ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಗೆ ಹೆಣ್ಣು ನೋಡಲು ಕಾವೇರಿ ಲಕ್ಷ್ಮಿ ಮನೆಗೆ ಬಂದಿದ್ದಾಳೆ.
ಕೀರ್ತಿ-ವೈಷ್ಣವ್ ಬ್ರೇಕ್ ಅಪ್
ಕಾವೇರಿ ಮಗ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡ್ತಾ ಇದ್ದ. ಆದ್ರೆ ಕಾವೇರಿಗೆ ಕೀರ್ತಿ ಸೊಸೆಯಾಗಿ ಬರುವುದು ಇಷ್ಟ ಇಲ್ಲ. ಆದ್ರೆ ಮಗನ ಆಸೆಯಂತೆ ಕೀರ್ತಿ ಜೊತೆ ಎಂಗೇಜ್ಮೆಂಟ್ ಮಾಡಲು ಒಪ್ಪಿಕೊಂಡಿದ್ದಳು. ಎಲ್ಲಾ ತಯಾರಿ ಆಗಿತ್ತು. ಆದ್ರೆ ಕೀರ್ತಿ ನಿಶ್ಚಿತಾರ್ಥ ಬೇಡ ಎಂದು ಬಿಟ್ಟಳು. ಕಾರಣವೇ ನೀಡದೇ ವೈಷ್ಣವ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಳು.
ಲಕ್ಷ್ಮಿ ಮನೆಗೆ ಹೆಣ್ಣು ನೋಡಲು ಹೋದ ಕಾವೇರಿ
ಕಾವೇರಿ ತನ್ನ ಅಕ್ಕ ಕುಸುಮಾ ಮಾತಿನಂತೆ ಲಕ್ಷ್ಮಿಯನ್ನು ನೋಡಲು ಅವರ ಮನೆಗೆ ಹೋಗಿದ್ದಾಳೆ. ಆದ್ರೆ ವೈಷ್ಣವ್ ತಾನು ಬರುವುದಿಲ್ಲ ಎಂದು ಮನೆಯಲ್ಲಿ ಹೇಳಿದ್ದಾನೆ. ಅದಕ್ಕೆ ಕಾವೇರಿಗೆ ಗಾಬರಿ ಆಗಿದೆ. ಆದ್ರೂ ಕುಸುಮಾ ನಾವು ಒಪ್ಪಿದ್ರೆ ಸಾಕು, ವೈಷ್ಣವ್ನನ್ನು ಆಮೇಲೆ ಒಪ್ಪಿಸೋಣ ಎಂದಿದ್ದಾಳೆ.
ಲಕ್ಷ್ಮಿ ಮನೆಯಲ್ಲಿ ಹೈಡ್ರಾಮಾ
ಭಾಗ್ಯ ಕಾಲ್ ಮಾಡಿ ಲಡ್ಡುನಾ ನೋಡಲು ಬರುತ್ತಾರೆ ಎಂದು ಅವರ ಅಮ್ಮನಿಗೆ ಹೇಳಿರುತ್ತಾಳೆ. ಆದ್ರೂ ಭಾಗ್ಯ ಅಮ್ಮ ತನ್ನ ಮಗಳು ಪೂಜಾಳನ್ನು ರೆಡಿ ಮಾಡಿರುತ್ತಾಳೆ. ಲಕ್ಷ್ಮಿಗೆ ಏನೂ ಗೊತ್ತಗಲ್ಲ. ಅವಳು ಪೆದ್ದಿ. ನಮ್ಮ ಪೂಜಾ ಓದಿದ್ದಾಳೆ. ಎಲ್ಲ ರೀತಿಯಲ್ಲೂ ವೈಷ್ಣವ್ಗೆ ಮ್ಯಾಚ್ ಆಗ್ತಾಳೆ ಎಂದು ಹೇಳಿದ್ದಾಳೆ. ಅದಕ್ಕೆ ಕುಸುಮಾಗೆ ಕೋಪ ಬಂದಿದೆ.
ಪೂಜಾ-ಲಕ್ಷ್ಮಿಗೆ ಪರೀಕ್ಷೆ
ಕುಸುಮಾ ಪೂಜಾ ಮತ್ತು ಲಕ್ಷ್ಮಿಗೆ ಒಂದು ಪರೀಕ್ಷೆ ಮಾಡ್ತೇನೆ. ಯಾರು ಗೆಲ್ತಾರೋ ಅವರೇ ವೈಷ್ಣವ್ ಹೆಂಡ್ತಿ ಎಂದು ಹೇಳ್ತಾಳೆ. ಇಬ್ಬರಿಗೂ 10 ಸಾವಿರ ಕೊಟ್ಟು ತರಕಾರಿ ತೆಗೆದುಕೊಂಡು ಬನ್ನಿ ಅಂದ್ರೆ ಏನ್ ಮಾಡ್ತೀರಾ ಎಂದು ಕೇಳ್ತಾಳೆ. ಅದಕ್ಕೆ ಪೂಜಾ ನಾನು ಎಲ್ಲವನ್ನೂ 10, 10 ಕೆಜಿ ತರುತ್ತೇನೆ ಎನ್ನುತ್ತಾಳೆ. ಆದ್ರೆ ಲಕ್ಷ್ಮಿ ಮನೆಗೆ ಎಷ್ಟು ಬೇಕೋ ಅಷ್ಟು ತರುತ್ತೇನೆ ಎನ್ನುತ್ತಾಳೆ. ಅದಕ್ಕೆ ಲಕ್ಷ್ಮಿ ಆ ಪರೀಕ್ಷೆ ಗೆದ್ದು, ವೈಷ್ಣವ್ ಮದುವೆ ಆಗಲು ರೆಡಿ ಆಗಿದ್ದಾಳೆ.
ಕೀರ್ತಿ ಕೋಪಕ್ಕೆ ಕಾರಣವೇನು?
ವೈಷ್ಣವ್ ನನ್ನು ಕೀರ್ತಿ ಬೇಡ ಎಂದಿರಬಹುದು. ಆದ್ರೆ ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಲು ವೈಷ್ಣವ್ ಒದ್ದಾಡುತ್ತಿದ್ದಾನೆ. ಕೀರ್ತಿ ಬಳಿ ಹೋಗಿ ನಾನು ಬೇರೆ ಹುಡುಗಿ ಮದುವೆ ಆಗ್ತೀನಿ ಎಂದಿದ್ದಾನೆ. ಅದಕ್ಕೆ ಕೀರ್ತಿ ಆಗು ಎಂದಿದ್ದಾಳೆ. ಆದ್ರೆ ಒಳಗೊಳಗೆ ಕೀರ್ತಿ ಕೊರಗುತ್ತಿದ್ದಾಳೆ. ಅಳುತ್ತಿದ್ದಾಳೆ. ಅದಕ್ಕೆ ಕಾರಣ ಏನು ಎಂದು ಗೊತ್ತಾಗುತ್ತಿಲ್ಲ.
ಇದನ್ನೂ ಓದಿ: Actress Shubra Aiyappa: ನಟಿ ಶುಭ್ರ ಅಯ್ಯಪ್ಪ-ವಿಶಾಲ್ ಜೋಡಿಯ ಕೊಡವ ಲುಕ್ ನೋಡಿ!
ವೈಷ್ಣವ್ ಮದುವೆ ಆಗುವುದು ಯಾರನ್ನು? ಕೀರ್ತಿ ಮದುವೆ ಆಗ್ತಾನಾ? ಲಕ್ಷ್ಮಿ ಮದುವೆ ಆಗ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ