• Home
 • »
 • News
 • »
 • entertainment
 • »
 • Bhagya Lakshmi: ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ, ವೈಷ್ಣವ್ ಇದ್ದ ರೂಮ್​ಗೆ ಬೀಗ ಹಾಕಿದ್ದಕ್ಕೆ ಕೋಪ!

Bhagya Lakshmi: ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ, ವೈಷ್ಣವ್ ಇದ್ದ ರೂಮ್​ಗೆ ಬೀಗ ಹಾಕಿದ್ದಕ್ಕೆ ಕೋಪ!

ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ

ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ

ಕಾವೇರಿ ಕೂಗಾಡುತ್ತಿರುವುದನ್ನು ಕೇಳಿ ಲಕ್ಷ್ಮಿ ಬರುತ್ತಾಳೆ. ನಾನೇ ವೈಷ್ಣವ್ ಕೋಣೆಗೆ ಬೀಗ ಹಾಕಿದ್ದು ಎನ್ನುತ್ತಾಳೆ. ಕಾವೇರಿ ಹಿಂದೆ, ಮುಂದೆ ಯೋಚನೆ ಮಾಡದೇ ಲಕ್ಷ್ಮಿ ಕಪಾಳಕ್ಕೆ ಹೊಡೆದ ಬಿಡುತ್ತಾಳೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಹೊಸ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ (Sisters) ಮಧ್ಯೆಯ ಪ್ರೀತಿಯ ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನಾಗಿ ಬಿಗ್ ಬಾಸ್ ಶಮಂತ್ ಗೌಡ ಕಾಣಿಸಿಕೊಂಡಿದ್ದಾರೆ. ವೈಷ್ಣವ್ ಅಮ್ಮ ಕಾವೇರಿ (Kaveri) ಲಕ್ಷ್ಮಿ ಕೆನ್ನೆಗೆ ಹೊಡೆದಿದ್ದಾಳೆ.


  ವೈಷ್ಣವ್ ಅಂದ್ರೆ ಅಮ್ಮ ಕಾವೇರಿಗೆ ತುಂಬಾ ಇಷ್ಟ
  ವೈಷ್ಣವ್ ಅಮ್ಮ ಕಾವೇರಿ. ಆಕೆಗೆ ಮಗ ಎಂದ್ರೆ ಪ್ರಾಣ. ತನ್ನ ಮಗನನ್ನು ಆಕೆಗಿಂತ ಯಾರೂ ಹೆಚ್ಚು ಪ್ರೀತಿ ಮಾಡಬಾರದಂತೆ. ತನ್ನ ಮಗ ತಾನು ಹೇಳಿದಂತೆಯೇ ಕೇಳಬೇಕು ಎನ್ನುವ ಹಠ. ವೈಷ್ಣವ್ ಅಮ್ಮನ ಮುದ್ದಿನ ಮಗ. ಅಮ್ಮ ಹೇಳಿದ್ರೆ ಮುಗೀತು ಅದಕ್ಕೆ ನೋ ಅನ್ನಲ್ಲ. ಮಗ ಕಷ್ಟಕ್ಕೆ ಸಿಲುಕಿದ್ದಾನೆ ಎಂದು ಒದ್ದಾಡುತ್ತಿದ್ದಾಳೆ.


  ಭಾಗ್ಯ ಮನೆ ಗೃಹ ಪ್ರವೇಶ ಸಂಭ್ರಮ
  ಭಾಗ್ಯ ಅವರ ಗೃಹ ಪ್ರವೇಶಕ್ಕೆ ಎಲ್ಲರೂ ಭಾಗ್ಯ ಅವರ ಮನೆಯಲ್ಲಿ ಉಳಿದುಕೊಂಡಿದ್ದಾರೆ. ವೈಷ್ಣವ್ ಮಲಗಬೇಕಿದ್ದ ಕೋಣೆ ಲಾಕ್ ಆಗುತ್ತಿರಲಿಲ್ಲ. ಅದಕ್ಕೆ ಲಕ್ಷ್ಮಿಗೆ ಹೇಳಿ ವೈಷ್ಣವ್ ಆಚೆಯಿಂದ ಬೀಗ ಹಾಕಿಸಿಕೊಂಡಿರುತ್ತಾನೆ. ಬಾಗಿಲು ಮುಚ್ಚದಿದ್ರೆ ತನಗೆ ನಿದ್ದೆ ಬರಲ್ಲ ಎಂದು ಹೇಳಿರುತ್ತಾನೆ. ಅದಕ್ಕೆ ಲಕ್ಷ್ಮಿಯೂ ಬೀಗ ಹಾಕಿರುತ್ತಾಳೆ.


  ಇದನ್ನೂ ಓದಿ: Super Queen: ಜೀ ಕನ್ನಡ ವಾಹಿನಿಯಲ್ಲಿ ಬರ್ತಿದೆ ಸೂಪರ್ ಕ್ವೀನ್, ಹೇಗಿರಲಿದೆ ಈ ಹೊಸ ರಿಯಾಲಿಟಿ ಶೋ? 


  ಕಾವೇರಿ ಕೆಂಡಾಮಂಡಲ
  ಬೆಳಗಾದ ಮೇಲೆ ಕಾವೇರಿ, ಮಗ ವೈಷ್ಣವ್ ನನ್ನು ಎಲ್ಲ ಕಡೆ ಹುಡುಕುತ್ತಾಳೆ. ಕೋಣೆ ಬಳಿ ಹೋಗುತ್ತಾಳೆ. ವೈಷ್ಣವ್ ನನ್ನು ಎಷ್ಟೇ ಕರೆದ್ರೂ ಎಚ್ಚರಗೊಳ್ಳಲ್ಲ. ಆಗ ಕಾವೇರಿ ರೂಮ್ ಒಳಗೆ ಹೋಗಲು ಹೋಗ್ತಾಳೆ. ಬೀಗ ಹಾಕಿರುತ್ತೆ. ಅದನ್ನು ನೋಡಿ ಎಲ್ಲರ ಮೇಲೆ ರೇಗಾಡುತ್ತಿದ್ದಾಳೆ. ಬೀಗ ಹಾಕಿದ್ದು ಯಾರು ಎಂದು ಕೇಳುತ್ತಾಳೆ.


  colors kannada serial, kannada serial, bhagya lakshmi news serial, kaveri beat Lakshmi for lock the room serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ, ವೈಷ್ಣವ್ ಇದ್ದ ರೂಮ್ ಗೆ ಬೀಗ ಹಾಕಿದ್ದಕ್ಕೆ ಕೋಪ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವೈಷ್ಣವ್ ಮತ್ತು ಕೀರ್ತಿ


  ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ
  ಕಾವೇರಿ ಕೂಗಾಡುತ್ತಿರುವುದನ್ನು ಕೇಳಿ ಲಕ್ಷ್ಮಿ ಬರುತ್ತಾಳೆ. ನಾನೇ ವೈಷ್ಣವ್ ಕೋಣೆಗೆ ಬೀಗ ಹಾಕಿದ್ದು ಎನ್ನುತ್ತಾಳೆ. ಕಾವೇರಿ ಹಿಂದೆ, ಮುಂದೆ ಯೋಚನೆ ಮಾಡದೇ ಲಕ್ಷ್ಮಿ ಕಪಾಳಕ್ಕೆ ಹೊಡೆದ ಬಿಡುತ್ತಾಳೆ. ಲಕ್ಷ್ಮಿ ಹೇಳುವುದನ್ನೂ ಸಹ ಕೇಳಿಸಿಕೊಳ್ಳುವುದೇ ಇಲ್ಲ. ಅಲ್ಲಿದ್ದವರೆಲ್ಲಾ ಶಾಕ್ ಆಗ್ತಾರೆ.


  colors kannada serial, kannada serial, bhagya lakshmi news serial, kaveri beat Lakshmi for lock the room serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಲಕ್ಷ್ಮಿ ಕಪಾಳಕ್ಕೆ ಹೊಡೆದ ಕಾವೇರಿ, ವೈಷ್ಣವ್ ಇದ್ದ ರೂಮ್ ಗೆ ಬೀಗ ಹಾಕಿದ್ದಕ್ಕೆ ಕೋಪ, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭಾಗ್ಯ-ಲಕ್ಷ್ಮಿ


  ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು
  ಲಕ್ಷ್ಮಿ, ಭಾಗ್ಯ ಸ್ವಂತ ತಂಗಿ ಅಲ್ಲ. ಚಿಕ್ಕಪ್ಪನ ಮಗಳು. ಲಕ್ಷ್ಮಿಗೆ ಅಪ್ಪ-ಅಮ್ಮ ಇಲ್ಲ. ಅದಕ್ಕೆ ಭಾಗ್ಯ ಅವರೇ ಸಾಕಿದ್ದಾರೆ. ಅಮ್ಮನ ಸ್ಥಾನದಲ್ಲಿ ನಿಂತು ಭಾಗ್ಯ ಲಕ್ಷ್ಮಿಯನ್ನು ನೋಡಿಕೊಂಡಿದ್ದಾಳೆ. ಅದಕ್ಕೆ ಲಕ್ಷ್ಮಿಗೆ ಅಕ್ಕಮ್ಮ ಎಂದ್ರೆ ಪ್ರಾಣ.


  ಇದನ್ನೂ ಓದಿ: Actress Anu Prabhakar: ಬರ್ತ್‍ಡೇ ದಿನ ಕಣ್ಣೀರಿಟ್ಟಿದ್ಯಾಕೆ ಅನು ಪ್ರಭಾಕರ್, ರಘು ಮುಖರ್ಜಿ ಅಂತದ್ದೇನು ಹೇಳಿದ್ರು? 


  ಅವಳು ಹೇಳಿದಂತೆ ಕೇಳುತ್ತಾಳೆ. ಬೇರೆಯವರು ಕಷ್ಟ ಅಂದ್ರೆ ಲಕ್ಷ್ಮಿ ಸಹಾಯಕ್ಕೆ ಮುಂದಿರುತ್ತಾಳೆ. ವೈಷ್ಣವ್ ಸಹ ಅದೇ ರೀತಿ. ಬೇರೆಯವರಿಗೆ ಕಷ್ಟ ಅಂದ್ರೆ ಸಹಾಯ ಮಾಡ್ತಾನೆ. ಇಬ್ಬರು ಒಂದಾಗ್ತಾರಾ ನೋಡಬೇಕು.

  Published by:Savitha Savitha
  First published: