ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇನ್ನು ವೈಷ್ಣವ್ಗೆ ಲಕ್ಷ್ಮಿಯನ್ನು ಮದುವೆ (Marriage) ಮಾಡಬೇಕು ಎಂದು ಅಮ್ಮ ಕಾವೇರಿ, ದೊಡ್ಡಮ್ಮ ಕುಸುಮಾ (Kusuma) ಪ್ಲ್ಯಾನ್ ಮಾಡ್ತಾ ಇದ್ದಾರೆ. ಅದಕ್ಕೆ ಅಡ್ಡಿಯಾಗಿರುವ ಕೀರ್ತಿಯನ್ನು ವೈಷ್ಣವ್ ನಿಂದ ದೂರ ಮಾಡಬೇಕಿದೆ.
ಕೀರ್ತಿಯನ್ನು ಪ್ರೀತಿಸುತ್ತಿರುವ ವೈಷ್ಣವ್
ಕಾವೇರಿಗೆ ಮಗ ವೈಷ್ಣವ್ ಎಂದ್ರೆ ಪ್ರಾಣ. ಮಗನಿಗೂ ಅಮ್ಮ ಎಂದ್ರೆ ಪ್ರಾಣ. ಆದ್ರೆ ಮದುವೆ ವಿಷ್ಯ ಬಂತು ಎಂದ್ರೆ, ಕಾವೇರಿಗೆ ತಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ. ಮಗ ಕೀರ್ತಿಯನ್ನು ಪ್ರೀತಿ ಮಾಡ್ತಿರೋದು ಗೊತ್ತು.
ಇಬ್ಬರು ಮದುವೆಗೆ ಒಪ್ಪಿರುವುದಾಗಿ ನಾಟಕ ಮಾಡ್ತಾ ಇದ್ದಾಳೆ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ. ಆದ್ರೆ ಕೀರ್ತಿ-ವೈಷ್ಣವ್ ತುಂಬಾ ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದಾರೆ.
ವೈಶ್ ಇಲ್ಲ ಅಂದ್ರೆ ಇರಲ್ಲ
ವೈಷ್ಣವ್ ಮತ್ತು ಕೀರ್ತಿಗೆ ನಿಶ್ಚಿತಾರ್ಥ ಮಾಡಬೇಕು ಎಂದು ಮನೆಯವರು ಅಂದುಕೊಂಡಿದ್ದಾರೆ. ಅದರ ಶಾಪಿಂಗ್ ಮಾಡ್ತಾ ಇದ್ದಾರೆ. ಆದ್ರೆ ಇದು ಕಾವೇರಿಗೆ ಇಷ್ಟ ಇಲ್ಲ. ಹೇಗಾದ್ರೂ ನಿಲ್ಲಿಸಬೇಕು ಎಂದು ತನ್ನ ಅಕ್ಕ ಕುಸುಮಾಗೆ ಹೇಳಿದ್ದಾಳೆ. ಅಲ್ಲದೇ ವೈಶ್ ಬಿಟ್ಟು ನಾನು ಬದುಕಲ್ಲ ಎಂದು ಕೀರ್ತಿ ಹೇಳ್ತಾ ಇದ್ದಾಳೆ.
ಇದನ್ನೂ ಓದಿ: BBK Grand Finale: ಶನಿವಾರ-ಭಾನುವಾರ ಅಲ್ಲ, ಶುಕ್ರವಾರ-ಶನಿವಾರ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ!
ಕೀರ್ತಿ ಮನೆಗೆ ಬಂದ ಕುಸುಮಾ
ವೈಷ್ಣವ್ ದೊಡ್ಡಮ್ಮ ಕೀರ್ತಿ ಮನೆಗೆ ಬಂದಿದ್ದಾರೆ. ಮನೆ ಮುಂದೆ ರಂಗೋಲಿ, ತುಳಸಿ ಕಟ್ಟೆ ಇಲ್ಲ ಎಂದು ಅಲ್ಲೇ ಅಂದುಕೊಂಡಿದ್ದಾರೆ. ಅಲ್ಲದೇ ಲೇಟ್ ಆಗಿ ಎದ್ದು ಬಂದ ಕೀರ್ತಿ ಅಮ್ಮನನ್ನು ನೋಡಿ ಶಾಕ್ ಆಗಿದ್ದಾರೆ. ಕೀರ್ತಿಯೂ ವರ್ಕೌಟ್ ಮಾಡಿ ಬಂದಿದ್ದನ್ನು ನೋಡಿ, ಇದೇ ರೀತಿನಾ ನೀವು ಇರೋದು ಎಂದು ಕೇಳಿದ್ದಾಳೆ. ಅದಕ್ಕೆ ಕೀರ್ತಿ ಹೌದು ಎಂದಿದ್ದಾಳೆ.
ಕಾಫಿ ಮಾಡಿ ಕೊಡು ಎಂದ ಕುಸುಮಾ
ಕುಸುಮಾ ಕೀರ್ತಿಗೆ ನನಗೆ ಒಂದು ಕಪ್ ಕಾಫಿ ಮಾಡಿ ಕೊಡು ಎಂದು ಕೇಳಿದ್ದಾಳೆ. ಅದಕ್ಕೆ ಕೀರ್ತಿ ನನಗೆ ಬರಲ್ಲ. ನಾನು ಅಡುಗೆ ಕಲಿತಿಲ್ಲ ಎಂದು ಹೇಳ್ತಾಳೆ. ಅದಕ್ಕೆ ಕುಸುಮಾಗೆ ಶಾಕ್ ಆಗುತ್ತೆ. ಮತ್ತೆ ಮದುವೆ ಆದ ಮೇಲೆ ಏನ್ ಕಥೆ ಎನ್ನುತ್ತಾಳೆ. ಅದಕ್ಕೆ ನನ್ನ ನಂಬಿಕೊಂಡ್ರೆ ಅವರು ಉಪವಾಸ ಎಂದು ಕೀರ್ತಿ ಹೇಳ್ತಾಳೆ.
ಇದನ್ನೂ ಓದಿ: BBK Rupesh Rajanna: ರಾಜಣ್ಣ ವಿಡಿಯೋ ಮಾಡಿ ಗುರೂಜಿ, ಶೆಟ್ಟಿ ಮರ್ಯಾದೆ ತಗೀತಾರಂತೆ! ನೀಚ ಅಂದಿದ್ದು ಯಾರು?
ಈ ಮದುವೆ ಸಾಧ್ಯ ಇಲ್ಲ ಎಂದ ಕುಸುಮಾ
ಯಾವಾಗ ಕೀರ್ತಿ ನನಗೆ ಕಾಫಿ ಮಾಡಲೂ ಸಹ ಬರುವುದಿಲ್ಲ ಎಂದು ಹೇಳ್ತಾಳೋ, ಆಗ ಕುಸುಮಾಗೆ ಕೋಪ ಬರುತ್ತೆ. ಹಾಗಾದ್ರೆ ಈ ಮದುವೆ ಖಂಡಿತಾ ಸಾಧ್ಯ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೀರ್ತಿಗೆ ಶಾಕ್ ಆಗಿದೆ. ವೈಷ್ಣವ್ ನನ್ನು ಹುಚ್ಚಿ ತರ ಪ್ರೀತಿ ಮಾಡೋ ಕೀರ್ತಿಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ.
ನಿಜವಾಗ್ಲೂ ಈ ಮದುವೆ ನಡೆಯಲ್ವಾ? ವೈಶ್-ಕೀರ್ತಿ ದೂರ ಆಗ್ತಾರಾ? ಕಾವೇರಿ ಮುಂದಿನ ನಡೆ ಏನು? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ