ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ.ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ (Lakshimi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ಗಂಡನಿಗಾಗಿ ಭಾಗ್ಯ ಬದಲಾಗುಲು ಹೊರಟಿದ್ದಾಳೆ. ತಾಂಡವ್ ಮಾತಿನಿಂದ ಆಘಾತಕ್ಕೆ ಒಳಗಾಗಿದ್ದಾಳೆ.
ಮನೆ ಬಿಟ್ಟು ಹೋಗು ಎಂದ ತಾಂಡವ್
ತಾಂಡವ್‍ಗೆ ಮೊದಲಿನಿಂದಲೂ ಭಾಗ್ಯ ಇಷ್ಟ ಇಲ್ಲ. ಅದಕ್ಕೆ ಆಕೆಯನ್ನು ಮನೆ ಬಿಟ್ಟು ಹೋಗು ಎಂದಿದ್ದಾನೆ. ಆ ಮನೆಯಲ್ಲಿ ಒಂದು ನೀನಿರಬೇಕು. ಇಲ್ಲ ನಾನಿರಬೇಕು ಎಂದು ಹೇಳಿದ್ದಾನೆ. ಅಲ್ಲದೇ ಅಲ್ಲೇ ಭಾಗ್ಯಾಳನ್ನು ಬಿಟ್ಟು ಹೋಗಿದ್ದಾನೆ. ಅಲ್ಲದೇ ತಾಂಡವ್ ಮಾತಿನಿಂದ ಭಾಗ್ಯ ಆಘಾತಕ್ಕೊಳಗಾಗಿದ್ದಾಳೆ.
ನೀನೊಂದು ಪೆದ್ದು
ಭಾಗ್ಯಾಗೆ ತಾಂಡವ್ ಬಾಯಿಗೆ ಬಂದಂತೆ ಬೈದಿರುತ್ತಾನೆ. ಭಾಗ್ಯ ನಿನಗೇನೋ ಮದುವೆಯಾದ ತಕ್ಷಣ ಅದೃಷ್ಟದ ಬಾಗಿಲು ತೆರೆಯಿತು. ಆದ್ರೆ ಅವತ್ತೇ ನನಗೆ ದುರಾದೃಷ್ಟ ಶುರುವಾಯ್ತು. ನಿನ್ನನ್ನು ಹೆಂಡ್ತಿ ಎಂದು ಹೇಗೆ ಸ್ವೀಕಾರ ಮಾಡಲಿ ಭಾಗ್ಯ? ನಿನ್ನ ಸೀರೆ ನೋಡು, ನಿನಗೆ ಪ್ರೀತಿ. ಮನೆ ಕೆಲಸದವರು ಸಹ ಈ ರೀತಿ ಸೀರೆ ಉಡಲ್ಲ. ಈ ನಿನ್ನ ಜಡೆ, ನೀನು ಇರುವ ರೀತಿ, ನನಗೆ ಇಷ್ಟ ಆಗುತ್ತಾ ಇಲ್ಲ. ನಿನ್ನ ಜೊತೆ ನಾನು ಇರಲ್ಲ ಎಂದು ಹೇಳ್ತಾನೆ. ಅದಕ್ಕೆ ಭಾಗ್ಯ ಚಿಂತೆಗೊಳಗಾಗಿದ್ದಾಳೆ.
ಬದಲಾಗಲು ಹೊರಟ ಭಾಗ್ಯ
ಮನೆಗೆ ಬಂದ ಭಾಗ್ಯ, ತನ್ನ ರೂಮ್‍ಗೆ ಹೋಗಿ ಸೀರೆಗಳನ್ನು ಹುಡುಕಿದ್ದಾಳೆ. ಒಂದು ಸೀರೆ ಸಹ ಚೆನ್ನಾಗಿಲ್ಲ. ಅದಕ್ಕೆ ನಮ್ಮ ಯಜಮಾನರು ಬೈಯ್ತಾರೆ ಎಂದು ಅಳುತ್ತಾ, ಇದ್ದ ಹಳೇ ಚೂಡಿದಾರ್ ಹಾಕಿಕೊಂಡಿದ್ದಾಳೆ. ಕೂದಲು ಬಿಟ್ಟಿದ್ದಾಳೆ. ಇನ್ಮೇಲೆ ನನ್ನ ಗಂಡನಿಗೆ ಇಷ್ಟ ಆಗುವಂತೆ ಇರಬೇಕು ಎಂದು ರೆಡಿಯಾಗುತ್ತಿದ್ದಾಳೆ.
ಅಳುತ್ತಾ ಕೂತ ಭಾಗ್ಯ
ಭಾಗ್ಯಾಳ ಮನಸ್ಥಿತಿ ಅರಿಯದ ಕುಸುಮಾ ಸೊಸೆಗೆ ಬೈದಿದ್ದಾಳೆ. ನಿನ್ನ ಒಂದು ದಿನ ಬಿಟ್ಟಿದ್ದಕ್ಕೆ ಈ ರೀತಿ ಮಾಡ್ತಾ ಇದೀಯಾ? ಈ ಡ್ರೆಸ್ ಹಾಕೋದು ನನಗೆ ಇಷ್ಟ ಇಲ್ಲ. ನೀನು ಲಕ್ಷಣವಾಗಿ ಸೀರೆ ಉಟ್ಟುಕೊಳ್ಳಬೇಕು. ನಮ್ಮ ಮನೆಯಲ್ಲಿ ಇದೆಲ್ಲಾ ನಡೆಯಲ್ಲ. ಸೀರೆ ಉಟ್ಟುಕೊಂಡು ಬಾ ಎಂದಿದ್ದಾಳೆ. ಭಾಗ್ಯ ಅಳುತ್ತಾ ಕೂತು ಬಿಟ್ಟಿದ್ದಾಳೆ.
ಅತ್ತೆಯ ಬಳಿ ಪ್ರಶ್ನೆ ಮಾಡಿದ ಭಾಗ್ಯ
ಭಾಗ್ಯ ಬೇಸರದಲ್ಲಿದ್ದಾಳೆ ಎಂದು ಕುಸುಮಾಗೆ ಗೊತ್ತಾಗಿ, ಆಕೆಯನ್ನು ಸಮಾಧಾನ ಮಾಡ್ತಾ ಇದ್ದಾಳೆ. ಏನಾಯ್ತು ಹೇಳು ಮಗಳೇ? ಯಾಕ್ ಈ ರೀತಿ ಬೇಸರದಲ್ಲಿದ್ದೀಯಾ ಎಂದು ಕೇಳ್ತಾ ಇದ್ದಾಳೆ. ಅದಕ್ಕೆ ಭಾಗ್ಯ, ಅತ್ತೆ ನಾನು ನಿಮ್ಮ ಮಗನಿಗೆ ಯಾವುದರಲ್ಲೂ ಮ್ಯಾಚ್ ಆಗಲ್ಲ. ಯಾಕ್ ನೀವು ಅವರ ಜೊತೆ ಯಾಕ್ ಮದುವೆ ಮಾಡಿಸಿದ್ರಿ ಎಂದು ಕೇಳ್ತಾ ಇದ್ದಾಳೆ. ಕುಸುಮಾ ಈಗ ಏನಾಯ್ತು ಎಂದು ಕೇಳುತ್ತಿದ್ದಾಳೆ.
ಇದನ್ನೂ ಓದಿ: Kaveri Kannada Medium: ಸ್ಟಾರ್ ಸುವರ್ಣದಲ್ಲಿ ಮತ್ತೊಂದು ಹೊಸ ಧಾರಾವಾಹಿ, ಶೀಘ್ರದಲ್ಲೇ 'ಕಾವೇರಿ ಕನ್ನಡ ಮೀಡಿಯಂ'!
ಭಾಗ್ಯ ತನ್ನ ಮತ್ತು ತಾಂಡವ್ ಮಧ್ಯೆ ಆದ ಗಲಾಟೆ ಹೇಳ್ತಾಳಾ? ಕುಸುಮಾ ಎಲ್ಲವನ್ನೂ ಸರಿ ಮಾಡ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ