ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಕಾಣಿಸಿಕೊಂಡಿದ್ದಾರೆ. ಅಕ್ಕ-ತಂಗಿಯರ (Sister) ಕಥೆ ಆಧಾರಿತ ಭಾಗ್ಯಲಕ್ಷ್ಮಿ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ಇನ್ನು ವೈಷ್ಣಣ್ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎಂದು ಅಮ್ಮ ಕಾವೇರಿ, ದೊಡ್ಡಮ್ಮ ಕುಸುಮಾ ಪ್ಲ್ಯಾನ್ ಮಾಡ್ತಾ ಇದ್ದಾರೆ. ಇನ್ನೊಂದೆಡೆ ಲಕ್ಷ್ಮಿಗೆ ನಿತಿನ್ ಎಂಬುವವನು ಕಾಡುತ್ತಿದ್ದಾನೆ. ಅದಕ್ಕೆ ಭಾಗ್ಯ ನಿತಿನ್ (Nithin) ಮನೆಗೆ ಹೋಗಿದ್ದಾಳೆ.
ಲಕ್ಷ್ಮಿಗೆ ಗಂಡು ಹುಡುಕುತ್ತಿರುವ ಭಾಗ್ಯ
ಭಾಗ್ಯನಿಗೆ ಲಕ್ಷ್ಮಿ ಸ್ವಂತ ತಂಗಿಯಲ್ಲ. ಚಿಕ್ಕಪ್ಪನ ಮಗಳು. ಆದ್ರೆ ತನ್ನ ಸ್ವಂತ ತಂಗಿಯಂತೆ ನೋಡಿಕೊಂಡಿದ್ದಾಳೆ. ಅಮ್ಮನ ಸ್ಥಾನದಲ್ಲಿ ನಿಂತು ಆಕೆಗೆ ಬದುಕಿನ ಪಾಠ ಹೇಳಿಕೊಟ್ಟಿದ್ದಾಳೆ. ಲಕ್ಷ್ಮಿಗೆ ಒಂದು ಒಳ್ಳೆ ಗಂಡು ನೋಡಿ ಮದುವೆ ಮಾಡಬೇಕು ಎಂದುಕೊಂಡಿದ್ದಾಳೆ. ಶ್ರೀಮಂತ ಬೇಡ, ಶ್ರೀರಾಮನಂತ ಹುಡುಗ ಬೇಕಂತೆ.
ನಿತಿನ್ ವಿಡಿಯೋದಿಂದ ಎಡವಟ್ಟು
ಲಕ್ಷ್ಮಿಯನ್ನು ನೋಡಲು ನಿತಿನ್ ಎಂಬ ಹುಡುಗ ಬಂದಿರುತ್ತಾನೆ. ಅವನು 2 ಮದುವೆ ಆಗಿ ಇಬ್ಬರು ಹೆಂಡ್ತಿಯರನ್ನು ಬಿಟ್ಟಿದ್ದಾನೆ. ಆತನಿಗೆ ಲಕ್ಷ್ಮಿ ಬೇಕಂತೆ. ಅದಕ್ಕೆ ಭಾಗ್ಯ ಆಗಲ್ಲ ಎಂದು ಹೇಳಿ ಕಳಿಸಿದ್ದಳು. ಆದ್ರೆ ನಿತಿನ್ ಲಕ್ಷ್ಮಿ ಆತನ ಜೊತೆ ಜಗಳ ಮಾಡಿದ ವಿಡಿಯೋ ಇಟ್ಟುಕೊಂಡು ಆಟವಾಡಿಸುತ್ತಿದ್ದಾನೆ.
ಇದನ್ನೂ ಓದಿ: Actor Diganth Birthday: ಸ್ಯಾಂಡಲ್ವುಡ್ ದೂದ್ ಪೇಡಾ ದಿಗಂತ್ ಹುಟ್ಟುಹಬ್ಬ; ಮನಸಾರೆ ವಿಶ್ ಮಾಡಿ
ಲಕ್ಷ್ಮಿಗೆ ಪದೇ ಪದೇ ತೊಂದ್ರೆ
ನಿತಿನ್ ಲಕ್ಷ್ಮಿಗೆ ಪದೇ ಪದೇ ತೊಂದ್ರೆ ಕೊಡುತ್ತಿದ್ದಾನೆ. ತನ್ನ ಹುಡುಗರ ಜೊತೆ ಬಂದು ಅಡ್ಡ ಹಾಕಿ ಕಾಟ ಕೊಡುತ್ತಾನೆ. ತನ್ನನ್ನು ಮದುವೆ ಆಗಲೇ ಬೇಕು ಎಂದು ಕಾಡಿಸುತ್ತಾನೆ. ಲಕ್ಷ್ಮಿ ಹಲವು ಬಾರಿ, ಬೈದು, ಕಪಾಳಕ್ಕೆ ಹೊಡೆದು ಕಳಿಸಿದ್ದಾಳೆ. ಆದ್ರೂ ಆತನಿಗೆ ಬುದ್ಧಿ ಬಂದಿಲ್ಲ. ಅಲ್ಲದೇ ವೈಷ್ಣವ್ ಸಹ ಒಮ್ಮೆ ನಿತಿನ್ ಗೆ ಹೊಡೆದು ಬುದ್ಧಿ ಹೇಳಿದ್ದ.
ನಿತಿನ್ ಮನೆಗೆ ಬಂದ ಭಾಗ್ಯ
ಈ ಎಲ್ಲಾ ವಿಷಯ ಗೊತ್ತಾಗಿ ಭಾಗ್ಯ ನಿತಿನ್ ಮನೆಗೆ ಬಂದಿದ್ದಾಳೆ. ನಮ್ಮ ಲಡ್ಡುನ ವಿಡಿಯೋ ಡಿಲಿಟ್ ಮಾಡಿ. ಅದರಿಂದ ಆಕೆಗೆ ಗಂಡುಗಳು ಸೆಟ್ ಆಗ್ತಾ ಇಲ್ಲ. ದಯಮಾಡಿ ಡಿಲಿಟ್ ಮಾಡಿ ಎಂದು ನಿತಿನ್ ಬಳಿ ಕೇಳಿಕೊಳ್ಳುತ್ತಿದ್ದಾಳೆ. ಅದಕ್ಕೆ ನಿತಿನ್ ಆಗಲ್ಲ ಎಂದು ಹೇಳುತ್ತಿದ್ದಾನೆ. ಭಾಗ್ಯ ಮಾತಿಗೆ ಬೆಲೆ ಕೊಡಲಿಲ್ಲ.
ಕಾಲಿಗೆ ಬೀಳು, ವಿಡಿಯೋ ಡಿಲಿಟ್ ಮಾಡ್ತೀನಿ
ಭಾಗ್ಯ ನಿತಿನ್ ಬಳಿ ಬೇಡಿಕೊಂಡ ಮೇಲೆ, ನಾನು ವಿಡಿಯೋ ಡಿಲಿಟ್ ಮಾಡ್ತೀನಿ. ನೀವು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎನ್ನುತ್ತಾನೆ. ಇಲ್ಲ ಅಂದ್ರೆ ಈ ವಿಡಿಯೋವನ್ನು ನಾಳೆ ಎಲ್ಲ ವೆಬ್ ಸೈಟ್ ನಲ್ಲಿ ಹಾಕ್ತೀನಿ ಎಂದು ಬೆದರಿಕೆ ಹಾಕ್ತಾನೆ. ತಂಗಿ ಲಕ್ಷ್ಮಿಗಾಗಿ ಭಾಗ್ಯ ನಿತಿನ್ ಕಾಲು ಹಿಡಿಯುತ್ತಾಳಾ ನೋಡಬೇಕು.
ಇದನ್ನೂ ಓದಿ: Ramachari: ಮದ್ವೆ ಗಂಡು ರಾಮಾಚಾರಿಯಲ್ಲ, ಕೋದಂಡ! ಪಾಪ, ಚಾರುಗೆ ಶಾಕ್ ಮೇಲೆ ಶಾಕ್!
ತಂಗಿ ಅಂದ್ರೆ ಭಾಗ್ಯನಿಗೆ ಪ್ರಾಣ. ಅವಳಿಗಾಗಿ ಏನ್ ಬೇಕಾದ್ರೂ ಮಾಡ್ತಾಳೆ. ಈಗ ನಿತಿನ್ ಕಾಲು ಹಿಡಿದು ಕ್ಷಮೆ ಕೇಳ್ತಾಳಾ ನೋಡಬೇಕು. ಮುಂದೇನಾಗುತ್ತೆ ಅಂತ ಕುತೂಹಲ ಇದ್ರೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ