ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಕೀತಿ ಸತ್ಯ ಲಕ್ಷ್ಮಿಗೆ ಗೊತ್ತಾಗುತ್ತಾ?
ಕಾಲುಂಗುರದ ಮಹತ್ವ
ಧಾರಾವಾಹಿಯಲ್ಲಿ ಲಕ್ಷ್ಮಿ-ವೈಷ್ಣವ್ ಮದುವೆ ಸಂಭ್ರಮ ನಡೆಯುತ್ತಿದ್ದು, ಕಾಲುಂಗುರದ ಮಹತ್ವವದನ್ನು ಕುಸುಮಾ ತಿಳಿಸಿದ್ದಾಳೆ. ಒಂದು ಹೆಣ್ಣಿಗೆ ಮದುವೆ ಆದ ಮೇಲೆ ಕಾಲುಂಗರ ಅನ್ನೋದು ಗೌರವ. ಸಂತೋಷ, ಸಮೃದ್ಧಿ ಸಂಕೇತ. ಮದುವೆ ಆದ ಮೇಲೆ ಕತ್ತಲ್ಲಿ ತಾಳಿ ಎಷ್ಟು ಮುಖ್ಯನೋ, ಕಾಲುಂಗರ ಸಹ ಅಷ್ಟೇ ಮುಖ್ಯ. ಕಾಲುಂಗರ ಹಾಕಿದ್ರೆ ಸಿಟ್ಟು, ಕೋಪ ಕಡಿಮೆ ಆಗುತ್ತೆ.
ನನಗೆ ಮದುವೆ ಆಗಿದೆ ಅನ್ನುವ ಜವಾಬ್ದಾರಿಯನ್ನು ನೆನಪು ಮಾಡುತ್ತೆ. ಕಾಲುಂಗರ ಎಷ್ಟು ಸುತ್ತು ಇರುತ್ತೋ, ಗಂಡ-ಹೆಂಡ್ತಿ ಬೆಸುಗೆ ಅಷ್ಟು ಹೆಚ್ಚಿರುತ್ತೆ. ಈಗಿನ ಕಾಲದವರು ಫ್ಯಾಷನ್ ಎಂದುಕೊಂಡು ಕೇವಲ ಒಂದು ಸುತ್ತಿನ ಕಾಲುಂಗರ ಹಾಕುತ್ತಾರೆ. ಅವರಿಗೆ ಇದರ ಬಗ್ಗೆ ಗೊತ್ತಿರಲ್ಲ ಎಂದು ಕುಸುಮಾ ಹೇಳಿದ್ದಾಳೆ.
7 ಸುತ್ತಿನ ಕಾಲುಂಗುರ
ಲಕ್ಷ್ಮಿಯನ್ನು ವೈಷ್ಣವ್ ಹೆಚ್ಚು ಪ್ರೀತಿ ಮಾಡಬೇಕು ಎಂದು ಆಕೆಗೆ 7 ಸುತ್ತಿನ ಕಾಲುಂಗರ ತಂದಿದ್ದಾರಂತೆ. ಭಾಗ್ಯಾಗೆ ತನ್ನ ತಂಗಿ ಶ್ರೀರಾಮನಂತಹ ಗಂಡಿನ ಕೈ ಹಿಡಿಯುತ್ತಿದ್ದಾಳೆ ಎಂಬ ಖುಷಿಯಲ್ಲಿ ಇದ್ದಾಳೆ. ಅದಕ್ಕೆ ತನ್ನ ತಂಗಿ ಮದುವೆಯನ್ನು ಸಂಭ್ರಮದಿಂದ ಮಾಡುತ್ತಿದ್ದಾಳೆ. ಅದಕ್ಕೆ ಮನೆಯವರೆಲ್ಲಾ ಖುಷಿಯಿಂದ ಇದ್ದಾರೆ.
ಕೀರ್ತಿ ಸತ್ಯ ಗೊತ್ತಾಗುತ್ತಾ?
ಕೀರ್ತಿ ವೈಷ್ಣವ್ ಕೊಟ್ಟಿದ್ದ ಚೈನ್ ತೆಗೆದುಕೊಟ್ಟಿದ್ದಾಳೆ. ಅದನ್ನು ವೈಷ್ಣವ್ ಲಕ್ಷ್ಮಿ ಕೊರಳಿಗೆ ಹಾಕಿದ್ದಾನೆ. ಅದನ್ನು ನೋಡಿದ ಭಾಗ್ಯ ಇದ್ಯಾವ ಹೊಸ ಚೈನ್ ಅಂತ ಕೇಳಿದ್ದಾಳೆ. ಅಷ್ಟರಲ್ಲಿ ಪೂಜಾ ಬಂದು, ಈ ಚೈನ್ ಕೀರ್ತಿ ಕೊರಳಲ್ಲಿ ಇತ್ತು ಎಂದು ಹೇಳ್ತಾಳೆ. ಅದಕ್ಕೆ ಭಾಗ್ಯ, ಲಕ್ಷ್ಮಿ ಮತ್ತು ಕಾವೇರಿ ಮೂವರು ಶಾಕ್ ಆಗಿದ್ದಾರೆ.
ಕೀರ್ತಿಗೆ ತಾಳಿ ಕಟ್ಟೋಕೆ ರೆಡಿ
ವೈಷ್ಣವ್‍ಗೆ ಲಕ್ಷ್ಮಿ ಜೊತೆ ಮದುವೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಕೀರ್ತಿಯನ್ನು ಪ್ರೀತಿ ಮಾಡ್ತಾ ಇದ್ದಾನೆ. ಆಕೆಗೆ ತಾಳಿ ಕಟ್ಟಬೇಕು ಎಂದುಕೊಂಡಿದ್ದಾನೆ. ಅದಕ್ಕೆ ತಾಳಿ ತಂದು ಒಬ್ಬನೇ ದೇವರ ಬಳಿ ಪೂಜೆ ಮಾಡಿಸಿದ್ದಾನೆ. ಆದ್ರೆ ಕೀರ್ತಿ ಮಾತ್ರ ನಾನು ವೈಷ್ಣವ್ ನನ್ನು ಮದುವೆ ಆಗಲ್ಲ ಎನ್ನುತ್ತಿದ್ದಾಳೆ. ವೈಷ್ಣವ್ ಹೇಗಾದ್ರೂ ಮದುವೆ ಆಗಬೇಕು ಎಂದುಕೊಳ್ತಾ ಇದ್ದಾನೆ.
ಸುಪ್ರಿತಾಳನ್ನು ತಳ್ಳಿದ ಕೀರ್ತಿ
ಕೀರ್ತಿ ವೈಷ್ಣವ್‍ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಾಳೆ. ಈಗ ಯಾಕೆ ಬೇಡ ಅಂತಿದ್ದಾಳೋ ಗೊತ್ತಿಲ್ಲ. ಅದಕ್ಕೆ ಸುಪ್ರಿತಾ ಬಂದು, ನೀನು ಇದೇ ರೀತಿ ಸುಮ್ನೆ ಇದ್ರೆ, ನಾಳೆಯಿಂದ ವೈಷ್ಣವ್-ಲಕ್ಷ್ಮಿ ಸಂಸಾರ ಶುರು ಆಗುತ್ತೆ ಎಂದು ಹೇಳ್ತಾಳೆ. ಅದಕ್ಕೆ ಕೋಪಗೊಂಡ ಕೀರ್ತಿ, ಸುಪ್ರಿತಾಳನ್ನು ತಳ್ಳಿ. ವೈಷ್ ನನ್ನ ಹುಡುಗ. ಅವನ ಪ್ರೀತಿ ನನಗೆ ಸೇರಬೇಕು. ನಮ್ಮಿಬ್ಬರ ಮಧ್ಯೆ ಬೇರೆ ಯಾರೇ ಬಂದ್ರೂ ಸುಮ್ಮನಿರಲ್ಲ ಎಂದು ಹೇಳಿದ್ದಾಳೆ.
ವೈಷ್ಣವ್-ಲಕ್ಷ್ಮಿ ಮದುವೆ ನಡೆಯುತ್ತಾ? ಕೀರ್ತಿ ಇದಕ್ಕೆ ಒಪ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ