ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಭಾಗ್ಯಲಕ್ಷ್ಮಿ (Bhagya Lakshmi) ಧಾರಾವಾಹಿ ಜನರ ಮೆಚ್ಚುಗೆ ಗಳಿದಿದೆ. ಅದರಲ್ಲೂ ಕುಸುಮಾ ಪಾತ್ರ ಜನರಿಗೆ ತುಂಬಾ ಹತ್ತಿರವಾಗಿದೆ. ಈ ಧಾರಾವಾಹಿ (Serial) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಭಾಗ್ಯ, ಮಗಳು ತನ್ವಿಗಾಗಿ ಪ್ರಾಜೆಕ್ಟ್ (Project) ಮಾಡ್ತಾ ಇದ್ದಾಳೆ. ಅದಕ್ಕೆ ಮಾತನಾಡಲು ಕುಸುಮಾ ಬೆಂಬಲ ನೀಡಿದ್ದಾಳೆ.
ತನ್ವಿ ಶಾಲೆಯಲ್ಲಿ ಪ್ರಾಜೆಕ್ಟ್
ತನ್ವಿಗೆ ಮೊದಲಿನಿಂದಲೂ ಅಮ್ಮನನ್ನು ಕಂಡ್ರೆ ಆಗಲ್ಲ. ಅಮ್ಮನಿಗೆ ಓದೋಕೆ, ಬರೆಯೋಕೆ ಬರಲ್ಲ. ಸ್ಟೈಲ್ ಬರಲ್ಲ ಅಂತ ಬೈಯ್ತಾ ಇರ್ತಾಳೆ. ತನ್ವಿಗೆ ತಾಂಡವ್ ಬೆಂಬಲ ನೀಡ್ತಾ ಇದ್ದಾನೆ. ತನ್ವಿ ಶಾಲೆಯಲ್ಲಿ ಈಗ ಪ್ರಾಜೆಕ್ಟ್ ಮಾಡಬೇಕಿದೆ. ಅದು ಅಮ್ಮ-ಮಗಳು ಇರಬೇಕು. ಆದ್ರೆ ತನ್ವಿಗೆ ತನ್ನ ಅಮ್ಮ ಭಾಗ್ಯ ಸ್ಕೂಲ್‍ಗೆ ಬರೋದು ಇಷ್ಟ ಇಲ್ಲ. ಅದಕ್ಕೆ ಬೇಡ ಅಂತಿದ್ದಾಳೆ.
ಶ್ರೇಷ್ಠಾ ಬರಲಿ ಎಂದು ತನ್ವಿ
ತನ್ವಿಗೆ ಸ್ಕೂಲ್‍ನಲ್ಲಿ ಅವಮಾನ ಆಗುತ್ತೆ ಎಂದು ಭಯ ಶುರುವಾಗಿದೆ. ಅದಕ್ಕೆ ಅಮ್ಮನ ಬದಲು ಶ್ರೇಷ್ಠಾ ಅವರನ್ನೇ ಅಮ್ಮನ ರೀತಿ ನಾಟಕ ಮಾಡಲು ಹೇಳಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಅಲ್ಲದೇ ಶ್ರೇಷ್ಠಾಳಿಗೆ ಫೋನ್ ಮಾಡಿ ಬನ್ನಿ ಎಂದು ಕರೆದಿದ್ದಾಳೆ. ಶ್ರೇಷ್ಠಾಳಿಗೂ ಇಷ್ಟ ಇದೆ. ಆದ್ರೆ ಇಲ್ಲ ಎನ್ನುವಂತೆ ನಾಟಕ ಮಾಡ್ತಾ ಇದ್ದಾಳೆ.
ಕನ್ನಡದ ಬಗ್ಗೆ ಕುಸುಮಾ ಪಾಠ
ಭಾಗ್ಯಾಗೆ ಇಂಗ್ಲಿಷ್ ಬರಲ್ಲ ಅಂದ್ರೆ, ಯಾಕ್ ಬಲವಂತ ಮಾಡ್ತೀರಿ? ಇಂಗ್ಲಿಷ್ ಬರಲ್ಲ ಅಂದ್ರೆ ಏನಾಯ್ತು? ನಮ್ಮ ಕನ್ನಡ ಇಲ್ವಾ? ಕನ್ನಡದಲ್ಲೇ ಹೇಳಲಿ. ಕನ್ನಡ ಇರುವಾಗ, ನಮ್ಮ ಸೊಸೆ ಏಕೆ ಕಷ್ಟ ಪಟ್ಟು ಇಂಗ್ಲಿಷ್ ಕಲಿಯಬೇಕು? ಅಮ್ಮ ಮಗಳು ಮಾಡಬೇಕಾದ ಪ್ರಾಜೆಕ್ಟ್ ತಾನೇ, ಅಮ್ಮ ಅಲ್ಲಿ ಇರಲೇಬೇಕು. ನಮ್ಮ ತನ್ವಿ ಸೊಕ್ಕು ಮುರಿಯೋಕಾದ್ರೂ ಭಾಗ್ಯ ಇರಬೇಕು ಎಂದು ಕುಸುಮಾ ಹೇಳಿದ್ದಾಳೆ. ಕನ್ನಡದ ಪಾಠ ಮಾಡಿದ್ದಾಳೆ.
ಮಾವನ ಸಂಪೂರ್ಣ ಬೆಂಬಲ
ಕನ್ನಡದಲ್ಲಿ ಬಾಯಿಪಾಠ ಮಾಡಿ ಹೇಳು ಎಂದು ಮಾವನೇ ಭಾಗ್ಯಳಿಗೆ ಬರೆದು ಕೊಟ್ಟಿದ್ದಾನೆ. ಭಯಪಡಬೇಡ ಮಗಳೇ, ಚೆನ್ನಾಗಿ ಓದಿ ಬಾಯಿಪಾಠ ಮಾಡಿಕೋ ಎಂದು ಹೇಳಿದ್ದಾರೆ. ಅಲ್ಲದೇ ಅವಳು ಈ ಕುಸುಮಾ ಸೊಸೆ. ಅವಳು ಏಕೆ ಭಯಪಡಬೇಕು ಎಂದು ಕುಸುಮಾ ಭಾಗ್ಯಾಗೆ ಬೆಂಬಲವಾಗಿ ನಿಂತಿದ್ದಾಳೆ.
ತನ್ವಿ ಶಾಲೆಗೆ ಹೋಗ್ತಾಳಾ ಭಾಗ್ಯ?
ಭಾಗ್ಯಾ ನನ್ನ ಮಗಳು ಬಂಗಾರಿಗಾಗಿ ನಾನು ಏನು ಬೇಕಾದ್ರು ಮಾಡ್ತಿನಿ. ಅವಳಿಗಾಗಿ ಎಲ್ಲವನ್ನೂ ಕಲಿಯುತ್ತೇನೆ ಎಂದು ಹೇಳಿದ್ದಾಳೆ. ತನ್ವಿಗಾಗಿ ಶಾಲೆಗೆ ಹೋಗ್ತಾಳಾ ನೋಡಬೇಕು. ಇಲ್ಲ ಶ್ರೇಷ್ಠಾಳೇ ಅಮ್ಮ ಎಂದುಕೊಂಡು ಹೋಗ್ತಾಳಾ ಎಂದು ಗೊತ್ತಿಲ್ಲ.
ಇದ್ರೆ ನಿಮ್ಮ ರೀತಿ ಅತ್ತೆ ಇರಬೇಕು
ಕುಸುಮಾ ಭಾಗ್ಯಾಗೆ ಬೆಂಬಲ ನೀಡುವುದು ಜನರಿಗೆ ಇಷ್ಟ ಆಗಿದೆ. ಇದ್ರೆ ನಿಮ್ಮ ರೀತಿ ಅತ್ತೆ ಇರಬೇಕು ಎಂದು ಅಭಿಮಾನಿಗಳು ಹೇಳಿದ್ದಾರೆ. ಕುಸುಮಾ ಪಾತ್ರಕ್ಕೆ ನೀವು ಜೀವ ತುಂಬಿದ್ದೀರಿ. ಚೆನ್ನಾಗಿ ನಟನೆ ಮಾಡ್ತಾ ಇದ್ದೀರಿ. ಅತ್ತೆ ಬಗ್ಗೆ ನಮಗೆ ಇದ್ದ ಕೆಟ್ಟ ಭಾವನೆ ಹೋಗಿದೆ. ನೀವು ಭಾಗ್ಯಾಗೆ ಬೆಂಬಲ ನೀಡುವುದು ನಮಗೆ ಮೆಚ್ಚುಗೆ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ: Udho Udho Renuka Yallamma: ಉಧೋ ಉಧೋ ಶ್ರೀರೇಣುಕಾ ಯಲ್ಲಮ್ಮ ಸೀರಿಯಲ್‍ಗೆ 100 ರ ಸಂಭ್ರಮ, ದೇವಿಗೆ ಪೂಜೆ ಸಲ್ಲಿಕೆ
ಭಾಗ್ಯಾ ಎಲ್ಲ ಕಲಿತು ಯಶಸ್ವಿಯಾಗ್ತಾಳಾ? ಮಗಳಿಗಾಗಿ ಬದಲಾಗ್ತಾಳಾ? ಮುಂದೇನಾಗುತ್ತೆ ಎಂದು ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ