ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಮಾವನ ಪ್ರಾಣ ಉಳಿಸಲು ಭಾಗ್ಯ 50 ಸಾವಿರ ಹಣ ತೆಗೆದುಕೊಂಡಿರುತ್ತಾಳೆ. ಆ ದುಡ್ಡಿನಿಂದ ತಾಂಡವ್ ಪೊಲೀಸ್ (Police) ಸ್ಟೇಶನ್‍ನಲ್ಲಿ ಇದ್ದ. ಭಾಗ್ಯ ರೌಡಿ ಬಳಿ ಹೋಗಿ ಬೇಡಿಕೊಂಡು ಗಂಡನನ್ನು ಬಿಡಿಸಿದ್ದಾಳೆ.
ಭಾಗ್ಯಾಳನ್ನು ಆಚೆ ಕರೆದುಕೊಂಡು ಹೋದ ತಾಂಡವ್
ತಾಂಡವ್ ಪೊಲೀಸ್ ಸ್ಟೇಶನ್‍ನಿಂದ ಬಿಡುಗಡೆಯಾಗಿದ್ದೇ ತಡ, ಆಚೆ ಬಂದವನೇ, ನಾನು ನನ್ನ ಹೆಂಡ್ತಿ ಜೊತೆ ಮಾತನಾಡಬೇಕು. ಆಚೆ ಹೋಗ್ತೀವಿ ಎಂದು ಹೇಳಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲೇ ಇದ್ದ ಶ್ರೇಷ್ಠಾ ಎಲ್ಲಿಗೆ ತಾಂಡವ್ ಎಂದು ಕೇಳ್ತಾಳೆ. ಅದಕ್ಕೆ ನನ್ನ ಇಷ್ಟವಾದ ಜಾಗಕ್ಕೆ ನನ್ನ ಹೆಂಡ್ತಿಯನ್ನು ಕರೆದುಕೊಂಡು ಹೋಗ್ತೇನೆ ಎಂದು ಹೇಳಿದ್ದಾನೆ. ಭಾಗ್ಯಾಳ ಕೈ ಹಿಡಿದು ಕರೆದುಕೊಂಡು ಹೋಗಿದ್ದಾನೆ. ಶ್ರೇಷ್ಠಾ ಬೇಸರ ಮಾಡಿಕೊಂಡಿದ್ದಾಳೆ.
ತಾಂಡವ್ ಬದಲಾದ್ ಎಂದುಕೊಂಡ್ರು ಫ್ಯಾನ್ಸ್
ತಾಂಡವ್ ಭಾಗ್ಯಾಳ ಜೊತೆ ಮನಬಿಚ್ಚಿ ಮಾತನಾಡುತ್ತಿದ್ದಾನೆ. ಇದು ನನಗೆ ತುಂಬಾ ಇಷ್ಟವಾದ ಜಾಗ. ಮನಸ್ಸಿಗೆ ಬೇಸರವಾದಾಗ ಇಲ್ಲಿಗೆ ಬಂದು ಕೂರುತ್ತೇನೆ. ನನಗೂ ಹೆಂಡ್ತಿ ಬಗ್ಗೆ ಪ್ರೀತಿ ಇದೆ. ಕಾಳಜಿ ಇದೆ.
ನನ್ನ ಹೆಂಡ್ತಿ ಈ ರೀತಿ ಇರಬೇಕು ಎಂದುಕೊಂಡಿದ್ದೇನೆ. ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಆಟವಾಡಿಸಬೇಕು ಎಂದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಭಾಗ್ಯ ಖುಷಿಯಾಗಿದ್ದಾಳೆ. ಫ್ಯಾನ್ಸ್ ಕೂಡ ತಾಂಡವ್‍ಗೆ ಒಳ್ಳೆ ಬುದ್ಧಿ ಬಂದಿದೆ ಎಂದುಕೊಂಡಿದ್ದಾರೆ.
ನಿನ್ನ ಆಸೆ ಏನು ಭಾಗ್ಯ
ಭಾಗ್ಯಳಿಗೆ ತಾಂಡವ್ ನಿನ್ನ ಆಸೆ ಏನು ಭಾಗ್ಯ? ನೀನು ಹೇಗೆ ಇರಬೇಕು ಎಂದುಕೊಂಡಿದ್ದೆ. ಮದುವೆ ಬಗ್ಗೆ ಏನು ಕನಸಿತ್ತು ಎಂದು ಕೇಳ್ತಾನೆ. ಅದಕ್ಕೆ ಭಾಗ್ಯ ನನಗೆ ಏನೂ ಕನಸಿರಲಿಲ್ಲ. ನನಗೆ ಆಗ ಏನೂ ಗೊತ್ತಾಗುತ್ತಿರಲಿಲ್ಲ ಎಂದು ಹೇಳ್ತಾಳೆ. ಮದುವೆಯಾದ ಮೇಲೆ ಖುಷಿಯಾಗಿದ್ದೀಯಾ ಎಂದು ಕೇಳ್ತಾನೆ. ಹೌದು ಖುಷಿಯಾಗಿದ್ದೀನಿ. ನೀವು, ಅತ್ತೆ, ಮಾವ, ಮಕ್ಕಳು ನನ್ನ ಕನಸು ಎನ್ನುತ್ತಾಳೆ.
ನನ್ನ ದುರಾದೃಷ್ಟ
ಭಾಗ್ಯ ನಿನಗೇನೋ ಮದುವೆಯಾದ ತಕ್ಷಣ ಅದೃಷ್ಟದ ಬಾಗಿಲು ತೆರೆಯಿತು. ಆದ್ರೆ ಅವತ್ತೇ ನನಗೆ ದುರಾದೃಷ್ಟ ಶುರುವಾಯ್ತು. ನನಗೆ ನಿನ್ನ ಮದುವೆಯಾಗಿದ್ದು ಖುಷಿ ಇಲ್ಲ. ನಾನು ಅಂದುಕೊಂಡಂತೆ ನೀನು ಇಲ್ಲ. ನಾನು ನನ್ನ ಅಮ್ಮನ ಬಲವಂತಕ್ಕೆ ನಿನ್ನ ಮದುವೆಯಾಗಿದ್ದೇನೆ. ನನಗೆ ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ. ನೀನು ನನ್ನ ಬಿಟ್ಟು ದೂರ ಹೋಗು ಎಂದು ಹೇಳಿದ್ದಾನೆ.
ಕುಸಿದ ಭಾಗ್ಯ
ತಾಂಡವ್ ಭಾಗ್ಯಗೆ ಹೇಳಿದ್ದಾನೆ. ಆ ಮನೆಯಲ್ಲಿ ಒಂದು ನೀನಿರಬೇಕು. ಇಲ್ಲ ನಾನಿರಬೇಕು ಎಂದು ಹೇಳಿದ್ದಾನೆ. ಅಲ್ಲದೇ ಅಲ್ಲೇ ಭಾಗ್ಯಾಳನ್ನು ಬಿಟ್ಟು ಹೋಗಿದ್ದಾನೆ. ಭಾಗ್ಯಾಗೆ ಭೂಮಿಯೇ ಕುಸಿದಂತಾಗಿದೆ. ಏನು ಮಾಡಬೇಕು ಎಂದು ತಿಳಿಯದೇ ಅಲ್ಲೇ ಕೂತು ಬಿಟ್ಟಿದ್ದಾಳೆ. ಜೋರಾಗಿ ಬರುತ್ತಿರುವ ಮಳೆಯನ್ನೂ ಲೆಕ್ಕಿಸದೇ ಅಲ್ಲೇ ಕೂತು ಬಿಟ್ಟಿದ್ದಾಳೆ.
ಇದನ್ನೂ ಓದಿ: Bhagya Lakshmi: ರೌಡಿ ಮುಂದೆ ಬೇಡಿಕೊಂಡ ಭಾಗ್ಯ, ಆದ್ರೆ ತನ್ನ ಗಂಡ ಕ್ಷಮೆ ಕೇಳಲ್ಲ ಎಂದು ಎಚ್ಚರಿಕೆ!
ಗಂಡನೇ ಎಲ್ಲಾ ಎಂದುಕೊಂಡಿದ್ದ ಭಾಗ್ಯಾಳಿಗೆ ಶಾಕ್ ಆಗಿದೆ. ಭಾಗ್ಯಾಗೆ ಮುಂದೇನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಭಾಗ್ಯ ಏನ್ ಮಾಡ್ತಾಳೆ ಅಂತ ನೋಡೋಕೆ ಭಾಗ್ಯ ಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ