ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ಲಕ್ಷ್ಮಿ, ವೈಷ್ಣವ್ ಅಮ್ಮ ಕಾವೇರಿ ಮನಸ್ಸು ಗೆದ್ದಿದ್ದಾಳೆ. ಲಕ್ಷ್ಮಿ (Lakshmi) ಜೊತೆ ನಿಶ್ಚಿತಾರ್ಥ (Engagement) ಮಾಡಬೇಕು ಎಂದುಕೊಂಡಿದ್ದಾಳೆ. ಆದ್ರೆ ಕೀರ್ತಿ ಜೊತೆ ಎಂಗೇಜ್ಮೆಂಟ್ ಆಗ್ತಿದೆ.
ಕೀರ್ತಿ-ವೈಷ್ಣವ್ ನಿಶ್ಚಿತಾರ್ಥ
ಕಾವೇರಿಗೆ ಮಗ ವೈಷ್ಣವ್ ಎಂದ್ರೆ ಪ್ರಾಣ. ಮಗನಿಗೂ ಅಮ್ಮ ಎಂದ್ರೆ ಪ್ರಾಣ. ಆದ್ರೆ ಮದುವೆ ವಿಷ್ಯ ಬಂತು ಎಂದ್ರೆ, ಕಾವೇರಿಗೆ ತಾನು ಅಂದುಕೊಂಡಿದ್ದೇ ಆಗಬೇಕು ಎಂಬ ಹಠ. ಮಗ ಕೀರ್ತಿಯನ್ನು ಪ್ರೀತಿ ಮಾಡ್ತಿರೋದು ಗೊತ್ತು. ಇಬ್ಬರು ಮದುವೆಗೆ ಒಪ್ಪಿರುವುದಾಗಿ ನಾಟಕ ಮಾಡ್ತಾ ಇದ್ದಾಳೆ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ.
ಆದ್ರೆ ಮಗನ ಆಸೆಯಂತೆ ಕೀರ್ತಿ ಜೊತೆ ಎಂಗೇಜ್ಮೆಂಟ್ ಮಾಡಲು ಒಪ್ಪಿಕೊಂಡಿದ್ದಾಳೆ. ಕೀರ್ತಿ ಅಮ್ಮ ಸಹ ನಾಳೆಯೇ ನಿಶ್ಚಿತಾರ್ಥ ಆಗಬೇಕು ಎಂದು ಕಂಡಿಷನ್ ಹಾಕಿದ್ದಳು. ಅದಕ್ಕೆ ಕಾವೇರಿ ಇಷ್ಟ ಇಲ್ಲ ಅಂದ್ರೂ ಒಪ್ಪಿಕೊಂಡಿದ್ದಾಳೆ. ಎಲ್ಲಾ ತಯಾರಿ ಆಗಿದೆ. ಇವತ್ತಿನ ಸಂಚಿಕೆಯಲ್ಲಿ ವೈಷ್ಣವ್ ಮತ್ತು ಕೀರ್ತಿ ನಿಶ್ಚಿತಾರ್ಥ ನಡೆಯಲಿದೆ.
ಇದನ್ನೂ ಓದಿ: Ramachari: ಕಣ್ಣು ಕಳೆದುಕೊಂಡ ಚಾರು, ಬೆಳಕಾಗಿ ನಿಲ್ತಾನಾ ರಾಮಾಚಾರಿ?
ಲಕ್ಷ್ಮಿ ಮೇಲೆ ಕಾವೇರಿ ಒಲವು
ತಾಂಡವ್ ಮನೆ ಗೃಹಪ್ರವೇಶದ ವೇಳೆ ಲಕ್ಷ್ಮಿ ಗುಣಗಳನ್ನು ನೋಡಿ ಕಾವೇರಿ ಮೆಚ್ಚಿಕೊಂಡಿದ್ದಳು. ಆಕೆಯನ್ನು ಸೊಸೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ತನ್ನ ಮಾತು ಕೇಳುವ ಸೊಸೆ ಬೇಕು. ಅದಕ್ಕೆ ಲಕ್ಷ್ಮಿಯೇ ಸರಿಯಾದ ಜೋಡಿ ಎಂದು ತನ್ನ ಅಕ್ಕ ಕುಸುಮಾ ಬಳಿ ಹೇಳಿದ್ದಾಳೆ.
ಲಕ್ಷ್ಮಿ-ವೈಷ್ಣವ್ ಮದುವೆಗಾಗಿ ದೇವರ ಮೊರೆ
ಭಾಗ್ಯ ಅತ್ತೆ ಕುಸುಮಾ, ಲಕ್ಷ್ಮಿ ಮತ್ತು ವೈಷ್ಣವ್ ಗೆ ಮದುವೆ ಮಾಡಿಸಬೇಕು ಎಂದುಕೊಂಡಿದ್ದಾಳೆ. ಆದ್ರೆ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡ್ತಾ ಇದ್ದಾನೆ. ಅದಕ್ಕೆ ಕುಸುಮಾ ದೇವರ ಮೊರೆ ಹೋಗಿದ್ದಾಳೆ. ಲಕ್ಷ್ಮಿಯನ್ನು ದೇವಸ್ಥಾನಕ್ಕೆ ಕರೆಸಿ ಪೂಜೆ ಮಾಡಿಸುತ್ತಿದ್ದಾಳೆ. ವೈಷ್ಣವ್ ಮತ್ತು ಲಕ್ಷ್ಮಿಯನ್ನು ಹೊಂದು ಮಾಡುವಂತೆ ಬೇಡಿಕೊಳ್ತಾ ಇದ್ದಾಳೆ.
ದೇವರ ಮೊರೆ
ಅಮ್ಮಾ, ತಾಯಿ ಜಗದೀಶ್ವರಿ ಲಕ್ಷ್ಮಿ ಜವಾಬ್ದಾರಿಯನ್ನು ನಿನ್ನ ಮಡಿಲಿಗೆ ಹಾಕ್ತಾ ಇದ್ದೇನೆ. ನೀನೇ ನೋಡ್ಕೋಬೇಕು. ಚಿನ್ನದಂತ ಹುಡುಗಿ. ಒಂದೇ ಒಂದು ಲೋಪ ಇಲ್ಲ. ದೋಷ ಇಲ್ಲ. ತಪ್ಪು ಹುಡುಕುವಂತಿಲ್ಲ. ಬೆಳಗ್ಗೆ ಬೇಗ ಹೇಳ್ತಾಳೆ. ಮನೆ ಕೆಲಸ ಮಾಡ್ತಾಳೆ. ಹೊರಗೆ ದುಡಿಯುತ್ತಾಳೆ. ತಾಳ್ಮೆಯಿಂದ ಇರ್ತಾಳೆ. ಚುಟಿಯಾಗಿ ಇದ್ದಾಳೆ. ಸಿಕ್ರೆ ಈ ರೀತಿ ಸೊಸೆ ಸಿಗಬೇಕು ಎಂದು ಎಲ್ಲರು ಅಂದುಕೊಳ್ತಾರೆ. ಈಕೆಗೆ ಒಳ್ಳೆ ಹುಡುಗನನ್ನು ಕರುಣಿಸು ಎಂದು ಕುಸುಮಾ ಬೇಡಿಕೊಂಡಿದ್ದಾಳೆ.
ಇದನ್ನೂ ಓದಿ: Kannadathi: ಭುವಿಯನ್ನು ಕಾಪಾಡಿದ ಹರ್ಷ, ಮದುವೆಗೆ ಒಪ್ಪಿದ ವರು: ಮುಂದೇನು?
ಲಕ್ಷ್ಮಿ-ವೈಷ್ಣವ್ ಮದುವೆ ಆಗುತ್ತಾ? ಕೀರ್ತಿ-ವೈಷ್ಣವ್ ನಿಶ್ಚಿತಾರ್ಥ ನಿಲ್ಲುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ