• Home
 • »
 • News
 • »
 • entertainment
 • »
 • Bhagya Lakshmi: ಲಕ್ಷ್ಮಿ ಮೇಲೆ ಕಾವೇರಿ ಒಲವು! ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ?

Bhagya Lakshmi: ಲಕ್ಷ್ಮಿ ಮೇಲೆ ಕಾವೇರಿ ಒಲವು! ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ?

ಲಕ್ಷ್ಮಿ ಮೇಲೆ ಕಾವೇರಿ ಒಲವು

ಲಕ್ಷ್ಮಿ ಮೇಲೆ ಕಾವೇರಿ ಒಲವು

ಕಾವೇರಿಗೆ ತಾನು ಮಾಡಿದ್ದು ತಪ್ಪು ಎಂದು ಗೊತ್ತಾಗುತ್ತೆ. ಅಲ್ಲದೇ ಗೃಹ ಪ್ರವೇಶದ ಮನೆಯಲ್ಲಿ ಲಕ್ಷ್ಮಿ ಬರಿ ಕೊರಳಿನಲ್ಲಿ ಇರುತ್ತಾಳೆ. ಅದಕ್ಕೆ ಕಾವೇರಿ ತಾನು ಹಾಕಿಕೊಂಡಿದ್ದ ಚಿನ್ನದ ಅರವನ್ನು ಅವಳಿಗೆ ಹಾಕುತ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial)ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ನಟನ ಪಾತ್ರದಲ್ಲಿ ಶಮಂತ್ ಬ್ರೋ ಗೌಡ ಅಭಿನಯಿಸುತ್ತಿದ್ದಾರೆ. ಲಕ್ಷ್ಮಿ ವೈಷ್ಣವ್ ಅಮ್ಮ ಕಾವೇರಿ (Kaveri) ಮನಸ್ಸು ಗೆದ್ದಿದ್ದಾಳೆ.


  ಭಾಗ್ಯ ಮನೆ ಗೃಹಪ್ರವೇಶದಲ್ಲಿ ಮನಸೋತ ಕಾವೇರಿ


  ಭಾಗ್ಯ ಗಂಡ ತಾಂಡವ್ ಸೂರ್ಯವಂಶಿ ಹೊಸ ಮನೆ ಕಟ್ಟಿಸಿದ್ದಾನೆ. ಅದರ ಗೃಹ ಪ್ರವೇಶವನ್ನು ಗ್ರ್ಯಾಂಡ್ ಆಗಿ ಮಾಡ್ತಾ ಇದ್ದಾರೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಕಟ್ಟಿಸಿದ ಮನೆ. ಎಲ್ಲೂ ತಪ್ಪಾಗಬಾರದು ಎಂದು ಹೆಚ್ಚು ಗಮನ ವಹಿಸಿದ್ದಾನೆ. ಎಲ್ಲಾ ಜವಾಬ್ದಾರಿಯನ್ನು ಶ್ರೇಷ್ಠಾಳಿಗೆ ವಹಿಸಿದ್ದಾನೆ. ಈ ನಡುವೆ ಕಾವೇರಿಗೆ ಲಕ್ಷ್ಮಿ ಗುಣ ಇಷ್ಟ ಆಗಿದೆ.


  ಲಕ್ಷ್ಮಿ ಬಗ್ಗೆ ತಪ್ಪು ತಿಳಿದುಕೊಂಡಿದ್ದ ಕಾವೇರಿ


  ವೈಷ್ಣವ್ ಗೆ ರೇಗಿಸಲು ಕೀರ್ತಿ ಮ್ಯಾರೇಜ್ ಪ್ರಪೋಸ್  ಮಾಡೋ ರೀತಿ ಎಲ್ಲಾ ರೆಡಿ ಮಾಡಿರುತ್ತಾಳೆ. ಲಕ್ಷ್ಮಿ ಮತ್ತು ವೈಷ್ಣವ್ ಗೆ ಬೇರೆ ಬೇರೆ ನಂಬರ್‍ನಿಂದ ಮೆಸೇಜ್ ಕಳಸಿ, ಇಬ್ಬರು ಒಟ್ಟಿಗೆ ಸೇರುವಂತೆ ಮಾಡುತ್ತಾಳೆ. ಅಲ್ಲಿ ಏನಾಗ್ತಿದೆ ಎಂದು ಇಬ್ಬರಿಗೂ ಗೊತ್ತಿರಲ್ಲ. ಅದನ್ನು ನೋಡಿ ಲಕ್ಷ್ಮಿ ತಲೆ ತಿರುಗಿ ಬೀಳುತ್ತಾಳೆ. ಆಕೆಯನ್ನು ವೈಷ್ಣವ್ ಎತ್ತಿಕೊಂಡು ಬರುತ್ತಾನೆ. ಅದನ್ನು ನೋಡಿದ ಕಾವೇರಿ ತಪ್ಪು ತಿಳಿದುಕೊಂಡಿರುತ್ತಾಳೆ.


  ಇದನ್ನೂ ಓದಿ: Rashmika-Vijay Deverakonda: ಗುಟ್ಟಾಗಿ ಮದುವೆ ಆದ್ರಾ ರಶ್ಮಿಕಾ ಮಂದಣ್ಣ-ವಿಜಯ ದೇವರಕೊಂಡ? ಫೋಟೋ ಅಸಲಿಯತ್ತು ಏನು? 


  ಲಕ್ಷ್ಮಿಗೆ ಅವಮಾನ ಮಾಡಿದ ಕಾವೇರಿ


  ಕಾವೇರಿ, ಲಕ್ಷ್ಮಿ ಬಗ್ಗೆ ತಪ್ಪು ತಿಳಿದುಕೊಂಡು, ಓದಿಲ್ಲ, ಬರೆದಿಲ್ಲ ನನ್ನ ಮಗ ಬೇಕಾ ನಿನಗೆ. ಎಷ್ಟು ಧೈರ್ಯ ನನ್ನ ಮಗನ ಮೇಲೆ ಕಣ್ಣು ಹಾಕಲು. ದುಡ್ಡು ನೋಡಿ ಬಂದು ಬಿಡ್ತೀರಾ ಎಂದು ಬೈದಿದ್ದಾಳೆ. ಲಕ್ಷ್ಮಿ ಅದನ್ನು ನಾನು ಮಾಡಿಲ್ಲ ಎಂದು ಹೇಳುತ್ತಾಳೆ. ನಂತರ ವೈಷ್ಣವ್ ಇದೆಲ್ಲಾ ಕೀರ್ತಿ ಮಾಡಿದ್ದು ಹೇಳುತ್ತಾಳೆ. ಕಾವೇರಿಗೆ ಬೇಸರವಾಗುತ್ತೆ.


  colors kannada serial, kannada serial, kaveri like lakshmi, bhagya home ceremony, bhagya lakshmi new serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಲಕ್ಷ್ಮಿ ಮೇಲೆ ಕಾವೇರಿ ಒಲವು, ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ?, ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಲಕ್ಷ್ಮಿ


  ಚಿನ್ನದ ಸರ ಲಕ್ಷ್ಮಿಗೆ ಹಾಕಿದ ವೈಷ್ಣವ್ ಅಮ್ಮ
  ಕಾವೇರಿಗೆ ತಾನು ಮಾಡಿದ್ದು ತಪ್ಪು ಎಂದು ಗೊತ್ತಾಗುತ್ತೆ. ಅಲ್ಲದೇ ಗೃಹ ಪ್ರವೇಶದ ಮನೆಯಲ್ಲಿ ಲಕ್ಷ್ಮಿ ಬರಿ ಕೊರಳಿನಲ್ಲಿ ಇರುತ್ತಾಳೆ. ಅದಕ್ಕೆ ಕಾವೇರಿ ತಾನು ಹಾಕಿಕೊಂಡಿದ್ದ ಚಿನ್ನದ ಅರವನ್ನು ಅವಳಿಗೆ ಹಾಕುತ್ತಾಳೆ. ಅದನ್ನು ನೋಡಿದ ಲಕ್ಷ್ಮಿ ಚಿಕ್ಕಮ್ಮ, ನಮ್ಮ ಬಳಿ ದುಡ್ಡು ಇಲ್ಲ ಅಂತೀಯಾ, ಸರ ಮಾಡಿಸಿಕೊಂಡಿದ್ದೀಯಾ ಕೊಡು ಎನ್ನುತ್ತಾಳೆ. ಆಗ ಕಾವೇರಿ ಬಂದು ತಡೆಯುತ್ತಾಳೆ.


  ಇದನ್ನೂ ಓದಿ: Deepika Das: ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟ ದೀಪಿಕಾ ದಾಸ್, ಜನ ಏನಂದ್ರು? 


  ಲಕ್ಷ್ಮಿಯನ್ನು ಸೊಸೆಯಾಗಿ ಮಾಡಿಕೊಳ್ತಾಳಾ ಕಾವೇರಿ?
  ಕಾವೇರಿ ಅಕ್ಕ ಲಕ್ಷ್ಮಿ ಬಗ್ಗೆ ಹೇಳಿರುತ್ತಾಳೆ. ಒಳ್ಳೆಯ ಹುಡುಗಿ ನಿಮ್ಮ ಮನೆ ಸೊಸೆ ಮಾಡಿಕೋ ಎಂದು. ಕಾವೇರಿಗೆ ಮೊದಲು ಅಷ್ಟು ಇಷ್ಟ ಇರಲಿಲ್ಲ. ಆದ್ರೆ ಈಗ ಲಕ್ಷ್ಮಿ ಗುಣ ನೋಡಿ ಇಷ್ಟ ಆಗಿದೆ. ಅದಕ್ಕೆ ವೈಷ್ಣವ್ ಗೆ ಮದುವೆ ಮಾಡಲು ನೋಡುತ್ತಿದ್ದಾಳೆ. ಅಲ್ಲದೇ ವೈಷ್ಣವ್ ಪ್ರೀತಿ ಮಾಡ್ತೀರೋ ಕೀರ್ತಿಯಿಂದ ದೂರ ಮಾಡಲು ಲಕ್ಷ್ಮಿಯನ್ನು ಮದುವೆ ಮಾಡಿಸೋ ಪ್ಲ್ಯಾನ್ ಮಾಡಿದ್ದಾಳೆ.


  colors kannada serial, kannada serial, kaveri like lakshmi, bhagya home ceremony, bhagya lakshmi new serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಲಕ್ಷ್ಮಿ ಮೇಲೆ ಕಾವೇರಿ ಒಲವು, ಭಾಗ್ಯ ತಂಗಿಗೆ ಒಳ್ಳೆ ಗಂಡು ಸಿಕ್ಕೇ ಬಿಟ್ನಾ?, ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವೈಷ್ಣವ್ -ಕೀರ್ತಿ


  ಭಾಗ್ಯ ತಂಗಿಗೆ ಶ್ರೀರಾಮನಂತ ಹುಡುಗನ್ನು ಹುಡುಕುತ್ತಿದ್ದಳು. ವೈಷ್ಣವ್ ತುಂಬಾ ಒಳ್ಳೆಯ ಹುಡುಗ. ಪರಿಚಯ ಬೇರೆ ಇದಕ್ಕೆ ಭಾಗ್ಯ-ಲಕ್ಷ್ಮಿ ಒಪ್ತಾರಾ ನೋಡಬೇಕು.

  Published by:Savitha Savitha
  First published: