ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ . ಅಕ್ಕ-ತಂಗಿಯರ (Sisters) ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್ ಜೊತೆ ಲಕ್ಷ್ಮಿ ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಇದೇ ಸಮಯದಲ್ಲಿ ಭಾಗ್ಯ ತಂಗಿ ಪೂಜಾ ದುಡ್ಡು (Money) ಕದ್ದಿದ್ದಾಳೆ. ಇದರಿಂದ ಭಾಗ್ಯ ಕಣ್ಣೀರಿಡುತ್ತಿದ್ದಾಳೆ.
ಭಾಗ್ಯ ಇಟ್ಟಿದ್ದ ದುಡ್ಡು ಕದ್ದ ಪೂಜಾ
ಭಾಗ್ಯ ಯಾರ ಸಹಾಯವೂ ಬೇಡ ಎಂದು ಸ್ವಾಭಿಮಾನದಿಂದ ಮದುವೆ ಮಾಡುತ್ತಿದ್ದಳು. ಅದಕ್ಕೆ ಅವರಪ್ಪ ಸ್ಪಲ್ಪ ಹಣ ಕೊಟ್ಟಿದ್ದರು. ಅದರಲ್ಲೇ ಮದುವೆ ಕರ್ಚು ನೋಡಿಕೊಳ್ತಾ ಇದ್ಲು. ಆ ದುಡ್ಡನ್ನು ಕಪಾಟಿನಲ್ಲಿ ಇಟ್ಟು, ಹೋಗಿದ್ದಳು. ಆಗ ಭಾಗ್ಯ ಸ್ವಂತ ತಂಗಿ ಪೂಜಾ ಆ ದುಡ್ಡನ್ನು ಕದ್ದಿದ್ದಾಳೆ. ಮದುವೆ ನಿಲ್ಲಬೇಕು ಎಂದು ಈ ರೀತಿ ಮಾಡ್ತಾ ಇದ್ದಾಳೆ.
ಭಾಗ್ಯ ಕಣ್ಣೀರು
ಅಡುಗೆಯವರು ಬಂದು ದುಡ್ಡು ಕೊಡಿ ಎಂದು ಕೇಳ್ತಾ ಇದ್ದಾರೆ. ಆದ್ರೆ ದುಡ್ಡಿಲ್ಲ. ಎಲ್ಲ ಕಡೆ ಹುಡುಕುತ್ತಿದ್ದಾಳೆ. ಅತ್ತೆ ಕುಸುಮಾ ಅದೇ ಸಮಯದಲ್ಲಿ ಅಲ್ಲಿಗೆ ಬರುತ್ತಾಳೆ. ನಿನಗೆ ಎಲ್ಲಾ ವಿಷಯದಲ್ಲೂ ಅಸಡ್ಡೆ. ಈಗ ಏನ್ ಮಾಡ್ತೀಯಾ? ದುಡ್ಡು ಹುಡುಕು ಎಂದು ಎಲ್ಲ ಕಡೆ ಹುಡುಕುತ್ತಾ ಇರುತ್ತಾಳೆ. ಆಗ ಪೂಜಾ ದುಡ್ಡನ್ನು ಹೂವಿನ ಬುಟ್ಟಿಯಲ್ಲಿ ಬಚ್ಚಿಡುತ್ತಾಳೆ. ಅದನ್ನು ಶ್ರೇಷ್ಠಾ ನೋಡ್ತಾಳೆ. ದುಡ್ಡು ಸಿಗದೇ ಭಾಗ್ಯ ಕಣ್ಣೀರಿಡುತ್ತಾಳೆ.
ಸಹಾಯ ಮಾಡದ ಗಂಡ ತಾಂಡವ್
ತಾಂಡವ್ ಬಳಿ ಹೋಗಿ ಭಾಗ್ಯ ನಡೆದ ವಿಷ್ಯ ಹೇಳ್ತಾಳೆ. ಅದಕ್ಕೆ ತಾಂಡವ್ ಕೋಪ ಮಾಡಿಕೊಳ್ತಾನೆ. ನೀನೇ ದೊಡ್ಡದಾಗಿ ಎಲ್ಲಾ ಮಾಡ್ತೀನಿ ಅಂದೆ. ಮಾಡಿಕೋ, ನನ್ನ ಏನೂ ಕೇಳಬೇಡ ಎಂದು ಹೇಳ್ತಾನೆ. ಅಲ್ಲದೇ ದೇವಸ್ಥಾನದಲ್ಲಿ ಮದುವೆ ಮಾಡುತ್ತಿರುವುದು ತಾಂಡವ್‍ಗೆ ಇಷ್ಟ ಇರಲಿಲ್ಲ. ದೊಡ್ಡದಾಗಿ ಮದುವೆ ಮಾಡಬೇಕು ಎಂದುಕೊಂಡಿದ್ದ. ಆದ್ರೆ ಅದಕ್ಕೆ ಭಾಗ್ಯ ಒಪ್ಪಿರಲ್ಲ. ಅದಕ್ಕೆ ತಾಂಡವ್‍ಗೆ ಕೋಪ. ಭಾಗ್ಯಾಗೆ ಸಹಾಯ ಮಾಡಿಲ್ಲ.
ಶ್ರೇಷ್ಠಾ ಸಹಾಯ
ಪೂಜಾ ಮುಚ್ಚಿಟ್ಟಿದ್ದ ದುಡ್ಡನ್ನು ಶ್ರೇಷ್ಠಾ ತೆಗೆದುಕೊಂಡಿದ್ದಾಳೆ. ಈ ದುಡ್ಡು ಕೊಟ್ಟು, ನನ್ನ ಕೆಲಸ ಸಾಧಿಸಿಕೊಳ್ಳಬಹುದು ಎಂದುಕೊಂಡಿದ್ದಾಳೆ. ಅದಕ್ಕೆ ಭಾಗ್ಯಾಗೆ ಆ ದುಡ್ಡನ್ನು ಕೊಟ್ಟಿದ್ದಾಳೆ. ಅತ್ತೆ, ಗಂಡ ಕೇಳಿದಾಗ, ಭಾಗ್ಯ ನಿಜ ಹೇಳಲು ಹೋಗ್ತಾಳೆ. ಆಗ ಶ್ರೇಷ್ಠಾ ತಡೆದು. ಇದು ಅವರದ್ದೇ ದುಡ್ಡು. ಎಲ್ಲೋ ಇಟ್ಟು, ಇನ್ನೇಲ್ಲೋ ಹುಡುಕುತ್ತಾ ಇದ್ರು ಎಂದು ಹೇಳಿದ್ದಾಳೆ. ಭಾಗ್ಯಾಗೆ ಅವಳು ಯಾಕೆ ಆ ರೀತಿ ಹೇಳಿದ್ಲು ಎಂದು ಗೊತ್ತಿಲ್ಲ.
ತಾಂಡವ್‍ನನ್ನು ಮದುವೆ ಆಗೋ ಪ್ಲ್ಯಾನ್
ತಾಂಡವ್ ಮತ್ತು ಶ್ರೇಷ್ಠಾ ಮಧ್ಯೆ ಸಂಬಂಧ ಇದೆ. ಶ್ರೇಷ್ಠಾಗೆ ಇಲ್ಲಿ ಮದುವೆಯ ಎಲ್ಲಾ ಸಂಪ್ರದಾಯಗಳನ್ನು ನೋಡಿ, ತಾನು ಮದುವೆ ಆಗಬೇಕು ಎಂದುಕೊಳ್ತಾ ಇದ್ದಾಳೆ. ನನ್ನನ್ನು ಸಮಾಜದಲ್ಲಿ ಕೆಟ್ಟ ದೃಷ್ಟಿಯಿಂದ ನೋಡ್ತಾರೆ. ಅದಕ್ಕೆ ನಾನು ತಾಂಡವ್‍ನನ್ನು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಭಾಗ್ಯಾಗೆ ಹಣದ ಸಹಾಯ ಮಾಡಿದ್ದಾಳೆ.
ಇದನ್ನೂ ಓದಿ: Kendasampige: ತೀರ್ಥಂಕರ್ ಪ್ರಾಣಕ್ಕೆ ಅಪಾಯನಾ, ಜ್ಯೋತಿಷಿ ಮಾತು ನಿಜವಾಗುತ್ತಾ?
ಭಾಗ್ಯಾಗೆ ತಾಂಡವ್-ಶ್ರೇಷ್ಠಾ ಸಂಬಂಧದ ಬಗ್ಗೆ ತಿಳಿಯುತ್ತಾ? ಮೋಡಿ ಮಾಡಿ ಶ್ರೇಷ್ಠಾ ತಾಂಡವ್‍ನನ್ನು ಮದುವೆ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ