ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಕೀರ್ತಿ ಎಂಗೇಜ್ಮೆಂಟ್ ನಡೆಯಬೇಕಿತ್ತು. ಆದ್ರೆ ಕೀರ್ತಿ ಅದನ್ನು ನಿಲ್ಲಿಸಿದ್ದಾಳೆ. ವೈಷ್ಣವ್ ಕಣ್ಣೀರು ಹಾಕುತ್ತಿದ್ದಾನೆ. ವೈಷ್ಣವ್ಗೆ ಭಾಗ್ಯ (Bhagya) ಸಾಂತ್ವನ ಹೇಳಿ ಕಾವೇರಿಯಿಂದ ಬೈಸಿಕೊಂಡಿದ್ದಾಳೆ.
ವೈಷ್ಣವ್ ಜೊತೆ ಬ್ರೇಕ್ ಅಪ್
ಕೀರ್ತಿಗೆ ವೈಷ್ಣವ್ ಅಂದ್ರೆ ಪ್ರಾಣ. ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡ್ತಾ ಇದ್ಲು. ವೈಶ್ ಇಲ್ಲ ಅಂದ್ರೆ ಸತ್ತು ಹೋಗ್ತೀನಿ ಎಂದು ಹೇಳ್ತಾ ಇದ್ಲು. ಮನೆಯವರು ನಿಶ್ಚಿತಾರ್ಥ ಮಾಡಬೇಕು ಎಂದು ನಿರ್ಧಾರ ಮಾಡಿದ್ದರು.
ಆದ್ರೆ ಕೀರ್ತಿ, ನಾನು ಈ ಎಂಗೇಜ್ಮೆಂಟ್ ಬೇಡ ಎಂದು ಡಿಸೈಡ್ ಮಾಡಿದ್ದೀನಿ. ನಾನು ನಿನ್ನೊಂದಿಗೆ ಬ್ರೇಕ್ ಅಪ್ ಮಾಡಿಕೊಳ್ತೇನೆ ಎಂದು ಹೇಳಿದ್ದಳು. ಈ ಸಂಬಂಧ ಇವತ್ತಿಗೆ ಮುಗಿದು ಹೋಗುತ್ತೆ. ಈ ನಿಶ್ಚಿತಾರ್ಥ ನಡೆಯಲ್ಲ ಎಂದು ಕೀರ್ತಿ ಹೇಳಿದ್ದಾಳೆ.
ದಿಕ್ಕು ತೋಚದೇ ಪಾರ್ಕ್ನಲ್ಲಿ ಕೂತು ವೈಷ್ಣವ್ ಕಣ್ಣೀರು
ಕೀರ್ತಿ ಇಲ್ಲದೇ ವೈಷ್ಣವ್ ತನ್ನ ಜೀವನವನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಾಗ್ತ ಇಲ್ಲ. ಮನೆಯವರು ಸಹ ವೈಷ್ಣವ್ ಗೆ ಬೆಂಬಲ ನೀಡಿಲ್ಲ. ಮನೆ ಮರ್ಯಾದೆ ಯೋಚಿಸದೇ ನಿಶ್ಚಿತಾರ್ಥ ನಿಲ್ಲಿಸಿದವಳು ನಮ್ಮ ಮನೆಗೆ ಸೊಸೆ ಆಗಿ ಬರುವುದು ಬೇಡ ಎಂದು ಹೇಳ್ತಾರೆ. ಅದಕ್ಕೆ ವೈಷ್ಣವ್ ಪಾರ್ಕ್ಗೆ ಬಂದು ಅಳುತ್ತಾ ಕೂತಿದ್ದಾನೆ. ಅದನ್ನು ಭಾಗ್ಯ ನೋಡಿದ್ದಾಳೆ.
ಇದನ್ನೂ ಓದಿ: Punyavathi: ಡ್ಯಾನ್ಸ್ ಮಾಡಲು ಆಗದೇ ಪದ್ಮಿನಿ ಕಣ್ಣೀರು, ನಂದನ್ ಅಂದುಕೊಂಡಿದ್ದು ನಿಜ ಆಗುತ್ತಾ?
ವೈಷ್ಣವ್ ಸಮಾಧಾನ ಮಾಡಿದ ಭಾಗ್ಯ
ವೈಷ್ಣವ್ ಗೆ ಭಾಗ್ಯ ಸಮಾಧಾನ ಮಾಡಿದ್ದಾಳೆ. ಏನೇ ಸಮಸ್ಯೆ ಇದ್ರೂ, ಏನೇ ಕಳೆದು ಹೋದ್ರೂ ಅದರ ಮೂಲ ಹುಡುಕಬೇಕು ವೈಷ್ಣವ್. ಇಲ್ಲದೇ ಹೋದ್ರೆ ಸಮಸ್ಯೆಗೆ ಪರಿಹಾರ ಸಿಗಲ್ಲ. ಇವಾಗ ನಾವು ಒಂದು ವಸ್ತುವನ್ನು ಕಳೆದುಕೊಂಡ್ರೆ, ಅದೇ ಜಾಗದಲ್ಲಿ ಹುಡುಕಬೇಕು. ಬೇರೆ ಕಡೆ ಹುಡುಕಿದ್ರೆ ಸಿಗುತ್ತಾ, ಇಲ್ಲ ಅಲ್ವಾ? ನಿನ್ನ ಸಮಸ್ಯೆ ಎಲ್ಲಿ ಶುರುವಾಯ್ತೋ ಅಲ್ಲೇ ಹೋಗಿ ಪ್ರಶ್ನೆ ಮಾಡು ಎಂದು ಭಾಗ್ಯ ಹೇಳ್ತಾಳೆ.
ಭಾಗ್ಯಾಗೆ ಬೈದ ಕಾವೇರಿ
ನಾವು ಅಪ್ಪ-ಅಮ್ಮ ಏನೋ ಹೇಳಿ ಸರಿ ಮಾಡ್ಕೋತಾ ಇದ್ವಿ. ನಿನಗೆ ಗೊತ್ತಿಲ್ಲದ ವಿಷಯಕ್ಕೆ ತಲೆ ಹಾಕಿಕೊಂಡು ಯಾಕ್ ಬರ್ತಿಯಾ? ನಿನಗೆ ಅವನ ಕನಸು ಏನು ಅಂತ ಗೊತ್ತಾ? ಅವನು ಏನಕ್ಕೆ ಆಸೆ ಪಡ್ತಾ ಇದಾನೆ ಅಂತ ಗೊತ್ತಾ? ಅವನು ಕಾಣೋ ಕನಸೆಲ್ಲಾ ಅವನಿಗೆ ಒಳ್ಳೆಯದೇ ಮಾಡಬೇಕು ಅಂತ ಏನಿಲ್ಲ. ಯಾವುದು ತಪ್ಪು-ಸರಿ ಅಂತ ನಾವು ತೋರಿಸಿಕೊಡಬೇಕು ಎಂದು ಭಾಗ್ಯಗೆ ಕಾವೇರಿ ಬೈದಿದ್ದಾಳೆ.
ಇದನ್ನೂ ಓದಿ: Paaru: ಅಖಿಲಾಂಡೇಶ್ವರಿ ಧರ್ಮಾಧಿಕಾರಿ ಪಟ್ಟಕ್ಕೆ ಕುತ್ತು, ಅಮ್ಮನ ಬಳಿ ಆಸ್ತಿಯಲ್ಲಿ ಪಾಲು ಕೇಳಿದ ಆದಿತ್ಯ!
ಮಾಡದ ತಪ್ಪಿಗೆ ಭಾಗ್ಯಗೆ ಬೈಗುಳ, ವೈಷ್ಣವ್-ಕೀರ್ತಿ ಮತ್ತೆ ಜೊತೆ ಆಗ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ