ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಭಾಗ್ಯಲಕ್ಷ್ಮಿ (Bhagya Lakshmi) ಎನ್ನುವ ಧಾರಾವಾಹಿ (Serial) ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ಮುಖ್ಯ ಪಾತ್ರದಲ್ಲಿ ಅಂದ್ರೆ ಅಕ್ಕ ಭಾಗ್ಯ ಪಾತ್ರದಲ್ಲಿ ನಿರೂಪಕಿಯಾಗಿದ್ದ ಸುಷ್ಮಾ ಅವರು ಅಭಿನಯಿಸಿದ್ದಾರೆ. ಅಕ್ಕ-ತಂಗಿಯರ ಕಥೆ ಆಧಾರಿತ ಸೀರಿಯಲ್ ಇದು. ತಂಗಿಗಾಗಿ ಏನನ್ನಾದರೂ ಮಾಡಲು ಅಕ್ಕ ರೆಡಿ ಇದ್ದಾಳೆ. ಅಕ್ಕ ಹಾಕಿದ ಗೆರೆ ದಾಟಲ್ಲ ಅಂತಿದ್ದಾಳೆ ತಂಗಿ ಲಕ್ಷ್ಮಿ. ತಂಗಿಗೆ ಅಕ್ಕ ಒಳ್ಳೆ ಹುಡುಗನನ್ನು ಮದುವೆ ಮಾಡಲು ಹುಡುಕುತ್ತಿದ್ದಾಳೆ. ಶ್ರೀಮಂತ ಬೇಡ್ವಂತೆ. ಶ್ರೀರಾಮನಂತ ಹುಡುಗ ಬೇಕಂತೆ. ನಟನ ಪಾತ್ರದಲ್ಲಿ ಬ್ರೋ ಗೌಡ ಅಲಿಯಾಸ್ ಶಮಂತ್ ವೈಷ್ಣವ್ ಆಗಿ ಅಭಿನಯಿಸುತ್ತಿದ್ದಾರೆ. ವೈಷ್ಣವ್‍ಗೆ ಲಕ್ಷ್ಮಿಯನ್ನು ಮದುವೆ ಮಾಡಬೇಕು ಎಂದು ಎಲ್ಲಾ ತಯಾರಿ ನಡೆದಿದೆ. ಲಕ್ಷ್ಮಿ ತವರು ಮನೆ ನೆನೆದು ಕಣ್ಣೀರು ಹಾಕುತ್ತಿದ್ದಾಳೆ.
ಈ ಮನೆಯಲ್ಲಿ ಕೊನೆ ದಿನ
ಈ ಮನೆಯಲ್ಲಿ, ಈ ಮನೆ ಮಗಳಾಗಿ, ನಾನು ಕಳೆಯುತ್ತಿರುವ ಕೊನೆ ರಾತ್ರಿ ಇದು. ಮುಂದಿನ ಸಲ ನಾನು ಈ ಮನೆಗೆ ಬಂದಾಗ, ಈ ಮನೆ ಮಗಳಾಗಿ ಇರಲ್ಲ. ಬೇರೆ ಮನೆ ಸೊಸೆಯಾಗಿ ಇರುತ್ತೇನೆ. ಮಗಳಾಗಿ ಈ ಮನೆಯಲ್ಲಿ ಕೊನೆ ದಿನ ಅನ್ನೋದನ್ನು ನೆನೆಸಿಕೊಳ್ಳೋಕೆ ಸಂಕಟ ಆಗುತ್ತಿದೆ. ಇವತ್ತಲ್ಲ, ನಾಳೆ ನನಗೂ ಮದುವೆ ಆಗುತ್ತೆ. ಬೇರೆ ಮನೆಗೆ ಹೋಗ್ತೀನಿ ಅಂತ ಗೊತ್ತಿತ್ತು. ಆಗ ಆಗದೇ ಇರೋ ನೋವು, ಸಂಕಟ ಈಗ ಆಗ್ತಿದೆ ಎಂದು ಲಕ್ಷ್ಮಿ ಕಣ್ಣೀರು ಇಡುತ್ತಿದ್ದಾಳೆ.
ಹೆಣ್ಣು ಜನ್ಮ ಎಷ್ಟು ಕಷ್ಟ
ನಾನು ಹುಟ್ಟಿ, ಬೆಳೆದ ಮನೆಯಲ್ಲಿ ನಾನೇ ಗೆಸ್ಟ್ ತರ ಬರಬೇಕು. ಇಲ್ಲಿ ಉಳಿದುಕೊಂಡ್ರೂ ಗಂಟೆ ಲೆಕ್ಕದಲ್ಲಿ, ದಿನಗಳ ಲೆಕ್ಕದಲ್ಲಿ ಇರಬೇಕು. ಎಷ್ಟು ದಿನ ಉಳಿದುಕೊಳ್ತೇನೆ ಎಂದು ಗಂಡನ ಮನೆಯಲ್ಲಿ ಮೊದಲೇ ಲೆಕ್ಕ ಕೊಡಬೇಕು. ಅದು ಮುಗಿಯುತ್ತಿದ್ದ ಹಾಗೇ ಎದ್ದು ಹೊರಡುತ್ತಾ ಇರಬೇಕು. ಹೆಣ್ಣು ಜನ್ಮ ಅಂದ್ರೆ ಎಷ್ಟು ಕಷ್ಟ ಅಲ್ವಾ ಅಕ್ಕಮ್ಮ ಎಂದು ಲಕ್ಷ್ಮಿ ಭಾಗ್ಯಾಗೆ ಕೇಳುತ್ತಿದ್ದಾಳೆ.
ಎಲ್ಲ ನೆನೆಪು
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತಾರೆ. ನಾಳೆಯಿಂದ ನನಗೂ ಅದು ಅನ್ವಯ ಆಗುತ್ತೆ. ನಾಳೆಯಿಂದ ನಾನು ಈ ಮನೆಗೆ ಹೊರಗಿನವಳು. ನನಗೆ ಈ ಮನೆಯ ಒಂದೊಂದು ದಿಕ್ಕಿನಲ್ಲಿ ಒಂದೊಂದು ನೆನಪಿದೆ. ನಿನ್ನ ನಾನು ಜೀವಮಾನದಲ್ಲಿ ಮರೆಯೋಕೆ ಆಗಲ್ಲ ಎಂದು ಲಕ್ಷ್ಮಿ ಅಕ್ಕನ ಹೆಗಲ ಮೇಲೆ ಮಲಗಿ ಅಳುತ್ತಿದ್ದಾಳೆ. ಭಾಗ್ಯ ಅವಳಿಗೆ ಸಮಾಧಾನ ಮಾಡ್ತಾ ಇದ್ದಾಳೆ.
ಕೀರ್ತಿ ಮದುವೆ ಆಗ್ತಾನಂತೆ ವೈಷ್ಣವ್
ವೈಷ್ಣವ್ ಕೀರ್ತಿಯನ್ನು ಮೊದಲಿನಿಂದಲೂ ತುಂಬಾ ಪ್ರೀತಿ ಮಾಡ್ತಾ ಇದ್ದ. ಇಬ್ಬರಿಗೂ ಮದುವೆ ಮಾಡಬೇಕು ಎಂದು ಮನೆಯಲ್ಲಿ ನಿಶ್ಚಿತಾರ್ಥ ಇಟ್ಟುಕೊಂಡಿದ್ರು. ಆದ್ರೆ ಕೀರ್ತಿ ಅವತ್ತೂ ನನಗೆ ನೀನು ಬೇಡ ಎಂದು ವೈಷ್ಣವ್ ಗೆ ಹೇಳಿ ಬಿಟ್ಟಳು. ಅದರಿಂದ ವೈಷ್ಣವ್ ತೀವ್ರ ನೊಂದಿದ್ದ. ಅದಕ್ಕೆ ಕಾವೇರಿ ಲಕ್ಷ್ಮಿ ಜೊತೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ಈಗ ಕೀರ್ತಿ ಬೇಕು ಆಕೆಯನ್ನು ಮದುವೆ ಆಗ್ತೇನೆ ಎಂದು ಹೇಳ್ತಾ ಇದ್ದಾನೆ.
ಕೀರ್ತಿ ಜೊತೆ ಬಂದ ವೈಷ್ಣವ್
ಕಾವೇರಿ ಮಗನಿಗೆ ಕೊನೆ ಚಾನ್ಸ್ ನೀಡಿದ್ದಾಳೆ. ನೀನು ಕೀರ್ತೀಯನ್ನು ಒಪ್ಪಿಸಿ ಕರೆದುಕೊಂಡು ಬಂದ್ರೆ, ನಿನಗೆ ಅವಳ ಜೊತೆ ಮದುವೆ ಮಾಡಿಸುತ್ತೀನಿ ಎಂದಿದ್ದಾಳೆ. ಅದಕ್ಕೆ ವೈಷ್ಣವ್ ಕೀರ್ತಿ ಕರೆದುಕೊಂಡು ಬಂದಿದ್ದಾನೆ. ಅದನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಲಕ್ಷ್ಮಿ ಜೊತೆ ಮದುವೆ ಟೈಮ್ ನಲ್ಲಿ ಇವಳು ಬೇಕಿತ್ತಾ ಎಂದು ಎಲ್ಲರೂ ಅಂದುಕೊಳ್ತಿದ್ದಾರೆ.
ಇದನ್ನೂ ಓದಿ: Ramachari: ಕೊನೆಗೂ ನಡೆದೇ ಹೋಯ್ತು ರಾಮಾಚಾರಿ-ಚಾರು ಮದುವೆ, ಮುಂದಿದೆ ಬಿಗ್ ಟ್ವಿಸ್ಟ್!
ಹಾಗಾದ್ರೆ ಕೀರ್ತಿ ವೈಷ್ಣವ್ ಮದುವೆ ಆಗಲು ಒಪ್ಪಿಕೊಂಡಳಾ? ಲಕ್ಷ್ಮಿ ಕಥೆ ಏನು? ಭಾಗ್ಯ ಈಗ ಏನ್ ಮಾಡ್ತಾಳೆ? ಮುಂದೇನಾಗುತ್ತೆ ಅಂತ ನೋಡೋಕೆ ಭಾಗ್ಯಲಕ್ಷ್ಮಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ