• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bhagya Lakshmi: ಪತ್ರ ಬರೆದಿಟ್ಟು ಮದುವೆ ಮನೆಯಿಂದ ಹೊರಟ ಲಕ್ಷ್ಮಿ, ವೈಷ್ಣವ್ ಹೋಗಿದ್ದು ಎಲ್ಲಿಗೆ?

Bhagya Lakshmi: ಪತ್ರ ಬರೆದಿಟ್ಟು ಮದುವೆ ಮನೆಯಿಂದ ಹೊರಟ ಲಕ್ಷ್ಮಿ, ವೈಷ್ಣವ್ ಹೋಗಿದ್ದು ಎಲ್ಲಿಗೆ?

ಪತ್ರ ಬರೆದಿಟ್ಟು ಮದುವೆ ಮನೆಯಿಂದ ಹೊರಟ ಲಕ್ಷ್ಮಿ

ಪತ್ರ ಬರೆದಿಟ್ಟು ಮದುವೆ ಮನೆಯಿಂದ ಹೊರಟ ಲಕ್ಷ್ಮಿ

ಲಕ್ಷ್ಮಿ ಸಹ ವೈಷ್ಣವ್‍ಗೆ ಇಷ್ಟ ಇಲ್ಲದ ಮದುವೆಯನ್ನು ಹೇಗೆ ಆಗೋದು. ಇಬ್ಬರ ಜೀವನ ಹಾಳಾಗುತ್ತೆ. ನನ್ನನ್ನು ಕ್ಷಮಿಸು ಅಕ್ಕಮ್ಮ, ನಾನು ದೂರ ಹೋಗ್ತಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದಾಳೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ . ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ಮದುವೆ ಮನೆ ಬಿಟ್ಟು ಹೊರಟಿದ್ದಾನೆ. ಲಕ್ಷ್ಮಿ ಸಹ ಪತ್ರ (Letter) ಬರೆದಿಟ್ಟು ಮದುವೆ ಮನೆಯಿಂದ ಹೊರಟಿದ್ದಾಳೆ.


    ವೈಷ್ಣವ್‍ಗೂ ಮದುವೆ ಇಷ್ಟ ಇಲ್ಲ


    ವೈಷ್ಣವ್ ಲಕ್ಷ್ಮಿ ಬಳಿ ಬಂದು, ನನಗೆ ಈ ಮದುವೆ ಇಷ್ಟ ಇಲ್ಲ. ಇನ್ನೊಬ್ಬರು ಮನಸ್ಸಿನಲ್ಲಿ ಒಬ್ಬರನ್ನು ಇಟ್ಟುಕೊಂಡು, ಮತ್ತೊಬ್ಬರನ್ನು ಮದುವೆ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅದನ್ನು ಕೇಳಿ ಲಕ್ಷ್ಮಿ ಶಾಕ್ ಆಗಿದ್ದಾಳೆ. ನಾನು ಕೀರ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ.


    ಅಕ್ಕಮ್ಮನ ಬಗ್ಗೆ ಹೆಚ್ಚಿದ ಚಿಂತೆ


    ತಾಂಡವ್ ಬಂದು ಅಳುತ್ತಾ, ಕೂತಿದ್ದೀಯಾ, ನೀನು ಪಾಪದ ಹುಡುಗಿ ಅಂದುಕೊಂಡಿದ್ವಿ. ನೀನು ತುಂಬಾ ಧೈರ್ಯವಂತ ಹುಡುಗಿ. ಮದುವೆ ನಿಲ್ಲಿಸುವಷ್ಟು. ನಿನ್ನ ರೀತಿಯ ಹುಡುಗಿಗೆ ವೈಷ್ಣವ್ ಸಿಕ್ಕಿದ್ದು ಅದೃಷ್ಟ. ನೀನು ಏನ್ ಮಾಡ್ತಿಯೋ ನನಗೆ ಗೊತ್ತಿಲ್ಲ. ನಾಳೆ ಮದುವೆ ಆಗಬೇಕು ಅಷ್ಟೆ. ಇಲ್ಲ ಅಂದ್ರೆ ನಿನ್ನ ಅಕ್ಕಮ್ಮನನ್ನು ನಿನ್ನ ಜೊತೆ ಕರೆದುಕೊಂಡು ಹೋಗು ಎಂದಿದ್ದಾರೆ. ಅದಕ್ಕೆ ಲಕ್ಷ್ಮಿ ಅಕ್ಕಮ್ಮನ ಸಂಸಾರದ ಬಗ್ಗೆ ಯೋಚನೆ ಮಾಡ್ತಾ ಇದ್ದಾಳೆ.




    ವರ ಪೂಜೆ ಟೈಮ್‍ನಲ್ಲಿ ಗಂಡು ಇಲ್ಲ
    ಮದುವೆಗೆ ಎಲ್ಲ ಸಿದ್ಧತೆ ನಡೆದಿದೆ. ವರ ಪೂಜೆ ನಡೆಯುತ್ತಿದ್ದು, ಗಂಡನ್ನು ಕರೆದುಕೊಂಡು ಬನ್ನಿ ಎನ್ನುತ್ತಿದ್ದಾರೆ. ಆದ್ರೆ ವೈಷ್ಣವ್ ಅಲ್ಲಿ ಇಲ್ಲ. ಅವರು ಕಾರು ಹತ್ತಿ ಎಲ್ಲಿಗೂ ಹೊರಟು ಹೋದ್ರು ಎಂದು ಪೂಜಾ ಹೇಳಿದ್ದಾಳೆ. ಅದನ್ನು ಕೇಳಿ ಕಾವೇರಿ ಮತ್ತು ಕುಸುಮಾ ಶಾಕ್ ಆಗಿದ್ದಾರೆ. ಭಾಗ್ಯ ಸಹ ಇವನು ಎಲ್ಲಿ ಹೋದ ಎಂದು ಆತಂಕಗೊಂಡಿದ್ದಾರೆ. ಎಲ್ಲಿಗೆ ಹೋಗಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ.


    colors kannada serial, kannada serial, lakshmi write letter and leave marriage hall, bhagya lakshmi serial, bhagya doing anything for her sister lakshmi, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಪತ್ರ ಬರೆದಿಟ್ಟು ಮನೆಯಿಂದ ಹೊರಟ ಲಕ್ಷ್ಮಿ, ವೈಷ್ಣವ್ ಸಹ ಹೋಗಿದ್ದು ಎಲ್ಲಿಗೆ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವೈಷ್ಣವ್


    ಪತ್ರ ಬರೆದಿಟ್ಟು ಹೊರಟ ಲಕ್ಷ್ಮಿ


    ಲಕ್ಷ್ಮಿ ಸಹ ವೈಷ್ಣವ್‍ಗೆ ಇಷ್ಟ ಇಲ್ಲದ ಮದುವೆಯನ್ನು ಹೇಗೆ ಆಗೋದು. ಇಬ್ಬರ ಜೀವನ ಹಾಳಾಗುತ್ತೆ. ನನ್ನನ್ನು ಕ್ಷಮಿಸು ಅಕ್ಕಮ್ಮ, ನಾನು ದೂರ ಹೋಗ್ತಿದ್ದೇನೆ ಎಂದು ಪತ್ರ ಬರೆದಿಟ್ಟಿದ್ದಾಳೆ. ಪತ್ರ ಬರೆದು ಮದುವೆ ಮನೆಯಿಂದ ಆಕೆಯೂ ಹೊರಟಿದ್ದಾಳೆ. ವೈಷ್ಣವ್ ಇಲ್ಲ ಎಂದು ಲಕ್ಷ್ಮಿಯನ್ನು ಸಮಾಧಾನ ಮಾಡಲು ಬಂದ ಕಾವೇರಿ, ಕುಸುಮಾಗೆ ಲಕ್ಷ್ಮಿಯೂ ಶಾಕ್ ನೀಡಿದ್ದಾಳೆ.


    ಇದನ್ನೂ ಓದಿ: Weekend with Ramesh: ಮಾರ್ಚ್ 18ರಿಂದ ವೀಕೆಂಡ್ ವಿತ್ ರಮೇಶ್, ಮೊದಲ ಅತಿಥಿ ಇವರೇನಾ? 


    ಭಾಗ್ಯಾಗೆ ಹೆಚ್ಚಾದ ಆತಂಕ
    ಲಡ್ಡು ಮದುವೆ ಮಾಡಬೇಕು ಎನ್ನುವುದ ಭಾಗ್ಯಾಳ ಜೀವನದ ಬಹು ದೊಡ್ಡ ಕನಸು. ಎಷ್ಟೋ ಸಂಬಂಧಗಳು ಬಂದ್ರೂ ಬೇಡ ಎಂದು ಬಿಟ್ಟಿದ್ದಳು. ಆದ್ರೆ ವೈಷ್ಣವ್ ಒಳ್ಳೆ ಹುಡುಗ, ನಾವು ಅವನನ್ನು ನೋಡಿದ್ದೇವೆ ಎಂದು ಅವನ ಜೊತೆ ಮದುವೆ ಮಾಡಲು ಒಪ್ಪಿದ್ದಳು. ಆದ್ರೆ ಈಗ ಅವನು ಕಾಣ್ತಾ ಇಲ್ಲ. ಲಕ್ಷ್ಮಿಯೂ ಕಾಣ್ತಾ ಇಲ್ಲ ಇಬ್ಬರು ಎಲ್ಲಿ ಹೋದ್ರೂ ಎಂದು ಆತಂಕಗೊಂಡಿದ್ದಾಳೆ.


    colors kannada serial, kannada serial, lakshmi write letter and leave marriage hall, bhagya lakshmi serial, bhagya doing anything for her sister lakshmi, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಪತ್ರ ಬರೆದಿಟ್ಟು ಮನೆಯಿಂದ ಹೊರಟ ಲಕ್ಷ್ಮಿ, ವೈಷ್ಣವ್ ಸಹ ಹೋಗಿದ್ದು ಎಲ್ಲಿಗೆ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭಾಗ್ಯ


    ವೈಷ್ಣವ್ ಹೋಗಿದ್ದು ಎಲ್ಲಿಗೆ? ಲಕ್ಷ್ಮಿ ಹೋಗಿದ್ದು ಎಲ್ಲಿಗೆ? ಹಾಗಾದ್ರೆ ಇಬ್ಬರ ಮದುವೆ ಆಗಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: