ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ (Hero) ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಇತ್ತ ಭಾಗ್ಯ ತವರು ಮನೆಯವರು ನಕಲಿ ಒಡವೆ ಮಾಡಿಸಿದ್ದಾರೆ ಎಂದು ಗೊತ್ತಾಗಿದೆ.
ಲಕ್ಷ್ಮಿ ಮದುವೆಗೆ ಒಡವೆ ಬೇಕು
ಲಕ್ಷ್ಮಿ ಮದುವೆಯನ್ನು ವೈಷ್ಣವ್ ಜೊತೆ ಮಾಡಿಸಬೇಕು ಎಂದು ಎಲ್ಲರೂ ನಿರ್ಧಾರ ಮಾಡಿದ್ದಾರೆ. ಅದಕ್ಕೆ ಲಕ್ಷ್ಮಿಗೆ ಒಡವೆ ಬೇಕು. ಅದಕ್ಕೆ ಭಾಗ್ಯ ತನ್ನ ಒಡವೆ ಕೊಟ್ಟು ಆಕೆಗೆ ಬೇರೆ ಹೊಸ ಒಡವೆ ಮಾಡಿಕೊಡುವುದು ಎಂದು ತೀರ್ಮಾನವಾಗಿದೆ. ಆ ಒಡವೆ ಮುರಿಸಲು ಭಾಗ್ಯ ಅತ್ತೆ ಕುಸುಮಾ ಮತ್ತು ತಾಂಡವ್ ಹೋಗಿರುತ್ತಾರೆ. ಅದು ನಕಲಿ ಒಡವೆ ಎಂದು ಗೊತ್ತಾಗುತ್ತೆ.
ಅಂಗಡಿಯವನಿಂದ ಅವಮಾನ
ಒಡವೆ ಅಂಗಡಿಗೆ ಹೋಗಿದ್ದ ತಾಂಡವ್ ಮತ್ತು ಕುಸುಮಾಗೆ ಅದು ನಕಲಿ ಒಡವೆ ಎಂದು ಗೊತ್ತಾಗುತ್ತೆ. ಅಲ್ಲದೇ ಬಂಗಾರದ ಅಂಗಡಿ ಮಾಲೀಕ ಬೇರೆ ಬಾಯಿಗೆ ಬಂದಂತೆ ಬೈದು ಅವಮಾನ ಮಾಡಿ ಕಳಿಸಿರುತ್ತಾನೆ. ಅದಕ್ಕೆ ತಾಂಡವ್ ಕೋಪ ನೆತ್ತಿಗೇರಿದೆ. ಭಾಗ್ಯಾಗೆ ಕಾಲ್ ಮಾಡಿ ನಿಮ್ಮ ಅಮ್ಮನ ಮನೆಗೆ ಬಾ ಎಂದು ಹೇಳಿ, ಸೀದಾ ಅತ್ತೆ ಮನೆಗೆ ಹೋಗಿದ್ದಾನೆ.
ಒಡವೆ ಭಾಗ್ಯ ಮುಖಕ್ಕೆ ಎಸೆದ ತಾಂಡವ್
ಭಾಗ್ಯ ಆತಂಕದಿಂದ ತವರು ಮನೆಗೆ ಬಂದಿದ್ದಾಳೆ. ಆಗಲೇ ತಾಂಡವ್ ಮತ್ತು ಕುಸುಮಾ ಅಲ್ಲಿರುತ್ತಾರೆ. ಭಾಗ್ಯ ಬಂದು ಏನಾಯ್ತು ಎಂದು ಕೇಳುತ್ತಾಳೆ. ಆಗ ತಾಂಡವ್ ಆಕೆಯ ಮುಖದ ಮೇಲೆ ಒಡವೆ ಎಸೆಯುತ್ತಾನೆ. ಆಗ ಆಕೆ ಯಾಕೆ ಎನ್ನುತ್ತಾಳೆ. ನಕಲಿ ಒಡವೆ ಹಾಕಿಕೊಂಡು ನಮ್ಮ ಮನೆ ಸೊಸೆಯಾಗಲು ನಾಚಿಕೆ ಆಗಲ್ವಾ ಎಂದು ಬೈಯ್ತಾನೆ. ಅದಕ್ಕೆ ಅವಳು ಶಾಕ್ ಆಗ್ತಾಳೆ.
ಎಲ್ಲಾ ಭಾಗ್ಯ ಅಮ್ಮ ಸುನಂದಾ ಕಳ್ಳಾಟ
ಭಾಗ್ಯಾ ಚಿಕ್ಕಪ್ಪ-ಚಿಕ್ಕಮ್ಮ ತೀರಿ ಹೋಗಿದ್ದಾರೆ. ಲಕ್ಷ್ಮಿಯನ್ನು ಇವರೇ ಸಾಕಿದ್ದಾರೆ. ಭಾಗ್ಯ ಮದುವೆಯಲ್ಲಿ ಲಕ್ಷ್ಮಿ ಅಮ್ಮನ ಒಡವೆ ಮುರಿಸಿ ಕೊಟ್ಟಿದ್ದೇವೆ ಎಂದು ಸುನಂದಾ ಹೇಳಿರುತ್ತಾಳೆ. ಆದ್ರೆ ಅದು ನಕಲಿ ಒಡವೆ. ಚಿನ್ನದ ಲೇಪ ಹಾಕಿದ್ದಾರೆ ಅಷ್ಟೆ. ನಿಜವಾದ ಒಡವೆಗಳನ್ನು ಈಕೆಯ ಇಟ್ಟುಕೊಂಡಿದ್ದಾಳೆ. ಅವನ್ನು ತನ್ನ ಚಿಕ್ಕ ಮಗಳು ಪೂಜಾ ಮದುವೆಗೆ ಬೇಕು ಎನ್ನುತ್ತಿದ್ದಾಳೆ.
ತಂಗಿ ಮದುವೆ ಸಂಭ್ರಮದಲ್ಲಿ ಭಾಗ್ಯಾ ಸಂಬಂಧ ಹಾಳಾಗುತ್ತಾ?
ಎಲ್ಲರೂ ಖುಷಿಯಿಂದ ಲಕ್ಷ್ಮಿ ಮದುವೆ ಮಾಡಬೇಕು ಎಂದು ಓಡಾಡುತ್ತಿದ್ದಾರೆ. ಅದರಲ್ಲೂ ಭಾಗ್ಯ ತುಂಬಾ ಸಂಭ್ರಮದಿಂದ ಇದ್ದಾಳೆ. ನೋಡಿದ್ರೆ ನಕಲಿ ಒಡವೆಯಿಂದ ಅವಮಾನ ಎದುರಿಸುವಂತಾಗಿದೆ. ಇದರಿಂದ ತಾಂಡವ್ ಮತ್ತು ಭಾಗ್ಯ ಸಂಬಂಧ ಮುರಿದು ಬೀಳುತ್ತಾ ಎನ್ನು ಅನುಮಾನಗಳು ಎದ್ದಿವೆ. ಯಾಕಂದ್ರೆ ತಾಂಡವ್‍ಗೆ ಮೊದಲೇ ಭಾಗ್ಯ ಕಂಡ್ರೆ ಇಷ್ಟ ಇಲ್ಲ. ಶ್ರೇಷ್ಠಾ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ.
ಇದನ್ನೂ ಓದಿ: Actress Priya Mani: ಬ್ಲ್ಯಾಕ್ ಡ್ರೆಸ್ನಲ್ಲಿ ಮಾದಕ ನೋಟ ಚೆಲ್ಲಿದ ಪ್ರಿಯಾ ಮಣಿ, ವಾವ್ ಎಂದ ಅಭಿಮಾನಿಗಳು!
ಭಾಗ್ಯ ಈ ಸಂಕಷ್ಟದಿಂದ ಹೇಗೆ ಪಾರಾಗ್ತಾಳೆ. ಅಕ್ಕಮ್ಮನಿಗೆ ತಂಗಿ ಹೇಗೆ ಸಹಾಯ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ