ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಭಾಗ್ಯ, ಮಗಳು ತನ್ವಿಗಾಗಿ ಪ್ರಾಜೆಕ್ಟ್ (Project) ಮಾಡ್ತಾ ಇದ್ದಾಳೆ. ಅದಕ್ಕೆ ಮಾತನಾಡಲು ಕುಸುಮಾ ಬೆಂಬಲ ನೀಡಿದ್ದಾಳೆ.ಮಗಳು ತನ್ವಿ ಭಾಗ್ಯಾಗೆ ಅವಮಾನ ಮಾಡಿದ್ದಾಳೆ. ಅದನ್ನು ನೆನೆಸಿಕೊಂಡು ಭಾಗ್ಯ ಕಣ್ಣೀರಿಡುತ್ತಿದ್ದಾಳೆ.
ತನ್ವಿ ಶಾಲೆಯಲ್ಲಿ ಪ್ರಾಜೆಕ್ಟ್
ತನ್ವಿಗೆ ಮೊದಲಿನಿಂದಲೂ ಅಮ್ಮನನ್ನು ಕಂಡ್ರೆ ಆಗಲ್ಲ. ಅಮ್ಮನಿಗೆ ಓದೋಕೆ, ಬರೆಯೋಕೆ ಬರಲ್ಲ. ಸ್ಟೈಲ್ ಬರಲ್ಲ ಅಂತ ಬೈಯ್ತಾ ಇರ್ತಾಳೆ. ತನ್ವಿಗೆ ತಾಂಡವ್ ಬೆಂಬಲ ನೀಡ್ತಾ ಇದ್ದಾನೆ. ತನ್ವಿ ಶಾಲೆಯಲ್ಲಿ ಈಗ ಪ್ರಾಜೆಕ್ಟ್ ಮಾಡಬೇಕಿದೆ. ಅದು ಅಮ್ಮ-ಮಗಳು ಇರಬೇಕು. ಆದ್ರೆ ತನ್ವಿಗೆ ತನ್ನ ಅಮ್ಮ ಭಾಗ್ಯ ಸ್ಕೂಲ್‍ಗೆ ಬರೋದು ಇಷ್ಟ ಇಲ್ಲ. ಅದಕ್ಕೆ ಬೇಡ ಅಂತಿದ್ದಾಳೆ. ಅಲ್ಲದೇ ಫೋನ್ ಮಾಡಿ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ ಅಂತಾಳೆ.
ಅಮ್ಮನಿಗೆ ಅವಮಾನ
ತನ್ವಿ ಶ್ರೇಷ್ಠಾ ಬಳಿ ಮಾತನಾಡುವುದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಶ್ರೇಷ್ಠಾ ಸಹ ಭಾಗ್ಯಳನ್ನು ನೋಡಿದ್ದಾಳೆ. ಬೇಕಂತಲೇ ಡಬಲ್ ಗೇಮ್ ಆಡ್ತಾ ಇದ್ದಾಳೆ. ನಿನ್ನ ಅಮ್ಮ ಇರುವಾಗ ನನ್ನನ್ನು ಏಕೆ ಕರೆಸಿದೆ ಎಂದು ಕೇಳ್ತಾಳೆ. ನನಗೆ ಅಮ್ಮ ಬರೋದು ಇಷ್ಟ ಇಲ್ಲ. ನಮ್ಮ ಅಮ್ಮ ಒಬ್ಬಳು ದಡ್ಡಿ. ಅವರಿಗೆ ಏನು ಗೊತ್ತಿಲ್ಲ. ಅವರಿಗೆ ಇಂಗ್ಲಿಷ್ ಬರಲ್ಲ ಅಂತ ಗೊತ್ತಾಗಿ, ನನಗೆ ಅವಮಾನ ಆಗೋದು ಬೇಡ. ಅದಕ್ಕೆ ಅವರು ಬರಲ್ಲ ಎಂದು ತನ್ವಿ ಹೇಳಿದ್ದಾಳೆ.
ನನ್ನ ಅಮ್ಮ ದಡ್ಡಿ ಎಂದ ತನ್ವಿ
ಕಾರ್ಯಕ್ರಮ ಕ್ಯಾನ್ಸಲ್ ಆಯ್ತು ಎಂದು ಅಮ್ಮನ ಬಳಿ ಸುಳ್ಳು ಹೇಳಿದೆ. ನೀವೇ ಅಮ್ಮನ ಬದಲು ಪ್ರಾಜೆಕ್ಟ್ ಮಾಡಿ ಎಂದು ಹೇಳ್ತಾಳೆ. ನೀವು ಸ್ಟೈಲಿಶ್ ಆಗಿ ಇದೀರಾ. ಇಂಗ್ಲಿಷ್ ಸಹ ಚೆನ್ನಾಗಿ ಮಾತನಾಡುತ್ತೀರಿ. ನೀವೇ ನನ್ನ ಅಮ್ಮ ಅಂತ ಹೇಳ್ತೀನಿ. ಅವರು ಬಂದ್ರೆ ನನಗೆ ಅವಮಾನ ಆಗುತ್ತೆ. ಆ ದಡ್ಡಿ ಅಮ್ಮನ ಬದಲು, ನೀವೇ ನನ್ನ ಅಮ್ಮನಾಗಿ ಬನ್ನಿ ಎಂದು ತನ್ವಿ ಶ್ರೇಷ್ಠಾ ಬಳಿ ಕೇಳಿದ್ದಾಳೆ.
ಮಗಳ ಮಾತಿನಿಂದ ಕುಗ್ಗಿದ ಭಾಗ್ಯ
ಭಾಗ್ಯ ಮಗಳು ಮಾತು ಕೇಳಿ ಕುಗ್ಗಿ ಹೋಗಿದ್ದಾಳೆ. ಶಾಲೆಯಿಂದ ಸೀದಾ ಮನಗೆ ವಾಪಸ್ ಬಂದಿದ್ದಾಳೆ. ಮಗಳ ಮಾತು ನೆನೆದು ಕಣ್ಣೀರಿಡುತ್ತಿದ್ದಾಳೆ. ನಾನು ನನ್ನ ಮಗಳಿಗೆ ತಕ್ಕ ರೀತಿ ಬದಲಾಗಬೇಕು ಎಂದುಕೊಳ್ತಾ ಇದ್ದಾಳೆ. ಒಂದು ಕಡೆ ತಾಂಡವ್ ಅವಮಾನ ಮಾಡ್ತಾ ಇರ್ತಾನೆ. ಈಗ ಮಗಳು ತನ್ವಿ ಸಹ ಅವಮಾನ ಮಾಡಿದ್ದಾಳೆ.
ಶ್ರೇಷ್ಠಾ ಡಬಲ್ ಗೇಮ್
ಶ್ರೇಷ್ಠಾ ಭಾಗ್ಯಾಗೆ ಅವಮಾನ ಆಗಬೇಕು ಎಂದು, ಬೇಕು ಅಂತಾನೇ ಈ ರೀತಿ ಮಾಡಿದ್ದಾಳೆ. ತಾಂಡವ್ ಸಹ ಭಾಗ್ಯಾಳನ್ನು ಬೈದು ಮನೆಯಿಂದ ಆಚೆ ಕಳಿಸಬೇಕು ಎಂದು ಪ್ಲ್ಯಾನ್ ಮಾಡ್ತಾ ಇದ್ದಾಳೆ. ಆದ್ರೆ ಭಾಗ್ಯ ಮತ್ತು ಕುಸುಮಾ ಮುಂದೆ ಮಾತ್ರ ಒಳ್ಳೆಯವಳ ರೀತಿ ನಾಟಕ ಮಾಡ್ತಾ ಇದ್ದಾಳೆ. ಅವರು ಮುಂದೆ ಡ್ರಾಮಾ ಮಾಡಿ ಅವರ ಮೆಚ್ಚುಗೆ ಪಡೆಯುತ್ತಿದ್ದಾಳೆ.
ಇದನ್ನೂ ಓದಿ: Ramachari: ನಿದ್ದೆಗೆಡಿಸಿದ ಅಣ್ಣನ ಸುಳ್ಳು, ರಾಮಾಚಾರಿಗೆ ಶೃತಿಯ ಪ್ರಶ್ನೆಗಳ ಸುರಿಮಳೆ!
ಮಗಳಿಗಾಗಿ ಭಾಗ್ಯ ಬದಲಾಗ್ತಾಳಾ? ಶ್ರೇಷ್ಠಾ ಪ್ಲ್ಯಾನ್ ವರ್ಕ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ