ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಕೊನೆಗೂ ಲಕ್ಷ್ಮಿ ವೈಷ್ಣವ್ ಜೊತೆ ಮದುವೆ ಆಗಿದೆ. ಆದ್ರೆ ಇಬ್ಬರಿಗೂ ಮದುವೆ (Marriage) ಇಷ್ಟ ಇಲ್ಲ. ಆದ್ರೂ ಹೊಂದಿಕೊಂಡು ಬಾಳೋಣ ಎಂದು ಇಬ್ಬರು ಮಾನತಾಡುತ್ತಿದ್ದಾರೆ.
ಕ್ಷಮೆ ಕೇಳೋದು ಬೇಡ
ಕ್ಷಮಿಸಿ, ನಿಮಗೆ ನನ್ನಿಂದ ತೊಂದ್ರೆ ಆಗ್ತಿದೆ ಎಂದು ವೈಷ್ಣವ್ ಹೇಳ್ತಾನೆ. ಅದಕ್ಕೆ ಲಕ್ಷ್ಮಿ, ನಾವು ಒಂದು ಸತ್ಯ ಅರಿತುಕೊಳ್ಳಬೇಕು. ಯಾರಿಂದ ಯಾರಿಗೂ ತೊಂದ್ರೆ ಆಗ್ತಿಲ್ಲ. ನನಗೆ ನೀವು, ನಿಮಗೆ ನಾನು ತೊಂದ್ರೆ ಅಲ್ಲ. ಬದಲಾಗಿ ನಿಮ್ಮ ಸಮಸ್ಯೆಗೆ ನಾನು, ನನ್ನ ಸಮಸ್ಯೆಗೆ ನೀವು ಪರಿಹಾರವಾಗಿ ಸಿಕ್ಕಿದ್ದೇವೆ ಎಂದುಕೊಳ್ಳೋಣ. ಕೂತರು, ನಿಂತರೂ ಕ್ಷಮೆ ಕೇಳ್ಕೊಂಡು, ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಎಂದು ಲಕ್ಷ್ಮಿ ಹೇಳಿದ್ದಾಳೆ.
ಬಲವಂತಕ್ಕೆ ಮೊಗ್ಗು ಹೂವು ಆಗಲ್ಲ
ಆಗಿದ್ದು ಆಗಿ ಹೋಯ್ತು, ಮುಂದಕ್ಕೆ ನಾವು ಹೇಗಿರ್ತಿವಿ ಅನ್ನುವುದರ ಮೇಲೆ ಎಲ್ಲಾ ನಿಂತಿದೆ. ಎಲ್ಲಾ ಮರೆತು ಮುಂದೆ ಹೋಗೋದು ಸ್ವಲ್ಪ ಕಷ್ಟ ಅನ್ನಿಸುತ್ತೆ. ಸ್ಪಲ್ಪ ಟೈ ಬೇಕು ಎಂದು ವೈಷ್ಣವ್ ಹೇಳಿದ್ದಾನೆ. ಗೊತ್ತು, ನಾಳೆನೇ ಎಲ್ಲಾ ಸರಿ ಹೋಗುತ್ತೆ. ನಾಡಿದ್ದು ನಾವು ಚೆನ್ನಾಗಿ ಇರ್ತೇವೆ ಎಂದು ನಾನು ಹೇಳ್ತಾ ಇಲ್ಲ. ಬಲವಂತಕ್ಕೆ ಮೊಗ್ಗು ಹೂವು ಆಗಲ್ಲ. ಅದಾಗಿಯೇ ಅರಳಬೇಕು. ಮನಸ್ಸಿಗೆ ಆಗಿರೋ ಗಾಯ ಮಾಯೋಕೆ ಟೈಮ್ ಬೇಕು ಎಂದು ಲಕ್ಷ್ಮಿ ಹೇಳಿದ್ದಾಳೆ.
ನೀವು ಲಕ್ಷಕ್ಕೆ ಒಬ್ಬರು
ಬಲವಂತಕ್ಕೆ ಯಾವುದು ಸಿಗಲ್ಲ. ಸರಿ ಹೋಗೋ ಮನಸ್ಸು ಇರಬೇಕು ಎಂದು ಲಕ್ಷ್ಮಿ ಹೇಳ್ತಾಳೆ. ಅದಕ್ಕೆ ವೈಷ್ಣವ್ ಖುಷಿ ಆಗಿ, ನಿಮ್ಮ ತರ ಎಲ್ಲದನ್ನೂ ಪಾಸಿಟಿವ್ ಆಗಿ ತೆಗೆದುಕೊಳ್ಳೋ ಹುಡುಗಿಯನ್ನು ನೋಡೇ ಇಲ್ಲ ಮಹಾಲಕ್ಷ್ಮಿ.
ನಿಮ್ಮನ್ನು ನೋಡಿ, ಮಾತನಾಡಿ ನಿಮ್ಮ ಮೇಲೆ ಇರೋ ವಿಶ್ವಾಸ, ಗೌರವ ಹೆಚ್ಚಾಗುತ್ತೆ. ನೀವು ಚಿನ್ನದಂತ ಹುಡುಗಿ, ನೀವು ಸಾವಿರಕ್ಕೆ ಏನು, ಲಕ್ಷಕ್ಕೆ ಒಬ್ಬರು. ಗೊತ್ತಿದ್ದು, ಗೊತ್ತಿದ್ದು, ನಾನು ನಿಮ್ಮನ್ನು ನೋಯಿಸಲ್ಲ ಮಹಾಲಕ್ಷ್ಮಿ ಎಂದು ವೈಷ್ಣವ್ ಹೇಳಿದ್ದಾನೆ.
ನಿಮ್ಮ ಖುಷಿ ಮುಖ್ಯ
ಗೊತ್ತಿಲ್ಲದೇ ನಾನು ಏನಾದ್ರೂ ತಪ್ಪು ಮಾಡಿದ್ರೆ, ಕ್ಷಮಿಸಿ ನನ್ನ ಜೊತೆ ಇರಿ. ನಿಮಗೆ ಕೊಡಬೇಕಾದ ಖುಷಿ ನನ್ನ ಕೈನಲ್ಲಿ ಕೋಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ನಿಮ್ಮ ಖುಷಿಗಾಗಿ ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಯಾವತ್ತೂ ಇದ್ದೇ ಇರುತ್ತೆ. ನಿಮ್ಮ ಗುಣ, ನಡೆತೆಯಲ್ಲಿ ಇಷ್ಟೊಂದು ಶ್ರೀಮಂತಿಕೆ ಇದೆ ಅದಕ್ಕೆ ನೀವು ಮಹಾಲಕ್ಷ್ಮಿ ಎಂದು ವೈಷ್ಣವ್ ಹೇಳಿದ್ದಾನೆ.
ಇದನ್ನೂ ಓದಿ: Lakshana: ತನ್ನ ಆಟ ಶುರು ಮಾಡಿದ ಡೆವಿಲ್, ಸತ್ಯ ಹೇಳಲಾಗದೇ ನಕ್ಷತ್ರಾ ಪರದಾಟ!
ಹೊಂದಿಕೊಂಡು ಬಾಳೋ ಹಾದಿಯಲ್ಲಿ ಲಕ್ಷ್ಮಿ-ವೈಷ್ಣವ್. ಇಬ್ಬರು ಖುಷಿಯಾಗಿರಲು ಕೀರ್ತಿ ಬಿಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ