ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಮದುವೆ ಮಾಡಲು ಅಕ್ಕ ಒಳ್ಳೆ ಹುಡುಗನನ್ನು ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಆದ್ರೆ ತನ್ನ ಗಂಡನೇ ಶ್ರೇಷ್ಠಾ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಶ್ರೇಷ್ಠಾ ಮತ್ತು ತಾಂಡವ್ ಸಂಬಂಧ (Relationship) ಕುಸುಮಾಗೆ ಗೊತ್ತಾಗಿದೆ. ಅದಕ್ಕೆ ಶ್ರೇಷ್ಠಾ ಮನೆಗೆ ಬಂದಿದ್ದಾಳೆ.
ಶ್ರೇಷ್ಠಾ ಮನೆಗೆ ಬಂದ ಕುಸುಮಾ
ಮಗ ತಾಂಡವ್ಗೆ ಶ್ರೇಷ್ಠಾ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ ಅಮ್ಮ ಕುಸುಮಾಗೆ ಗೊತ್ತಾಗಿದೆ. ಅದಕ್ಕೆ ಮಗನ ಸಂಸಾರ ಉಳಿಸಬೇಕು ಎಂದು ಪಣ ತೊಟ್ಟಿದ್ದಾಳೆ. ಅದಕ್ಕೆ ಕುಟುಂಬದ ಜೊತೆ ಫೋಟೋ ತೆಗೆಸಿ, ಅದನ್ನು ತೆಗೆದುಕೊಂಡು ಶ್ರೇಷ್ಠಾ ಮನೆಗೆ ಬಂದಿದ್ದಾಳೆ. ಶ್ರೇಷ್ಠಾ ಮನೆಯನ್ನೆಲ್ಲಾ ಚೆಕ್ ಮಾಡುತ್ತಿದ್ದಾಳೆ.
ಮದುವೆ ಯಾಕ್ ಆಗಿಲ್ಲ?
ಶ್ರೇಷ್ಠಾ ಮನೆಗೆ ಬಂದಿರುವ ಕುಸುಮಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಾ ಇದ್ದಾಳೆ. ಮನೆಯಲ್ಲಿ ಏಕೆ ಒಬ್ಬಳೇ ಇದ್ದೀಯಾ? ಮದುವೆ ಏಕೆ ಆಗಿಲ್ಲ ಎಂದು. ಸಂಸಾರ ಅಂತ ಕಟ್ಟಿಕೊಂಡ್ರೆ ಬನ್ನು, ಮಣ್ಣು ತಿನ್ನೋಕೆ ಆಗಲ್ಲ. ಬೇಯಿಸಿ ಹಾಕಬೇಕು. ಅದಕ್ಕೆ ನಿಮ್ಮ ರೀತಿ ಹುಡುಗಿಯರೇ ಸರಿ, ಆದ್ರೆ ನಾನು ಹಾಗಲ್ಲ, ಅದಕ್ಕೆ ಮದುವೆ ಆಗಲ್ಲ ತಾನೇ ಎಂದು ಪ್ರಶ್ನಿಸುತ್ತಿದ್ದಾಳೆ.
ಇದನ್ನೂ ಓದಿ: Lakshana: ನಕ್ಷತ್ರಾಳನ್ನು ಸೊಸೆ ಎಂದು ಒಪ್ಪಿಕೊಂಡ ಶಕುಂತಲಾ ದೇವಿ, ಶ್ವೇತಾ ಕುತಂತ್ರ ಬಯಲು!
ಶ್ರೇಷ್ಠಾ ಮನೆಯಲ್ಲಿ ತಾಂಡವ್ ಫೋಟೋ
ಕುಸುಮಾ ಶ್ರೇಷ್ಠಾ ಬೆಡ್ ರೂಮ್ ನಲ್ಲಿ ಮಗ ತಾಂಡವ್ ಫೋಟೋ ನೋಡಿದ್ದಾಳೆ. ಅದು ಇಬ್ಬರು ಒಟ್ಟಿಗೆ ತೆಗೆಸಿಕೊಂಡಿರೋದು. ಅದನ್ನು ನೋಡಿ ಕುಸುಮಾ ರೊಚ್ಚಿಗೆದ್ದಿದ್ದಾಳೆ. ನನ್ನ ಮಗನ ಫೋಟೋ ಇಲ್ಲಿ ಯಾಕೆ ಇದೆ. ನಿನಗೂ ನನ್ನ ಮಗನಿಗೂ ಏನು ಸಂಬಂಧ ಎಂದು ಕೇಳಿದ್ದಾಳೆ. ಶ್ರೇಷ್ಠಾ ಗಾಬರಿಯಾಗಿದ್ದಾಳೆ.
ಫೋಟೋ ಒಡೆದು ಹಾಕಿದ ಕುಸುಮಾ
ತಾಂಡವ್ ಸರ್ ನನಗೆ ಗುರುಗಳು ಇದ್ದ ಹಾಗೆ. ಟೀಚರ್ ತರ. ನಾನು ಕೆಲಸಕ್ಕೆ ಸೇರಿದಾಗಿನಿಂದ ಕೆಲಸ ಕಲಿಸಿ ಕೊಟ್ಟಿದ್ದಾರೆ. ಅದಕ್ಕೆ ಫೋಟೋ ಇಟ್ಟುಕೊಂಡಿದ್ದಾನೆ ಎನ್ನುತ್ತಾಳೆ. ಹೌದು ನೀನು ನನ್ನ ಮಗನಿಗೆ ಶಿಷ್ಯೆ ಇರಬಹುದು. ಆದ್ರೆ ನೀನು ಆ ರೀತಿ ನಡೆದುಕೊಳ್ಳಲ್ಲ ಎಂದು ಕೋಪ ಮಾಡಿಕೊಂಡು ಕುಸುಮಾ ಆ ಫೋಟೋವನ್ನು ಹೊಡೆದು ಹಾಕಿದ್ದಾಳೆ.
ಭಾಗ್ಯ-ತಾಂಡವ್ ಫೋಟೋ ಉಡುಗೊರೆ
ಕುಸುಮಾ ಯಾವಾಗ ಶ್ರೇಷ್ಠಾ-ತಾಂಡವ್ಗೆ ಸಂಬಂಧ ಎಂದು ಅನುಮಾನ ಬಂತೋ, ಆಗ ಕುಟುಂಬದ ಫೋಟೋ ಶೂಟ್ ಮಾಡಿಸಿದಳು. ಭಾಗ್ಯ-ತಾಂಡವ್ ಇರುವ ಫೋಟೋವನ್ನು ಶ್ರೇಷ್ಠಾಗೆ ಉಡುಗೊರೆಯಾಗಿ ನೀಡಿದ್ದಾಳೆ.
ಈ ಫೋಟೋ ನಿಮ್ಮ ಮನೆಯಲ್ಲಿ ಇಟ್ಟುಕೋ. ನಿನಗೆ ನಿಮ್ಮ ಗುರುಗಳಿಗೆ ಮದುವೆ ಆಗಿದೆ ಎಂದು ನಿನಗೆ ಆಗ ನೆನಪಾಗುತ್ತೆ ಎಂದು ಹೇಳಿದ್ದಾಳೆ. ಇನ್ನೊಂದು ಸಾರಿ ನನ್ನ ಮಗನ ತಂಟೆಗೆ ಬರಬೇಡ ಎಂದು ವಾರ್ನ್ ಮಾಡಿದ್ದಾಳೆ.
ಇದನ್ನೂ ಓದಿ: Rashmika Mandanna: ವಿಜಯ್ ಜೊತೆಗಿನ ಮಾಲ್ಡೀವ್ಸ್ ದಿನಗಳು! ಮತ್ತೆ ಹೋಗಬೇಕು ಎಂದ ರಶ್ಮಿಕಾ
ಕುಸುಮಾ ಕ್ಲಾಸ್ ಗೆ ಶ್ರೇಷ್ಠಾ ನಡುಗಿ ಹೋಗಿದ್ದಾಳೆ. ತಾಂಡವ್ ಇವಳ ಸಹವಾಸ ಬಿಡ್ತಾನಾ? ಮುಂದೇನಾಗುತ್ತೆ ಅಂತ ಭಾಗಯ್ಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ