ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ಭಾಗ್ಯ ಮಾವ (Father In Law) ಧರ್ಮರಾಜ್‍ಗೆ ತುಂಬಾ ಎದೆ ನೋವು ಬಂದಿರುತ್ತೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿರುತ್ತೆ. ಆದ್ರೆ ತಾಂಡವ್ ಮನೆಯಲ್ಲಿ ಇರಲ್ಲ. ಎಷ್ಟು ಫೋನ್ ಮಾಡಿದ್ರೂ ಬರಲ್ಲ. ಅದಕ್ಕೆ ಕುಸುಮಾ ಕೋಪಗೊಂಡಿದ್ದಾರೆ.
ಮಗನ ಸ್ಥಾನದಲ್ಲಿ ನಿಂತ ಸೊಸೆ
ಭಾಗ್ಯ ಮಾವ ಧರ್ಮರಾಜ್‍ಗೆ ಎದೆನೋವು ಬಂದು ಒದ್ದಾಡುತ್ತಿರುತ್ತಾರೆ. ಕುಸುಮಾ, ಭಾಗ್ಯ ಎಲ್ಲಾ ಆತಂಕಗೊಂಡಿರುತ್ತಾರೆ. ಆಸ್ಪತ್ರೆಗೆ ಸೇರಿಸಬೇಕಿರುತ್ತೆ. ಆದ್ರೆ, ತಾಂಡವ್ ಮನೆಯಲ್ಲಿ ಇರಲ್ಲ. ಶ್ರೇಷ್ಠಾ ಮನೆಗೆ ಹೋಗಿರುತ್ತಾನೆ. ಭಾಗ್ಯಾಗೆ ಏನು ಮಾಡಬೇಕೆಂದು ಗೊತ್ತಾಗದೇ, ಆಟೋದವರಿಗೆ ಫೋನ್ ಮಾಡಿ ಮಾವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾಳೆ.
ಅಪ್ಪನಿಗೆ ಹಾರ್ಟ್ ಅಟ್ಯಾಕ್ ಆದ್ರೂ ಬರಲಿಲ್ಲ ತಾಂಡವ್
ಭಾಗ್ಯ ಮಾವನಿಗೆ ಈ ರೀತಿ ಆಯ್ತು ಎಂದು ಹೇಳಲು ಫೋನ್ ಮಾಡ್ತಾ ಇದ್ದಾಳೆ. ಆದ್ರೆ ತಾಂಡವ್ ತೆಗೆಯುತ್ತಿಲ್ಲ. ತಾಂಡವ್ ಶ್ರೇಷ್ಠಾ ಜೊತೆ ಇದ್ದಾನೆ. ಶ್ರೇಷ್ಠಾ, ಮನೆಯವರ ಫೋನ್ ತೆಗೆಯಬೇಡ ಎಂದಿದ್ದಾಳೆ. ಅದಕ್ಕೆ ತಾಂಡವ್ ತೆಗೆಯುತ್ತಿಲ್ಲ. ಅಪ್ಪ ಎದೆ ನೋವಿನಿಂದ ಬಳಲಿದ್ರೂ ತಾಂಡವ್ ಬರಲೇ ಇಲ್ಲ.
ಮಾವನ ಕಾಪಾಡಿದ ಭಾಗ್ಯ
ಇಷ್ಟೊತ್ತು ನನ್ನ ಜೀವ ಕೈಯಲ್ಲಿ ಹಿಡಿದುಕೊಂಡಿದ್ದೆ. ಆ ಭಗವಂತ ನನ್ನ ಅರಿಶಿಣ, ಕುಂಕುಮ ಉಳಿಸಿಬಿಟ್ಟ. ಈಗ ನನಗೆ ಸಮಾಧಾನ ಆಯ್ತು. ಈ ಡಾಕ್ಟರ್ ಒಂದಕ್ಕೆ ಎರೆಡು ಹೇಳಿ ಟೆನ್ಶನ್ ಕೊಡ್ತಾರೆ. ಇವತ್ತು ನೋಡು ನನ್ನ ಮಗನೇ ಇರಲಿಲ್ಲ. ಆದ್ರೆ ನೀನು, ನನ್ನ ಮಗನ ಜಾಗ ತುಂಬಿಸಿ ಬಿಟ್ಟೆ ಮಗಳೇ, ಎಷ್ಟೆಲ್ಲಾ ಓಡಾಡಿದೆ ನೀನು. ನೀನು ಇಷ್ಟು ಚುರುಕು ಅಂತ ನನಗೆ ಗೊತ್ತಿರಲಿಲ್ಲ ಎಂದು ಕುಸುಮಾ ಸೊಸೆಯನ್ನು ಹೊಗಳುತ್ತಿದ್ದಾಳೆ.
ನೀನು ಜಾಣೆ
ನಿನಗೆ ಏನೂ ಗೊತ್ತಾಗಲ್ಲ ಅಂತ ಎಷ್ಟು ಬೈದಿಬಿಟ್ಟೆ ಅಲ್ವಾ? ಆದ್ರೆ ನೀನು ಜಾಣೆ, ನನ್ನ ಸೊಸೆ ಎಷ್ಟು ಚೂಟಿ ಅಲ್ವಾ? ಚೆನ್ನಾಗಿ ಎಲ್ಲಾ ನಿಭಾಯಿಸಿ ಬಿಟ್ಟೆ ನೀನು. ಏನಾಗುತ್ತೋ ಎಂದು ಭಯವಾಗಿ ಬಿಟ್ಟಿತ್ತು. ನನಗೆ ಏನೇನೋ ಯೋಚನೆ ಬಂದು ಬಿಟ್ಟಿತ್ತು ಎಂದು ಕುಸುಮಾ ಅಳುತ್ತಿದ್ದಾಳೆ. ಮಾವನಿಗೆ ಸರಿ ಹೋಯ್ತು ಬಿಡಿ ಎಂದು ಭಾಗ್ಯ ಹೇಳಿದ್ದಾಳೆ. ಕುಸುಮಾ ಖುಷಿಯಾಗಿದ್ದಾಳೆ.
ಧರ್ಮರಾಜ್ ಗೆ ಅಸಿಡಿಟಿ ಆಗಿತ್ತು
ಭಾಗ್ಯ ಮಾವನನ್ನು ಚೆಕ್ ಮಾಡಿದ ಡಾಕ್ಟರ್ ಅಸಿಡಿಟಿ ಆಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಕುಸುಮಾ ಭಾಗ್ಯಾಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಯಾಕಾಯ್ತು ಅಸಿಡಿಟಿ? ನೀನು ಮಾಡೋ ಅಡುಗೆಯಿಂದ. ಆಲೂಗಡ್ಡೆ ಬೋಂಡಾ, ಬಾಳೇಕಾಯಿ ಬಜ್ಜಿ. ಎಷ್ಟು ಸಲ ಹೇಳಿದ್ದೆ. ಅವನ್ನು ಕೊಡಬೇಡ, ಆರೋಗ್ಯಕ್ಕೆ ತೊಂದ್ರೆ ಅಂತ. ಸೊಸೆ ಮಾಡಿ ಮಾಡಿ ಹಾಕಿ, ನಿಮ್ಮ ಮಾವ ಈ ಸ್ಥಿತಿಗೆ ಬಂದಿದ್ದಾರೆ. ಇನ್ಮುಂದೆ ಎಲ್ಲಾ ಕಟ್ ಎಂದು ಹೇಳಿದ್ದಾಳೆ.
ಮಗ ತಾಂಡವ್ ಮೇಲೆ ಕೋಪ
ತಾಂಡವ್ ಫೋನ್ ಪಿಕ್ ಮಾಡದ ಕಾರಣ ಕುಸುಮಾ ಕೋಪ ಮಾಡಿಕೊಂದ್ದಾಳೆ. ಭಾರೀ ಆಯ್ತು ಅವನದ್ದು. ಯಾವ ಸೀಮೆ ಕೆಲಸ ಅದು. ನಮ್ಮ ದೇಶದ ಪ್ರಧಾನ ಮಂತ್ರಿಗೆ ಅವರ ತಾಯಿಯನ್ನು ನೋಡೋಕೆ ಟೈಮ್ ಸಿಗುತ್ತಂತೆ. ಆದ್ರೆ ಇವನಿಗೆ ಸಿಗಲ್ವಂತೆ.
ಇದನ್ನೂ ಓದಿ: Lakshana: ಮದುವೆ ಶ್ವೇತಾ ಜೊತೆ, ಶಾಸ್ತ್ರವೆಲ್ಲಾ ನಕ್ಷತ್ರಾ ಜೊತೆ; ಡೆವಿಲ್ ನಡೆ ಏನು?
ಇವನು ಅವನಿಗಿಂತ ಜಾಸ್ತಿನಾ? ಬರ್ಲಿ ಅವನು ಇವತ್ತು. ಅವನ ಗ್ರಹಚಾರ ಬಿಡಿಸಿಲ್ಲ ಎಂದ್ರೆ ನಾನು ಕುಸುಮಾನೇ ಅಲ್ಲ ಎಂದು ಹೇಳಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ