• Home
  • »
  • News
  • »
  • entertainment
  • »
  • Bhagya Lakshmi: ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ? ಒಂದೇ ಹೋಟೆಲ್‍ನಲ್ಲಿ ಇಬ್ಬರು!

Bhagya Lakshmi: ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ? ಒಂದೇ ಹೋಟೆಲ್‍ನಲ್ಲಿ ಇಬ್ಬರು!

ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?

ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?

ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ಹುಡುಗನನ್ನು ಹುಡುಕುತ್ತಿದ್ರೆ, ಇಲ್ಲ ಆಕೆಯ ಗಂಡನೇ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ?

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshami) ಎನ್ನುವ ಧಾರಾವಾಹಿ (Serial) ಪ್ರಸಾರವಾಗುತ್ತಿದೆ. ಧಾರಾವಾಹಿಯು ಸಂಜೆ 7 ಗಂಟೆಗೆ ಬರ್ತಾ ಇದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ (Sushma) ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ (Sister) ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಅಕ್ಕ ತಂಗಿಯರ ಮಧ್ಯೆಯ ಪ್ರೀತಿಯ (Love) ಕಥೆ ಇದು. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ (Marriage) ಮಾಡಲು ಹುಡುಕುತ್ತಿದ್ದಾಳೆ. 


    ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇಲ್ಲಿ ನೋಡಿದ್ರೆ ಭಾಗ್ಯನ ಗಂಡನೇ ಶ್ರೀರಾಮನಾಗಿ ಉಳಿದಿಲ್ಲ. ತಾಂಡವ್‍ಗೆ ಶ್ರೇಷ್ಠ ಎನ್ನುವ ಹುಡುಗಿ ಜೊತೆ ಸಂಬಂಧ ಇದೆ. ಇದು ಭಾಗ್ಯನಿಗೆ ಗೊತ್ತಾಗುತ್ತಾ?  ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ? ಎಲ್ಲವನ್ನೂ ಮತ್ತೆ ಸಹಿಸಿಕೊಳ್ತಾಳಾ?


    ಭಾಗ್ಯಾಗೆ ಬೈಯುತ್ತಲೇ ಇರುತ್ತಾನೆ


    ಭಾಗ್ಯಳನ್ನು ಮದುವೆ ಆಗಿರುವುದು ತಾಂಡವ್‍ಗೆ ಇಷ್ಟ ಇಲ್ಲ. ತನ್ನ ಅಮ್ಮನ ಬಲವಂತಕ್ಕೆ ಮದುವೆ ಆಗಿದ್ದಾನೆ. ಪ್ರತಿ ದಿನ ಭಾಗ್ಯಗೆ ಬೈಯುತ್ತಲೇ ಇರುತ್ತಾನೆ. ಇಬ್ಬರು ಮಕ್ಕಳ ಮುಂದೆಯೂ ಮರ್ಯಾದೆ ಕೊಡುವುದಿಲ್ಲ. ತನ್ನ ಅಮ್ಮ ತನಗೆ ತಪ್ಪು ಆಯ್ಕೆ ಮಾಡಿ ಮದುವೆ ಮಾಡಿದ್ಲು ಎಂದು ಮನೆಯಲ್ಲಿ ಜಗಳ ಆಡ್ತಾನೆ. ಇವಳಿಗೆ ಎಲ್ಲಿ ಹೇಗಿರಬೇಕು ಎಂದು ಗೊತ್ತೇ ಇಲ್ಲ ಎಂದು ರೇಗಾಡ್ತಾನೆ


    ತಾಂಡವ್ ಗೆ ಶ್ರೇಷ್ಠ ಜೊತೆ ಸಂಬಂಧ


    ಭಾಗ್ಯಗೆ ತಾಳಿ ಕಟ್ಟಿದ್ರೂ, ತಾಂಡವ್ ಶ್ರೇಷ್ಠ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ಯಾವಾಗಲೂ ಆಕೆಯ ಜೊತೆ ಸುತ್ತಾಡುತ್ತಿರುತ್ತಾನೆ. ಎಲ್ಲದಕ್ಕೂ ಆಕೆಯ ಬಳಿಯೇ ಸಲಹೆ ಕೇಳ್ತಾನೆ. ಇಬ್ಬರು ಹೋಟೆಲ್‍ಗೆ ಊಟಕ್ಕೆ ಹೋಗಿದ್ದಾರೆ. ನಗುತ್ತಾ ಖುಷಿ-ಖುಷಿಯಿಂದ ಊಟ ಮಾಡುತ್ತಾ ಇದ್ದಾರೆ.


    ಇದನ್ನೂ ಓದಿ: BBK Season 09: ಅನುಪಮಾ ಬಗ್ಗೆ ನೇಹಾ ಹೇಳಿದ್ದು ನಿಜಾನಾ, ಹೀಗ್ಯಾಕೆ ಅಂದ್ರು ಗೊಂಬೆ? 


    ಅದೇ ಹೋಟೆಲ್‍ಗೆ ಬಂದ ಭಾಗ್ಯ, ಲಕ್ಷ್ಮಿ, ವೈಷ್ಣವ್


    ಭಾಗ್ಯಗೆ ಕಾಲು ನೋವಾಗಿರುತ್ತೆ. ಅದಕ್ಕೆ ವೈಷ್ಣವ್ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾನೆ. ಆಸ್ಪತ್ರೆಯಲ್ಲಿ ಎಲ್ಲಾ ಕೆಲಸ ಮುಗಿದ ಮೇಲೆ ಊಟಕ್ಕೆ ಹೋಗೋಣ ಎಂದು ಹೇಳ್ತಾನೆ. ಭಾಗ್ಯ ಬೇಡ ಅಂತಾಳೆ. ಆದ್ರೂ ಕೇಳದ ವೈಷ್ಣವ್ ಬಲವಂತವಾಗಿ ಹೋಟೆಲ್‍ಗೆ ಕರೆದುಕೊಂಡು ಹೋಗುತ್ತಾನೆ. ಅದೇ ಹೋಟೆಲ್‍ನಲ್ಲಿ ಶ್ರೇಷ್ಠ ಮತ್ತು ತಾಂಡವ್ ಊಟ ಮಾಡುತ್ತಿದ್ದಾರೆ.


    colors kannada serial, kannada serial, bhagya lakshmi news serial, serial cast, bhagya husband In hotel with shrestha, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಭಾಗ್ಯ-ಲಕ್ಷ್ಮಿ


    ತನ್ನ ಗಂಡನ ಸಂಬಂಧದ ಬಗ್ಗೆ ತಿಳಿಯುತ್ತಾ?


    ಭಾಗ್ಯಾಗೆ ತನ್ನ ಗಂಡ ತಾಂಡವ್ ಎಷ್ಟೇ ಬೈದರೂ, ಪ್ರೀತಿ ಕಮ್ಮಿ ಆಗಿಲ್ಲ. ತನ್ನ ಗಂಡ ತುಂಬಾ ಒಳ್ಳೆಯನು. ಶ್ರೀರಾಮನಂತೆ ಎಂದುಕೊಂಡಿದ್ದಾಳೆ. ಒಮ್ಮೆ ಲಕ್ಷ್ಮಿ ಏನೋ ಹೇಳಿದ್ದಕ್ಕೆ, ನನ್ನ ಗಂಡನ ತಂಟೆಗೆ ಬರಬೇಡ ಎಂದು ಎಚ್ಚರಿಕೆ ನೀಡಿದ್ಲು. ಈಗ ಇಲ್ಲಿ ತಾಂಡವ್‍ನನ್ನು ಶ್ರೇಷ್ಠ ಜೊತೆ ನೋಡ್ತಾಳಾ? ಅವರಿಬ್ಬರಿಗೂ ಸಂಬಂಧ ಇರೋದು ಗೊತ್ತಾಗುತ್ತಾ ನೋಡಬೇಕು.


    colors kannada serial, kannada serial, bhagya lakshmi news serial, serial cast, bhagya husband In hotel with shrestha, ಭಾಗ್ಯಲಕ್ಷ್ಮಿ ಧಾರಾವಾಹಿ, ತಾಂಡವ್-ಶ್ರೇಷ್ಠ ಸಂಬಂಧ ಭಾಗ್ಯನಿಗೆ ತಿಳಿಯುತ್ತಾ?, ಬೇರೆಯವರ ಕಷ್ಟಕ್ಕೆ ಮರುಗುವ ಜೀವಗಳು ಒಂದಾಗ್ತಾವಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವೈಷ್ಣವ್


    ಇದನ್ನೂ ಓದಿ: Lakshana: ವೈಷ್ಣವಿ ವಿಲನ್ ಅಲ್ಲ, ಭೂಪತಿ ಬೆಸ್ಟ್ ಫ್ರೆಂಡ್! ನಾಟಕ ಮಾಡಿ ಮನೆ ಮಂದಿಗೆಲ್ಲಾ ಶಾಕ್ 


    ಭಾಗ್ಯ ತನ್ನ ತಂಗಿಗೆ ಶ್ರೀರಾಮನಂತ ಹುಡುಗನನ್ನು ಹುಡುಕುತ್ತಿದ್ರೆ, ಇಲ್ಲ ಆಕೆಯ ಗಂಡನೇ ಬೇರೆಯವಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಷ್ಯ ಗೊತ್ತಾದ್ರೆ, ಭಾಗ್ಯ ಏನ್ ಮಾಡ್ತಾಳೆ? ಎಲ್ಲವನ್ನೂ ಮತ್ತೆ ಸಹಿಸಿಕೊಳ್ತಾಳಾ? ಅವನಿಂದ ದೂರ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.

    Published by:Savitha Savitha
    First published: