• Home
  • »
  • News
  • »
  • entertainment
  • »
  • Bhagya Lakshmi: ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಆಸ್ಪತ್ರೆಗೆ ಹೋಗಿದ್ದೇ ತಪ್ಪಾಯ್ತಾ?

Bhagya Lakshmi: ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಆಸ್ಪತ್ರೆಗೆ ಹೋಗಿದ್ದೇ ತಪ್ಪಾಯ್ತಾ?

ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್

ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್

ನಿಮ್ಮ ಅಕ್ಕನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗು. ಇನ್ಯಾವತ್ತು ಕಳಿಸಬೇಡ ಎಂದು ಲಕ್ಷ್ಮಿಗೆ ಹೇಳುತ್ತಾನೆ. ಪರಿಸ್ಥಿತಿ ಅರ್ಥ ಮಾಡಿಸಲು ಹತ್ತಿರ ಹೋದ ಭಾಗ್ಯಳನ್ನು ತಾಂಡವ್ ತಳ್ಳಿ ಬಿಡ್ತಾನೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ  (Bhagya Lakshmi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ (Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ.


    ತಾಂಡವ್ ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ತಾಂಡವ್ ಭಾಗ್ಯಳನ್ನು ಮನೆಯಿಂದ ಹೊರ ಹಾಕುತ್ತಿದ್ದಾನೆ.


    ಭಾಗ್ಯ ಕಂಡ್ರೆ ತಾಂಡವ್‍ಗೆ ಆಗಲ್ಲ
    ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇಬ್ಬರು ಮಕ್ಕಳಾದ್ರೂ ಭಾಗ್ಯ ಮೇಲೆ ಗೌರವ ಸಹ ಇಲ್ಲ.


    ಇವಳಿಗೆ ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ. ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಯಾವಾಗಲೂ ಆಕೆಯ ಜೊತೆ ಸುತ್ತಾಡುತ್ತಿರುತ್ತಾನೆ. ಎಲ್ಲದಕ್ಕೂ ಆಕೆಯ ಬಳಿಯೇ ಸಲಹೆ ಕೇಳ್ತಾನೆ.


    ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಮೈತ್ರಿ ಸರ್ಕಾರ! ಬಹುಮತ ಯಾರಿಗೆ? 


    ಒಂದೇ ಹೋಟೆಲ್‍ನಲ್ಲಿ ತಾಂಡವ್, ಭಾಗ್ಯ, ಶ್ರೇಷ್ಠ
    ಭಾಗ್ಯಗೆ ಕಾಲು ನೋವಾಗಿರುತ್ತೆ. ಅದಕ್ಕೆ ವೈಷ್ಣವ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾನೆ. ಆಸ್ಪತ್ರೆಯಲ್ಲಿ ಎಲ್ಲಾ ಕೆಲಸ ಮುಗಿದ ಮೇಲೆ ಊಟಕ್ಕೆ ಹೋಗೋಣ ಎಂದು ಹೇಳ್ತಾನೆ. ಭಾಗ್ಯ ಬೇಡ ಅಂತಾಳೆ. ಆದ್ರೂ ಕೇಳದ ವೈಷ್ಣವ್ ಬಲವಂತವಾಗಿ ಹೋಟೆಲ್​ಗೆ ಕರೆದುಕೊಂಡು ಹೋಗುತ್ತಾನೆ. ಅದೇ ಹೋಟೆಲ್‍ನಲ್ಲಿ ಶ್ರೇಷ್ಠ ಮತ್ತು ತಾಂಡವ್ ಊಟ ಮಾಡುತ್ತಿದ್ದರು.


    colors kannada serial, kannada serial, bhagya lakshmi news serial, serial cast, lakshmi husband is worst, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭಾಗ್ಯಲಕ್ಷ್ಮಿ


    ಭಾಗ್ಯಳನ್ನು ನೋಡಿದ ತಾಂಡವ್
    ತಾಂಡವ್, ಶ್ರೇಷ್ಠಾಗೆ ಆರ್ಡರ್ ಮಾಡಿದ್ದ ಕೇಕ್ ಮಿಸ್ ಆಗಿ ವೈಷ್ಣವ್ ಟೇಬಲ್‍ಗೆ ಹೋಗಿರುತ್ತೆ. ಅದಕ್ಕೆ ಕೋಪಗೊಂಡ ತಾಂಡವ್ ಯಾರು ಅದು ಎಂದು ನೋಡಲು ಹೋಗಿರುತ್ತಾನೆ. ಅಷ್ಟರಲ್ಲೇ ವೈಷ್ಣವ್, ಭಾಗ್ಯ, ಲಕ್ಷ್ಮಿ ಕೇಕ್ ತಿಂದು ಊಟ ಮಾಡುವುದನ್ನು ನೋಡುತ್ತಾನೆ. ಅವರನ್ನು ಮಾತನಾಡಿಸದೇ, ಕೋಪಗೊಂಡು ಹೋಗುತ್ತಾನೆ.


    colors kannada serial, kannada serial, bhagya lakshmi news serial, serial cast, lakshmi husband is worst, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯಳನ್ನು ಮನೆಯಿಂದ ಹೊರ ಹಾಕಿದ ತಾಂಡವ್, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವೈಷ್ಣವ್


    ಮನೆಯಿಂದ ಹೊರ ದಬ್ಬಿದ ತಾಂಡವ್
    ಆಸ್ಪತ್ರೆ ಕೆಲಸ ಮುಗಿಸಿ ಬಂದ ಭಾಗ್ಯಳಿಗೆ ತಾಂಡವ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಾನೆ. ನೀನು ಯಾಕೆ ಮನೆಯಿಂದ ಆಚೆ ಹೋದೆ? ಎಂದೆಲ್ಲಾ ಪ್ರಶ್ನೆ ಮಾಡ್ತಾನೆ. ಆಗ ಲಕ್ಷ್ಮಿ ಅಕ್ಕನ ಕಾಲಿಗೆ ನೋವಾಗಿತ್ತು. ಅದಕ್ಕೆ ಎಂದು ಹೇಳ್ತಾಳೆ. ಹೌದಾ ಹಾಗಾದ್ರೆ ನಿಮ್ಮ ಅಕ್ಕನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗು. ಇನ್ಯಾವತ್ತು ಕಳಿಸಬೇಡ ಎನ್ನುತ್ತಾನೆ. ಭಾಗ್ಯ ಹತ್ತಿರ ಹೋದ್ರೆ ಆಕೆಯನ್ನು ತಳ್ಳಿ ಬಿಡ್ತಾನೆ.


    ಇದನ್ನೂ ಓದಿ: Sushma Nanaiah: ಮಲ್ಟಿ ಟ್ಯಾಲೆಂಟ್ ಸುಷ್ಮಾ ನಾಣಯ್ಯ ಬಗ್ಗೆ ನಿಮಗೆಷ್ಟು ಗೊತ್ತು? ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ ಸ್ಟ್ರಿಕ್ಟ್ ಅಮ್ಮ ಕಾವೇರಿ!


    ಭಾಗ್ಯ ತಾಂಡವ್‍ನನ್ನು ಬಿಟ್ಟು ಹೋಗ್ತಾಳಾ? ಶ್ರೇಷ್ಠಾಗಾಗಿ ತಾಂಡವ್ ಈ ರೀತಿ ಮಾಡ್ತಾ ಇದ್ದಾನಾ? ಲಕ್ಷ್ಮಿ ಇದನ್ನು ತಡೆಯುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: