ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Serials) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಕೀರ್ತಿ ದೂರ ಆಗಿದ್ದಾರೆ. ಕಾವೇರಿ ಲಕ್ಷ್ಮಿ-ವೈಷ್ಣವ್ಗೆ ಮದುವೆ (Marriage) ಮಾಡಲು ನಿರ್ಧಾರ ಮಾಡಿದ್ದಾಳೆ.
ಕೀರ್ತಿ ಮರೆತ ವೈಷ್ಣವ್
ಯಾವಾಗ ಕೀರ್ತಿ ತನ್ನನ್ನು ಬೇಡ ಎಂದು, ತನ್ನ ಅಮ್ಮನಿಗೆ ಗೌರವ ಕೊಡಲಿಲ್ವೋ ಆಗಲೇ ವೈಷ್ಣವ್ ಬದಲಾಗಿದ್ದಾನೆ. ಕೀರ್ತಿಯನ್ನು ಮರೆಯಲು ನಿರ್ಧಾರ ಮಾಡಿದ್ದಾನೆ. ಅಮ್ಮನ ಬಳಿ ಅತ್ತು, ಜಗತ್ತಿನಲ್ಲಿ ಅಮ್ಮ-ಅಪ್ಪನ ಪ್ರೀತಿ ಮುಂದೇ ಏನೂ ಇಲ್ಲ. ನಾನು ನೀವು ತೋರಿಸಿದ ಹುಡುಗಿಯನ್ನು ಮದುವೆ ಆಗ್ತೀನಿ ಎಂದು ಹೇಳಿದ್ದಾನೆ. ಅದಕ್ಕೆ ಕಾವೇರಿಗೆ ಖುಷಿ ಆಗಿದೆ.
ವೈಷ್ಣವ್-ಲಕ್ಷ್ಮಿ ಮದುವೆ ಮಾತು
ಕಾವೇರಿ ವೈಷ್ಣವ್ ಮದುವೆಗೆ ಒಪ್ಪಿದ್ದೇ ತಡ, ಇನ್ನು ಲೇಟ್ ಮಾಡಲ್ಲ. ನಮ್ಮ ಭಾಗ್ಯಾಳ ತಂಗಿ ಲಕ್ಷ್ಮಿಯನ್ನು ನನ್ನ ಮಗ ವೈಷ್ಣವ್ ಗೆ ಮದುವೆ ಮಾಡಿಕೊಳ್ತೇನೆ ಎಂದು ಕಾವೇರಿ ಮನೆಯಲ್ಲಿ ಹೇಳಿದ್ದಾಳೆ. ಎಲ್ಲರೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಭಾಗ್ಯ ಖುಷಿಗೆ ಪಾರವೇ ಇಲ್ಲ
ಕುಸುಮಾ ಭಾಗ್ಯಾಳಿಗೆ ನಿನ್ನ ತಂಗಿಯನ್ನು ವೈಷ್ಣವ್ಗೆ ತಂದುಕೊಳ್ಳಲು ಕಾವೇರಿ ತಿರ್ಮಾನ ಮಾಡಿದ್ದಾಳೆ. ನಾಳೆ ನಿಮ್ಮ ಮನೆಯವರಿಗೆ ರೆಡಿ ಮಾಡಿಕೊಳ್ಳಲು ಹೇಳಿ ಎಂದು ಹೇಳ್ತಾಳೆ. ಅದಕ್ಕೆ ಭಾಗ್ಯ ತುಂಬಾ ಖುಷಿ ಆಗಿದ್ದಾಳೆ. ತನ್ನ ತಂಗಿಗೆ ವೈಷ್ಣವ್ ಅಂತ ಹುಡುಗ ಸಿಗ್ತಾನೆ ಎಂದು ಸಂತೋಷವಾಗಿದ್ದಾಳೆ. ತನ್ನ ತಾಯಿಗೆ ಬರುವುದಾಗಿ ಹೇಳಿದ್ದಾರೆ.
ತಾಂಡವ್ಗೆ ಖುಷಿಯೋ ಖುಷಿ
ವೈಷ್ಣವ್ ಯಾವಾಗಲೂ ತನ್ನ ಹೆಂಡ್ತಿ ಭಾಗ್ಯಾಗೆ ಬೆಂಬಲ ನೀಡಿಕೊಂಡು ಬರುತ್ತಾನೆ. ಇವನಿಗೂ ಜೀವನದಲ್ಲಿ ನನ್ನ ರೀತಿಯ ಹೆಂಡ್ತಿ ಸಿಕ್ರೆ ಗೊತ್ತಾಗುತ್ತೆ. ವೈಷ್ಣವ್ ಸಹ ಗುಗ್ಗುವೊಂದನ್ನು ಮದುವೆ ಆಗಬೇಕು ಎಂದು ಪ್ಲ್ಯಾನ್ ಮಾಡಿದ್ದ. ಅದಕ್ಕೆ ಲಕ್ಷ್ಮಿ ಮದುವೆ ಆದ್ರೆ, ವೈಷ್ಣವ್ಗೂ ತನ್ನಂತೆ ನೋವಾಗಲಿ ಎಂದು ಬಯಸುತ್ತಿದ್ದಾನೆ. ಅದೇ ಆಗ್ತಿದೆ ಎಂದು ಸಂಭ್ರಮ ಪಟ್ಟಿದ್ದಾನೆ.
ವೈಷ್ಣವ್ ಹೊಸ ವರಸೆ
ಈ ಮೊದಲು ವೈಷ್ಣವ್ ಬೇರೆ ಮದುವೆ ಆಗುವುದಾಗಿ ಹೇಳಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿಯನ್ನು ನೋಡೋಕೆ ಹೋಗಿದ್ದಾಳೆ. ವೈಷ್ಣವ್ಗೆ ಕಾಲ್ ಮಾಡಿ ಬಾ ಎನ್ನುತ್ತಿದ್ದಾಳೆ. ಆದ್ರೆ ವೈಷ್ಣವ್ ಬರಲ್ಲ. ನನಗೆ ಮದುವೆ ಬೇಡ ಎನ್ನುತ್ತಿದ್ದಾನೆ. ಅದಕ್ಕೆ ಕಾವೇರಿಗೆ ಟೆನ್ಶನ್ ಹೆಚ್ಚಾಗಿದೆ. ಈಗ ಏನ್ ಮಾಡೋದು? ಲಕ್ಷ್ಮಿ ಮನೆಯವರಿಗೆ ಏನ್ ಹೇಳೋದು ಎಂದು ಗಾಬರಿ ಆಗಿದ್ದಾಳೆ.
ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆ ಹರಾಜಿಗೆ, ಕುಸಿದು ಬಿದ್ದ ನಿರುಪಮಾ!
ವೈಷ್ಣವ್ ಮದುವೆಗೆ ಒಪ್ಪಲ್ವಾ? ತಾಂಡವ್ ಬಯಸಿದಂತೆ ಎಲ್ಲವೂ ಆಗುತ್ತಾ? ಲಕ್ಷ್ಮಿ ಈಗ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ