ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಅವರು ಆಸ್ಪತ್ರೆಗೆ (Hospital) ಹೋಗಿ ಮನೆಗೆ ಬಂದ್ರೂ ತಾಂಡವ್‍ಗೆ ಈ ಸುದ್ದಿ ಗೊತ್ತಾಗಿಲ್ಲ. ಆಫೀಸ್ (Office) ಎಂದು ಸುಳ್ಳು ಹೇಳಿ ಶ್ರೇಷ್ಠಾ ಮನೆಗೆ ಹೋಗಿದ್ದ.
3 ಲಕ್ಷ ದುಡ್ಡು ಮಾಯ
ಕುಸುಮಾ ಆಸ್ಪತ್ರೆಯಿಂದ ಬಂದು ಮನೆಯಲ್ಲಿ ಕೂತಿದ್ದಾಗ ಕಾಲ್ ಬರುತ್ತೆ. ನಿಮ್ಮ ಅಕೌಂಟ್ ಹೊಸದು ಮಾಡಿಸಬೇಕು. ಡಿಟೇಲ್ಸ್ ಕೊಡಿ ಎಂದು ಕೇಳ್ತಾರೆ. ಕುಸುಮಾಗೆ ಗೊತ್ತಾಗದೇ ಅಕೌಂಟ್ ನಂಬರ್ ಹೇಳಿ, ಓಟಿಪಿಯನ್ನು ಹೇಳ್ತಾಳೆ. ಒಂದೇ ಕ್ಷಣದಲ್ಲಿ 3 ಲಕ್ಷ ಹಣ ಮಾಯವಾಗುತ್ತೆ. ಕುಸುಮ ಅದಕ್ಕೆ ತನ್ನ ಮಗನನ್ನು ಹುಡುಕಿಕೊಂಡು ಆಫೀಸ್‍ಗೆ ಹೋಗಿದ್ದಾಳೆ.
ತಾಂಡವ್ ರಜೆ
ಆಫೀಸ್‍ಗೆ ಹೋದ ಕುಸುಮಾ ನೇರವಾಗಿ ಬಾಸ್ ಮೀಟ್ ಮಾಡಿದ್ದಾಳೆ. ನೀವು ಎಷ್ಟದ್ರೂ ಕೆಲಸ ಮಾಡಿಸಿಕೊಳ್ಳಿ, ಆದ್ರೆ ರಾತ್ರಿಯಾದ್ರೂ ಮನೆಗೆ ಕಳಿಸಿ ಎಂದು ಕೇಳಿಕೊಂಡಿದ್ದಾಳೆ. ಆಗ ಬಾಸ್, ನಾವು ಯಾರನ್ನೂ ಓವರ್ ಟೈಮ್ ಮಾಡಿಸಿಕೊಳ್ಳಲ್ಲ. ಅಲ್ಲದೇ ಇವತ್ತು ತಾಂಡವ್ ರಜೆ ಹಾಕಿದ್ದಾರೆ. ಆಫೀಸ್‍ಗೆ ಬಂದಿಲ್ಲ ಎಂದು ಹೇಳ್ತಾರೆ. ಅದನ್ನು ಕೇಳಿ ಕುಸುಮಾಗೆ ಕೋಪ ಬಂದಿದೆ.
ಶ್ರೇಷ್ಠಾ ಸಹ ರಜೆ
ಕುಸುಮಾಗೆ ಆಗ ಶ್ರೇಷ್ಠಾಳು ರಜೆ ತೆಗೆದುಕೊಂಡಿದ್ದಾಳೆ ಎಂದು ಗೊತ್ತಾಗುತ್ತೆ. ಅದಕ್ಕೆ ಕುಸುಮಾಗೆ ಅನುಮಾನ ಬರುತ್ತೆ. ನನ್ನ ಮಗ ರಾಜ ಆ ಶ್ರೇಷ್ಠಾ ಬಳಿ ಹೋಗಿರಬೇಕು ಎಂಬ ಅನುಮಾನ ಬರುತ್ತೆ. ಅದಕ್ಕೆ ಕುಸುಮಾ ಅವನು ಮನೆಗೆ ಬಂದ ತಕ್ಷಣ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಬೇಕು ಎಂದು ಕಾಯ್ತಾ ಇದ್ದಾಳೆ. ತಾಂಡವ್ ಮನೆಗೆ ಬರುತ್ತಾನೆ.
ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನೆ?
ಕೆಲಸ ಎಲ್ಲಾ ಮುಗೀತಾ? ಮೀಟಿಂಗ್ ಮುಗೀತಾ? ಚೆನ್ನಾಗಾಯ್ತಾ? ತುಂಬಾ ಸುಸ್ತಾಗಿರಬೇಕು. ನಿನ್ನೆ ರಾತ್ರಿನೇ ಹೋದವನು. ಪಾಪಾ ಸಿಕ್ಕಾಪಟ್ಟೆ ಕೆಲಸ ಇರಬೇಕು. ಬೆಳಗ್ಗೆನೂ ಮನೆಗೆ ಕಳಿಸಲಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ನಿನ್ನ ಮೀಟಿಂಗ್ ಆಫೀಸ್ ನ ಒಳಗಾ? ಹೊರಗಾ? ನಿನ್ನ ಮೀಟಿಂಗ್ ನೋಡಿದೆ. ನೀನು ಇಲ್ಲದ ಮೀಟಿಂಗ್ ಎಂದು ಕುಸುಮಾ ತಾಂಡವ್‍ನನ್ನು ವಿಚಾರಣೆ ಮಾಡ್ತಾ ಇದ್ದಾಳೆ.
ಕುಸುಮಾ ರಾಕ್, ತಾಂಡವ್ ಶಾಕ್
ಅಮ್ಮನ ಹತ್ತಿರ ಸುಳ್ಳು ಹೇಳ್ತಾ ಇದೀಯಾ? ನನ್ನ ಹತ್ತಿರ ಇದು ನಡೆಯಲ್ಲ. ಬೇಡ ತಾಂಡವ್ ವಿಷಯ ಸುಮ್ನೆ ಎಳೆಯಬೇಡ. ನಿಜ ಏನು ಅಂತ ಹೇಳು ಈಗ. ನೀನು ಆಫೀಸ್ ಗೆ ಹೋಗಿಲ್ಲ ಎಂದು ಚೆನ್ನಾಗಿ ಗೊತ್ತಿದೆ. ಸುಳ್ಳು ಹೇಳಬೇಡ. ನಾನು, ಭಾಗ್ಯ ಕುದ್ದಾಗಿ ನಿನ್ನ ಆಫೀಸ್ ಗೆ ಹೋಗಿದ್ವಿ. ನಿನ್ನ ಬಾಸ್ ನ ಮೀಟ್ ಮಾಡಿದ್ವಿ ಎಂದು ಹೇಳಿದ್ದಾಳೆ. ಅದನ್ನು ಕೇಳಿ ತಾಂಡವ್ ಶಾಕ್ ಆಗಿದ್ದಾನೆ.
ಇದನ್ನೂ ಓದಿ: Rashmika Mandanna: ಬೋಲ್ಡ್ ಲುಕ್‍ನಲ್ಲಿ ರಶ್ಮಿಕಾ ಮಂದಣ್ಣ, ನಟಿಗೆ ಲಕ್ಷ-ಲಕ್ಷ ಲೈಕ್ಸ್!
ತಾಂಡವ್ ಅಮ್ಮನ ಬಳಿ ನಿಜ ಹೇಳ್ತಾನಾ? ಕುಸುಮಾ ಸತ್ಯ ಬಾಯ್ಬಿಡಿಸುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ