್ತಾಗಿದೆ.
ಭಾಗ್ಯಾಗೆ ಸದಾ ಬೈಗುಳ
ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳೊಂದು ಗುಗ್ಗು. ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ.
ತಾಂಡವ್ ಗೆ ಶ್ರೇಷ್ಠ ಜೊತೆ ಸಂಬಂಧ
ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸದಾ ಆಕೆಯ ಜೊತೆ ತಿರುಗುತ್ತಾ ಇರುತ್ತಾನೆ. ಮನೆ ಗೃಹಪ್ರವೇಶದಲ್ಲಿ ಶ್ರೇಷ್ಠಾಗೆ ಅವಮಾನ ಆಗಿತ್ತು ಎಂದು, ಆಕೆಯನ್ನು ಸಮಾಧಾನ ಮಾಡಲು ಕೈ ಚೈನ್ ಉಡುಗೊರೆಯಾಗಿ ನೀಡಿದ್ದಾನೆ.
ಇದನ್ನೂ ಓದಿ: Ganavi Lakshman: 'ಮಗಳು ಜಾನಕಿ' ಈಗ ಶಿವಣ್ಣನಿಗೆ ನಾಯಕಿ! ಗಾನವಿ ಹೇಳಿದ 'ವೇದ'ವಾಕ್ಯವೇನು ಗೊತ್ತಾ?
ಲಕ್ಷ್ಮಿಗೆ ಭಾವನ ಮೇಲೆ ಅನುಮಾನ
ಲಕ್ಷ್ಮಿಗೆ ಮೊದಲಿನಿಂದಲೂ ತನ್ನ ಭಾವನ ಮೇಲೆ ಅನುಮಾನ ಇತ್ತು. ತನ್ನ ಅಕ್ಕನನ್ನು ಪ್ರೀತಿಸದೇ ಇರುವ ಇವರಿಗೆ ಬೇರೆ ಯಾವುದಾದ್ರೂ ಸಂಬಂಧ ಇದೆಯಾ ಎಂದು ಪ್ರಶ್ನೆ ಮೂಡಿತ್ತು. ಅದಕ್ಕೆ ಲಕ್ಷ್ಮಿ ಸೀದಾ ಭಾವನ ಆಫೀಸ್ ಗೆ ಹೋಗಿದ್ದಾಳೆ. ಅಲ್ಲಿ ಶ್ರೇಷ್ಠಾ ಕೈನಲ್ಲಿ ತಾಂಡವ್ ತಂದಿದ್ದ ಕೈ ಚೈನ್ ನೋಡಿದ್ದಾಳೆ.
ಶ್ರೇಷ್ಠಾ ನನ್ನ ಗರ್ಲ್ ಪ್ರೆಂಡ್ ಎಂದ ತಾಂಡವ್
ಲಕ್ಷ್ಮಿ ಭಾವನಿಗೆ ಶ್ರೇಷ್ಠಾಗೂ ನಿಮಗೂ ಏನ್ ಸಂಬಂದ? ಅಕ್ಕ ಮನೆಯಲ್ಲಿ ಆ ಚೈನ್ ಮುಟ್ಟಿದ್ರೆ ಬೈದ್ರಿ. ಈಗ ಅದು ಶ್ರೇಷ್ಠಾ ಕೈನಲ್ಲಿ ಇದೆ ಅಂದ್ರೆ, ಏನ್ ಅರ್ಥ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಕೋಪಗೊಂಡ ತಾಂಡವ್ ಶ್ರೇಷ್ಠಾ ನನ್ನ ಗರ್ಲ್ ಪ್ರೆಂಡ್. ಏನ್ ಈಗ ಎಂದು ಲಕ್ಷ್ಮಿಗೆ ಅವಾಜ್ ಹಾಕಿದ್ದಾನೆ.
ಅಕ್ಕನ ಸಂಸಾರ ಸರಿ ಮಾಡ್ತಾಳಾ?
ಲಕ್ಷ್ಮಿಗೆ ಶ್ರೇಷ್ಠಾ ವಿಷ್ಯ ಕೇಳಿ ಶಾಕ್ ಆಗಿದೆ. ತನ್ನ ಅಕ್ಕನ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇದನ್ನು ಹೇಗಾದ್ರೂ ಸರಿ ಮಾಡಬೇಕು. ನಮ್ಮ ಅಕ್ಕಮ್ಮನಿಗೆ ಅನ್ಯಾಯ ಆಗ್ತಾ ಇದೆ. ಭಾವ ಮೋಸ ಮಾಡ್ತಾ ಇದ್ದಾರೆ. ಅವಳ ಸಂಸಾರ ಸರಿ ಮಾಡಬೇಕು ಎಂದುಕೊಳ್ತಾ ಇದ್ದಾಳೆ.
ಇದನ್ನೂ ಓದಿ: Lakshana: ನಕ್ಷತ್ರಾ ಒಳ್ಳೆತನ ನೋಡಿ ಕರಗಿದ ಮೌರ್ಯ! ಕೊಲ್ಲೋ ನಿರ್ಧಾರ ಕೈಬಿಟ್ಟನಾ ಕೊಲೆಗಾರ?
ಅಕ್ಕನಿಗೆ ಲಕ್ಷ್ಮಿ ಈ ವಿಷ್ಯ ತಿಳಿಸುತ್ತಾಳಾ? ಮನೆಯವರ ಮುಂದೆ ತಾಂಡವ್ ವಂಚನೆ ಬಯಲಾಗುತ್ತಾ? ಭಾಗ್ಯ ಇದನ್ನು ಹೇಗೆ ಸ್ವೀಕಾರ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ