ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಭಾಗ್ಯ, ಮಗಳು ತನ್ವಿಗಾಗಿ ಪ್ರಾಜೆಕ್ಟ್ (Project) ಮಾಡ್ತಾ ಇದ್ದಾಳೆ. ಅದಕ್ಕೆ ಮಾತನಾಡಲು ಕುಸುಮಾ ಬೆಂಬಲ ನೀಡಿದ್ದಾಳೆ.ಮಗಳು ತನ್ವಿ ಭಾಗ್ಯಾಗೆ ಅವಮಾನ ಮಾಡಿದ್ದಾಳೆ. ಅದನ್ನು ನೆನೆಸಿಕೊಂಡು ಭಾಗ್ಯ ಕಣ್ಣೀರಿಡುತ್ತಿದ್ದಾಳೆ. ಅದಕ್ಕೆ ಭಾಗ್ಯಾಳನ್ನು ಓದಿಸುವ ನಿರ್ಧಾರ ಮಾಡಿದ್ದಾಳೆ ಕುಸುಮಾ.
ತನ್ವಿಗೆ ಹೊಡೆದ ಭಾಗ್ಯ
ತನ್ವಿ ಶ್ರೇಷ್ಠಾ ಮುಂದೆ ಭಾಗ್ಯಾಳಿಗೆ ಅವಮಾನ ಮಾಡಿರುತ್ತಾಳೆ. ಅದನ್ನುಕೇಳಿಸಿಕೊಂಡ ಭಾಗ್ಯ ತುಂಬಾ ನೊಂದುಕೊಂಡಿರುತ್ತಾಳೆ. ಆಗ ಲಕ್ಷ್ಮಿ ಕಾಲ್ ಮಾಡಿ, ನಿನ್ನ ಮಗಳನ್ನು ನೀನೇ ಸರಿ ಮಾಡು. ನನ್ನ ಅಕ್ಕಮ್ಮ ನೀನು. ಅವಳು ಬಂದ ಮೇಲೆ ಎಲ್ಲವನ್ನೂ ಅರ್ಥ ಮಾಡಿಸು ಎಂದು ಹೇಳಿರ್ತಾಳೆ. ಅದಕ್ಕೆ ಭಾಗ್ಯ ತನ್ವಿ ಬರುವುದನ್ನು ಕಾದು, ಅವಳಿಗೆ ಹೊಡೆಯುತ್ತಾಳೆ.
ಏನು ಗೊತ್ತಿಲ್ಲದೇ ಅಮ್ಮ ಆದ್ನಾ?
ಮನೆಯಲ್ಲೂ ತನ್ವಿ ಅದನ್ನೇ ಹೇಳ್ತಾಳೆ. ನಿನಗೆ ಏನೂ ಗೊತ್ತಾಗಲ್ಲ ಎಂದು ಅದಕ್ಕೆ ಭಾಗ್ಯ ಏನು ಗೊತ್ತಿಲ್ಲದೇ ಅಮ್ಮ ಆದ್ನಾ ನಾನು. ಏನು ಗೊತ್ತಿಲ್ಲದೇ 14 ವರ್ಷ ನಿನ್ನನ್ನು ಸಾಕಿದ್ನಾ? ನೀನು ಬೆಳಗ್ಗೆ ಎದ್ರೆ ಏನು ತಿನ್ನಬೇಕು, ಏನು ಕುಡಿಯಬೇಕು ಎಂದು ನೋಡಿಕೊಳ್ಳುವವಳು ನಾನು. ನನಗೆ ಏನು ಗೊತ್ತಾಗಲ್ಲ ಎಂದು ಹೇಳ್ತೀಯಾ ಎಂದು ಮತ್ತೆ ತನ್ವಿಗೆ ಹೊಡೆಯುತ್ತಾಳೆ.
ಭಾಗ್ಯಾಗೆ ಹೊಡೆಯಲು ಹೋದ ತಾಂಡವ್
ಮಗಳಿಗೆ ಹೊಡೆದಿದ್ದಕ್ಕೆ ತಾಂಡವ್‍ಗೆ ಕೋಪ ಬರುತ್ತೆ ಅದಕ್ಕೆ ಭಾಗ್ಯಾಳನ್ನು ಹೊಡೆಯಲು ಹೋಗ್ತಾನೆ. ಆಗ ಕುಸುಮಾ ಅವನ ಕೈ ಹಿಡಿದು ತಡೆಯುತ್ತಾಳೆ. ತಾಂಡವ್‍ಗೆ ಬೈಯ್ತಾಳೆ. ನೀನು ನನ್ನ ಮಗನಾ? ಒಂದು ಹೆಣ್ಣಿನ ಮೇಲೆ ಕೈ ಮಾಡಲು ಹೋಗ್ತಿಯಲ್ಲಾ ಎಂದು ಹೇಳ್ತಾಳೆ. ತಾಂಡವ್ ಹೆಂಡ್ತಿದೇ ತಪ್ಪು ಎಂದು ಹೇಳ್ತಾನೆ. ಅದಕ್ಕೆ ಕುಸುಮಾಗೆ ಕೋಪ ಬರುತ್ತೆ.
ಭಾಗ್ಯ ಓದದೇ ಇರುವುದು ಸಮಸ್ಯೆನಾ?
9 ನೇ ಕ್ಲಾಸ್ ಓದಿದ ಭಾಗ್ಯ ನಿನಗೆ ಅವಮಾನ ಅಂದ್ರೆ 7ನೇ ಕ್ಲಾಸ್ ಓದಿದ ನಾನು ಕೂಡ ನಿನಗೆ ಅವಮಾನ ಅನ್ನಿಸಬಹುದು. ನಮ್ಮ ಬಗ್ಗೆಯೂ ನೀನು ನಾಚಿಕೆ ಪಟ್ಟುಕೊಳ್ತೀಯಾ ಎಂದು ಕುಸುಮಾ ಕೇಳಿದ್ದಾಳೆ. ಅದಕ್ಕೆ ತಾಂಡವ್ ಇಲ್ಲ ಎಂದಿದ್ದಾನೆ. ಭಾಗ್ಯ ಓದದೇ ಇರುವುದು ನಿನಗೆ ಅವಮಾನಾ ಎಂದು ಪ್ರಶ್ನೆ ಮಾಡ್ತಾಳೆ. ತಾಂಡವ್ ಹೌದು ಎಂದು ಹೇಳ್ತಾನೆ.
ಭಾಗ್ಯಾಳನ್ನು ಓದಿಸುವ ನಿರ್ಧಾರ
ಭಾಗ್ಯ ಓದಿಲ್ಲ. ಅವಳನ್ನು ನಿನಗೆ ಮದುವೆ ಮಾಡಿದೆ ಅಂತ ತಾನೇ ಬೇಸರ. ಆ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ. ಭಾಗ್ಯಾಳನ್ನು ನಾನು ಓದಿಸುತ್ತೇನೆ. ನಿನಗಿಂತ ಚೆನ್ನಾಗಿ ಓದುತ್ತಾಳೆ ನನ್ನ ಸೊಸೆ. ನಾನು ಆ ರೀತಿ ಅವಳನ್ನು ರೆಡಿ ಮಾಡ್ತೇನೆ ಎಂದು ಸವಾಲು ಹಾಕಿದ್ದಾಳೆ. ಅದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ವಯಸ್ಸಿನಲ್ಲಿ ಓದುವುದು ಸಾಮಾನ್ಯ ಅಲ್ಲ ಎಂದುಕೊಳ್ತಾ ಇದ್ದಾರೆ.
ಇದನ್ನೂ ಓದಿ: Bhoomige Banda Bhagavantha: 50 ಸಂಚಿಕೆಗಳನ್ನು ಪೂರೈಸಿದ ಭೂಮಿಗೆ ಬಂದ ಭಗವಂತ ಧಾರಾವಾಹಿ, ಶಿವಪ್ರಸಾದ್ ಕುಟುಂಬ ಹೇಗಿದೆ?
ಅತ್ತೆ ಮಾತಿನಂತೆ ಭಾಗ್ಯ ಓದುತ್ತಳಾ? ತನ್ವಿಗೆ ತಕ್ಕ ತಾಯಿ ಆಗ್ತಾಳಾ? ತಾಂಡವ್ ನನ್ನು ಮೀರಿ ಬೆಳೆಯುತ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ