ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‌ಗೆ ಲಕ್ಷ್ಮಿಯನ್ನು ಮದುವೆ (Marriage) ಮಾಡಬೇಕು ಎನ್ನುವ ಮಾತುಕತೆ ನಡೆಯುತ್ತಿದೆ. ಅದನ್ನು ಭಾಗ್ಯ ತಡೆದಿದ್ದಾಳೆ.
ವೈಷ್ಣವ್ ಜೊತೆ ಲಕ್ಷ್ಮಿ ಮದುವೆ?
ವೈಷ್ಣವ್‍ಗೆ ಲಕ್ಷ್ಮಿ ಜೊತೆ ಮದುವೆ ಮಾಡಬೇಕು ಎಂದು ಕುಸುಮಾ, ಕಾವೇರಿ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಅದಕ್ಕೆ ಹೆಣ್ಣು ನೋಡಲು ಲಕ್ಷ್ಮಿ ಮನೆಗೆ ಬಂದಿದ್ದಾರೆ. ಇಬ್ಬರಿಗೂ ಲಕ್ಷ್ಮಿ ಇಷ್ಟ ಆಗಿದ್ದಾಳೆ. ನಮ್ಮ ಮನೆಗೆ ತಕ್ಕ ಸೊಸೆ. ಎಲ್ಲವೂ ನಿಭಾಯಿಸಿಕೊಂಡು ಹೋಗುತ್ತಾಳೆ. ಮನೆಯನ್ನೂ ಚೆನ್ನಾಗಿ ನೋಡಿಕೊಳ್ತಾಳೆ ಎಂದು ಖುಷಿ ಆಗಿದ್ದಾರೆ.
ಲಕ್ಷ್ಮಿ ನೋಡಲು ವೈಷ್ಣವ್ ಬಂದಿಲ್ಲ
ಕೀರ್ತಿ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡ ವೈಷ್ಣವ್ , ಬೇರೆ ಹುಡುಗಿ ಜೊತೆ ಮದುವೆ ಆಗುವುದಾಗಿ ಹೇಳಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿಯನ್ನು ನೋಡಲು ಹೋಗಿದ್ದಳು. ಆದ್ರೆ ಈಗ ವೈಷ್ಣವ್ ಹೆಣ್ಣು ನೋಡಲು ಬಂದಿಲ್ಲ. ನಾಣು ಬರಲ್ಲ. ನಾನು ಬೇಸರದಲ್ಲಿ ಬೇರೆ ಮದುವೆ ಆಗ್ತೀನಿ ಎಂದು ಬಿಟ್ಟೆ ಎಂದು ಹೇಳಿದ್ದಾನೆ. ಅದನ್ನು ಕೇಳಿ ಕಾವೇರಿ ಗಾಬರಿ ಆಗಿದ್ದಾಳೆ.
ತಾಂಬೂಲ ಬದಲಾಯಿಸಿಕೊಳ್ಳಲು ಕುಸುಮಾ ಒತ್ತಾಯ
ಲಕ್ಷ್ಮಿಯನ್ನು ನೋಡಿ ಮುಗಿಸಿದ ಮೇಲೆ ಕುಸುಮಾ ತಾಂಬೂಲ ಬದಲಾಯಿಸಿಕೊಳ್ಳೋಣ ಎಂದು ಹೇಳುತ್ತಿದ್ದಾಳೆ. ಆದ್ರೆ ಭಾಗ್ಯ ವೈಷ್ಣವ್ ಬರಲಿ ಎಂದು ಹೇಳುತ್ತಿದ್ದಾಳೆ. ಅದಕ್ಕೆ ಅತ್ತೆ ಕುಸುಮಾ ನಾವು ಒಪ್ಪಿದ್ರೆ ಮುಗೀತು, ಅವನ ಒಪ್ಪಿಗೆ ಬೇಕಿಲ್ಲ. ನಾವು ಹೇಳಿದ ಹಾಗೆ ಅವನು ಕೇಳ್ತಾನೆ ಎಂದು ಹೇಳಿದ್ದಾಳೆ.
ಹಳೆಯದನ್ನು ನೆನೆಪು ಮಾಡಿಕೊಂಡ ಭಾಗ್ಯ
ಭಾಗ್ಯ ಮದುವೆ ಸಂದರ್ಭದಲ್ಲೂ ಹೀಗೆ ಆಗಿತ್ತು. ತಾಂಡವ್ ಬರದೇ ಕುಸುಮಾ ಮದುವೆ ನಿಶ್ಚಯ ಮಾಡಿದ್ದಳು. ಭಾಗ್ಯ ಸಹ ಸಂತೋಷದಿಂದ ಮದುವೆ ಆಗಿದ್ದಳು. ಆದ್ರೆ ತಾಂಡವ್ ಭಾಗ್ಯಳನ್ನು ಒಪ್ಪಿರಲಿಲ್ಲ. ನೀನು ನಮ್ಮ ಅಮ್ಮ ಮೆಚ್ಚಿದ ಸೊಸೆ ಮಾತ್ರ. ನಾನು ಮೆಚ್ಚಿದ ಹೆಂಡ್ತಿ ಅಲ್ಲ ಎಂದು ಹೇಳಿದ್ದ. ಅಲ್ಲದೇ ಮದುವೆ ಆಗಿ 15 ವರ್ಷ ಆದ್ರೂ ಪ್ರೀತಿ ಸಹ ಮಾಡಲ್ಲ.
ತಾಂಬೂಲ ಶಾಸ್ತ್ರ ನಿಲ್ಲಿಸಿದ ಭಾಗ್ಯ
ಕುಸುಮಾ ತಾಂಬೂಲ ಶಾಸ್ತ್ರ ಮಾಡಲು ತಯಾರಿ ನಡೆಸಿದ್ದಾಳೆ. ಆದ್ರೆ ಭಾಗ್ಯ ಅದನ್ನು ನಿಲ್ಲಿಸಿದ್ದಾಳೆ. ನನಗೆ ಆದ ರೀತಿ ನನ್ನ ತಂಗಿಗೆ ಆಗಬಾರದು. ವೈಷ್ಣವ್ ಇಲ್ಲಿಗೆ ಬರಬೇಕು. ಆಗ ನಾನು ಈ ಶಾಸ್ತ್ರಕ್ಕೆಲ್ಲಾ ಒಪ್ಪುತ್ತೇನೆ. ಇಲ್ಲ ಅಂದ್ರೆ ವೈಷ್ಣವ್‍ಗೆ ಈ ಮದುವೆ ಇಷ್ಟ ಇಲ್ಲ ಎಂದು ತಿಳಿದುಕೊಳ್ತೇನೆ ಎಂದಿದ್ದಾಳೆ.
ಇದನ್ನೂ ಓದಿ: Rashmika Mandanna: 'ಮಿಷನ್ ಮಜ್ನು' ಖುಷಿಯಲ್ಲಿ ರಶ್ಮಿಕಾ ಮಂದಣ್ಣ, ವಿಭಿನ್ನವಾಗಿ ಫೋಟೋಗೆ ಪೋಸ್!
ಭಾಗ್ಯ ಯಾರಿಗೆ ಎಷ್ಟೇ ಭಯ ಪಡಬಹುದು. ಆದ್ರೆ ತಂಗಿ ವಿಷ್ಯ ಬಂದ್ರೆ ಭಾಗ್ಯ ಯಾರನ್ನೂ ಕೇರ್ ಮಾಡಲ್ಲ. ತನ್ನ ತಂಗಿ ಜೀವನ ಹಾಳಾಗಲು ಬಿಡಲ್ಲ. ವೈಷ್ಣವ್ ಈ ಮದುವೆಗೆ ಒಪ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ