ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಆದ್ರೆ ಕನ್ನಡತಿ ಧಾರಾವಾಹಿ ಮುಗಿದ ಕಾರಣ 7 ರಿಂದ 8 ಗಂಟೆವರಗೆ ಭಾಗ್ಯದ ಲಕ್ಷ್ಮಿ ಬಾರಮ್ಮ ಆಗಿ ಪ್ರಸಾರವಾಗ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಮತ್ತು ಲಕ್ಷ್ಮಿ ಮದುವೆ (Marriage) ಸಿಂಪಲ್ (Simple) ಆಗಿ ನಡೆಯಲಿದೆ.
ಲಕ್ಷ್ಮಿ ಜೊತೆ ನಿಶ್ಚಿತಾರ್ಥ
ವೈಷ್ಣವ್ ಈ ಧಾರಾವಾಹಿಯಲ್ಲಿ ದೊಡ್ಡ ಸಿಂಗರ್ ಆಗಿದ್ದು, ಕೀರ್ತಿ ಎನ್ನುವ ಹುಡುಗಿಯನ್ನು ಪ್ರೀತಿ ಮಾಡ್ತಾ ಇರ್ತಾನೆ. ಆದ್ರೆ ಈಗ ಕೀರ್ತಿ ನೀನು ಬೇಡ ಎಂದಿದ್ದಾಳೆ. ಕೀರ್ತಿಗೆ ಹೊಟ್ಟೆ ಉರಿಸಲು ಲಕ್ಷ್ಮಿ ಜೊತೆ ಮದುವೆ ಆಗ್ತೀನಿ ಎಂದಿದ್ದಾನೆ.ಲಕ್ಷ್ಮಿಗೆ ವೈಷ್ಣವ್ ಪತ್ರ ಬರೆದಿರುತ್ತಾನೆ. ಕೀರ್ತಿ ಹೊಟ್ಟೆ ಉರಿಸಲು ನಾಟಕ ಮಾಡೋಣ ಅಂತ.
ಆದ್ರೆ ಕಾವೇರಿ ಅದನ್ನು ಬದಲಾಯಿಸಿರುತ್ತಾಳೆ. ಈ ವಿಷ್ಯ ವೈಷ್ಣವ್‍ಗೆ ಗೊತ್ತಿಲ್ಲ. ಲಕ್ಷ್ಮಿ ನಾಟಕಕ್ಕೆ ಒಪ್ಪಿದ್ದಾಳೆ ಎಂದುಕೊಂಡಿದ್ದಾನೆ. ಇಬ್ಬರ ನಿಶ್ಚಿತಾರ್ಥ ಆಗಿದೆ.ಭಾಗ್ಯ ತನ್ನ ತಂಗಿಗೆ ವೈಷ್ಣವ್ ನಂತ ಒಳ್ಳೆಯ ಹುಡುಗ ಸಿಕ್ಕ ಎಂದು ಖುಷಿಯಲ್ಲಿದ್ದಾಳೆ. ತಂಗಿ ಜೀವನ ಸುಖವಾಗಿರಬೇಕು ಎಂದು ದೇವರಲ್ಲಿ ಬೇಡಿಕೊಳ್ತಾ ಇದ್ದಾಳೆ.
ನಾನು ಹರಕೆ ಹೊತ್ತಿದ್ದೇನೆ
ನಾನು ಲಡ್ಡುಗೆ ಗಂಡು ಹುಡುಕೋಕೆ ಶುರು ಮಾಡಿದ್ದು ಈಗ ಅಲ್ಲ. ಎಷ್ಟೇ ಸಂಬಂಧ ಬಂದ್ರೂ ಒಂದು ಸರಿ ಹೋಗ್ತಾ ಇರಲಿಲ್ಲ. ಒಂದಲ್ಲ ಒಂದು ಸಮಸ್ಯೆ ಆಗಿ ಸಂಬಂಧಗಳು ಮುರಿದು ಹೋಗ್ತಿತ್ತು. ಅದಕ್ಕೆ ನಮ್ಮ ಕುಲದೇವರನ್ನು ನೆನೆಸಿಕೊಂಡು, ವರ್ಷದೊಳಗೆ ಆಕೆಗೆ ಮದುವೆ ಆದ್ರೆ, ಕುಲದೇವರ ಸನ್ನಿಧಿಯಲ್ಲಿ ಮದುವೆ ಮಾಡ್ತೇನೆ ಎಂದು ಹರಕೆ ಹೊತ್ತಿದ್ದೇನೆ ಎಂದು ಭಾಗ್ಯ ಕಾವೇರಿಗೆ ಹೇಳ್ತಾ ಇದ್ದಾಳೆ.
ಕಾವೇರಿಗೆ ಅಸಮಾಧಾನ
ಲಕ್ಷ್ಮಿ ವೈಷ್ಣವ್ ಮದುವೆನಾ ಕುಲದೇವರ ಸನ್ನಿಧಿಯಲ್ಲಿ ಮಾಡೋದಾ? ನನ್ನ ಮಗನ ಮದುವೆಯನ್ನು ಅಲ್ಲೇಲ್ಲೋ ಅಷ್ಟು ಸಿಂಪಲ್ ಆಗಿ ಮಾಡೋಕೆ ಆಗಲ್ಲ ಭಾಗ್ಯ. ಅಷ್ಟು ದೊಡ್ಡ ಸಿಂಗರ್, ಸಿಂಪಲ್ ಆಗಿ ಮದುವೆ ಆದ್ರೆ ದೊಡ್ಡು ಸುದ್ದಿ ಆಗುತ್ತೆ. ಒಬ್ಬಬ್ಬರು ಒಂದೊಂದು ಮಾತನಾಡ್ತಾರೆ ಎಂದು ಕಾವೇರಿ ಹೇಳ್ತಾಳೆ. ಅದಕ್ಕೆ ಭಾಗ್ಯ ಹೌದು ಅತ್ತೆ, ಆದ್ರೆ ಹರಕೆ ಮುರಿಯೋಕೆ ಆಗಲ್ಲ ಅಲ್ವಾ ಎಂದು ಹೇಳ್ತಾಳೆ.
ದೇವರ ಸನ್ನಿಧಿಯಲ್ಲಿ ಮದುವೆ
ನಾವು ಅಂದುಕೊಳ್ಳೋದೆ ಒಂದು, ಆ ದೇವರ ಇಚ್ಛೆ ಬೇರೆ ಇರುತ್ತೆ. ದೇವರ ಸನ್ನಿಧಿಯಲ್ಲೇ ಮದುವೆ ಆಗೋದು ಒಳ್ಳೆಯದು. ಅದಕ್ಕಿಂತ ಶ್ರೇಯಸ್ಸು ಬೇರೆ ಯಾವುದು ಇಲ್ಲ ಎಂದು ಕಾವೇರಿ ಗಂಡ ಕೃಷ್ಣ ಹೇಳ್ತಾನೆ. ಬೆಂಗಳೂರಲ್ಲಿ ಅದ್ಧೂರಿಯಾಗಿ ಆರತಕ್ಷತೆ ಮಾಡೋಣ ಎಂದು ಹೇಳ್ತಾರೆ. ಎಲ್ಲರೂ ಹೇಳಿದ ಮೇಲೆ ಕಾವೇರಿ ಸರಿ ನೀವು ಎಲ್ಲಾ ಹೇಳಿದ ಮೇಲೆ ಆಯ್ತು ಎನ್ನುತ್ತಾಳೆ.
ತಾಂಡವ್‍ಗೆ ಅವಮಾನ
ಸಿಂಪಲ್ ಮದುವೆ ಎಂದಾಕ್ಷಣ ವೈಷ್ಣವ್ ಅತ್ತೆ ಸುಪ್ರಿತಾ, ತಾಂಡವ್ ದುಡ್ಡು ಉಳಿಸಿಬಿಟ್ರಿ ಬಿಡಿ, ದೇವರ ಹೆಸರಲ್ಲಿ ಎಂದು ವ್ಯಂಗ್ಯವಾಡ್ತಾಳೆ. ಅದಕ್ಕೆ ತಾಂಡವ್ ಇದು ನಾನು ಹೇಳಿಲ್ಲ ಎಂದು ಭಾಗ್ಯ ಮೇಲೆ ಕೋಪ ಮಾಡಿಕೊಳ್ತಾನೆ.
ಇದನ್ನೂ ಓದಿ: Ramachari: ಗೂಂಡಾಗೆ ದಿಟ್ಟ ಉತ್ತರ ಕೊಟ್ಟ ಚಾರು, ಸ್ವಯಂ ರಕ್ಷಣೆ ಮಾಡಿಕೊಂಡ ರಾಮಾಚಾರಿ ಬೆಡಗಿ!
ದೇವರ ಸನ್ನಿಧಿಯಲ್ಲಿ ವೈಷ್ಣವ್-ಲಕ್ಷ್ಮಿ ಮದುವೆ ಆಗುತ್ತಾ? ಇದಕ್ಕೆ ವೈಷ್ಣವ್ ಒಪ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ