ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ (Anchor) ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಭಾಗ್ಯ ಗಂಡ ತಾಂಡವ್. ತಾಂಡವ್‍ಗೆ ಭಾಗ್ಯ ಕಂಡ್ರೆ ಇಷ್ಟ ಇಲ್ಲ. ಅಮ್ಮನ ಬಲವಂತಕ್ಕೆ ಮದುವೆಯಾಗಿರುತ್ತಾನೆ. ಹೆಂಡ್ತಿಗೆ ಒಂದು ಸ್ವಲ್ಪವೂ ಗೌರವ ಕೊಡಲ್ಲ. ನೋಡಿದ್ರೆ, ತಾಂಡವ್ ಆಫೀಸ್‍ನಲ್ಲಿ (Office) ಭಾಗ್ಯಗೆ ಬ್ಯಾಕ್‍ಬೋನ್ ಪ್ರಶಸ್ತಿ ಲಭಿಸಿದೆ.
ತಾಂಡವ್‍ಗೆ ಅವಾರ್ಡ್
ತಾಂಡವ್ ಆಫೀಸ್‍ನಲ್ಲಿ ಕಟ್ಟು ನಿಟ್ಟಿನ ಕೆಲಸಗಾರ. ಒಂದು ದಿನವೂ ತಪ್ಪಿಸಿದೇ ಆಫೀಸ್‍ಗೆ ಹಾಜರಾಗುತ್ತಾನೆ. ಕಷ್ಟ ಪಟ್ಟು ಕೆಲಸ ಮಾಡ್ತಾನೆ. ಅದಕ್ಕೆ ತಾಂಡವ್‍ಗೆ ಉತ್ತಮ ಉದ್ಯೋಗಿ ಪ್ರಶಸ್ತಿ ಸಿಕ್ಕಿದೆ. ಅದನ್ನು ಪಡೆದು ತಾಂಡವ್ ತುಂಬಾ ಖುಷಿಯಾಗಿದ್ದಾನೆ. ತನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದು ಮನಸ್ಸಿನಲ್ಲಿ ಹೇಳಿಕೊಂಡಿದ್ದಾನೆ.
ಭಾಗ್ಯಗೆ ಬ್ಯಾಕ್‍ಬೋನ್ ಅವಾರ್ಡ್
ತಾಂಡವ್ ಇಷ್ಟೆಲ್ಲಾ ಅವಾರ್ಡ್ ಪಡೆಯೋಕೆ ಅವನ ಹಿಂದೆ ಯಾರಾದ್ರೂ ಇರಬೇಕು ಅಲ್ವಾ. ಈ ಬಾರಿ ಬ್ಯಾಕ್ ಬೋನ್ ಅವಾರ್ಡ್ ಕೊಡ್ತಾ ಇದೀವಿ ಎಂದು ಆಫೀಸ್‍ನಲ್ಲಿ ಹೇಳ್ತಾರೆ. ಆ ಅವಾರ್ಡ್ ಶ್ರೇಷ್ಠಾಗೆ ಸಿಗಬಹುದು ಎಂದು ತಾಂಡವ್ ಎಂದುಕೊಂಡಿದ್ದ. ಶ್ರೇಷ್ಠಾ ಸಹ ಅದೇ ರೀತಿ ಅಂದುಕೊಂಡಿದ್ದಳು. ಆದ್ರೆ ಆ ಅವಾರ್ಡ್ ಭಾಗ್ಯನಿಗೆ ಸೇರಿದೆ. ತಾಂಡವ್ ಭ್ಯಾಗ ಹೆಸರು ಅನೌನ್ಸ್ ಮಾಡಿದ್ದಾನೆ.
ಭಾಗ್ಯಳಿಗೆ ಸನ್ಮಾನ
ತಾಂಡವ್ ತನ್ನ ಹೆಂಡ್ತಿಯನ್ನು ತಾನೇ ಸ್ಟೇಜ್‍ಗೆ ಕರೆದುಕೊಂಡು ಹೋಗಿದ್ದು, ಭಾಗ್ಯಳಿಗೆ ಸನ್ಮಾನ ಮಾಡಿದ್ದಾನೆ. ಒಳಗೊಳಗೆ ಕುದಿಯುತ್ತಿದ್ದಾನೆ. ಮನೆಯಲ್ಲಿ ಬಾಯಿಗೆ ಬಂದಂತೆ ಬೈಯ್ತಾನೆ. ಈಗ ನೋಡಿದ್ರೆ ಅವನ ಕಣ್ಮುಂದೆಯೇ ಭಾಗ್ಯಗೆ ಸನ್ಮಾನ ನಡೆಯುತ್ತಿದೆ. ಇಷ್ಟ ಇಲ್ಲ ಅಂದ್ರೂ ಎಲ್ಲವನ್ನೂ ಸಹಿಸಿಕೊಂಡು ತಾಂಡವ್ ಇದ್ದಾನೆ.
ಶ್ರೇಷ್ಠಾಗೆ ಅವಮಾನ
ಬ್ಯಾಕ್ ಬೋನ್ ಅವಾರ್ಡ್ ಶ್ರೇಷ್ಠಾಗೆ ಬರುತ್ತೆ ಎಂದು ಎಲ್ಲಾ ಅಂದುಕೊಂಡಿದ್ರು. ಆಫೀಸ್‍ನಲ್ಲಿ ತಾಂಡವ್ ಎಲ್ಲಾ ಕೆಲಸಕ್ಕೆ ಶ್ರೇಷ್ಠಾ ಸಹಾಯ ಮಾಡ್ತಾಳೆ. ಹೆಲ್ಪ್ ಮಾಡ್ತಾಳೆ. ಅದಕ್ಕೆ ಅವಾರ್ಡ್ ಬರುತ್ತೆ ಎಂದುಕೊಂಡಿದ್ರು. ಆದ್ರೆ ತಾಂಡವ್ ಸರಿಯಾದ ಸಮಯಕ್ಕೆ ಆಫೀಸ್‍ಗೆ ಬರೋದಿಕ್ಕೆ, ಆರೋಗ್ಯ ಚೆನ್ನಾಗಿ ಇಟ್ಟುಕೊಂಡು ಹುಷಾರಿಲ್ಲ ಅಂತ ರಜೆ ಕೇಳದೆ ಇರೋದಿಕ್ಕೂ ಭಾಗ್ಯ ಕಾರಣ ಅಂತ ಸಂಸ್ಥೆಯ ವೀಣಾ ಕೃಷ್ಣಮೂರ್ತಿ ಹೇಳಿ, ಭಾಗ್ಯಾಗೆ ಅವಾರ್ಡ್ ಕೊಟ್ಟಿದ್ದಾರೆ.
ಜಡ್ಜ್ ಆಗಿ ಬಂದಿದ್ದ ಭಾಗ್ಯ
ತಾಂಡವ್ ಆಫೀಸ್‍ನಲ್ಲಿ ಕುಕ್ಕಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದನ್ನು ಜಡ್ಜ್ ಮಾಡಲು ಭಾಗ್ಯಳನ್ನು ಮುಖ್ತ ಅತಿಥಿಯಾಗಿ ಕರೆಯಲಾಗಿತ್ತು. ಭಾಗ್ಯ ಎಲ್ಲರ ಅಡುಗೆ ನೋಡಿ, ಅದಕ್ಕೆ ತಕ್ಕಂತೆ ತೀರ್ಪು ನೀಡ್ತಾಳೆ. ಆ ಸ್ಪರ್ಧೆಯಲ್ಲಿ ಶ್ರೇಷ್ಠಾ ಸಹ ಭಾಗವಹಿಸಿರುತ್ತಾಳೆ. ಆಕೆಗೆ ಪ್ರಶಸ್ತಿ ಲಭಿಸಲಿಲ್ಲ. ಅದಕ್ಕೆ ಬೇಸರ ಮಾಡಿಕೊಂಡಿದ್ದಳು.
ಇದನ್ನೂ ಓದಿ: Anchor Anushree: ಖುಷಿ ಮೂಡ್ನಲ್ಲಿ ಆ್ಯಂಕರ್ ಅನುಶ್ರೀ, ಬಿಟ್ಟ ಸ್ಥಳ ತುಂಬಿ ಎಂದ ನಿರೂಪಕಿ!
ಮನೆಯಲ್ಲಿ ಅವಮಾನ, ಆಫೀಸ್‍ನಲ್ಲಿ ಸನ್ಮಾನ, ಭಾಗ್ಯ ಸ್ಥಾನಕ್ಕೆ ಶ್ರೇಷ್ಠಾ ಹೋಗಲು ಸಾಧ್ಯವಿಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಭಾಗ್ಯ ಪಾತ್ರಕ್ಕೆ ಸುಷ್ಮಾ ರಾವ್, ತಾಂಡವ್ ಪಾತ್ರಕ್ಕೆ ಸುದರ್ಶನ್ ರಂಗಪ್ರಸಾದ್, ಕುಸುಮಾ ಪಾತ್ರಕ್ಕೆ ಪದ್ಮಜಾ ರಾವ್, ಶ್ರೇಷ್ಠ ಪಾತ್ರಕ್ಕೆ ಕಾವ್ಯ ಗೌಡ ಅವರು ಜೀವ ತುಂಬುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ