ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ (Marriage) ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಆದ್ರೆ ವೈಷ್ಣವ್ ನಡೆ ಭಾಗ್ಯ ಮತ್ತು ಲಕ್ಷ್ಮಿಗೆ ಅನುಮಾನ ತರಿಸಿದೆ.
ಕೀರ್ತಿ ಮದುವೆ ಆಗ್ತಾನಂತೆ ವೈಷ್ಣವ್
ಲಕ್ಷ್ಮಿ ಜೊತೆ ಮದುವೆ ಮಾಡಲು ಎಲ್ಲಾ ತಯಾರು ನಡೆದಿದೆ. ಆದ್ರೆ ವೈಷ್ಣವ್ ಕೀರ್ತಿಯನ್ನು ಮೊದಲಿನಿಂದಲೂ ತುಂಬಾ ಪ್ರೀತಿ ಮಾಡ್ತಾ ಇದ್ದ. ಇಬ್ಬರಿಗೂ ಮದುವೆ ಮಾಡಬೇಕು ಎಂದು ಮನೆಯಲ್ಲಿ ನಿಶ್ಚಿತಾರ್ಥ ಇಟ್ಟುಕೊಂಡಿದ್ರು. ಆದ್ರೆ ಕೀರ್ತಿ ಅವತ್ತೂ ನನಗೆ ನೀನು ಬೇಡ ಎಂದು ವೈಷ್ಣವ್ ಗೆ ಹೇಳಿ ಬಿಟ್ಟಳು. ಅದರಿಂದ ವೈಷ್ಣವ್ ತೀವ್ರ ನೊಂದಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ಈಗ ಕೀರ್ತಿ ಬೇಕು ಆಕೆಯನ್ನು ಮದುವೆ ಆಗ್ತೇನೆ ಎಂದು ಹೇಳ್ತಾ ಇದ್ದಾನೆ.
ಭಾಗ್ಯಗೆ ಶುರುವಾಗಿದೆ ಅನುಮಾನ
ವೈಷ್ಣವ್ ಗೆ ಈ ಮದುವೆ ಇಷ್ಟ ಇಲ್ಲ ಎಂಬ ಅನುಮಾನ ಭಾಗ್ಯಗೆ ಶುರುವಾಗಿದೆ. ಅದಕ್ಕೆ ಕುಸುಮಾ ಮತ್ತು ಕಾವೇರಿಯನ್ನು ಪ್ರಶ್ನೆ ಮಾಡ್ತಾ ಇದ್ದಾಳೆ. ನನ್ನ ತಂಗಿ ವೈಷ್ಣವ್ ಮೆಚ್ಚಿದ ಹುಡುಗಿನಾ? ಅಥವಾ ಅತ್ತೆ ಮೆಚ್ಚಿದ ಸೊಸೆನಾ ಎಂದು ಪ್ರಶ್ನೆ ಮಾಡ್ತಾ ಇದ್ದಾಳೆ. ಅದಕ್ಕೆ ಉತ್ತರ ನೀಡಲಾಗದೇ ಕುಸುಮಾ ಮತ್ತು ಕಾವೇರಿ ಪರದಾಡ್ತಾ ಇದ್ದಾರೆ.
ಕೀರ್ತಿ ಮತ್ತು ವೈಷ್ಣವ್ ಮಾತು
ಕೊನೆ ಕ್ಷಣದವರೆಗೂ ಕೀರ್ತಿಯನ್ನು ಮದುವೆಗೆ ಒಪ್ಪಿಸಬೇಕು ಎಂದು ವೈಷ್ಣವ್ ಕಾಯ್ತಾ ಇದ್ದಾನೆ. ಅಮ್ಮ ಕಾವೇರಿಯೂ ಕೀರ್ತಿ ಒಪ್ಪಿದ್ರೆ ಅವಳ ಜೊತೆಯೇ ನಿನ್ನ ಮದುವೆ ಎಂದು ಹೇಳಿದ್ದಾಳೆ. ಅದಕ್ಕೆ ವೈಷ್ಣವ್ ಕೀರ್ತಿಯನ್ನು ಪ್ರಶ್ನೆ ಮಾಡ್ತಾ ಇದ್ದಾನೆ. ನಾನು ಬೇಡ ಅಂದ್ರೆ ನಾನು ಕೊಟ್ಟ ಸರವನ್ನು ಏಕೆ ಇಟ್ಟುಕೊಂಡಿದೀಯಾ? ಕೊಡು ವಾಪಸ್ ಎನ್ನುತ್ತಿದ್ದಾನೆ. ಅದಕ್ಕೆ ಕೀರ್ತಿಯೂ ವಾಪಸ್ ಕೊಡುತ್ತಿದ್ದಾಳೆ.
ಲಕ್ಷ್ಮಿಗೂ ಶುರುವಾದ ಅನುಮಾನ
ಕೀರ್ತಿ ಮತ್ತು ವೈಷ್ಣವ್ ಪದೇ ಪದೇ ಜೊತೆಗೆ ಇರುತ್ತಿದ್ದಾರೆ. ಆಗಾಗ ಭೇಟಿಯಾಗಿ ಮಾತನಾಡುತ್ತಿದ್ದಾರೆ. ಇದರಿಂದ ಲಕ್ಷ್ಮಿಗೆ ಅನುಮಾನ ಶುರುವಾಗಿದೆ. ವೈಷ್ಣವ್ ಕೀರ್ತಿಯನ್ನು ಪ್ರೀತಿಸುತ್ತಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಇಬ್ಬರಿಗೂ ಇಲ್ಲಿ ಏನ್ ನಡೆಯುತ್ತಿದೆ ಎಂದು ಲಕ್ಷ್ಮಿ ಪ್ರಶ್ನೆ ಮಾಡ್ತಾ ಇದ್ದಾಳೆ. ವೈಷ್ಣವ್ ನಿಜ ಹೇಳಲೂ ಹೋದ್ರೂ, ಕೀರ್ತಿ ತಡೆಯುತ್ತಿದ್ದು, ಏನೂ ಸಂಬಂಧ ಇಲ್ಲ. ನಾವಿಬ್ಬರ ಫ್ರೆಂಡ್ಸ್ ಎಂದು ಹೇಳ್ತಾ ಇದ್ದಾಳೆ.
ಕೀರ್ತಿಗೆ ಕೋಪ
ಅಲ್ಲದೇ ವೈಷ್ಣವ್ ಅತ್ತೆ ಸುಪ್ರೀತಾ ಬೇರೆ ಕೀರ್ತಿ ತಲೆಕೆಡಿಸುತ್ತಿದ್ದಾಳೆ. ಮದುವೆ ಆದ್ರೆ ಮುಗೀತು, ನಿನ್ನ ವೈಷ್ಣವ್ ನಿನಗೆ ಸಿಗಲ್ಲ. ಲಕ್ಷ್ಮಿ ಪಾಲಾಗ್ತಾನೆ ಎಂದು ಹೇಳುತ್ತಿದ್ದಾಳೆ. ಅದಕ್ಕೆ ಕೀರ್ತಿಗೆ ತುಂಬಾ ಕೋಪ ಬಂದಿದೆ.
ಇದನ್ನೂ ಓದಿ: Megha Shetty: ಸೀರೆಯುಟ್ಟ ಅನು ಸಿರಿಮನೆ, ಫ್ಯಾನ್ ಅಂದ್ರು ‘ಎಲ್ಲಿದೆ ನಿಮ್ಮನೆ, ಕೊಲ್ಲಬೇಡಿ ಸುಮ್ಮನೆ’!
ವೈಷ್ಣವ್ ಮದುವೆ ಯಾರ ಜೊತೆ ಆಗುತ್ತೆ? ಕೀರ್ತಿ ಜೊತೆನಾ? ಲಕ್ಷ್ಮಿ ಜೊತೆನೆ? ಭಾಗ್ಯಾಗೆ ಅನುಮಾನ ಬಂದಿದೆ, ತನ್ನ ತಂಗಿ ಮದುವೆ ಮಾಡಲು ಒಪ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ