ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ . ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ (Marriage) ನಡೆದಿದೆ. ಭಾರವಾದ ಮನಸ್ಸಿನಿಂದ ಲಕ್ಷ್ಮಿ ಗಂಡನ ಮನೆಗೆ ಹೊರಟಿದ್ದಾಳೆ.
ಇಷ್ಟ ಇಲ್ಲದ ಮದುವೆ
ವೈಷ್ಣವ್ ಲಕ್ಷ್ಮಿ ಬಳಿ ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಹೇಳಿರುತ್ತಾನೆ. ಅದಕ್ಕೆ ಲಕ್ಷ್ಮಿ ಪತ್ರ ಬರೆದಿಟ್ಟು ಹೋಗಿರುತ್ತಾಳೆ. ವೈಷ್ಣವ್ ಆಕೆಯನ್ನು ಹುಡುಕಲು ಹೋಗ್ತಾನೆ. ಆಕೆ ಮದುವೆ ಮನೆಯ ಒಂದು ರೂಮ್‍ನಲ್ಲಿ ಕೂತಿರುತ್ತಾಳೆ. ವೈಷ್ಣವ್ ಹೋಗಿ ಬನ್ನಿ ಎನ್ನುತ್ತಾನೆ. ಆಕೆ ಬಲವಂತದ ಮದುವೆ ಇಷ್ಟ ಇಲ್ಲ ಅಂತಾಳೆ. ಇದು ಅರೆಂಜ್ ಮ್ಯಾರೇಜ್ ಬನ್ನಿ ಎಂದು ಹೇಳ್ತಾನೆ. ಲಕ್ಷ್ಮಿಯೂ ಒಪ್ತಾಳೆ.
ಅಕ್ಕಮ್ಮ, ಅಮ್ಮನಿಗಾಗಿ ಮದುವೆ
ಲಕ್ಷ್ಮಿಗೂ ಈ ಮದುವೆ ಇಷ್ಟ ಇಲ್ಲ. ವೈಷ್ಣವ್‍ಗೂ ಈ ಮದುವೆ ಇಷ್ಟ ಇಲ್ಲ. ಆದ್ರೆ ಈ ಮದುವೆ ಆದ್ರೆ, ಮನೆಯವರೆಲ್ಲಾ ಖುಷಿ ಆಗ್ತಾರೆ ಎಂದು ಇಬ್ಬರ ನಂಬಿಕೆ. ಲಕ್ಷ್ಮಿ ತನ್ನ ಅಕ್ಕಮ್ಮನಿಗಾಗಿ ಮದುವೆ ಆಗ್ತಿದ್ರೆ, ವೈಷ್ಣವ್ ತನ್ನ ಅಮ್ಮ ಕಾವೇರಿಗಾಗಿ ಈ ಮದುವೆಗೆ ಓಕೆ ಎನ್ನುತ್ತಾನೆ. ಇಬ್ಬರು ಇಷ್ಟವಿಲ್ಲದಿದ್ದರು ಮದುವೆ ಮಂಟಪಕ್ಕೆ ಬಂದಿದ್ದಾರೆ.
ನೂರೆಂಟು ವಿಘ್ನ ದಾಟಿ ಮದುವೆ
ಲಕ್ಷ್ಮಿಗೆ ಇನ್ನೇನು ವೈಷ್ಣವ್ ತಾಳಿ ಕಟ್ಟಬೇಕು, ಅಷ್ಟರಲ್ಲಿ ತಾಳಿ ಕಳೆದು ಹೋಗಿರುತ್ತೆ. ಭಾಗ್ಯ ಅಮ್ಮ ಈ ಮದುವೆ ನಡೆಯಬಾರದು ಎಂದು ತಾಳಿ ಕದ್ದಿರುತ್ತಾಳೆ. ಅಷ್ಟರಲ್ಲಿ ಭಾಗ್ಯ ಅರಿಶಿನ ಕೊಂಬನ್ನು ರೆಡಿ ಮಾಡ್ತಾಳೆ. ಒಉರೋಹಿತರು ಸಹ ಆಗಬಹುದು ಎಂದು ಹೇಳ್ತಾರೆ. ನೂರೆಂಟು ವಿಘ್ನ ದಾಟಿ ಇಬ್ಬರ ಮದುವೆ ನಡೆದಿದೆ.
ಗಂಡನ ಮನೆಗೆ ಹೊರಟ ಲಕ್ಷ್ಮಿ
ಹುಟ್ಟಿರೋ ಮನೆ ಬಿಟ್ಟು ಮೆಟ್ಟಿರೋ ಮನೆಗೆ ಹೋಗ್ತಾ ಇದೀನಿ. ಇನ್ಮುಂದೇನೂ ಇವರನ್ನು ಚೆನ್ನಾಗಿ ನೋಡಿಕೊಳ್ಳೋ ಶಕ್ತಿ ಕೊಡಲಿ. ನನ್ನ ಉಸಿರು ಇರೋ ತನಕ ಯಾವತ್ತೂ ನನ್ನ ಮನೆಯವರನ್ನು ಬಿಟ್ಟು ಕೊಡಲ್ಲ. ನನ್ನ ಅಪ್ಪನ ಮನೆ ಹಾಲು ಉಕ್ಕಿದ ರೀತಿ ಉಕ್ಕಲಿ ಎಂದು ಭಾರವಾದ ಮನಸ್ಸಿನಿಂದ ಗಂಡನ ಮನೆಗೆ ಹೊರಟಿದ್ದಾಳೆ ಲಕ್ಷ್ಮಿ.
ದೊಡ್ಡಪ್ಪನ ಕಿವಿ ಮಾತು
ಲಕ್ಷ್ಮಿ ಚಿಕ್ಕವಳಿದ್ದಾಗಲೇ ಅಪ್ಪ-ಅಮ್ಮ ಸಾವನ್ನಪ್ಪಿದ್ದಾರೆ. ಲಕ್ಷ್ಮಿಯನ್ನು ಭಾಗ್ಯ ಮತ್ತು ಅವರ ದೊಡ್ಡಪ್ಪ ನೋಡಿಕೊಂಡಿರುತ್ತಾರೆ. ಮಗಳೇ, ಚೆನ್ನಾಗಿರು. ನಮ್ಮ ಬಗ್ಗೆ ಯೋಚನೆ ಮಾಡಬೇಡ. ಇಷ್ಟು ದಿನ ನಮಗೋಸ್ಕರ ಬದುಕಿದ್ದು ಸಾಕು. ಇನ್ನು ಮುಂದೆಯಾದ್ರೂ ನಿನ್ನ ಜೀವನ ನೋಡಿಕೋ ಮಗಳೇ. ನೆನಪಾದಾಗ ಫೋನ್ ಮಾಡು. ಆಗಾಗ ಬಂದು ಈ ದೊಡ್ಡಪ್ಪನನ್ನು ನೋಡಿಕೊಂಡು ಹೋಗು ಎಂದು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: Actress Shriya Saran: ಸೀರೆಯಲ್ಲಿ ಕಬ್ಜ ಬೆಡಗಿ, ಗ್ಲಾಮರಸ್ ಫೋಟೋ ಶೇರ್ ಮಾಡಿದ ನಟಿ ಶ್ರಿಯಾ ಶರಣ್!
ಕೊನೆಗೂ ಲಕ್ಷ್ಮಿ-ವೈಷ್ಣವ್ ಮದುವೆ ನಡೆದೇ ಹೋಯ್ತು. ಇಬ್ಬರು ಹೋದಿಕೊಂಡು ಹೋಗ್ತಾರಾ? ಬಲವಂತಕ್ಕೆ ಮದುವೆ ಆಗಿ ಕಷ್ಟ ಪಡ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ