ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ(Bhagya Lakshmi) ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಮದುವೆ ಮಾಡಲು ಅಕ್ಕ ಒಳ್ಳೆ ಹುಡುಗನನ್ನು ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಕೀರ್ತಿ ಎಂಗೇಜ್ಮೆಂಟ್ (Engagement) ನಡೆಯಬೇಕಿತ್ತು. ಆದ್ರೆ ಕೀರ್ತಿ ಅದನ್ನು ನಿಲ್ಲಿಸಿದ್ದಾಳೆ. ವೈಷ್ಣವ್ ಕಣ್ಣೀರು (Tears) ಹಾಕುತ್ತಿದ್ದಾನೆ.
ವೈಷ್ಣವ್ ಜೊತೆ ಬ್ರೇಕ್ ಅಪ್
ಕೀರ್ತಿಗೆ ವೈಷ್ಣವ್ ಅಂದ್ರೆ ಪ್ರಾಣ. ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ ಇದ್ಲು. ವೈಶ್ ಇಲ್ಲ ಅಂದ್ರೆ ಸತ್ತು ಹೋಗ್ತೀನಿ ಎಂದು ಹೇಳ್ತಾ ಇದ್ಲು. ಈಗ ಮನೆಯವರೇ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಆದ್ರೆ ಕೀರ್ತಿ, ನಾನು ಈ ಎಂಗೇಜ್ಮೆಂಟ್ ಬೇಡ ಎಂದು ಡಿಸೈಡ್ ಮಾಡಿದ್ದೀನಿ. ನಾನು ನಿನ್ನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ತೇನೆ ಎಂದು ಹೇಳಿದ್ದಾಳೆ. ಈ ಸಂಬಂಧ ಇವತ್ತಿಗೆ ಮುಗಿದು ಹೋಗುತ್ತೆ. ಈ ನಿಶ್ಚಿತಾರ್ಥ ನಡೆಯಲ್ಲ ಎಂದು ಕೀರ್ತಿ ಹೇಳಿದ್ದಾಳೆ.
ನಿಶ್ಚಿತಾರ್ಥ ನಿಲ್ಲಿಸಲು ಕಾರಣ ಕೊಟ್ಟ ಕೀರ್ತಿ
ನನಗೂ, ನಿಮ್ಮ ಮಗನಿಗೂ ಆಗಿ ಬರಲ್ಲ. ನನ್ನ ಕಲ್ಚರ್ ಬೇರೆ, ನಿಮ್ಮ ಕಲ್ಚರ್ ಬೇರೆ. ನಾನು ಬೆಳಗ್ಗೆ 8 ಗಂಟೆಗೆ ಎದ್ದು, 9 ಗಂಟೆಗೆ ಮಾರ್ನಿಂಗ್ ಕಾಫಿ ಕುಡಿದು, 10 ಗಂಟೆ ತನಕ ಡ್ಯಾನ್ಸ್ ಮಾಡ್ತೀನಿ. ಅದಾದ ಮೇಲೆ ನನ್ನ ದಿನ ಸ್ಟಾಟ್ ಆಗುತ್ತೆ. ಆದ್ರೆ ನೀವು 5 ಗಂಟೆಗೆ ಎದ್ದು, ಬೆಳಗ್ಗೆ 8 ಗಂಟೆಗೆ ತಿಂಡಿ ಮುಗಿಸಿ, 9 ಗಂಟೆಗೆ ಮನೆ ಕೆಲಸ ಮುಗಿಸಿ, 10 ಗಂಟೆಗೆ ನಿಮ್ಮ ದಿನನೇ ಮುಗಿದು ಹೋಗಿರುತ್ತೆ. ಇಂಥಾ ಮನೆಯಲ್ಲಿ ನಾನು ಹೇಗೆ ಬಾಳಲಿ ಎಂದು ಕೀರ್ತಿ ಕೇಳಿದ್ದಾಳೆ.
ಇದನ್ನೂ ಓದಿ: Daali Dhananjay: ಡಾಲಿ ನಟನೆಗೆ ದಶಕದ ಸಂಭ್ರಮ, ನಟ ರಾಕ್ಷಸನಿಗೆ ಸ್ಪೆಷಲ್ ಟ್ರಿಬ್ಯೂಟ್!
ನಿನ್ನ ಜೊತೆ ಬದುಕಲು ಕಷ್ಟ
ನಾನು ಜೀನ್ಸ್, ಸ್ಕರ್ಟ್, ಟಾಪ್ ಅಂತೀನಿ. ನೀನು ಸೀರೆ, ಚೂಡೀದಾರ್ ಲಂಗಾದಾವಣಿ ಅಂತೀಯಾ. ನಾನು ಪಿಜ್ಜಾ, ಬರ್ಗರ್ ಅಂದ್ರೆ ನೀನು ಚಪಾತಿ, ರೊಟ್ಟಿ ಅಂತೀಯಾ. ನಾನು ಪಾರ್ಟಿ, ಪಬ್ ಅಂದ್ರೆ ನೀನು ದೇವರು, ದೇವಸ್ಥಾನ ಅಂತೀಯಾ. ಇಂತ ಮನೆಯಲ್ಲಿ, ಈ ಕುಟುಂಬದ ಜೊತೆ ನನಗೆ ಬದುಕಲು ಆಗಲ್ಲ ವೈಷ್ಣವ್ ಎಂದು ಕೀರ್ತಿ ಹೇಳಿದ್ದಾಳೆ.
ಕಣ್ಣೀರು ಹಾಕಿದ ವೈಷ್ಣವ್
ನಾವು ನೀನು ಹೇಳಿದ ರೀತಿ ಇರಬಹುದು. ಆದ್ರೆ ನಾವು ನಿನಗೆ ಯಾವುದಕ್ಕೂ ಒತ್ತಾಯ ಮಾಡಲ್ಲ ಕಣೆ. ಅಷ್ಟಕ್ಕೂ ನಿನಗೆ 2 ವರ್ಷ ಲವ್ ಮಾಡಿದ ಮೇಲೆ ಈಗ ಅರ್ಥ ಆಯ್ತಾ? ಅಮ್ಮ ನೋಡಮ್ಮ ಹೇಗೆ ಮಾತನಾಡುತ್ತಾ ಇದ್ದಾಳೆ ಅಂತ. ನೀನಾದ್ರೂ ಸ್ವಲ್ಪ ಹೇಳಮ್ಮ. ಸಡನ್ ಆಗಿ ಯಾಕೆ ಈ ರೀತಿ ಆದ್ಲು. ಇವಳು ನಾನು ಪ್ರೀತಿಸಿದ ನನ್ನ ಕೀರ್ತಿ ಅಲ್ಲ. ಇವಳು ಬೇರೆ ಯಾರೋ ಎಂದು ವೈಷ್ಣವ್ ಕಣ್ಣೀರಿಡುತ್ತಿದ್ದಾನೆ.
ಎಲ್ಲದಕ್ಕೂ ಕಾವೇರಿ, ಕುಸುಮಾ ಕಾರಣವಂತೆ
ಅಮ್ಮ ನೀನಾದ್ರೂ ಕೀರ್ತಿಗೆ ಹೇಳಮ್ಮ ಎಂದು ವೈಷ್ಣವ್ ಹೇಳ್ತಾನೆ. ಆಗ ಕೀರ್ತೀ ಅಮ್ಮ ಇದಕ್ಕೆಲ್ಲಾ ನಿಮ್ಮ ಅಮ್ಮ ಕಾವೇರಿ, ಅವರ ಅಕ್ಕ ಕುಸುಮಾ ಕಾರಣ ಎಂದು ಹೇಳ್ತಾಳೆ. ಈ ಹಿಂದೆ ಕುಸುಮಾ ಕೀರ್ತಿ ಮನೆಗೆ ಭೇಟಿ ಕೊಟ್ಟು, ನೀನು ನಮ್ಮ ಕಾವೇರಿ ಮನೆಗೆ ತಕ್ಕ ಸೊಸೆ ಅಲ್ಲ ಎಂದು ಹೇಳಿ ಹೋಗಿರುತ್ತಾರೆ. ಅದಕ್ಕೆ ಕೀರ್ತಿ ಈ ರೀತಿ ಬದಲಾಗಿದ್ದಾಳೆ.
ಇದನ್ನೂ ಓದಿ: Love Celebration: ಈ ಪ್ರೀತಿ ಗಟ್ಟಿಯಾಗಿ 2 ವರ್ಷ, ಸಂಭ್ರಮದಲ್ಲಿ ಸಿದ್ದು-ಪ್ರಿಯಾ!
ವೈಷ್ಣವ್ ನನ್ನು ಕೀರ್ತಿ ನಿಜವಾಗ್ಲೂ ಮರೆಯುತ್ತಾಳಾ? ಕೀರ್ತಿ ಇಲ್ಲದೇ ವೈಶ್ ಹೇಗೆ ಇರ್ತಾನೆ? ಅಮ್ಮ-ದೊಡ್ಡಮ್ಮನ ಮೇಲೆ ತಪ್ಪು ತಿಳಿದುಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ