ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಮದುವೆ ಮಾಡಲು ಅಕ್ಕ ಒಳ್ಳೆ ಹುಡುಗನನ್ನು ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಆದ್ರೆ ತನ್ನ ಗಂಡನೇ ಶ್ರೇಷ್ಠಾ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಕೀರ್ತಿ (Keerthi) ಸಿಗಲ್ಲ ಎಂದು ಸಾಯೋಕೆ (Suicide) ಹೊರಟಿದ್ದಾನೆ. ಕಾವೇರಿ ಕೀರ್ತಿ ಕಾಲು ಹಿಡಿದಿದ್ದಾಳೆ.
ವೈಷ್ಣವ್ ಜೊತೆ ಬ್ರೇಕ್ ಅಪ್
ಕೀರ್ತಿ ಮತ್ತು ವೈಷ್ಣವ್ 3 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದರು. ಇಬ್ಬರೂ ಮದುವೆ ಆಗಬೇಕು ಎಂದುಕೊಂಡಿದ್ದರು. ಮನೆಯಲ್ಲೂ ನಿಶ್ಚಿತಾರ್ಥ ಏರ್ಪಡಿದ್ದರು. ಆದ್ರೆ ಇದ್ದಕ್ಕಿದ್ದ ಹಾಗೇ ಕೀರ್ತಿ ನನಗೆ ಈ ನಿಶ್ಚಿತಾರ್ಥ ಇಷ್ಟ ಇಲ್ಲ. ವೈಷ್ಣವ್ ನನಗೆ ಬೇಡ ಎನ್ನುತ್ತಾಳೆ. ಅದಕ್ಕೆ ವೈಷ್ಣವ್ ಸಿಕ್ಕಪಟ್ಟೆ ತಲೆ ಕೆಡಿಸಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ
ವೈಷ್ಣವ್ ನಿಂದ ಕೀರ್ತಿ ಏಕೆ ದೂರವಾದಳು ಎಂದು ಕಾರಣ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳಬೇಕು ಎಂದ್ರೆ ನನ್ನ ಬಳಿ ಒಂದು ಪ್ಲ್ಯಾನ್ ಇದೆ ಎಂದು ವೈಷ್ಣವ್ ಅತ್ತೆ ಹೇಳ್ತಾಳೆ. ಏನು ಎಂದು ವೈಷ್ಣವ್ ಕೇಳ್ತಾನೆ.
ನೀನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಭಯಪಡಿಸು, ಕೀರ್ತಿ ಕಾರಣ ಕೊಡ್ತಾಳೆ. ನಿನ್ನನ್ನು ಮದುವೆ ಆಗಲು ಒಪ್ಪಿಕೊಳ್ತಾಳೆ ಎಂದು ಹೇಳ್ತಾಳೆ. ಅದಕ್ಕೆ ವೈಷ್ಣವ್ ಬಿಲ್ಡಿಂಗ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡ್ತಾ ಇದ್ದಾನೆ.
ಇದನ್ನೂ ಓದಿ: Rashmika Mandanna: ಕನ್ನಡಿಗರ ಮನಸ್ಸು ಬದಲಾಗಲ್ವಾ? ರಶ್ಮಿಕಾ ಮಂದಣ್ಣ ಮೇಲೆ ಕಮ್ಮಿಯಾಗಿಲ್ಲ ಕೋಪ!
ನೀನೊಬ್ಬ ಹೇಡಿ ಎಂದ ಕೀರ್ತಿ
ವೈಷ್ಣವ್ ಒಬ್ಬ ಹೇಡಿ. ನಿನ್ನ ರೀತಿಯ ಹೇಡಿ ನನಗೆ ಬೇಡ ಅಂತ ಈ ಮದುವೆ ಕ್ಯಾನ್ಸಲ್ ಮಾಡಿದ್ದೇನೆ. ಒಂದು ಹುಡುಗಿ ನಿನ್ನ ಲವ್ ಮಾಡಲ್ಲ. ರಿಜೆಕ್ಟ್ ಮಾಡಿದ್ಲು ಅನ್ನೋ ಸಿಲ್ಲಿ ಕಾರಣಕ್ಕೆ ನೀನು ಸಾಯ್ತೀನಿ ಅಂತೀಯಾ. ನೀನು ಹೇಡಿ ತಾನೇ. ನಾನು ಈ ಎಂಗೇಜ್ಮೆಂಟ್ ನಿಲ್ಲಿಸಿ ಒಳ್ಳೆ ಕೆಲಸ ಮಾಡಿದೆ ಎಂದು ಕೀರ್ತಿ ಹೇಳಿದ್ದಾಳೆ.
ಕೀರ್ತಿ ಕಾಲಿಡಿದ ಕಾವೇರಿ
ನೀನು ಸತ್ತರೆ ನನಗೆ ಏನೂ ವ್ಯತ್ಯಾಸ ಆಗಲ್ಲ. ಬಿಲ್ಡಿಂಗ್ ನಿಂದ ಹಾರ್ತೀಯಾ ಹಾರು, ನಾನು ತಡೆಯಲ್ಲ. ನನ್ನ ನಿರ್ಧಾರ ಬದಲಾಗಲ್ಲ ಎಂದು ಕೀರ್ತಿ ಹೇಳ್ತಾಳೆ. ಅದಕ್ಕೆ ವೈಷ್ಣವ್ ಬೇಸರ ಮಾಡಿಕೊಂಡಿದ್ದಾನೆ. ನಾನು ಸಾಯುತ್ತೇನೆ ಎಂದು ಹೇಳಿದ್ದಾನೆ. ಅದಕ್ಕೆ ಕಾವೇರಿ ಕೀರ್ತಿ ಕಾಲು ಹಿಡಿದಿದ್ದಾಳೆ. ನನ್ನ ಮಗನನ್ನು ಬದುಕಿಸಿಕೊಡು ಎಂದು ಕೇಳುತ್ತಿದ್ದಾಳೆ.
ಶ್ರೇಷ್ಠಾ ಮನೆಗೆ ಬಂದ ಕುಸುಮಾ
ಮಗ ತಾಂಡವ್ಗೆ ಶ್ರೇಷ್ಠಾ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ ಎಂದು ಅಮ್ಮ ಕುಸುಮಾಗೆ ಗೊತ್ತಾಗಿದೆ. ಅದಕ್ಕೆ ಮಗನ ಸಂಸಾರ ಉಳಿಸಬೇಕು ಎಂದು ಪಣ ತೊಟ್ಟಿದ್ದಾಳೆ. ಅದಕ್ಕೆ ಕುಟುಂಬದ ಜೊತೆ ಫೋಟೋ ತೆಗೆಸಿ, ಅದನ್ನು ತೆಗೆದುಕೊಂಡು ಶ್ರೇಷ್ಠಾ ಮನೆಗೆ ಬಂದಿದ್ದಾಳೆ. ನನ್ನ ಮಗನ ಸಂಸಾರದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡ್ರೆ ಸರಿ ಇರಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾಳೆ.
ಇದನ್ನೂ ಓದಿ: Gattimela: ಆಸ್ತಿಯ ಹಕ್ಕು ಚಂದ್ರಕಲಾಗೆ ಕೊಟ್ಟ ವೇದಾಂತ್! ಮೋಸದ ಜಾಲ ಬಯಲಾಗೋದು ಯಾವಾಗ?
ವೈಷ್ಣವ್ ಪ್ರಾಣ ಉಳಿಸುತ್ತಾಳಾ ಕೀರ್ತಿ, ವೈಷ್ಣವ್ ಬದಲಾಗುತ್ತಾನಾ? ಶ್ರೇಷ್ಠಾ ತಾಂಡವ್ ಸಂಬಂಧದಿಂದ ದೂರ ಹೋಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ