• Home
  • »
  • News
  • »
  • entertainment
  • »
  • Bhagya Lakshmi: ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

Bhagya Lakshmi: ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

ಭಾಗ್ಯ ಮನೆ ಗೃಹಪ್ರವೇಶ

ಭಾಗ್ಯ ಮನೆ ಗೃಹಪ್ರವೇಶ

ಗೃಹಪ್ರವೇಶವನ್ನು ದಿನಾಂಕ 18-11-2022 ಶುಕ್ರವಾರದಂದು ಸಂಜೆ 7 ಗಂಟೆಯ ಶುಭ ಮುಹೂರ್ತದಲ್ಲಿ ನೆರವೇರಿಸಲು ಗುರು ಹಿರಿಯರು ನಿಶ್ಚಿಯಿಸಿರುವುದರಿಂದ, ಆತ್ಮೀಯರಾದ ತಾವು ಕುಟುಂಬ ಸಮೇತರಾಗಿ ಆಗಮಿಸಿ, ನಮ್ಮ ಸತ್ಕಾರಗಳನ್ನು ಸ್ವೀಕರಿಸಿ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ಅಲ್ಲದೇ ಭಾಗ್ಯ ಅವರು ಹೊಸ ಮನೆ (New Home) ಕಟ್ಟಿಸಿದ್ದು, ಅದರ ಗೃಹ ಪ್ರವೇಶ ಮಾಡಲಿದ್ದಾರೆ.


    ಭಾಗ್ಯನದು ಮುಗ್ಧ ಪಾತ್ರ


    ಈ ಧಾರಾವಾಹಿಯಲ್ಲಿ ಭಾಗ್ಯದು ಮುದ್ಧ ಪಾತ್ರ. ಗಂಡ, ಗಂಡನ ಮನೆಗಾಗಿ ಎಂತಹ ತ್ಯಾಗಕ್ಕದ್ರೂ ಸಿದ್ಧ. ಮದುವೆ ಆಗಿ ತುಂಬಾ ವರ್ಷಗಳೇ ಕಳೆದಿವೆ. ಇಬ್ಬರು ಮಕ್ಕಳಿದ್ದಾರೆ. ಅತ್ತೆ, ಮಾವ, ಮಕ್ಕಳು, ಗಂಡನಿಗಾಗೇ ಭಾಗ್ಯ ತನ್ನ ಜೀವನ ಮೀಸಲಿಟ್ಟಿದ್ದಾಳೆ. ಗಂಡ ತಾಂಡವ್‍ಗೆ ಭಾಗ್ಯ ಮೇಲೆ ಪ್ರೀತಿಯೇ ಇಲ್ಲ. ಇವಳೊಂದು ಕುಗ್ಗು ಎಂದು ಬೈಯುತ್ತಲೇ ಇರುತ್ತಾನೆ.


    ಹೆಂಡ್ತಿ ಬಿಟ್ಟು ಶ್ರೇಷ್ಠಾ ಜೊತೆ ಸಂಬಂಧ


    ತಾಂಡವ್ ಮತ್ತು ಭಾಗ್ಯ ಮದುವೆ ಆಗಿ ಸುಮಾರು ವರ್ಷಗಳೇ ಕಳೆದಿವೆ. ತಾಂಡವ್‍ಗೆ ಭಾಗ್ಯ ತನ್ನ ಹೆಂಡ್ತಿ ಆಗಿರುವುದು ಇಷ್ಟನೇ ಇಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳಿಗೆ ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ. ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಯಾವಾಗಲೂ ಆಕೆಯ ಜೊತೆ ಸುತ್ತಾಡುತ್ತಿರುತ್ತಾನೆ.


    colors kannada serial, kannada serial, bhagya new home ceremony, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ತಾಂಡವ್- ಶ್ರೇಷ್ಠ


    ಭಾಗ್ಯ ಮನೆ ಗೃಹಪ್ರವೇಶ


    ಭಾಗ್ಯ ಗಂಡ ತಾಂಡವ್ ಸೂರ್ಯವಂಶಿ ಹೊಸ ಮನೆ ಕಟ್ಟಿಸಿದ್ದಾನೆ. ಅದರ ಗೃಹ ಪ್ರವೇಶವನ್ನು ಗ್ರ್ಯಾಂಡ್ ಆಗಿ ಮಾಡಬೇಕು ಎಂದುಕೊಂಡಿದ್ದಾನೆ. ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಕಟ್ಟಿಸಿದ ಮನೆ. ಎಲ್ಲೂ ತಪ್ಪಾಗಬಾರದು ಎಂದು ಹೆಚ್ಚು ಗಮನ ವಹಿಸಿದ್ದಾನೆ. ಗೃಹಪ್ರವೇಶಕ್ಕಾಗಿ ಭಾಗ್ಯ ಮನೆಗೆ, ಕಾವೇರಿ, ವೈಷ್ಣವ್, ಲಕ್ಷ್ಮಿ, ಭಾಗ್ಯ ಅಮ್ಮ-ತಂಗಿ ಎಲ್ಲರೂ ಬಂದಿದ್ದಾರೆ.


    ಇದನ್ನೂ ಓದಿ: Kannadathi: ಅಮ್ಮಮ್ಮ ಹೋಗ್ತಿದ್ದಂತೆ ಹರ್ಷ-ಭುವಿ ಮಧ್ಯೆ ಗೋಡೆಯಾಗಿ ನಿಲ್ಲಲು ವರು ಸಂಚು 


    ಗೃಹಪ್ರವೇಶಕ್ಕೆ ಸ್ವಾಗತ
    ಭಾಗ್ಯ ಮನೆಯ ಗೃಹ ಪ್ರವೇಶ ಪತ್ರಿಕೆ ಈ ರೀತಿ ಇದೆ.


    ಶ್ರೀಮತಿ ಕುಸುಮಾ ಮತ್ತು ಶ್ರೀ ಧರ್ಮರಾಜ್ ಸೂರ್ಯವಂಶಿ


    ಇವರು ಮಾಡುವ ಸವಿನಯ ಆಮಂತ್ರಣ


    ಸೂರ್ಯವಂಶಿ ನಿವಾಸ


    ಗೃಹಪ್ರವೇಶವನ್ನು ದಿನಾಂಕ 18-11-2022 ಶುಕ್ರವಾರದಂದು ಸಂಜೆ 7 ಗಂಟೆಯ ಶುಭ ಮುಹೂರ್ತದಲ್ಲಿ ನೆರವೇರಿಸಲು ಗುರು ಹಿರಿಯರು ನಿಶ್ಚಿಯಿಸಿರುವುದರಿಂದ, ಆತ್ಮೀಯರಾದ ತಾವು ಕುಟುಂಬ ಸಮೇತರಾಗಿ ಆಗಮಿಸಿ, ನಮ್ಮ ಸತ್ಕಾರಗಳನ್ನು ಸ್ವೀಕರಿಸಿ, ಆಶೀರ್ವಾದಿಸಬೇಕಾಗಿ ಕೋರಿಕೊಳ್ಳುತ್ತೇವೆ.


    colors kannada serial, kannada serial, bhagya new home ceremony, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭಾಗ್ಯ ಮನೆ ಗೃಹಪ್ರವೇಶ


    ಗೃಹಪ್ರವೇಶ ತಪ್ಪದೇ ನೋಡಿ
    ಬರೀ ಕಷ್ಟವೇ ತುಂಬಿರೋ ಭಾಗ್ಯ ಬಾಳಲ್ಲಿ ಹೊಸ ಮನೆ ಬೆಳಕು ತರುತ್ತಾ ನೋಡಬೇಕು. ನೀವೂ ಶುಕ್ರವಾರ ಭಾಗ್ಯ ಮನೆ ಗೃಹ ಪ್ರವೇಶದ ಸಂಚಿಕೆಗಳನ್ನು ತಪ್ಪದೇ ನೋಡಿ. ಭಾಗ್ಯ ಅವತ್ತು ನೆಮ್ಮದಿಯಾಗಿ ಇರುತ್ತಾಳಾ? ಅಲ್ಲಿಗೂ ಶ್ರೇಷ್ಠ ಬರುತ್ತಾಳೆ. ಅಲ್ಲಿ ಏನಾದ್ರೂ ಮತ್ತೆ ತಪ್ಪಾಗುತ್ತಾ? ತನ್ನ ಗಂಡನ ಸಂಬಂಧದ ಬಗ್ಗೆ ತಿಳಿಯುತ್ತಾ ನೋಡಬೇಕು.


    colors kannada serial, kannada serial, bhagya new home ceremony, bhagya lakshmi news serial, serial cast, ಭಾಗ್ಯಲಕ್ಷ್ಮಿ ಧಾರಾವಾಹಿ, ಭಾಗ್ಯ ಮನೆ ಗೃಹಪ್ರವೇಶ, ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ತಾಂಡವ್ ಶ್ರೇಷ್ಠ


    ಇದನ್ನೂ ಓದಿ: Bigg Boss Kannada: ಪದೇ ಪದೇ ರೂಲ್ಸ್ ಬ್ರೇಕ್, ಬಿಗ್ ಬಾಸ್ ಆದೇಶಕ್ಕೆ ಮರ್ಯಾದೆ ಇಲ್ವಾ? 


    ಭಾಗ್ಯಲಕ್ಷ್ಮಿ ಧಾರಾವಾಹಿಯೂ ಜನರಿಗೆ ಇಷ್ಟವಾಗಿದ್ದು, ಮುಂದೇನಾಗುತ್ತೆ ಅನ್ನೋ ಕುತೂಹಲ ಹೆಚ್ಚಿಸುತ್ತಿದೆ. ಅದಕ್ಕೆ ಭಾಗ್ಯಲಕ್ಷ್ಮಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: