ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಸಂಜೆ 7.30ಕ್ಕೆ ಲಕ್ಷ್ಮಿ ಬಾರಮ್ಮ(Lakshmi Baramma) ಧಾರಾವಾಹಿ ಪ್ರಸಾರವಾಗ್ತಿದೆ. ಒಂದೇ ಧಾರಾವಾಹಿ 2 ಭಾಗವಾಗಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ಕೊನೆಗೂ ಲಕ್ಷ್ಮಿ ವೈಷ್ಣವ್ ಜೊತೆ ಮದುವೆ (Marriage) ಆಗಿದೆ. ಆದ್ರೆ ಇಬ್ಬರಿಗೂ ಮದುವೆ ಇಷ್ಟ ಇಲ್ಲ. ಆದ್ರೂ ಹೊಂದಿಕೊಂಡು ಬಾಳೋಣ ಎಂದು ಇಬ್ಬರು ಮಾನತಾಡುತ್ತಿದ್ದಾರೆ. ಈ ಮಧ್ಯೆ ಕೀರ್ತಿ ಬಂದು, ವೈಷ್ಣವ್ ನೀನು ಇಷ್ಟ ಎನ್ನುತ್ತಿದ್ದಾಳೆ.
ಹೊಂದಿಕೊಂಡು ಹೋಗೋಣ
ಕ್ಷಮಿಸಿ, ನಿಮಗೆ ನನ್ನಿಂದ ತೊಂದ್ರೆ ಆಗ್ತಿದೆ ಎಂದು ವೈಷ್ಣವ್ ಹೇಳ್ತಾನೆ. ಅದಕ್ಕೆ ಲಕ್ಷ್ಮಿ, ನಾವು ಒಂದು ಸತ್ಯ ಅರಿತುಕೊಳ್ಳಬೇಕು. ಯಾರಿಂದ ಯಾರಿಗೂ ತೊಂದ್ರೆ ಆಗ್ತಿಲ್ಲ. ನನಗೆ ನೀವು, ನಿಮಗೆ ನಾನು ತೊಂದ್ರೆ ಅಲ್ಲ. ಬದಲಾಗಿ ನಿಮ್ಮ ಸಮಸ್ಯೆಗೆ ನಾನು, ನನ್ನ ಸಮಸ್ಯೆಗೆ ನೀವು ಪರಿಹಾರವಾಗಿ ಸಿಕ್ಕಿದ್ದೇವೆ ಎಂದುಕೊಳ್ಳೋಣ. ಕೂತರು, ನಿಂತರೂ ಕ್ಷಮೆ ಕೇಳ್ಕೊಂಡು, ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥ ಇಲ್ಲ ಎಂದು ಲಕ್ಷ್ಮಿ ಹೇಳಿದ್ದಾಳೆ.ಇಬ್ಬರು ಅರಿತುಕೊಂಡು ಬಾಳೋಣ ಎಂದಿದ್ದಾಳೆ.
ಮೊದಲ ರಾತ್ರಿಯಲ್ಲೇ ಕಣ್ಣೀರು
ಲಕ್ಷ್ಮಿ-ವೈಷ್ಣವ್ ಮೊದಲ ರಾತ್ರಿಗೆ ಸುಪ್ರಿತಾ ರೆಡಿ ಮಾಡಿದ್ದಾಳೆ. ಅದನ್ನು ನೋಡಿ ವೈಷ್ಣವ್‍ಗೆ ಬೇಸರವಾಗುತ್ತೆ. ಯಾಕಂದ್ರೆ ಅದು ಎಲ್ಲಾ ಕೀರ್ತಿಗೆ ಇಷ್ಟ ಆಗೋ ರೀತಿ ರೆಡಿ ಮಾಡಿದ್ದಳು. ಅದಕ್ಕೆ ವೈಷ್ಣವ್ ಕೋಪ ಮಾಡಿಕೊಂಡು ಸುಪ್ರಿತಾಗೆ ಬೈಯುತ್ತಾನೆ. ನಂತರ ರೂಮ್‍ನಿಂದ ಆಚೆ ಹೋಗುತ್ತಾನೆ. ತಾನು-ಕೀರ್ತಿ ಭೇಟಿಯಾಗುತ್ತಿದ್ದ ಸ್ಥಳಕ್ಕೆ ಬರುತ್ತಾನೆ.
ನಿನ್ನ ಪ್ರೀತಿ ಮಾಡ್ತೇನೆ ವೈಶ್
ವೈಷ್ಣವ್ ಬರೋಕು ಮುಂಚೆ ಅಲ್ಲಿಗೆ ಕೀರ್ತಿ ಬಂದಿದ್ದಾಳೆ. ಅವನಿಗಾಗಿ ಐಸ್ ಕ್ರೀಂ ತಂದಿಟ್ಟಿದ್ದಾಳೆ. ಅದನ್ನು ನೋಡಿ ವೈಷ್ಣವ್ ಶಾಕ್ ಆಗ್ತಾನೆ. ಅದಕ್ಕೆ ಕೀರ್ತಿ ಏನೂ ಬೇಸರ ಮಾಡಿಕೊಳ್ಳಬೇಕು. ನಿನ್ನ ಜೊತೆ ನಾನು ಇರ್ತೇನೆ. ನಿನ್ನ ಮೊದಲಿನ ರೀತಿ ಪ್ರೀತಿ ಮಾಡ್ತೇನೆ ಎಂದು ಹೇಳ್ತಾಳೆ. ಅದನ್ನು ಕೇಳಿ ವೈಷ್ಣವ್‍ಗೆ ಶಾಕ್ ಆಗಿದೆ. ಯಾಕ್ ಈ ರೀತಿ ಮಾತಾಡ್ತಾ ಇದ್ದಾಳೆ ಎಂದು ವೈಷ್ಣವ್ ಗೊಂದಲದಲ್ಲಿದ್ದಾನೆ.
ವೈಷ್ಣವ್‍ಗೆ ಹೆಚ್ಚಾದ ಚಿಂತೆ
ಮದುವೆಗೂ ಮುಂಚೆ, ಕಾಲಿಡಿದು ಬೇಡಿಕೊಂಡ್ರೂ ಕೇಳಲಿಲ್ಲ. ಈಗ ಬಂದು ಪ್ರೀತಿ ಮಾಡ್ತೇನೆ ಅಂತಾಳೆ. ಇವಳ ತಲೆಯಲ್ಲಿ ಏನ್ ಓಡ್ತಿದೆ ಅಂತಾನೇ ಗೊತ್ತಾಗುತ್ತಿಲ್ಲ. ಯಾಕ್ ಈ ರೀತಿ ಮಾಡ್ತಾ ಇದ್ದಾಳೆ ಎಂದು ತೆಲೆಕಡೆಸಿಕೊಂಡು ಮಲಗಿದ್ದಾನೆ. ಏನೂ ಅರ್ಥವಾಗದೇ ಒದ್ದಾಡುತ್ತಿದ್ದಾನೆ. ಹೇಗಾದ್ರೂ ಆಕೆಯನ್ನು ದೂರ ಇಡಬೇಕು ಎಂದುಕೊಳ್ತಾ ಇದ್ದಾನೆ.
ಎಲ್ಲಾ ಕಾವೇರಿ ಕೈವಾಡ
ಈ ಎಲ್ಲಾ ನಾಟಕದ ಹಿಂದೆ ವೈಷ್ಣವ್ ಅಮ್ಮ ಕಾವೇರಿ ಕೈವಾಡಿದೆ. ತನಗೆ ಲಕ್ಷ್ಮಿಯೇ ಸೊಸೆಯಾಗಿ ಬರಬೇಕು ಎಂದು, ಜಾತಕದ ನಾಟಕವಾಡಿದ್ದಳು. ಜಾತಕ ತೆಗೆದುಕೊಂಡು ಹೋಗಿ, ಕೀರ್ತಿಗೆ ತೋರಿಸಿ, ಜಾತಕದಲ್ಲಿ ದೋಷ ಇದೆ. ನೀನು, ಅವನು ಮದುವೆ ಆದ್ರೆ ನನ್ನ ಮಗ ಸಾಯ್ತಾನೆ ಎಂದು ನಾಟಕವಾಡಿದ್ದಳು. ಅದಕ್ಕೆ ಕೀರ್ತಿ ವೈಷ್ಣವ್ ನನ್ನು ಲಕ್ಷ್ಮಿ ಜೊತೆ ಮದುವೆ ಆಗಲು ಬಿಟ್ಟಿದ್ದಳು.
ಇದನ್ನೂ ಓದಿ: Ramachari: ಹಾವಿನ ನೆಪ ಹೇಳಿ ಚಾರುಳನ್ನು ಮನೆಯಿಂದ ಆಚೆ ಕಳಿಸಿದ ರಾಮಾಚಾರಿ, ಪರ್ಸ್ ಬಿಚ್ಚಿಡುತ್ತಾ ಸತ್ಯ?
ವೈಷ್ಣವ್‍ಗೆ ಕೀರ್ತಿ ಡ್ರಾಮಾ ಅರ್ಥ ಆಗುತ್ತಾ? ಅಮ್ಮ ಕಾವೇರಿ ಮಾಡಿದ ನಾಟಕ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ