ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಮದುವೆ ಮಾಡಲು ಅಕ್ಕ ಒಳ್ಳೆ ಹುಡುಗನನ್ನು ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಆದ್ರೆ ಭಾಗ್ಯ ಗಂಡನೇ ಶ್ರೀರಾಮ ಆಗಿಲ್ಲ. ಶ್ರೇಷ್ಠಾ ಜೊತೆ ಬೇರೆ ಸಂಬಂಧ (Relationship) ಇಟ್ಟುಕೊಂಡಿದ್ದಾನೆ. ಆ ವಿಷ್ಯ ಕುಸುಮಾಗೆ ಗೊತ್ತಾಗಿ ಮಗನ (Son) ಮೇಲೆ ಕೆಂಡಕಾರುತ್ತಿದ್ದಾಳೆ.
ಭಾಗ್ಯಾಗೆ ಕಂಡ್ರೆ ಇಷ್ಟ ಇಲ್ಲ
ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳೊಂದು ಗುಗ್ಗು. ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ.
ಶ್ರೇಷ್ಠಾ ಜೊತೆ ಕುಚ್-ಕುಚ್
ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಸದಾ ಆಕೆಯ ಜೊತೆ ತಿರುಗುತ್ತಾ ಇರುತ್ತಾನೆ. ಎಲ್ಲದಕ್ಕೂ ಆಕೆಯ ಸಲಹೆ ಪಡೆಯುತ್ತಾನೆ. ಶ್ರೇಷ್ಠಾ ತನಗೆ ಸರಿಯಾದ ಜೋಡಿ ಎಂದುಕೊಂಡಿದ್ದಾನೆ. ಶ್ರೇಷ್ಠಾ ಸಹ ತಾಂಡವ್ ಜೊತೆ ಕ್ಲೋಸ್ ಆಗಿ ಇರುತ್ತಾಳೆ.
ಇದನ್ನೂ ಓದಿ: Disney Movies: ಸ್ಟಾರ್ ಸುವರ್ಣದಲ್ಲಿ ಬರಲಿದೆ ಡಿಸ್ನಿ ಮೂವೀಸ್, ಮಕ್ಕಳನ್ನು ರಂಜಿಸಲು ಹೊಸ ಪ್ಲ್ಯಾನ್!
ಶ್ರೇಷ್ಠಾ ಕಾಲ್ ರಿಸೀವ್ ಮಾಡಿದ ಕುಸುಮಾ
ಶ್ರೇಷ್ಠಾ ತಾಂಡವ್ಗೆ ಕಾಲ್ ಮಾಡಿರುತ್ತಾಳೆ. ಆದ್ರೆ ತಾಂಡವ್ ಅಮ್ಮ ಕುಸುಮಾ ರಿಸೀವ್ ಮಾಡಿದ್ದಾಳೆ. ಈ ಕಡೆಯಿಂದ ಯಾರು ಮಾತಡ್ತಾರೆ ಅನ್ನುವುದನ್ನು ಕೇಳದೇ, ಶ್ರೇಷ್ಠಾ ಮಾತನಾಡುತ್ತಿದ್ದಾಳೆ. ನೀನು ತುಂಬಾ ಪರ್ಫೆಕ್ಟ್. ನೀನು ಸೋ ಸ್ವೀಟ್. ನೀನು ಅಂದ್ರೆ ನನಗೆ ತುಂಬಾ ಇಷ್ಟ.
ನನಗೆ ಎಷ್ಟು ಖುಷಿ ಆಗ್ತಿದೆ ಗೊತ್ತಾ? ಈ ದಿನಕ್ಕಾಗಿ ಕಾಯ್ತಾ ಇದ್ದೆ. ಎರುಡು ದಿನದ ಗೋವಾ ಟ್ರಿಪ್ ಬುಕ್ ಆಯ್ತು. ನಾನು ತುಂಬಾ ಹ್ಯಾಪಿ ಆಗಿದ್ದೇನೆ. ನಾನು ತುಂಬಾ ಎಂಜಾಯ್ ಮಾಡ್ತೀನಿ ಎಂದು ಹೇಳುತ್ತಿದ್ದಾಳೆ.
ಕುಸುಮಾ ಕೆಂಡಾಮಂಡಲ
ಶ್ರೇಷ್ಠಾ ಖುಷಿಯಿಂದ ಎಲ್ಲವನ್ನೂ ಹೇಳ್ತಾ ಇದ್ಲು. ಅಷ್ಟರಲ್ಲಿ ಕುಸುಮಾ ಹಲೋ, ನಿನ್ನ ಪಟ್ಟಿ ಎಲ್ಲಾ ಮುಗೀತಾ, ನಾನು ತಾಂಡವ್ ಅವರ ತಾಯಿ ಮಾತನಾಡುತ್ತಾ ಇರೋದು ಕುಸುಮಾ. ಇಷ್ಟೇನಾ? ಇನ್ನು ಹೇಳೋದಿತ್ತಾ ಶ್ರೇಷ್ಠಾ ಅವರೇ ಎಂದು ಕುಸುಮಾ ಕೇಳಿದ್ದಾಳೆ. ಅದನ್ನು ಕೇಳಿಸಿಕೊಂಡು ಶ್ರೇಷ್ಠಾ ಶಾಕ್ ಆಗಿದ್ದಾಳೆ. ಸಡನ್ ಆಗಿ ಕಾಲ್ ಕಟ್ ಮಾಡಿದ್ದಾಳೆ.
ಮಗನನ್ನು ತಡೆದ ಕುಸುಮಾ
ತಾಂಡವ್ ಬೇಗ-ಬೇಗ ಕಚೇರಿಗೆ ಹೋಗಬೇಕು ಎಂದು ಭಾಗ್ಯಾಗೆ ತಿಂಡಿ ಕೊಡು ಎಂದು ಹೇಳುತ್ತಿದ್ದಾನೆ. ಭಾಗ್ಯ ಕೊಡಲು ಹೋಗುತ್ತಾಳೆ. ಆಗ ಕುಸುಮಾ ತಡೆಯುತ್ತಾಳೆ. ಯಾಕಮ್ಮ ತುಂಬಾ ಕೆಲಸ ಇದೆ ಬೇಗ ಹೋಗಬೇಕು ಎನ್ನುತ್ತಾನೆ. ಅದಕ್ಕೆ ಕುಸುಮಾ ಇವತ್ತು ನನಗೆ ರಜೆ ಎಂದು ಕೋಪದಿಂದ ಹೇಳಿದ್ದಾಳೆ.
ಇದನ್ನೂ ಓದಿ: Shubra Aiyappa Marriage: ವಜ್ರಕಾಯ ಬೆಡಗಿಗೆ ಕಂಕಣ ಭಾಗ್ಯ, ಹಸೆಮಣೆ ಏರಲು ಸಜ್ಜಾದ ನಟಿ ಶುಭ್ರಾ ಅಯ್ಯಪ್ಪ!
ಮಗನಿಗೆ ಬುದ್ಧಿ ಕಲಿಸ್ತಾಳಾ ಕುಸುಮಾ? ತಾಂಡವ್ ಇದಕ್ಕೇನು ಹೇಳ್ತಾನೆ? ಭಾಗ್ಯಾಗ ತನ್ನ ಗಂಡನ ಸಂಬಂಧ ತಿಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ