• Home
  • »
  • News
  • »
  • entertainment
  • »
  • Bhagya Lakshmi: ತಾಂಡವ್ ಮನೆಗೆ ಬಂತು ಕೇಕ್, ಹೆಚ್ಚಾಯ್ತು ಅನುಮಾನ!

Bhagya Lakshmi: ತಾಂಡವ್ ಮನೆಗೆ ಬಂತು ಕೇಕ್, ಹೆಚ್ಚಾಯ್ತು ಅನುಮಾನ!

ತಾಂಡವ್ ಮನೆಗೆ ಬಂತು ಕೇಕ್

ತಾಂಡವ್ ಮನೆಗೆ ಬಂತು ಕೇಕ್

ಹೋಟೆಲ್ ನವರ ಕಡೆಯಿಂದ ತಪ್ಪಾಗಿರುತ್ತೆ. ತಾಂಡವ್ ಬದಲು ಕೇಕ್ ಬೇರೆಯವರಿಗೆ ಸರ್ವ್ ಆದ ಕಾರಣ, ಮನೆಗೆ ಬೇರೆ ಕೇಕ್ ಕಳಿಸಿದ್ದಾರೆ. ಮನೆಯವರೆಲ್ಲಾ ಅದನ್ನು ನೋಡಿ ಶಾಕ್ ಆಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ.ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ತಾಂಡವ್ ಹೋಟೆಲ್‍ನಲ್ಲಿ ಆರ್ಡರ್ ಮಾಡಿದ್ದ ಕೇಕ್ ಮನೆಗೆ ಬಂದಿದೆ.


    ಹೆಂಡ್ತಿ ಬಿಟ್ಟು ಶ್ರೇಷ್ಠಾ ಜೊತೆ ಸಂಬಂಧ
    ತಾಂಡವ್ ಮತ್ತು ಭಾಗ್ಯ ಮದುವೆ ಆಗಿ ಸುಮಾರು ವರ್ಷಗಳೇ ಕಳೆದಿವೆ. ಇಬ್ಬರು ಮಕ್ಕಳಿದ್ದಾರೆ. ಆದ್ರೆ ತಾಂಡವ್‍ಗೆ ಭಾಗ್ಯ ತನ್ನ ಹೆಂಡ್ತಿ ಆಗಿರುವುದು ಇಷ್ಟನೇ ಇಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳಿಗೆ ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ. ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಯಾವಾಗಲೂ ಆಕೆಯ ಜೊತೆ ಸುತ್ತಾಡುತ್ತಿರುತ್ತಾನೆ.




    ಹೋಟೆಲ್‍ನಲ್ಲಿ ಕೇಕ್ ಆರ್ಡರ್ ಮಾಡಿದ್ದ ತಾಂಡವ್
    ತಾಂಡವ್ ಮತ್ತು ಶ್ರೇಷ್ಠಾ ಹೋಟೆಲ್ ಗೆ ಹೋಗಿರುತ್ತಾರೆ. ಊಟ ಆದ ಮೇಲೆ ಶ್ರೇಷ್ಠಾಗೆ ಇಷ್ಟ ಎಂದು ಕೇಕ್ ಆರ್ಡರ್ ಮಾಡಿರುತ್ತಾನೆ. ಅದು ಮಿಸ್ ಆಗಿ, ಅದೇ ಹೋಟೆಲ್ ಗೆ ಬಂದಿದ್ದ ವೈಷ್ಣವ್, ಭಾಗ್ಯ, ಲಕ್ಷ್ಮಿ ಟೇಬಲ್‍ಗೆ ಹೋಗಿರುತ್ತೆ. ಅದನ್ನು ಅವತ್ತು ತಾಂಡವ್ ಕೇಳಲು ಹೋಗಿ, ಅವರನ್ನೆಲ್ಲಾ ನೋಡಿ ವಾಪಸ್ ಹೋಗಿರುತ್ತಾನೆ.


    colors kannada serial, kannada serial, cake delivery on vaishnav house from hotel, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್ ಮನೆಗೆ ಬಂತು ಕೇಕ್, ವೈಷ್ಣವ್ ಹಾಗೂ ಮನೆಯವರಿಗೆ ಹೆಚ್ಚಾದ ಅನುಮಾನ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ತಾಂಡವ್ ಮತ್ತು ಶ್ರೇಷ್ಠಾ


    ಮನೆಗೆ ಬಂದು ಜೋರು ಗಲಾಟೆ
    ಭಾಗ್ಯ ಕಾಲು ನೋವು ಎಂದಿದ್ದಕ್ಕೆ ವೈಷ್ಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾನೆ. ಆಗ ಹೋಟೆಲ್ ಗೆ ಹೋಗಿರುತ್ತಾರೆ. ಇದನ್ನು ತಾಂಡವ್ ನೋಡಿದ್ದ. ಮನೆಗೆ ಬಂದು ದೊಡ್ಡ ಗಲಾಟೆ ಮಾಡಿದ್ದ. ದೊಡ್ಡವರನ್ನು ಬಿಟ್ಟು ಊರು ಸುತ್ತಲು ಹೋಗಿದ್ಯಾ? ಮನೆಯಲ್ಲಿ ಇರಬೇಡ, ಮನೆ ಬಿಟ್ಟು ಹೋಗು ಎಂದು ಹೇಳಿದ್ದ. ಆಗ ವೈಷ್ಣವ್ ತಡೆದಿರುತ್ತಾನೆ.


    ಇದನ್ನೂ ಓದಿ: Kannadathi Sara Annaiah: ತನ್ನ ಹುಟ್ಟುಹಬ್ಬಕ್ಕೆ ತಾನೇ ವಿಶ್ ಮಾಡಿಕೊಂಡ ವರು! ನಿಜ ಜೀವನದಲ್ಲೂ ಡಿಫರೆಂಟ್ ಇವಳು! 


    ಮನೆಗೆ ಬಂದ ಕೇಕ್
    ಹೋಟೆಲ್ ನವರ ಕಡೆಯಿಂದ ತಪ್ಪಾಗಿರುತ್ತೆ. ತಾಂಡವ್ ಬದಲು ಕೇಕ್ ಬೇರೆಯವರಿಗೆ ಸರ್ವ್ ಆದ ಕಾರಣ, ಮನೆಗೆ ಬೇರೆ ಕೇಕ್ ಕಳಿಸಿದ್ದಾರೆ. ಮನೆಯವರೆಲ್ಲಾ ಅದನ್ನು ನೋಡಿ ಶಾಕ್ ಆಗಿದ್ದಾರೆ. ಹಾಗಾದ್ರೆ ಆ ಹೋಟೆಲ್‍ನಲ್ಲಿ ಇದ್ದದ್ದು ನೀನಾ ಅಣ್ಣ ಎಂದು ವೈಷ್ಣವ್ ಕೇಳಿದ್ದಾನೆ. ಹೌದು ನಾನೇ. ನನಗೆ ತುಂಬಾ ಬೇಕಾದವರಿಗೆ ಆರ್ಡರ್ ಮಾಡಿದ್ದೇ ಎಂದು ಹೇಳ್ತಾನೆ.


    colors kannada serial, kannada serial, cake delivery on vaishnav house from hotel, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್ ಮನೆಗೆ ಬಂತು ಕೇಕ್, ವೈಷ್ಣವ್ ಹಾಗೂ ಮನೆಯವರಿಗೆ ಹೆಚ್ಚಾದ ಅನುಮಾನ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವೈಷ್ಣವ್


    ಮನೆಯವರಿಗೆಲ್ಲಾ ಅನುಮಾನ, ಭಾಗ್ಯಾಗೆ ಆತಂಕ
    ಮನೆಯವರಿಗೆಲ್ಲಾ ತಾಂಡವ್ ಮೇಲೆ ಅನುಮಾನ ಶುರುವಾಗಿದೆ. ತಾಂಡವ್ ಯಾರ ಜೊತೆ ಹೋಗಿದ್ದ ಎಂಬ ಅನುಮಾನ ಕಾಡ್ತಾ ಇದೆ. ಅಲ್ಲದೇ ಭಾಗ್ಯಗೆ ಆತಂಕ ಹೆಚ್ಚಾಗಿದೆ. ನನ್ನ ಬಿಟ್ಟು ಯಾರ ಜೊತೆಯಾದ್ರೂ ಓಡಾಡ್ತಾ ಇದ್ದಾರಾ ಎಂಬ ಆತಂಕ ಶುರುವಾಗಿದೆ. ಈಗ ಭಾಗ್ಯ ಏನ್ ಮಾಡ್ತಾಳೆ ಅನ್ನೋದೆ ಕುತೂಹಲ ಮೂಡಿಸಿದೆ.


    ಇದನ್ನೂ ಓದಿ: Bigg Boss Kannada: ಸಂಬರ್ಗಿ ಮೇಲೆ ದಿವ್ಯಾಗೆ ಕೋಪವೇಕೆ? ಕಾವ್ಯಶ್ರೀ ಜೊತೆ ಕ್ಯಾಪ್ಟನ್ ಹೇಳಿದ್ದೇನು? 


    ತಾಂಡವ್ ಸಂಬಂಧ ಮನೆಯಲ್ಲಿ ಗೊತ್ತಾಗುತ್ತಾ? ತಾಂಡವ್ ಯಾವ ಸುಳ್ಳು ಹೇಳಿ ಎಲ್ಲವನ್ನೂ ಮುಚ್ಚಿ ಹಾಕ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: